AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS T20: ಸೆಪ್ಟೆಂಬರ್​ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಟಿ20 ಸರಣಿ: ಎಲ್ಲಿ?, ಯಾವಾಗ?

India vs Australia T20: ಸೆಪ್ಟೆಂಬರ್​​ನಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಕಾಂಗರೂ ಪಡೆ ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಆರಂಭಿಸಿ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್​ಗೂ ಮುನ್ನ ಭಾರತ ವಿರುದ್ಧ ಆಡುವ ಮೂಲಕ ಕೊನೆಗೊಳಿಸಲಿದೆ.

IND vs AUS T20: ಸೆಪ್ಟೆಂಬರ್​ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಟಿ20 ಸರಣಿ: ಎಲ್ಲಿ?, ಯಾವಾಗ?
IND vs AUS T20 Series
TV9 Web
| Updated By: Vinay Bhat|

Updated on:May 10, 2022 | 11:27 AM

Share

ಆಸ್ಟ್ರೇಲಿಯಾ ತಂಡ ಭಾರತ (India vs Australia) ಪ್ರವಾಸ ಕೈಗೊಳ್ಳಲಿದ್ದು, ಆತಿಥೇಯ ಟೀಮ್ ಇಂಡಿಯಾ (Team India) ಎದುರು ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಪೈಪೋಟಿ ನಡೆಸಲಿದೆ. ಸೆಪ್ಟೆಂಬರ್​​ನಲ್ಲಿ ಈ ಸರಣಿಯನ್ನು ಆಯೋಜನೆ ಮಾಡಲಾಗಿದೆ. ದಿನಾಂಕವನ್ನು ಇನ್ನಷ್ಟೆ ಪ್ರಕಟಿಸಬೇಕಿದೆ. ಕಾಂಗರೂ ಪಡೆ ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಆರಂಭಿಸಿ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್​ಗೂ (ICC T20I World Cup) ಮುನ್ನ ಭಾರತ ವಿರುದ್ಧ ಆಡುವ ಮೂಲಕ ಕೊನೆಗೊಳಿಸಲಿದೆ. ಕೊನೆಯದಾಗಿ 2018/19 ರಲ್ಲಿ ಆಸ್ಟ್ರೇಲಿಯಾ ಭಾರತದಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಆಡಿತ್ತು. ಇದು 1-1 ಅಂತರದಿಂದ ಸಮಬಲ ಕಂಡಿತ್ತು. ಟಿ20 ವಿಶ್ವಕಪ್ ದೃಷ್ಟಿಯಿಂದ ಉಭಯ ತಂಡಗಳಿಗೆ ಈ ಸರಣಿ ಮಹತ್ವದ್ದಾಗಿದೆ. ಅಂತೆಯೆ ಮುಂದಿನ ವರ್ಷ 2023 ಮಾರ್ಚ್​ನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪ್ರಯುಕ್ತ ಆಸೀಸ್ ಮತ್ತೆ ಭಾರತ ಪ್ರವಾಸ ಕೈಗೊಳ್ಳಲಿದೆ. ಇಲ್ಲಿ ಇಂಡೋ-ಆಸೀಸ್ ನಡುವೆ ಫೆಬ್ರವರಿ ಹಾಗೂ ಮಾರ್ಚ್​ನಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. 2016/17 ರಲ್ಲಿ ಉಭಯ ತಂಡಗಳ ನಡುವೆ ಕೊನೆಯ ಟೆಸ್ಟ್ ಸರಣಿ ನಡೆದಿತ್ತು.

ಆಸ್ಟ್ರೇಲಿಯಾ ತಂಡದ ಮುಂದಿನ ವೇಳಾಪಟ್ಟಿ ಗಮನಿಸುವುದಾದರೆ, ಜೂನ್-ಜುಲೈನಲ್ಲಿ ಶ್ರೀಲಂಕಾ ಪ್ರವಾಸ ನಡೆಸಲಿದ್ದು ಇಲ್ಲಿ ಮೂರು ಪಂದ್ಯಗಳ ಟಿ20, ಏಕದಿನ ಮತ್ತು ಎರಡು ಟೆಸ್ಟ್ ಆಡಲಿದೆ. ಆಗಸ್ಟ್ – ಸೆಪ್ಟೆಂಬರ್​​ನಲ್ಲಿ ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ, ಸೆಪ್ಟೆಂಬರ್​​ನಲ್ಲಿ ಭಾರತ ಪ್ರವಾಸ, ಅಕ್ಟೋಬರ್​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿ, ನವೆಂಬರ್​ನಲ್ಲಿ ಟಿ20 ವಿಶ್ವಕಪ್ ಮತ್ತು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲಿದೆ. ಮುಂದಿನ ವರ್ಷ 2023 ಜನವರಿಯಲ್ಲಿ ವೆಸ್ಟ್ ಇಂಡೀಸ್ ಮತ್ತು ದ. ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲಿದೆ.

