SRH vs KKR: 15 ಸೆಕೆಂಡ್​ಗಳ ನಂತರ ಡಿಆರ್​ಎಸ್​; ಮನವಿಯನ್ನು ಒಪ್ಪದ ಅಂಪೈರ್ ಜತೆ ರಿಂಕು ಸಿಂಗ್ ವಾಗ್ವಾದ​

| Updated By: shivaprasad.hs

Updated on: May 15, 2022 | 8:27 AM

IPL 2022 | Rinku Singh: ಈ ಪ್ರಕರಣದ ನಡೆಯುವಾಗ ರಿವ್ಯೂ ಸಲ್ಲಿಸಬೇಕಿದ್ದ ರಿಂಕು ಸಿಂಗ್ ಟೈಮರ್ ತೋರಿಸುವ ಸ್ಕ್ರೀನ್​ಗೆ ವಿರುದ್ಧವಾಗಿ ಮುಖ ಮಾಡಿ ನಿಂತಿದ್ದರು. ಸ್ಯಾಮ್ ಬಿಲ್ಲಿಂಗ್ಸ್ ಟೈಮರ್ ಕಡೆ ಮುಖಮಾಡಿದ್ದರು. ಆದರೆ ಚರ್ಚೆಯ ವೇಳೆ ಅವರು ಸಮಯ ಮೀರುತ್ತಿರುವುದನ್ನು ಗಮನಿಸಲಿಲ್ಲ!

SRH vs KKR: 15 ಸೆಕೆಂಡ್​ಗಳ ನಂತರ ಡಿಆರ್​ಎಸ್​; ಮನವಿಯನ್ನು ಒಪ್ಪದ ಅಂಪೈರ್ ಜತೆ ರಿಂಕು ಸಿಂಗ್ ವಾಗ್ವಾದ​
ಅಂಪೈರ್ ಜತೆ ಚರ್ಚೆ ನಡೆಸುತ್ತಿರುವ ರಿಂಕು ಸಿಂಗ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್
Image Credit source: IPL 2022
Follow us on

ಕೋಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ಸನ್​ರೈಸರ್ಸ್ ಹೈದರಾಬಾದ್ (SRH) ನಡುವೆ ಶನಿವಾರ ನಡೆದ ಪಂದ್ಯವು ವಿವಾದಕ್ಕೆ ಸಾಕ್ಷಿಯಾಗಿದೆ. 12ನೇ ಓವರ್​ನ ಮೂರನೇ ಎಸೆತದಲ್ಲಿ ಎಸ್​ಆರ್​ಹೆಚ್​ನ ಎಡಗೈ ವೇಗಿ ಟಿ.ನಟರಾಜನ್ (T Natarajan)​ ಕೆಕೆಆರ್​ನ ಬ್ಯಾಟರ್​​ ರಿಂಕು ಸಿಂಗ್​ರನ್ನು ಎಲ್​ಬಿಡಬ್ಲ್ಯು ಬಲೆಗೆ ಕೆಡವಿದರು. ಈ ಸಂದರ್ಭದಲ್ಲಿ ರಿಂಕು ಸಿಂಗ್ (Rinku Singh) ನಾನ್ ಸ್ಟ್ರೈಕರ್​ನಲ್ಲಿದ್ದ ಸ್ಯಾಮ್ ಬಿಲ್ಲಿಂಗ್ಸ್ ನೆರವನ್ನು ಕೇಳಿದರು. ಈರ್ವರೂ ಪರಸ್ಪರ ಸಂವಾದ ನಡೆಸಿ ಅಂಪೈರ್ ಮನವಿಯ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದರು. ಆದರೆ ಅಂಪೈರ್ ಇದನ್ನು ಒಪ್ಪಲಿಲ್ಲ. ಕಾರಣ, ಅದಾಗಲೇ ಡಿಆರ್​ಎಸ್ ಮನವಿಗೆ ಸಲ್ಲಿಸಲು ನಿಗದಿಯಾಗಿರುವ 15 ಸೆಕೆಂಡ್​ಗಳ ಕಾಲಾವಕಾಶ ಮುಗಿದಿತ್ತು. ಇದರಿಂದ ನಿರಾಶೆಗೊಂಡ ಕೆಕೆಆರ್​ ಬ್ಯಾಟರ್​ಗಳು ಅಂಪೈರ್ ಬಳಿ ವಾಗ್ವಾದ ನಡೆಸಿದರು.

