IPL 2022: ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ಆಡಬಾರದು ಎನ್ನುತ್ತಿರುವ ಉಳಿದ ತಂಡಗಳು

Mumbai Indians: ಈ ಬಾರಿಯ ಐಪಿಎಲ್​ನಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ. ಈ ಪೈಕಿ 55 ಪಂದ್ಯಗಳು ಮುಂಬೈನಲ್ಲಿ ಮತ್ತು 15 ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ.

IPL 2022: ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ಆಡಬಾರದು ಎನ್ನುತ್ತಿರುವ ಉಳಿದ ತಂಡಗಳು
mumbai indians
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 24, 2022 | 2:36 PM

ಐಪಿಎಲ್ 2022 ರ ವೇಳಾಪಟ್ಟಿ (IPL 2022 Schedule) ಬಿಡುಗಡೆಗೆ ಬಿಸಿಸಿಐ ಸಿದ್ದತೆ ನಡೆಸಿದೆ. ಆದರಂತೆ ಈ ಬಾರಿ ಟೂರ್ನಿಯ ಲೀಗ್ ಹಂತದ ಪಂದ್ಯಗಳನ್ನು ಮುಂಬೈ ಮತ್ತು ಪುಣೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮುಂಬೈನ ವಾಂಖೆಡೆ, ಡಿವೈ ಪಾಟೀಲ್ ಮತ್ತು ಬ್ರಬೋರ್ನ್ ಸ್ಟೇಡಿಯಂಗಳನ್ನು ಆಯ್ಕೆ ಮಾಡಿಕೊಂಡಿದೆ. ಅಲ್ಲದೆ ಪುಣೆಯ ಎಂಸಿಎ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲೂ ಕೂಡ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಆದರೆ ಇದೀಗ ಬಿಸಿಸಿಐ ಮುಂದೆ ಹೊಸ ಸಮಸ್ಯೆಯೊಂದು ಉದ್ಭವಿಸಿದೆ. ಮುಂಬೈನಲ್ಲಿ ಪಂದ್ಯ ನಡೆದರೆ ಮುಂಬೈ ಇಂಡಿಯನ್ಸ್ ವಾಂಖೆಡೆ ಸ್ಟೇಡಿಯಂನಲ್ಲಿ ಆಡಬೇಕಾಗಿದೆ. ವಾಂಖೆಡೆ ಮುಂಬೈ ತಂಡದ ತವರು ಮೈದಾನವಾಗಿರುವುದರಿಂದ ಇದು ಅವರಿಗೆ ಲಾಭದಾಯಕವಾಗಿರಲಿದೆ. ಇದರಿಂದ ಉಳಿದ ಫ್ರಾಂಚೈಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮುಂಬೈ ಇಂಡಿಯನ್ಸ್‌ಗೆ ತವರಿನ ಲಾಭವನ್ನು ಪಡೆಯುವುದು ಉಳಿದ ತಂಡಗಳಿಗೆ ನ್ಯಾಯ ಒದಗಿಸುವುದಿಲ್ಲ ಎಂದು ಕೆಲ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಅಸಮಾಧಾನ ಹೊರಹಾಕಿದೆ ಎಂದು ವರದಿಯಾಗಿದೆ.

