LSG vs GT: ಇಂದು ಲಖನೌ ಮತ್ತು ಗುಜರಾತ್ ನಡುವ ಹೈವೋಲ್ಟೇಜ್ ಕದನ: ಗೆದ್ದ ತಂಡ ಪ್ಲೇ ಆಫ್​​ಗೆ

Lucknow Super Giants vs Gujarat Titans: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ಹಾಗೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಮುಖಾಮುಖಿ ಆಗಲಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿರುವ ಲಖನೌ ಹಾಗೂ ಎರಡನೇ ಸ್ಥಾನದಲ್ಲಿರುವ ಗುಜರಾತ್ ನಡುವಣ ಸೆಣೆಸಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

LSG vs GT: ಇಂದು ಲಖನೌ ಮತ್ತು ಗುಜರಾತ್ ನಡುವ ಹೈವೋಲ್ಟೇಜ್ ಕದನ: ಗೆದ್ದ ತಂಡ ಪ್ಲೇ ಆಫ್​​ಗೆ
LSG vs GT IPL 2022
Follow us
TV9 Web
| Updated By: Vinay Bhat

Updated on:May 10, 2022 | 9:23 AM

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ 57ನೇ ಪಂದ್ಯದಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ಹಾಗೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (LSG vs GT) ತಂಡ ಮುಖಾಮುಖಿ ಆಗಲಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿರುವ ಲಖನೌ ಹಾಗೂ ಎರಡನೇ ಸ್ಥಾನದಲ್ಲಿರುವ ಗುಜರಾತ್ ನಡುವಣ ಸೆಣೆಸಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಹಾರ್ದಿಕ್ (Hardik Pandya) ಪಡೆ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು ಮತ್ತು 3 ಪಂದ್ಯಗಳಲ್ಲಿ ಸೋಲನ್ನ ಕಾಣುವ ಮೂಲಕ ಒಟ್ಟಾರೆ 16 ಪಾಯಿಂಟ್ಸ್‌ ಕಲೆಹಾಕಿದೆ. ಇಷ್ಟೇ ಪ್ರಮಾಣದಲ್ಲಿ ಪಾಯಿಂಟ್ಸ್ ಕಲೆಹಾಕಿರುವ ರಾಹುಲ್ (KL Rahul) ಪಡೆ ಗುಜರಾತ್‌ಗಿಂತ ನೆಟ್‌ರನ್‌ರೇಟ್‌ನಲ್ಲಿ ಭಾರೀ ಅಂತರ ಸಾಧಿಸಿರುವುದರಿಂದ ಅಗ್ರಸ್ಥಾನದಲ್ಲಿದೆ.

ಈ ಎರಡು ತಂಡಗಳು ಕೂಡ ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಸತತ ಗೆಲುವಿನ ಯಶಸ್ಸಿನಲ್ಲಿ ತೇಲುತ್ತಿದ್ದ ಗುಜರಾತ್ ತಂಡ ಕಳೆದ ಎರಡು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದ್ದು ಹಿನ್ನಡೆ ಆಗಿದೆ. ಮರಳಿ ಗೆಲುವಿನ ಹಳಿ ಏರುವ ಸವಾಲು ಈಗ ಹಾರ್ದಿಕ್ ಪಾಂಡ್ಯ ಬಳಗದ ಮುಂದಿದೆ. ಆಡುವ 11ರ ಬಳಗದಲ್ಲಿ ಬದಲಾವಣೆಯ ನಿರೀಕ್ಷೆ ಇದೆ. ಸಾಯಿ ಸುದರ್ಶನ ಸ್ಟ್ರೈಕ್‌ರೇಟ್ ಸಾಧಾರಣವಾಗಿರುವುದರಿಂದ ಬಿರುಸಿನ ಆಟವಾಡುವ ಕನ್ನಡಿಗ ಅಭಿನವ್ ಮನೋಹರ್ ಮತ್ತೆ ಅವಕಾಶ ಪಡೆಯಬಹುದು. ಯಶ್ ದಯಾಳ್ ಫಿಟ್ ಆದರೆ ಪ್ರದೀಪ್ ಸಂಗ್ವಾನ್ ಹೊರಗುಳಿಯಲಿದ್ದಾರೆ.

ಶುಭ್ಮನ್ ಗಿಲ್‌, ನಾಯಕ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್‌, ರಾಹುಲ್ ತೆವಾಟಿಯ ಅವರ ಜೋಶ್‌ ಮಾಯವಾದಂತಿದೆ. ವಿಶ್ವ ದರ್ಜೆಯ ಬೌಲರ್‌ ಮೊಹಮ್ಮದ್‌ ಶಮಿ ಕಳೆದ 3 ಪಂದ್ಯಗಳಲ್ಲಿ 124 ರನ್‌ ನೀಡಿ 2 ವಿಕೆಟ್‌ಗಳನ್ನಷ್ಟೇ ಕೆಡವಿದ್ದಾರಷ್ಟೆ. ಫ‌ರ್ಗ್ಯುಸನ್‌ ನಿರೀಕ್ಷಿತ ಯಶಸ್ಸು ಕಂಡಿಲ್ಲ. ರಶೀದ್‌ ಖಾನ್‌ ಅವರ ಲೆಗ್‌ಸ್ಪಿನ್‌ ಮ್ಯಾಜಿಕ್‌ ಈ ವರ್ಷ ನಡೆದೇ ಇಲ್ಲ. ಹೀಗಾಗಿ ಅಂತಿಮ ಹಂತದಲ್ಲಿ ಜಿಟಿ ತಂಡಕ್ಕೆ ದೊಡ್ಡ ಸವಾಲಿದೆ.

