Rohit Sharma: ತಮ್ಮದೇ ತಂಡದ ಬ್ಯಾಟರ್​ಗಳಿಗೆ ಚಳಿ ಬಿಡಿಸಿದ ರೋಹಿತ್ ಶರ್ಮಾ: ಏನು ಹೇಳಿದ್ರು ಕೇಳಿ

MI vs KKR IPL 2022: ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ 9 ವಿಕೆಟ್‌ಗೆ 165 ರನ್‌ಗಳಿಗೆ ಸಮಾಧಾನ ಕಂಡಿತು. ಆದರೆ, ಮುಂಬೈ ತಂಡ 17.3 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತು. ಬ್ಯಾಟರ್​ಗಳ ಸಂಪೂರ್ಣ ವೈಫಲ್ಯದಿಂದ ಮುಂಬೈ ಟೂರ್ನಿಯಲ್ಲಿ 9ನೇ ಸೋಲು ಕಂಡಿದೆ. ಈ ಬಗ್ಗೆ ನಾಯಕ ರೋಹಿತ್ ಶರ್ಮಾ (Rohit Sharma) ಏನು ಹೇಳಿದರು ಕೇಳಿ.

Rohit Sharma: ತಮ್ಮದೇ ತಂಡದ ಬ್ಯಾಟರ್​ಗಳಿಗೆ ಚಳಿ ಬಿಡಿಸಿದ ರೋಹಿತ್ ಶರ್ಮಾ: ಏನು ಹೇಳಿದ್ರು ಕೇಳಿ
Rohit Sharma post match presentation MI vs KKR
Follow us
TV9 Web
| Updated By: Vinay Bhat

Updated on:May 10, 2022 | 10:29 AM

ಸತತ ಎರಡು ಗೆಲುವು ಕಂಡು ನಿರೀಕ್ಷೆ ಹುಟ್ಟಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್​ (MI vs KKR) ವಿರುದ್ಧ ಸೋಲುವ ಮೂಲಕ ಮತ್ತೆ ಅದೇ ಹಳೇ ಚಾಳಿಯನ್ನು ಮುಂದುವರೆಸಿದೆ. ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಕೇವಲ 10 ರನ್ ನೀಡಿ 5 ವಿಕೆಟ್ ಕೀಳುವ ಮೂಲಕ ಪ್ರಚಂಡ ಬೌಲಿಂಗ್ ನಿರ್ವಹಣೆಯ ನಡುವೆಯೂ ರೋಹಿತ್ ಶರ್ಮಾ ಪಡೆ ಐಪಿಎಲ್ 15ರಲ್ಲಿ ಮತ್ತೆ ಮುಗ್ಗರಿಸಿದೆ. ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 52 ರನ್‌ಗಳಿಂದ ಗೆದ್ದು ಬೀಗಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ 9 ವಿಕೆಟ್‌ಗೆ 165 ರನ್‌ಗಳಿಗೆ ಸಮಾಧಾನ ಕಂಡಿತು. ಆದರೆ, ಮುಂಬೈ ತಂಡ 17.3 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತು. ಬ್ಯಾಟರ್​ಗಳ ಸಂಪೂರ್ಣ ವೈಫಲ್ಯದಿಂದ ಮುಂಬೈ ಟೂರ್ನಿಯಲ್ಲಿ 9ನೇ ಸೋಲು ಕಂಡಿದ್ದು, 5 ಬಾರಿಯ ಚಾಂಪಿಯನ್ಸ್‌ಗೆ ಈ ಸಲ ಅಂಕಪಟ್ಟಿಯಲ್ಲಿ ಕೊನೇ ಸ್ಥಾನವೇ ಬಹುತೇಕ ಖಚಿತವೆನಿಸಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಮುಂಬೈ ನಾಯಕ ರೋಹಿತ್ ಶರ್ಮಾ (Rohit Sharma) ಏನು ಹೇಳಿದರು ಕೇಳಿ.

