Ipl 2022: ಕೊಹ್ಲಿ, ಧೋನಿ, ಪಂತ್: ಐಪಿಎಲ್​ನಲ್ಲಿನ ನೋ ಬಾಲ್ ವಿವಾದಗಳು

| Updated By: ಝಾಹಿರ್ ಯೂಸುಫ್

Updated on: Apr 23, 2022 | 2:53 PM

IPL 2022: ಈ ಬಾರಿ ಕೂಡ ಅಂಪೈರ್ ಕ್ಯಾಚ್ ವಿಷಯದಲ್ಲಿ ಹಾಗೂ ನೋ ಬಾಲ್ ವಿಷಯದಲ್ಲಿ ಹಲವು ತಪ್ಪುಗಳನ್ನು ಮಾಡಿದೆ. ಮೂರನೇ ಅಂಪೈರ್​ ಪರಿಶೀಲನೆಗೆ ಅವಕಾಶವಿದ್ದರೂ ಫೀಲ್ಡ್ ಅಂಪೈರ್ ರಿಪ್ಲೇಗೆ ಮುಂದಾಗದಿರುವುದು ವಿವಾದಕ್ಕೆ ಕಾರಣವಾಗುತ್ತಿದೆ.

Ipl 2022: ಕೊಹ್ಲಿ, ಧೋನಿ, ಪಂತ್: ಐಪಿಎಲ್​ನಲ್ಲಿನ ನೋ ಬಾಲ್ ವಿವಾದಗಳು
Ipl 2022
Follow us on

Ipl 2022: ಐಪಿಎಲ್ 2022 ರಲ್ಲಿ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (CSK vs RR) ಮುಖಾಮುಖಿಯಾಗಿತ್ತು . ಆದರೆ, ಈ ಪಂದ್ಯದ ಕೊನೆಯ ಓವರ್‌ನಲ್ಲಿ ನೋ ಬಾಲ್ ಕುರಿತು ಭಾರೀ ವಿವಾದ ಉಂಟಾಗಿತ್ತು. ಈ ಕಾರಣಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ (Rishab Pant) ಕೋಪಗೊಂಡಿದ್ದರು. ನೋ ಬಾಲ್ ವಿವಾದದ ಹಿನ್ನೆಲೆಯಲ್ಲಿ ತಮ್ಮ ತಂಡದ ಆಟಗಾರರನ್ನು ಮೈದಾನದಿಂದ ಹಿಂತಿರುಗುವಂತೆ ಸೂಚಿಸಿ ಭಾರೀ ಚರ್ಚೆಗೆ ಕಾರಣರಾಗಿದ್ದರು. ಹೀಗಾಗಿ ಪಂತ್​ಗೆ ಪಂದ್ಯ ಶೇ 100 ರಷ್ಟು ದಂಡ ವಿಧಿಸಲಾಗಿದೆ. ಆದರೆ, ನಾಯಕನೊಬ್ಬ ಅಂಪೈರ್‌ನ ಈ ರೀತಿ ತಪ್ಪು ಮಾಡಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಹಲವು ಬಾರಿ ಇಂತಹ ವಿವಾದಗಳು ಐಪಿಎಲ್​ನಲ್ಲಿ ಕಂಡು ಬಂದಿದೆ.

ರಾಜಸ್ಥಾನ್ ರಾಯಲ್ಸ್-ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಲ್ಲಿ ಕೊನೆಯ ಓವರ್‌ನಲ್ಲಿ ಡೆಲ್ಲಿ ತಂಡಕ್ಕೆ ಗೆಲುವಿಗೆ 36 ರನ್‌ಗಳ ಅಗತ್ಯವಿತ್ತು. ಒಬೆಡ್ ಮೆಕಾಯ್ ಅವರ ಮೊದಲ ಮೂರು ಎಸೆತಗಳಲ್ಲಿ ಪೊವೆಲ್ ಮೂರು ಸಿಕ್ಸರ್ ಬಾರಿಸಿದರು. ಆದರೆ, ಮೂರನೇ ಎಸೆತ ನೋಬಾಲ್ ಎಂಬ ವಾದವನ್ನು ಡೆಲ್ಲಿ ಆಟಗಾರರು ಮುಂದಿಟ್ಟಿದ್ದರು. ಆದರೆ ಈ ನಿರ್ಧಾರವನ್ನು ಅಂಪೈರ್ ಒಪ್ಪಿಕೊಳ್ಳದ ಕಾರಣ ವಾಗ್ವಾದ ಮುಂದುವರೆದಿತ್ತು. ಪಂತ್ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರನ್ನು ಮೈದಾನಕ್ಕೆ ಕಳುಹಿಸಿದರು. ಈ ಘಟನೆಯ ನಂತರ ಪಂತ್ ಕೂಡ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ನೋ ಬಾಲ್ ಗೆ ಸಂಬಂಧಿಸಿದಂತೆ ಅಂಪೈರ್ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಈ ಇಬ್ಬರೂ ಸ್ಟಾರ್ ಗಳು ಮೈದಾನದಲ್ಲಿ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು.