ಇದನ್ನೂ ಓದಿ
Image
MI vs KKR: ನಾಟೌಟ್ ಆಗಿದ್ರೂ ಔಟ್ ಎಂದ ಅಂಪೈರ್: ಮೈದಾನದಲ್ಲಿ ರೋಹಿತ್ ಶರ್ಮಾ ಮಾಡಿದ್ದೇನು ನೋಡಿ
Image
Yuvraj Singh: ಏನೆಲ್ಲಾ ಮಾಡಬೇಕಪ್ಪಾ…ಮಗುವಿನ ಜೊತೆಗಿನ ಫೋಟೋ ಹಂಚಿಕೊಂಡ ಯುವಿ
Image
Virender Sehwag: ಇಶಾನ್ ಕಿಶನ್ ಬೇಡ, ದಿನೇಶ್ ಕಾರ್ತಿಕ್ ಸಹ ಬೇಡ, ಈತನಿಗೆ ಚಾನ್ಸ್ ನೀಡಿ ಎಂದ ಸೆಹ್ವಾಗ್..!
Image
Dinesh Karthik: 21 ಸಿಕ್ಸ್, 21 ಫೋರ್: 20ನೇ ಓವರ್​ನಲ್ಲಿ DK ಬಾಸ್..!

ಇತ್ತ ಮೇಲ್ನೋಟಕ್ಕೆ ಲಖನೌ ತಂಡವೇ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಬೀಗುತ್ತಿದ್ದ ರಾಹುಲ್ ಪಡೆಯ ಗೆಲುವಿನ ಕಾಂಬಿನೇಷನ್ ಬದಲಾಗುವ ಸಾಧ್ಯತೆಗಳಿಲ್ಲ. ಹೆಚ್ಚೆಂದರೆ ಬ್ಯಾಟಿಂಗ್ ಕ್ರಮಾಂಕ ಮತ್ತೆ ಬದಲಾವಣೆ ಕಾಣಬಹುದು. ನಾಯಕ ರಾಹುಲ್‌ ಕೆಲವು ಪಂದ್ಯಗಳಲ್ಲಿ ಖಾತೆ ತೆರೆಯದೇ ಹೋದರೂ 11 ಪಂದ್ಯಗಳಿಂದ 451 ರನ್‌ ಗಳಿಸಿದ್ದನ್ನು ಮರೆಯು ವಂತಿಲ್ಲ. 2 ಶತಕ, 2 ಅರ್ಧ ಶತಕ ಇದರಲ್ಲಿ ಒಳಗೊಂಡಿದೆ. ಕ್ವಿಂಟನ್‌ ಡಿ ಕಾಕ್‌, ದೀಪಕ್‌ ಹೂಡಾ ಬ್ಯಾಟಿಂಗ್‌ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ. ಆಯುಷ್‌ ಬದೋನಿ ಹಿಂದಿನ ಲಯಕ್ಕೆ ಮರಳಿದರೆ ತಂಡಕ್ಕೆ ಹೆಚ್ಚು ಲಾಭವಿದೆ.

ಲಖನೌದ ಹೆಚ್ಚುಗಾರಿಕೆಯೆಂದರೆ ಆಲ್‌ರೌಂಡರ್. ಕೃನಾಲ್‌ ಪಾಂಡ್ಯ, ಜೇಸನ್‌ ಹೋಲ್ಡರ್‌, ಮಾರ್ಕಸ್‌ ಸ್ಟೋಯಿನಿಸ್‌ ಇಲ್ಲಿನ ಪ್ರಮುಖರು. ಬೌಲಿಂಗ್‌ ವಿಭಾಗ ಹೆಚ್ಚು ಘಾತಕ. ಕಳೆದ ಪಂದ್ಯದಲ್ಲಿ ಬಲಿಷ್ಠ ಕೆಕೆಆರ್‌ 14.3 ಓವರ್‌ಗಳಲ್ಲಿ 101ಕ್ಕೆ ದಿಂಡುರುಳಿದ್ದೇ ಇದಕ್ಕೆ ತಾಜಾ ನಿದರ್ಶನ. ಮೊಹ್ಸಿನ್‌ ಖಾನ್‌, ಆವೇಶ್‌ ಖಾನ್‌, ದುಷ್ಮಂತ ಚಮೀರ, ಹೋಲ್ಡರ್‌ ವೇಗದ ದಾಳಿಯ ಮುಂಚೂಣಿಯಲ್ಲಿದ್ದಾರೆ. ಪುಣೆಯ ಎಂಸಿಎ ಕ್ರೀಡಾಂಗಣ ಆರಂಭಿಕ ಹಂತದಲ್ಲಿ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಆದರೆ ಪಂದ್ಯ ಮುಂದುವರಿದಂತೆ ಸ್ಪಿನ್ನರ್‌ಗಳು ಮಿಂಚುವ ಸಾಧ್ಯತೆಯಿದೆ.

ಉಭಯ ತಂಡಗಳ ಸಂಭಾವ್ಯ XI:

ಲಖನೌ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಅವೇಶ್ ಖಾನ್.

ಗುಜರಾತ್: ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಾಂಗ್ವಾನ್, ಲಾಕ್ ಫರ್ಗುಸನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:22 am, Tue, 10 May 22