ಇನ್ನು ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಆತಿಥೇಯ ಟೀಮ್ ಇಂಡಿಯಾ ಎದುರು ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಪೈಪೋಟಿ ನಡೆಸಲಿದೆ. ಈಗಾಗಲೇ ಸರಣಿಯ ಸಂಪೂರ್ಣ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಉದ್ಯಾನ ನಗರಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ಜೂನ್‌ 19ರಂದು ಜರುಗಲಿದ್ದು, ಉಳಿದ ಪಂದ್ಯಗಳಿಗೆ ಡೆಲ್ಲಿ, ಕಟಕ್‌, ವೈಝಾಗ್‌ ಮತ್ತು ರಾಜ್‌ಕೋಟ್‌ ನಗರಗಳು ಆತಿಥ್ಯ ವಹಿಸಿವೆ.

ಇದನ್ನೂ ಓದಿ
Image
Rohit Sharma: ತಮ್ಮದೇ ತಂಡದ ಬ್ಯಾಟರ್​ಗಳಿಗೆ ಚಳಿ ಬಿಡಿಸಿದ ರೋಹಿತ್ ಶರ್ಮಾ: ಏನು ಹೇಳಿದ್ರು ಕೇಳಿ
Image
LSG vs GT: ಇಂದು ಲಖನೌ ಮತ್ತು ಗುಜರಾತ್ ನಡುವ ಹೈವೋಲ್ಟೇಜ್ ಕದನ: ಗೆದ್ದ ತಂಡ ಪ್ಲೇ ಆಫ್​​ಗೆ
Image
MI vs KKR: ನಾಟೌಟ್ ಆಗಿದ್ರೂ ಔಟ್ ಎಂದ ಅಂಪೈರ್: ಮೈದಾನದಲ್ಲಿ ರೋಹಿತ್ ಶರ್ಮಾ ಮಾಡಿದ್ದೇನು ನೋಡಿ
Image
Yuvraj Singh: ಏನೆಲ್ಲಾ ಮಾಡಬೇಕಪ್ಪಾ…ಮಗುವಿನ ಜೊತೆಗಿನ ಫೋಟೋ ಹಂಚಿಕೊಂಡ ಯುವಿ

ಈ ವರ್ಷ ಭಾರತದಲ್ಲಿ ಆಯೋಜನೆ ಆಗುತ್ತಿರುವ ಮೂರನೇ ದ್ವಿಪಕ್ಷೀಯ ಟಿ20 ಕ್ರಿಕೆಟ್‌ ಸರಣಿ ಇದಾಗಿದೆ. ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಗಳಲ್ಲಿ ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡ ಕ್ಲೀನ್‌ ಸ್ವೀಪ್‌ ಸಾಧನೆ ಮೆರೆದಿತ್ತು. ಈ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ನಡೆಯಲಿದ್ದು, ಇದಕ್ಕೆ ಪೂರ್ವ ಸಿದ್ಧತೆ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಸರಣಿ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

ಭಾರತ-ದಕ್ಷಿಣ ಆಫ್ರಿಕಾ ನಡುವಣ ಟಿ20 ಕ್ರಿಕೆಟ್‌ ಸರಣಿಯ ವೇಳಾಪಟ್ಟಿ

ಜೂನ್ 9, 1ನೇ ಟಿ20 – ದೆಹಲಿ.

ಜೂನ್ 12, 2 ನೇ ಟಿ20 – ಕಟಕ್.

ಜೂನ್ 14, 3ನೇ ಟಿ20 – ವಿಶಾಖಪಟ್ಟಣ.

ಜೂನ್ 17, 4 ನೇ ಟಿ20 – ರಾಜ್ಕೋಟ್.

ಜೂನ್ 19, 5 ನೇ ಟಿ20 – ಬೆಂಗಳೂರು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:25 am, Tue, 10 May 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್