ಕೂಲ್ ಕಳೆದುಕೊಂಡಿದ್ದ ಕ್ಯಾಪ್ಟನ್ ಕೂಲ್:
2019 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲೂ ಇದೇ ರೀತಿಯ ದೃಶ್ಯ ಕಂಡುಬಂದಿತ್ತು. ಆ ಪಂದ್ಯವು ಕೊನೆಯ ಓವರ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 18 ರನ್ ಅಗತ್ಯವಿತ್ತು. ಈ ವೇಳೆ ಬೆನ್ ಸ್ಟೋಕ್ಸ್ ಅವರ ಐದನೇ ಎಸೆತವನ್ನು ಅಂಪೈರ್​ ನೋ ಬಾಲ್ ಎಂದು ಕರೆದರು. ಆದರೆ ನಂತರ ಲೆಗ್ ಅಂಪೈರ್ ಜೊತೆ ಮಾತನಾಡಿ ನಿರ್ಧಾರವನ್ನು ಬದಲಾಯಿಸಿದರು. ಮೊದಲು ಜಡೇಜಾ ಅವರು ಅಂಪೈರ್ ಜೊತೆ ವಾಗ್ವಾದ ನಡೆಸಿದ್ದು, ನಂತರ ಧೋನಿ ಡಗೌಟ್ ನಿಂದ ಹೊರಬಂದು ಮೈದಾನಕ್ಕೆ ಆಗಮಿಸಿ ಅಂಪೈರ್ ಜೊತೆ ತೀವ್ರ ವಾಗ್ವಾದ ನಡೆಸಿದರು. ಈ ಘಟನೆಯು ಭಾರೀ ಚರ್ಚೆಗೆ ಕಾರಣವಾಗಿತ್ತು.

ಕೊಹ್ಲಿಯ ಕೋಪ:
2019 ರಲ್ಲೇ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ನೋ ಬಾಲ್ ವಿಚಾರವಾಗಿ ವಿವಾದ ಉಂಟಾಗಿತ್ತು. ಮುಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಆರ್‌ಸಿಬಿ ಗೆಲ್ಲಲು ಏಳು ರನ್ ಗಳಿಸಬೇಕಿತ್ತು. ಮಾಲಿಂಗ ಎಸೆತದಲ್ಲಿ ಬ್ಯಾಟ್ಸ್‌ಮನ್ ಕೇವಲ ಒಂದು ರನ್ ಮಾತ್ರ ತೆಗೆಯಲು ಸಾಧ್ಯವಾಯಿತು. ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಆರು ರನ್‌ಗಳಿಂದ ಗೆದ್ದುಕೊಂಡಿತು. ಆದರೆ ಮಾಲಿಂಗ ಅವರ ಕಾಲು ಕ್ರೀಸ್​ ಗೆರೆಯಿಂದ ಹೊರಗಿದ್ದು, ಅದು ನೋ ಬಾಲ್ ಎಂಬ ವಾದವನ್ನು ಆರ್​ಸಿಬಿ ಆಟಗಾರರು ಮುಂದಿಟ್ಟಿದ್ದರು. ಅಂಪೈರ್ ಅದರತ್ತ ಗಮನ ಹರಿಸದಿರುವುದು ರೀಪ್ಲೇಗಳಲ್ಲಿ ಕಂಡುಬಂದಿತ್ತು. ಈ ಬಗ್ಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅವರು ಅಂಪೈರ್ ಜೊತೆ ತೀವ್ರ ವಾಗ್ವಾದ ನಡೆಸಿ ಅಸಮಾಧಾನವನ್ನು ಹೊರಹಾಕಿದ್ದರು. ಅಲ್ಲದೆ ಈ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ‘ನಾವು ಐಪಿಎಲ್‌ನಲ್ಲಿ ಆಡುತ್ತಿದ್ದೇವೆಯೇ ಹೊರತು ಯಾವುದೇ ಕ್ಲಬ್ ಪಂದ್ಯವನ್ನಲ್ಲ. ಅಂಪೈರ್ ಕಣ್ಣು ತೆರೆದಿರಬೇಕು. ಅದೊಂದು ದೊಡ್ಡ ನೋ ಬಾಲ್ ಎಂದು ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಾರಿ ಕೂಡ ಅಂಪೈರ್ ಕ್ಯಾಚ್ ವಿಷಯದಲ್ಲಿ ಹಾಗೂ ನೋ ಬಾಲ್ ವಿಷಯದಲ್ಲಿ ಹಲವು ತಪ್ಪುಗಳನ್ನು ಮಾಡಿದೆ. ಮೂರನೇ ಅಂಪೈರ್​ ಪರಿಶೀಲನೆಗೆ ಅವಕಾಶವಿದ್ದರೂ ಫೀಲ್ಡ್ ಅಂಪೈರ್ ರಿಪ್ಲೇಗೆ ಮುಂದಾಗದಿರುವುದು ವಿವಾದಕ್ಕೆ ಕಾರಣವಾಗುತ್ತಿದೆ.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