ಈ ಪ್ರಕರಣದ ನಡೆಯುವಾಗ ರಿವ್ಯೂ ಸಲ್ಲಿಸಬೇಕಿದ್ದ ರಿಂಕು ಸಿಂಗ್ ಟೈಮರ್ ತೋರಿಸುವ ಸ್ಕ್ರೀನ್​ಗೆ ವಿರುದ್ಧವಾಗಿ ಮುಖ ಮಾಡಿ ನಿಂತಿದ್ದರು. ಸ್ಯಾಮ್ ಬಿಲ್ಲಿಂಗ್ಸ್ ಟೈಮರ್ ಕಡೆ ಮುಖಮಾಡಿದ್ದರು. ಆದರೆ ಚರ್ಚೆಯ ವೇಳೆ ಅವರು ಸಮಯ ಮೀರುತ್ತಿರುವುದನ್ನು ಗಮನಿಸಲಿಲ್ಲ. ಹೀಗಾಗಿ ಈರ್ವರೂ ರಿವ್ಯೂ ಸಲ್ಲಿಸಲು ನಿರ್ಧರಿಸಿ ಮನವಿ ಸಲ್ಲಿಸುವ ವೇಳೆಗೆ ಅದಾಗಲೇ ಸಮಯ ಮುಗಿದಿತ್ತು. ಅಂಪೈರ್ ಆಟಗಾರರ ಬಳಿ ತೆರಳಿ ಅವರಿಗೆ ಸಮಯ ಮುಗಿದಿರುವುದನ್ನು ತಿಳಿಸಿದರು. ಇದರಿಂದ ನಿರಾಶೆಗೊಂಡ ಬ್ಯಾಟರ್​ಗಳ ಅಂಪೈರ್ ನಡುವೆ ಒಂದೆರಡು ಮಾತುಗಳನ್ನಾಡಿದರು. ಆದರೆ ನಿಯಮದ ಪ್ರಕಾರ ರಿಂಕು ಸಿಂಗ್ ಪೆವಿಲಿಯನ್ ಕಡೆ ಹೆಜ್ಜೆಹಾಕಲೇಬೇಕಾಯಿತು.

ಇದನ್ನೂ ಓದಿ
Andrew Symonds: ಕ್ರಿಕೆಟ್ ಲೋಕಕ್ಕೆ ಮತ್ತೊಂದು ಆಘಾತ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್‌ ನಿಧನ
KKR vs SRH IPL Match Result: ರಸೆಲ್ ಅಬ್ಬರಕ್ಕೆ ಮಂಕಾದ ಹೈದರಾಬಾದ್; ಕೆಕೆಆರ್ ಪ್ಲೇ ಆಫ್ ಕನಸು ಜೀವಂತ
Sachin Tendulkar: ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ ‘ಫೇಕ್’
CSK vs GT, Head To Head: ಉಭಯ ತಂಡಗಳಿಗೂ ಇದು ಔಪಚಾರಿಕ ಪಂದ್ಯ; ಮುಖಾಮುಖಿ ವರದಿಯಲ್ಲಿ ಯಾರು ಬೆಸ್ಟ್?

ಅಚ್ಚರಿಯ ವಿಚಾರವೆಂದರೆ ಒಂದು ವೇಳೆ ರಿಂಕು ಸಿಂಗ್ ರಿವ್ಯೂ ಮಾಡಿದ್ದರೂ ಕೂಡ ಅದು ಅವರ ಪರವಾಗೇನೂ ಇರಲಿಲ್ಲ! ಮೈದಾನದಲ್ಲಿರುವ ಅಂಪೈರ್ ನಿರ್ಧಾರ ಸರಿಯಾಗಿತ್ತು. ಒಂದು ವೇಳೆ ಬ್ಯಾಟರ್ ಸರಿಯಾದ ಸಮಯಕ್ಕೆ ರಿವ್ಯೂ ಮಾಡಿದ್ದರೂ ಕೂಡ ಆ ರಿವ್ಯೂವನ್ನು ಕೆಕೆಆರ್ ಕಳೆದುಕೊಳ್ಳುತ್ತಿತ್ತು. ರಿಂಕು ಸಿಂಗ್ 6 ಎಸೆತಗಳಲ್ಲಿ 5 ರನ್ ಗಳಿಸಿದ್ದರು. ನಂತರ ಅವರು ಭಾರವಾದ ಹೆಜ್ಜೆಗಳನ್ನಿಟ್ಟು ಪೆವಿಲಿಯನ್ ಕಡೆ ತೆರಳಿದರು. ಇದರಿಂದ ಕೆಕೆಆರ್ 94 ರನ್​ಗಳೊಂದಿಗೆ 5 ವಿಕೆಟ್ ಕಳೆದುಕೊಂಡಂತಾಗಿತ್ತು.

ರಿಂಕು ಸಿಂಗ್​ ರಿವ್ಯೂ ಮಾಡಿದ ಸಂದರ್ಭದ ವಿಡಿಯೋ:

ಕೆಕೆಆರ್​ಗೆ ಆಸರೆಯಾಗಿದ್ದು ಭರ್ಜರಿಯಾಗಿ ಬ್ಯಾಟ್ ಬೀಸಿದ ಕೆರೆಬಿಯನ್ ದೈತ್ಯ ಆಂಡ್ರ್ಯೂ ರಸೆಲ್. ಅವರು 28 ಎಸೆತಗಳಲ್ಲಿ 49 ರನ್ ಸಿಡಿಸಿತಂಡದ ಮೊತ್ತವನ್ನು 177 ರನ್​ಗಳಿಗೆ ಏರಿಸಿದರು. ಬಿಲ್ಲಿಂಗ್ಸ್ 29 ಎಸೆತಗಳಲ್ಲಿ 34 ರನ್​ಗಳಿಸಿ ತಂಡಕ್ಕೆ ಆಧಾರವಾದರು.

ಕೆಕೆಆರ್ ನೀಡಿದ 177 ರನ್​ಗಳ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಶರಣಾಯಿತು. 54 ರನ್​ಗಳ ಜಯ ಸಾಧಿಸಿದ ಕೆಕೆಆರ್​ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.​

ಮತ್ತಷ್ಟು ಐಪಿಎಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 am, Sun, 15 May 22