AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಗುಜರಾತ್ ಟೈಟನ್ಸ್ ಮುಂದಿನ ಟಾರ್ಗೆಟ್ RCB ಹಾಗೂ CSK

IPL 2022: ಗುಜರಾತ್ ಟೈಟನ್ಸ್ (GT): ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಹಮಾನುಲ್ಲಾ ಗುರ್ಬಾಜ್, ವೃದ್ಧಿಮಾನ್ ಸಹಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ಡೊಮಿನಿಕ್ ಡ್ರೇಕ್ಸ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಯಶ್ ದಯಾಳ್

IPL 2022: ಗುಜರಾತ್ ಟೈಟನ್ಸ್ ಮುಂದಿನ ಟಾರ್ಗೆಟ್ RCB ಹಾಗೂ CSK
gujarat titans
TV9 Web
| Edited By: |

Updated on: May 14, 2022 | 4:14 PM

Share

IPL 2022: ಐಪಿಎಲ್ ಸೀಸನ್ 15 ನಲ್ಲಿ ಬಹುತೇಕ ತಂಡಗಳ 12 ಪಂದ್ಯಗಳು ಮುಗಿದಿವೆ. ಅದರಲ್ಲೂ ಆರ್​ಸಿಬಿ (RCB) ತಂಡವು 13 ಪಂದ್ಯಗಳನ್ನಾಡಿದೆ. ಮತ್ತೊಂದೆಡೆ 12 ಪಂದ್ಯಗಳಲ್ಲಿ 9 ಗೆಲುವು ದಾಖಲಿಸಿ ಗುಜರಾತ್ ಟೈಟನ್ಸ್ (Gujarat Titans) ತಂಡವು ಪ್ಲೇಆಫ್ ಪ್ರವೇಶಿಸಿದೆ. ಇದಾಗ್ಯೂ ಹಾರ್ದಿಕ್ ಪಾಂಡ್ಯ (Hardik Pandya) ಪಡೆಗೆ ಇನ್ನೂ ಎರಡು ಮ್ಯಾಚ್​ಗಳಿವೆ. ಆದರೆ ಈ ಎರಡು ಪಂದ್ಯಗಳಲ್ಲಿ ಗುಜರಾತ್ ಟೈಟನ್ಸ್ ತಂಡದ ಎದುರಾಳಿಗಳು ಎಂದರೆ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB). ಇಲ್ಲಿ ಸಿಎಸ್​ಕೆ ತಂಡವು ಈಗಾಗಲೇ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಹೀಗಾಗಿ ಈ ಪಂದ್ಯವು ಚೆನ್ನೈ ಪಾಲಿಗೆ ಮಹತ್ವದ ಪಂದ್ಯವಲ್ಲ. ಆದರೆ ಅತ್ತ ಆರ್​ಸಿಬಿ ತಂಡಕ್ಕೆ ಗುಜರಾತ್ ಟೈಟನ್ಸ್​ ವಿರುದ್ದ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಪಾಯಿಂಟ್ಸ್​ ಟೇಬಲ್​ನಲ್ಲಿ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಆರ್​ಸಿಬಿ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ವಿರುದ್ದ ಗೆದ್ದು ಪ್ಲೇಆಫ್​ಗೇರುವ ಅವಕಾಶವಿದೆ. ಹೀಗಾಗಿ ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯ ಆರ್​ಸಿಬಿ ಪಾಲಿಗೆ ನಿರ್ಣಾಯಕ.

ಆದರೆ ಸಿಎಸ್​ಕೆ ಹಾಗೂ ಆರ್​ಸಿಬಿ ವಿರುದ್ದದ ಪಂದ್ಯದ ಮೂಲಕ ಸೇಫ್ ಝೋನ್​ನಲ್ಲಿರುವ ಪ್ಲ್ಯಾನ್​ನಲ್ಲಿದೆ ಗುಜರಾತ್ ಟೈಟನ್ಸ್. ಏಕೆಂದರೆ ಈ ಪಂದ್ಯಗಳಲ್ಲಿ ಗುಜರಾತ್ ಟೈಟನ್ಸ್ ಒಂದು ಗೆಲುವು ದಾಖಲಿಸಿದರೂ ಒಟ್ಟು 20 ಪಾಯಿಂಟ್ಸ್ ಆಗಲಿದೆ. ಇದರಿಂದ ಅಂಕ ಪಟ್ಟಿಯಲ್ಲಿ ಟಾಪ್ 2 ನಲ್ಲಿ ಉಳಿದುಕೊಳ್ಳಬಹುದು. ಒಂದು ವೇಳೆ ಈ ಎರಡು ಪಂದ್ಯಗಳಲ್ಲಿ ಗುಜರಾತ್ ಟೈಟನ್ಸ್ ಸೋತು, ರಾಜಸ್ಥಾನ್ ರಾಯಲ್ಸ್ ಮುಂದಿನ 2 ಪಂದ್ಯಗಳನ್ನು ಗೆದ್ದರೆ ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲೇರಲಿದೆ. ಅತ್ತ 16 ಪಾಯಿಂಟ್ಸ್​ಗಳಿಸಿರುವ ಲಕ್ನೋ ಸೂಪರ್ ಜೈಂಟ್ಸ್​ ಕೂಡ ಮುಂದಿನ ಪಂದ್ಯ ಗೆದ್ದು 18 ಪಾಯಿಂಟ್ಸ್ ಪಡೆದರೆ, ಟಾಪ್ 3 ತಂಡಗಳ ನೆಟ್ ರನ್​ ರೇಟ್​ ಪರಿಗಣನೆಗೆ ಬರಲಿದೆ.