“ನಮಗೆ ದೊಡ್ಡ ಮೊತ್ತದ ಟಾರ್ಗೆಟ್ ಏನು ಇರಲಿಲ್ಲ. ಈ ಪಿಚ್‌ನಲ್ಲಿ ಆ ಮೊತ್ತವನ್ನು ಸುಲಭವಾಗಿ ಚೇಸ್‌ ಮಾಡಬಹುದಿತ್ತು. ಬೌಲಿಂಗ್‌ ವಿಭಾಗದಲ್ಲಿ ನಾವು ಅತ್ಯುತ್ತಮ ಪ್ರದರ್ಶನ ನೀಡಿದೆವು. ಅದರಲ್ಲೂ ವಿಶೇಷವಾಗಿ ಜಸ್‌ಪ್ರಿತ್‌ ಬುಮ್ರಾ ಬೌಲಿಂಗ್ ಅದ್ಭುತವಾಗಿತ್ತು. ಆದರೆ, ನಮ್ಮ ಬ್ಯಾಟ್ಸ್‌ಮನ್‌ಗಳು ಕಳಪೆ ಆಟವನ್ನು ಪ್ರದರ್ಶಿಸಿದ್ದಾರೆ. ಆ ಮೂಲಕ ಭಾರಿ ನಿರಾಶೆ ಮೂಡಿಸಿದ್ದಾರೆ. ನಿಜ ಹೇಳಬೇಕೆಂದರೆ ಈ ಪಿಚ್‌ನಲ್ಲಿ ಬ್ಯಾಟ್‌ ಮಾಡುವುದು ಅಷ್ಟೊಂದು ಕಠಿಣ ಇರಲಿಲ್ಲ. ಈ ಪಿಚ್​ನಲ್ಲಿ ನಾವು ಆಡುತ್ತಿರುವ ನಾಲ್ಕನೇ ಪಂದ್ಯವಿದು. ಹೀಗಾಗಿ ಈ ಮೈದಾನದ ಬಗ್ಗೆ ಚೆನ್ನಾಗಿ ತಿಳಿದಿದೆ. ಹೊಸ ಚೆಂಡಿನಲ್ಲಿ ಸೀಮ್‌ ಬೌಲರ್‌ಗಳಿಗೆ ಪಿಚ್‌ ನೆರವಾಗಲಿದೆ ಎಂಬುದು ಗೊತ್ತಿದೆ. ಆದರೆ, ಬ್ಯಾಟಿಂಗ್‌ ವಿಭಾಗವಾಗಿ ನಾವು ಜೊತೆಯಾಟ ಆಡಲಿಲ್ಲ,” ಎಂದು ಸೋಲಿಗೆ ಬ್ಯಾಟರ್​ಗಳೇ ನೇರ ಕಾರಣ ಎಂದು ಗುಡುಗಿದ್ದಾರೆ.