ಐಪಿಎಲ್ ಫ್ರಾಂಚೈಸಿಗಳು ಮುಂಬೈ ಇಂಡಿಯನ್ಸ್ ತವರಿನ ಮೈದಾನದಲ್ಲಿ ಪಂದ್ಯವಾಡುವುದರಿಂದ ಪಡೆಯುವ ಪ್ರಯೋಜನದ ಬಗ್ಗೆ ತಮ್ಮ ದೂರುಗಳನ್ನು ಮುಂದಿಟ್ಟಿದ್ದಾರೆ. ಬೇರೆ ಯಾವುದೇ ತಂಡವು ತವರಿನಲ್ಲಿ ಪಂದ್ಯಗಳನ್ನು ಆಡುತ್ತಿಲ್ಲ. ಮುಂಬೈ ಇಂಡಿಯನ್ಸ್ ತನ್ನ ಹೆಚ್ಚಿನ ಪಂದ್ಯಗಳನ್ನು ವಾಂಖೆಡೆಯಲ್ಲಿ ಆಡಿದರೆ ಅದು ತಪ್ಪಾಗುತ್ತದೆ. ಈ ಮೈದಾನವು ವರ್ಷಗಳಿಂದ ಅವರ ಭದ್ರಕೋಟೆಯಾಗಿದೆ ಎಂದು ಫ್ರಾಂಚೈಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಮ್ಮ ಹೆಚ್ಚಿನ ಪಂದ್ಯಗಳನ್ನು ಡಿವೈ ಪಾಟೀಲ್ ಮತ್ತು ಪುಣೆಯಲ್ಲಿ ಆಡುವುದರಿಂದ ಯಾವುದೇ ತೊಂದರೆ ಇಲ್ಲ. ಬ್ರಬೋರ್ನ್ ಸ್ಟೇಡಿಯಂ ಕೂಡ ಉತ್ತಮವಾಗಿದೆ. ಬಿಸಿಸಿಐ ಈ ವಿಷಯವನ್ನು ಪರಿಶೀಲಿಸುತ್ತದೆ ಎಂದು ಭಾವಿಸುತ್ತೇವೆ ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

10 ತಂಡಗಳು ಎಲ್ಲಿ ಅಭ್ಯಾಸ ನಡೆಸುತ್ತವೆ? ಕಳೆದ ಸೀಸನ್​ನಲ್ಲಿ ಭಾರತದಲ್ಲಿ ಐಪಿಎಲ್ ಆಡಿದಾಗ, ಬಿಸಿಸಿಐ ಯಾವುದೇ ತಂಡವು ತವರು ಮೈದಾನದಲ್ಲಿ ಆಡುವುದಿಲ್ಲ ಎಂದು ನಿರ್ಧರಿಸಿತ್ತು. ಇದೀಗ ಪಂದ್ಯಗಳನ್ನು ಹೇಗೆ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ. ಬಿಸಿಸಿಐ ಮುಂದೆ 10 ತಂಡಗಳ ಅಭ್ಯಾಸ ಸ್ಥಳಗಳ ಸಮಸ್ಯೆಯೂ ಇದೆ. ಮೂರು ಮೈದಾನಗಳ ಹೊರತಾಗಿ ರಿಲಯನ್ಸ್ ಕ್ರಿಕೆಟ್ ಸ್ಟೇಡಿಯಂ ಮತ್ತು ನವಿ ಮುಂಬೈನ ಬಾಂದ್ರಾ ಕುರ್ಲಾ ಸ್ಟೇಡಿಯಂ ಆಯ್ಕೆಗಳು ಬಿಸಿಸಿಐ ಮುಂದಿವೆ.

ಈ ಬಾರಿಯ ಐಪಿಎಲ್​ನಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ. ಈ ಪೈಕಿ 55 ಪಂದ್ಯಗಳು ಮುಂಬೈನಲ್ಲಿ ಮತ್ತು 15 ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ. ಹಾಗೆಯೇ ಅಹಮದಾಬಾದ್ ನಲ್ಲಿ ನಾಕೌಟ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಈ ಬಾರಿ ಟೂರ್ನಿ ಮಾರ್ಚ್ 26 ಅಥವಾ 27 ರಿಂದ ಪ್ರಾರಂಭವಾಗುವ ಸಾಧ್ಯತೆಯಿದ್ದು, ಫೈನಲ್ ಮೇ ಕೊನೆಯ ಭಾನುವಾರದಂದು ನಡೆಯಲಿದೆ.

ಇದನ್ನೂ ಓದಿ: World Record: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್​ಮನ್

ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ

ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!

(IPL 2022 franchises object on mumbai indians matches in wankhede stadium)