Kagiso Rabada: ನಿಮಗೆ ಸಲ್ಮಾನ್ ಖಾನ್ ಗೊತ್ತಾ? ಎಂದು ಕೇಳಿದ ಆ್ಯಂಕರ್​​ಗೆ ರಬಾಡ ಎಪಿಕ್ ರಿಪ್ಲೇ

Kagiso Rabada: ನಿಮಗೆ ಸಲ್ಮಾನ್ ಖಾನ್ ಗೊತ್ತಾ? ಎಂದು ಕೇಳಿದ ಆ್ಯಂಕರ್​​ಗೆ ರಬಾಡ ಎಪಿಕ್ ರಿಪ್ಲೇ
Kagiso Rabada IPL 2022

Do You Know Salman Khan?: ಶುಕ್ರವಾರ ಪಂಜಾಬ್ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನ ಎದುರಿಸಲಿದೆ. ಈ ಕಾದಾಟಕ್ಕೂ ಮುನ್ನ ಪಂಜಾಬ್ ಕಿಂಗ್ಸ್​ ತಂಡದ ವಿದೇಶಿ ಆಟಗಾರರು ಬಾಲಿವುಡ್ ಸಿನಿಮಾದ ಡೈಲಾಗ್ ಹೇಳಿ ಮಿಂಚಿದ್ದಾರೆ. ಇದರಲ್ಲಿ ಪ್ರಮುಖ ಹೈಲೇಟ್ ಆಗಿದ್ದು ಕಗಿಸೊ ರಬಾಡ.

TV9kannada Web Team

| Edited By: Vinay Bhat

May 10, 2022 | 12:09 PM

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪಂಜಾಬ್ ಕಿಂಗ್ಸ್​ (PBKS) ತಂಡದ ಪರ ಆಡುತ್ತಿರುವ ಕಗಿಸೊ ರಬಾಡ (Kagiso Rabada) ಬೊಂಬಾಟ್ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ. ಆಡಿರುವ 10 ಪಂದ್ಯಗಳಿಂದ 18 ವಿಕೆಟ್ ಕಿತ್ತಿದ್ದಾರೆ. 33 ರನ್ ನೀಡಿ 4 ವಿಕೆಟ್ ಪಡೆದಿರುವುದು ಈ ಬಾರಿಯ ಇವರ ಶ್ರೇಷ್ಠ ಸಾಧನೆಯಾಗಿದೆ. 4 ವಿಕೆಟ್ ಹಾಗೂ 5 ವಿಕೆಟ್ ಒಂದು ಬಾರಿ ಪಡೆದುಕೊಂಡ ಸಾಧನೆ ಮಾಡಿದ್ದಾರೆ. ಇವರ ತಂಡ ಪಂಜಾಬ್ ಈ ಬಾರಿಯ ಐಪಿಎಲ್​ನಲ್ಲಿ ಸಾಧಾರಣ ಪ್ರದರ್ಶನ ನೀಡಿದೆಯಷ್ಟೆ. ಆಡಿದ 11 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಮತ್ತು ಆರು ಪಂದ್ಯಗಳಲ್ಲಿ ಸೋಲು ಕಂಡಿದೆ. ಸದ್ಯ ಮಯಾಂಕ್ ಪಡೆ ಪಾಯಿಂಟ್ ಟೇಬಲ್​ನಲ್ಲಿ ಏಳನೇ ಸ್ಥಾನದಲ್ಲಿದೆ. ಪ್ಲೇ ಆಫ್​​ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಶುಕ್ರವಾರ ಪಂಜಾಬ್ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB vs PBKS) ತಂಡವನ್ನ ಎದುರಿಸಲಿದೆ.

ಈ ಕಾದಾಟಕ್ಕೂ ಮುನ್ನ ಪಂಜಾಬ್ ಕಿಂಗ್ಸ್​ ತಂಡದ ವಿದೇಶಿ ಆಟಗಾರರು ಬಾಲಿವುಡ್ ಸಿನಿಮಾದ ಡೈಲಾಗ್ ಹೇಳಿ ಮಿಂಚಿದ್ದಾರೆ. ಇದರಲ್ಲಿ ಪ್ರಮುಖ ಹೈಲೇಟ್ ಆಗಿದ್ದು ಕಗಿಸೊ ರಬಾಡ. ಐಪಿಎಲ್​ ಆ್ಯಂಕರ್​ ಒಬ್ಬರು ಕೇಳಿದ ಪ್ರಶ್ನೆಗೆ ರಬಾಡ ನೀಡಿರುವ ಉತ್ತರ ಬಾಲಿವುಡ್​ ಸುಲ್ತಾನ್​ ಸಲ್ಮಾನ್​ ಖಾನ್​ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆ್ಯಂಕರ್ ಅವರು ರಬಾಡ ಬಳಿಕ ನಿಮಗೆ ಸಲ್ಮಾನ್​ ಖಾನ್​ ಗೊತ್ತಾ? ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರ ನೀಡುವ ರಬಾಡ ಗೊತ್ತಿಲ್ಲ, ನನಗೆ ರಶೀದ್​ ಖಾನ್​ ಮಾತ್ರ ಗೊತ್ತು ಎಂದಿದ್ದಾರೆ. ಈ ಉತ್ತರ ಕೇಳಿದ ಆ್ಯಂಕರ್​ ಕೂಡ ಒಂದು ಕ್ಷಣ ದಂಗಾಗಿದ್ದಾರೆ.

ಪಂಜಾಬ್ ಕಿಂಗ್ಸ್​ ಈ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದು ಇದರಲ್ಲಿ ರಬಡಾ ಸಲ್ಮಾನ್​ ಖಾನ್​ ಅವರ ವಾಂಟೆಡ್​ ಚಿತ್ರದ ಡೈಲಾಗ್​ ಅನ್ನು ಹೊಡೆಯಲು ಯತ್ನಿಸಿದ್ದಾರೆ. ಆದರೆ, ಇವರಿಗೆ ಸಲ್ಮಾನ್ ಖಾನ್ ಯಾರೆಂದು ತಿಳಿದಿಲ್ಲ ಎಂಬುದು ಅನೇಕರಿಗೆ ಬೇಸರ ಮೂಡಿಸಿದೆ. ರಬಡಾ ಮಾತ್ರವಲ್ಲ ಇತರೆ ವಿದೇಶಿ ಆಟಗಾರರು ಬಾಲಿವುಡ್​ ಸಿನಿಮಾಗಳ ಡೈಲಾಗ್​ಗೆ ಡಬ್​ಸ್ಮ್ಯಾಶ್​ ಮಾಡಲು ಯತ್ನಿಸಿ ಕೆಲ ಕಾಲ ಫನ್​ ಮಾಡಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ತಂಡದ ಎದುರು ಮಯಂಕ್ ಅಗರವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಸೋಲು ಕಂಡಿತ್ತು. ಯುಜ್ವೇಂದ್ರ ಚಾಹಲ್ ಸ್ಪಿನ್ ಮೋಡಿಗೆ ಮತ್ತು ಅಮೋಘ ಬ್ಯಾಟಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ಪಂಜಾಬ್ ಗೆಲುವನ್ನು ಕಸಿದುಕೊಂಡಿದ್ದರು. ಜಾನಿ ಬೇಸ್ಟೊ ಅವರ ಅರ್ಧಶತಕ ಮತ್ತು ಜಿತೇಶ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 5ಕ್ಕೆ 189 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ರಾಜಸ್ಥಾನ ಇನ್ನೂ ಎರಡು ಎಸೆತ ಉಳಿದಿರುವಾಗ ದಡ ಸೇರಿತ್ತು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada