IPL 2022: ಚೆನ್ನೈ- ಕೋಲ್ಕತ್ತಾ ಮೊದಲ ಪಂದ್ಯದಲ್ಲಿ ಉಭಯ ತಂಡದ ಆಟಗಾರರು ಬರೆಯಲ್ಲಿರುವ ದಾಖಲೆಗಳಿವು..!

| Updated By: ಪೃಥ್ವಿಶಂಕರ

Updated on: Mar 25, 2022 | 10:20 PM

IPL 2022: ನಾಲ್ಕು ಬಾರಿ ಪ್ರಶಸ್ತಿ ಗೆದ್ದಿರುವ ಚೆನ್ನೈ ಈ ಬಾರಿ ಐದನೇ ಐಪಿಎಲ್ ಪ್ರಶಸ್ತಿಗಾಗಿ ಸೆಣಸಲಿದೆ. ಅದೇ ಸಮಯದಲ್ಲಿ, ಕೋಲ್ಕತ್ತಾ ತನ್ನ ಮೂರನೇ ಪ್ರಶಸ್ತಿಗಾಗಿ ಹೋರಾಡಲಿದೆ.

IPL 2022: ಚೆನ್ನೈ- ಕೋಲ್ಕತ್ತಾ ಮೊದಲ ಪಂದ್ಯದಲ್ಲಿ ಉಭಯ ತಂಡದ ಆಟಗಾರರು ಬರೆಯಲ್ಲಿರುವ ದಾಖಲೆಗಳಿವು..!
ಚೆನ್ನೈ- ಕೋಲ್ಕತ್ತಾ ಆಟಗಾರರು
Follow us on

ಐಪಿಎಲ್ 2022 (IPL 2022) ಶನಿವಾರದಂದು ಪ್ರಸಕ್ತ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗುತ್ತಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ನಾಲ್ಕು ಬಾರಿ ಪ್ರಶಸ್ತಿ ಗೆದ್ದಿರುವ ಚೆನ್ನೈ ಈ ಬಾರಿ ಐದನೇ ಐಪಿಎಲ್ ಪ್ರಶಸ್ತಿಗಾಗಿ ಸೆಣಸಲಿದೆ. ಅದೇ ಸಮಯದಲ್ಲಿ, ಕೋಲ್ಕತ್ತಾ ತನ್ನ ಮೂರನೇ ಪ್ರಶಸ್ತಿಗಾಗಿ ಹೋರಾಡಲಿದೆ. ಎರಡೂ ತಂಡಗಳು ಹೊಸ ನಾಯಕರೊಂದಿಗೆ ಮೈದಾನಕ್ಕೆ ಪ್ರವೇಶಿಸಲಿವೆ. ಮಹೇಂದ್ರ ಸಿಂಗ್ ಧೋನಿ ಗುರುವಾರ ಚೆನ್ನೈ ತಂಡದ ನಾಯಕತ್ವವನ್ನು ತೊರೆದು ರವೀಂದ್ರ ಜಡೇಜಾಗೆ ನೀಡಿದರು. ಅದೇ ಸಮಯದಲ್ಲಿ, ತಮ್ಮ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಫೈನಲ್‌ಗೆ ಕೊಂಡೊಯ್ದ ಶ್ರೇಯಸ್ ಅಯ್ಯರ್ ಈ ಬಾರಿ ಕೋಲ್ಕತ್ತಾದ ಜೆರ್ಸಿಯಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಗೆಲುವಿನೊಂದಿಗೆ ಜರ್ನಿ ಪ್ರಾರಂಭಿಸಬೇಕೆಂದು ಎರಡೂ ತಂಡಗಳು ಬಯಸುತ್ತವೆ, ಆದರೆ ಅದು ಸುಲಭವಲ್ಲ. ಎರಡೂ ತಂಡಗಳು ತಮ್ಮದೇ ಆದ ರೀತಿಯಲ್ಲಿ ಪಂದ್ಯವನ್ನು ಬದಲಾಯಿಸಬಲ್ಲ ಆಟಗಾರರನ್ನು ಹೊಂದಿವೆ. ಆದರೆ, ಮೊದಲ ಕೆಲವು ಪಂದ್ಯಗಳಿಗೆ ಕೋಲ್ಕತ್ತಾದ ಇಬ್ಬರು ಆಟಗಾರರು ಲಭ್ಯರಿರುವುದಿಲ್ಲ. ಪ್ಯಾಟ್ ಕಮಿನ್ಸ್ ಸದ್ಯ ಪಾಕಿಸ್ತಾನದಲ್ಲಿದ್ದು ಟೆಸ್ಟ್ ಸರಣಿ ಆಡುತ್ತಿದ್ದಾರೆ. ಇದಾದ ನಂತರ ಅವರು ಶೇನ್ ವಾರ್ನ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತವರಿಗೆ ಮರಳಲಿದ್ದಾರೆ. ನಂತರ ಭಾರತಕ್ಕೆ ಬರುತ್ತಾರೆ. ಮತ್ತೊಂದೆಡೆ, ಪಾಕಿಸ್ತಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿಯನ್ನು ಮುಗಿಸಿದ ನಂತರ ಫಿಂಚ್ ಭಾರತಕ್ಕೆ ಬರಲಿದ್ದಾರೆ. ಈ ಪಂದ್ಯದ ಮೊದಲು, ಈ ಎರಡು ತಂಡಗಳ ಆಟಗಾರರು ತಮ್ಮ ಹೆಸರಿನಲ್ಲಿ ಮಾಡಬಹುದಾದ ಕೆಲವು ದಾಖಲೆಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

1. ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ ನಾಲ್ಕು ಬೌಂಡರಿ ಬಾರಿಸುವ ಮೂಲಕ 200 ಐಪಿಎಲ್ ಬೌಂಡರಿಗಳನ್ನು ತಮ್ಮ ಖಾತೆಯಲ್ಲಿ ದಾಖಲಿಸಲಿದ್ದಾರೆ. ಇದೀಗ ಅವರ ಹೆಸರಿನಲ್ಲಿ 196 ಬೌಂಡರಿಗಳಿವೆ.

2. ಅಜಿಂಕ್ಯ ರಹಾನೆ ಐಪಿಎಲ್‌ನಲ್ಲಿ ಇದುವರೆಗೆ 3941 ರನ್ ಗಳಿಸಿದ್ದಾರೆ. ಅವರು ನಾಲ್ಕು ಸಾವಿರ ಐಪಿಎಲ್ ರನ್ ಪೂರೈಸಲು ಕೇವಲ 59 ರನ್‌ಗಳ ಅಂತರದಲ್ಲಿದ್ದಾರೆ.

3. ಆಂಡ್ರೆ ರಸೆಲ್ ತಮ್ಮ ಹೆಸರಿನಲ್ಲಿ 143 ಐಪಿಎಲ್ ಸಿಕ್ಸರ್‌ಗಳನ್ನು ಹೊಂದಿದ್ದಾರೆ. ಇನ್ನು ಏಳು ಸಿಕ್ಸರ್‌ಗಳನ್ನು ಬಾರಿಸಿದರೆ ಐಪಿಎಲ್‌ನಲ್ಲಿ 150 ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.

4. ಅಯ್ಯರ್ ಇಲ್ಲಿಯವರೆಗೆ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 4409 ರನ್ ಗಳಿಸಿದ್ದಾರೆ. ಇನ್ನು 91 ರನ್ ಗಳಿಸುವ ಮೂಲಕ ಟಿ20ಯಲ್ಲಿ 4500 ರನ್ ಪೂರೈಸಲಿದ್ದಾರೆ.

5. ಸುನಿಲ್ ನರೈನ್ 3000 ಟಿ20 ರನ್ ಪೂರೈಸಲು 74 ರನ್‌ಗಳ ಅಂತರದಲ್ಲಿದ್ದಾರೆ. ಇಲ್ಲಿಯವರೆಗೆ ಅವರು 2926 ರನ್ ಗಳಿಸಿದ್ದಾರೆ.

6. ಚೆನ್ನೈ ಸೂಪರ್ ಕಿಂಗ್ಸ್‌ನ ಡ್ವೇನ್ ಬ್ರಾವೋ ಇನ್ನೂ ಮೂರು ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ಐಪಿಎಲ್‌ನಲ್ಲಿ ತಮ್ಮ 50 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲಿದ್ದಾರೆ.

7. ಚೆನ್ನೈನ ಅಂಬಟಿ ರಾಯುಡು ಮತ್ತೊಂದು ಸಿಕ್ಸರ್ ಬಾರಿಸುವ ಮೂಲಕ ಐಪಿಎಲ್ ನಲ್ಲಿ 150 ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಗೆ ಸೇರಲಿದ್ದಾರೆ.

8. ರವೀಂದ್ರ ಜಡೇಜಾ ಕೋಲ್ಕತ್ತಾದ ಮತ್ತೊಂದು ವಿಕೆಟ್ ಪಡೆದರೆ, ಅವರು ಚೆನ್ನೈ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್ ಅವರನ್ನು ಹಿಂದಿಕ್ಕಲಿದ್ದಾರೆ. ಇಬ್ಬರೂ ಈಗ ತಲಾ 16 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ:Women’s IPL in 2023: 6 ತಂಡಗಳ ರಚನೆ! ಮಹಿಳಾ ಐಪಿಎಲ್ ಕುರಿತು ಬಿಗ್​ ಅಪ್​ಡೇಟ್ ನೀಡಿದ ಬಿಸಿಸಿಐ