IPL 2022: ಐಪಿಎಲ್ ಸೀಸನ್ 15 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ತನ್ನೆಲ್ಲಾ ಲೀಗ್ ಪಂದ್ಯಗಳನ್ನು ಮುಗಿಸಿ ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಆಡಿದ 14 ಪಂದ್ಯಗಳಲ್ಲಿ ಸಿಎಸ್ಕೆ ತಂಡವು ಕೇವಲ 4 ರಲ್ಲಿ ಮಾತ್ರ ಜಯ ಸಾಧಿಸಿದೆ. ಅಂದರೆ 10 ಪಂದ್ಯಗಳಲ್ಲಿ ಸೋಲುವ ಮೂಲಕ ನಾಲ್ಕು ಬಾರಿಯ ಚಾಂಪಿಯನ್ ನಿರಾಸೆ ಮೂಡಿಸಿದೆ. ಐಪಿಎಲ್ ಆರಂಭಕ್ಕೂ ಮುನ್ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಸಿಎಸ್ಕೆ ತಂಡದ ಸೋಲಿಗೆ ಕಾರಣವೇನು ಎಂದು ನೋಡುವುದಾದರೆ, ಬ್ಯಾಡ್ಸ್ಮನ್ಗಳ ವೈಫಲ್ಯ. ಏಕೆಂದರೆ ಚನ್ನೈ ಸೂಪರ್ ಕಿಂಗ್ಸ್ ಪರ ಈ ಬಾರಿ ಯಾವುದೇ ಬ್ಯಾಟ್ಸ್‌ಮನ್ 400 ರನ್ಗಳ ಗಡಿ ದಾಟಿಲ್ಲ. ಅಂದರೆ ಸಿಎಸ್ಕೆ ಬ್ಯಾಟ್ಸ್ಮನ್ಗಳ ವೈಯುಕ್ತಿಕ ಸ್ಕೋರ್ 400 ರನ್ಗಳ ಗಡಿದಾಟದಿರುವುದು ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲು.
ಇಲ್ಲಿ ಬ್ಯಾಟ್ಸ್ಮನ್ಗಳ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದಿರುವುದು ಸಿಎಸ್ಕೆ ತಂಡದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ. ಏಕೆಂದರೆ ತಂಡದಲ್ಲಿ ಅನುಭವಿ ಬೌಲರ್ಗಳ ಕೊರತೆಯಿತ್ತು. ಇತ್ತ ಬೃಹತ್ ಮೊತ್ತ ಪೇರಿಸಿ ಗೆಲ್ಲುವ ಉತ್ಸಾಹ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಾಣಲಿಲ್ಲ. ಹಾಗೆಯೇ ಸ್ಥಿರ ಪ್ರದರ್ಶನ ನೀಡುವಲ್ಲಿ ಪ್ರಮುಖ ಬ್ಯಾಟ್ಸ್ಮನ್ಗಳು ಎಡವಿದರು. ಇದೇ ಕಾರಣದಿಂದಾಗಿ ಯಾವುದೇ ಬ್ಯಾಟ್ಸ್‌ಮನ್ 400 ರನ್ಗಳ ಗಡಿ ದಾಟಿಲ್ಲ.
ಇದನ್ನೂ ಓದಿ: IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್. ರುತುರಾಜ್ 14 ಪಂದ್ಯಗಳಲ್ಲಿ 368 ರನ್ ಗಳಿಸಿದ್ದು ಗರಿಷ್ಠ ವೈಯುಕ್ತಿಕ ಸ್ಕೋರ್. ಇವರಲ್ಲದೆ ಶಿವಂ ದುಬೆ 11 ಪಂದ್ಯಗಳಲ್ಲಿ 289 ರನ್ ರನ್ ಕಲೆಹಾಕಿದ್ದರು. ಆದರೆ ಅಂಬಟಿ ರಾಯುಡು 13 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 274 ರನ್ ಮಾತ್ರ. ಇನ್ನು ಡೆವೊನ್ ಕಾನ್ವೆ 7 ಪಂದ್ಯಗಳಲ್ಲಿ 252 ರನ್ ಗಳಿಸಿದರೆ, ಮೊಯಿನ್ ಅಲಿ 10 ಪಂದ್ಯಗಳಲ್ಲಿ 244 ರನ್ ಬಾರಿಸಿದ್ದಾರೆ.
ಇನ್ನು ನಾಯಕ ಮಹೇಂದ್ರ ಸಿಂಗ್ ಧೋನಿ 14 ಪಂದ್ಯಗಳಲ್ಲಿ 232 ರನ್ ಕಲೆಹಾಕಿದ್ದಾರೆ. ರಾಬಿನ್ ಉತ್ತಪ್ಪ 230 ರನ್ ಗಳಿಸಿದ್ದಾರೆ. ಅಂದರೆ ರುತುರಾಜ್ ಗಾಯಕ್ವಾಡ್ ಅವರನ್ನು ಹೊರತುಪಡಿಸಿ ಪ್ರಮುಖ ಬ್ಯಾಟ್ಸ್ಮನ್ಗಳು 300 ರನ್ಗಳ ಗಡಿದಾಟಿಲ್ಲ. ಹಾಗೆಯೇ ಇದೇ ಮೊದಲ ಬಾರಿಗೆ ಸಿಎಸ್ಕೆ ತಂಡದ ಬ್ಯಾಟ್ಸ್ಮನ್ಗಳು 400 ರನ್ಗಳ ಗಡಿದಾಟದೇ ಐಪಿಎಲ್ ಅನ್ನು ಅಂತ್ಯಗೊಳಿಸಿದ್ದಾರೆ. ಒಟ್ಟಿನಲ್ಲಿ ಬಲಿಷ್ಠ ತಂಡ, ಹಾಲಿ ಚಾಂಪಿಯನ್ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು 14 ಪಂದ್ಯಗಳಲ್ಲಿ 10 ಸೋಲು ಕಾಣುವ ಮೂಲಕ ಈ ಬಾರಿ ನಿರಾಸೆ ಮೂಡಿಸಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.