ಇಲ್ಲಿ ಟಾಪ್ 2 ತಂಡಗಳ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುವುದರಿಂದ ಗೆದ್ದ ತಂಡವು ನೇರವಾಗಿ ಫೈನಲ್ ಪ್ರವೇಶಿಸಬಹುದು. ಹೀಗಾಗಿ ಅಂಕ ಪಟ್ಟಿಯಲ್ಲಿ ಮೊದಲ ಅಥವಾ 2ನೇ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿದೆ ಗುಜರಾತ್ ಟೈಟನ್ಸ್. ಒಂದು ವೇಳೆ ಮುಂದಿನ 2 ಪಂದ್ಯದಲ್ಲಿ ಸೋತು ಗುಜರಾತ್ ಪಾಯಿಂಟ್ಸ್​ ಟೇಬಲ್​ನಲ್ಲಿ 3ನೇ ಸ್ಥಾನ ಪಡೆದರೆ, ಎಲಿಮಿನೇಟರ್ ಪಂದ್ಯವಾಡಬೇಕಾಗುತ್ತದೆ. ಇದರಲ್ಲಿ ಸೋತರೆ ನೇರವಾಗಿ ಹೊರಬೀಳಲಿದೆ. ಹೀಗಾಗಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲೇ ಉಳಿದುಕೊಳ್ಳಲು ಮುಂದಿನ ಗುಜರಾತ್ ಟೈಟನ್ಸ್ ತಂಡವು ಸಿಎಸ್​ಕೆ ಹಾಗೂ ಆರ್​ಸಿಬಿ ವಿರುದ್ದ ಭರ್ಜರಿ ಪ್ರದರ್ಶನವನ್ನು ನೀಡಲಿದೆ.

ಇದನ್ನೂ ಓದಿ
Image
Virat Kohli: ಕಳಪೆ ಫಾರ್ಮ್​ ನಡುವೆಯೂ 2 ದಾಖಲೆ ಬರೆದ ಕಿಂಗ್ ಕೊಹ್ಲಿ
Image
IPL 2022: RCB ತಂಡದ ಸೋಲಿಗೆ ಇವರಿಬ್ಬರೇ ಕಾರಣ..!
Image
MS Dhoni: ಸೂಪರ್ ಬೆಡಗಿ ಜೊತೆ ಸಿನಿಮಾ ನಿರ್ಮಿಸಲು ಮುಂದಾದ ಧೋನಿ..!
Image
IPL 2022: ಸೋಲುತ್ತೆ ನಿಜ, ಆದರೆ ಇದು?, LSG ಆಟಗಾರರ ವಿರುದ್ದ ಗಂಭೀರ್ ಗರಂ

ಏಕೆಂದರೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಒಂದು ವೇಳೆ ಗುಜರಾತ್ ಟೈಟನ್ಸ್ ತಂಡವು ಸೋತರೆ, 2ನೇ ಕ್ವಾಲಿಫೈಯರ್ ಮೂಲಕ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಈ ಅವಕಾಶಗಳನ್ನೆಲ್ಲಾ ಪಡೆಯಬೇಕಿದ್ರೆ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಗುಜರಾತ್ ಟೈಟನ್ಸ್ ತಂಡವು ಪಾಯಿಂಟ್ಸ್ ಟೇಬಲ್​​ನಲ್ಲಿ ಮೊದಲ ಸ್ಥಾನ ಅಥವಾ ದ್ವಿತೀಯಾ ಸ್ಥಾನ ಪಡೆಯಲೇಬೇಕು. ಅದರಂತೆ ಸಿಎಸ್​ಕೆ ಹಾಗೂ ಆರ್​ಸಿಬಿ ವಿರುದ್ದ ಗೆದ್ದರೆ ಮಾತ್ರ ಸೇಫ್ ಝೋನ್​ನಲ್ಲೇ ಗುಜರಾತ್ ತಂಡ ಇರಲಿದೆ. ಹೀಗಾಗಿ ಮುಂದಿನ ಪಂದ್ಯದಲ್ಲೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಕಡೆಯಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಗುಜರಾತ್ ಟೈಟನ್ಸ್ (GT): ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಹಮಾನುಲ್ಲಾ ಗುರ್ಬಾಜ್, ವೃದ್ಧಿಮಾನ್ ಸಹಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ಡೊಮಿನಿಕ್ ಡ್ರೇಕ್ಸ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಯಶ್ ದಯಾಳ್, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್, ಗುರುಕೀರತ್ ಸಿಂಗ್, ಬಿ ಸಾಯಿ ಸುದರ್ಶನ್.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಎಸ್​ಯುವಿಯಲ್ಲಿ ರಾಶಿಗಟ್ಟಲೆ ಶಾಲಾ ಮಕ್ಕಳನ್ನು ತುಂಬಿದ ವಿಡಿಯೋ ವೈರಲ್
ಎಸ್​ಯುವಿಯಲ್ಲಿ ರಾಶಿಗಟ್ಟಲೆ ಶಾಲಾ ಮಕ್ಕಳನ್ನು ತುಂಬಿದ ವಿಡಿಯೋ ವೈರಲ್
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