“ಕೆಕೆಆರ್ ತಂಡ ಆರಂಭಿಕ 10 ಓವರ್‌ಗಳಲ್ಲಿ ಬ್ಯಾಟ್‌ ಮಾಡಿದ್ದ ರೀತಿ ಅತ್ಯುತ್ತಮವಾಗಿತ್ತು. ಅವರನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುತ್ತೇವೆಂದು ತಾನು ಭಾವಿಸಿರಲಿಲ್ಲ. 10 ಅಥವಾ 11 ಓವರ್‌ಗಳಿಗೆ ಅವರು 100 ರನ್‌ ಗಡಿ ದಾಟಿದ್ದರು. ನಂತರ ನಮ್ಮ ಕಮ್‌ಬ್ಯಾಕ್‌ ಅದ್ಭುತವಾಗಿತ್ತು. ಜಸ್‌ಪ್ರಿತ್‌ ಬುಮ್ರಾ ಅವರಿಂದ ಅದ್ಭುತ ಪ್ರಯತ್ನ ಇದಾಗಿದೆ. ಆದರೆ, ನಮ್ಮ ಬ್ಯಾಟ್ಸ್‌ಮನ್‌ಗಳು ನಮಗೆ ಹಿನ್ನಡೆಯನ್ನುಂಟು ಮಾಡಿದರು. ಈ ಸೀಸನ್​ನಲ್ಲಿ ನಮ್ಮ ಎಲ್ಲ ವಿಭಾಗ ಕೈಕೊಟ್ಟಿದೆ. ನಾವು ಇದನ್ನು ಸರಿಪಡಿಸಬೇಕಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
LSG vs GT: ಇಂದು ಲಖನೌ ಮತ್ತು ಗುಜರಾತ್ ನಡುವ ಹೈವೋಲ್ಟೇಜ್ ಕದನ: ಗೆದ್ದ ತಂಡ ಪ್ಲೇ ಆಫ್​​ಗೆ
Image
MI vs KKR: ನಾಟೌಟ್ ಆಗಿದ್ರೂ ಔಟ್ ಎಂದ ಅಂಪೈರ್: ಮೈದಾನದಲ್ಲಿ ರೋಹಿತ್ ಶರ್ಮಾ ಮಾಡಿದ್ದೇನು ನೋಡಿ
Image
Yuvraj Singh: ಏನೆಲ್ಲಾ ಮಾಡಬೇಕಪ್ಪಾ…ಮಗುವಿನ ಜೊತೆಗಿನ ಫೋಟೋ ಹಂಚಿಕೊಂಡ ಯುವಿ
Image
Virender Sehwag: ಇಶಾನ್ ಕಿಶನ್ ಬೇಡ, ದಿನೇಶ್ ಕಾರ್ತಿಕ್ ಸಹ ಬೇಡ, ಈತನಿಗೆ ಚಾನ್ಸ್ ನೀಡಿ ಎಂದ ಸೆಹ್ವಾಗ್..!

ಗೆದ್ದ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ, “ಹಿಂದಿನ ಪಂದ್ಯದಲ್ಲಿ ಸೋತ ಬಳಿಕ ಈಗ ದೊಡ್ಡ ಮೊತ್ತದ ಅಂತರದಲ್ಲಿ ಗೆದ್ದಿರುವುದಕ್ಕೆ ಖುಷಿ ಇದೆ. ಪವರ್ ಪ್ಲೇ ನಲ್ಲಿ ನಮ್ಮ ಬ್ಯಾಟಿಂಗ್ ಆರಂಭ ಅತ್ಯುತ್ತಮವಾಗಿತ್ತು. ವೆಂಕಟೇಶ್ ಅಯ್ಯರ್ ಬೌಲರ್​​ಗಳನ್ನು ಚೆನ್ನಾಗಿ ಟಾರ್ಗೆಟ್ ಮಾಡಿದರು. ಆರಂಭದಲ್ಲಿ ಆ ರೀತಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಬೌಲಿಂಗ್​ಗೆ ಇಳಿದಾಗ ಎದುರಾಳಿಗೆ ರೂಮ್ ಬಿಟ್ಟುಕೊಡದೆ ಸರಿಯಾದ ಜಾಗದಲ್ಲಿ ಚೆಂಡು ಎಸೆಯುವುದು ನಮ್ಮ ಟಾರ್ಗೆಟ್ ಆಗಿತ್ತು. ಪ್ರತಿಯೊಬ್ಬ ಆಟಗಾರ ಸಾಕಷ್ಟು ಶ್ರಮ ಪಟ್ಟು ಆಡಿದ್ದಾರೆ. ಅವರ ಘನತೆಗೆ ತಕ್ಕಂತೆ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯ ಗೆಲ್ಲಲೇ ಬೇಕೆಂದು ನಾವು ಪಣ ತೊಟ್ಟಿದ್ದೆವು,” ಎಂಬುದು ಶ್ರೇಯಸ್ ಅಯ್ಯರ್ ಮಾತು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:29 am, Tue, 10 May 22

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