LSG vs GT Prediction Playing XI IPL 2022: ಪ್ಲೇ ಆಫ್​ಗೇರಲು ಗೆಲುವು ಅಗತ್ಯ; ಉಭಯ ತಂಡಗಳ ಸಂಭಾವ್ಯ XI

LSG vs GT Prediction Playing XI IPL 2022: ಲಕ್ನೋ ತನ್ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ಗೆಲುವಿನೊಂದಿಗೆ ಬರುತ್ತಿದೆ. ಇದು ಈ ಎರಡು ತಂಡಗಳ ನಡುವೆ ಈ ಋತುವಿನ ಎರಡನೇ ಪಂದ್ಯವಾಗಿದೆ. ಇದಕ್ಕೂ ಮುನ್ನ ಈ ಎರಡೂ ತಂಡಗಳು ಮಾರ್ಚ್ 28 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು, ಇದರಲ್ಲಿ ಗುಜರಾತ್ ಗೆದ್ದಿತ್ತು.

LSG vs GT Prediction Playing XI IPL 2022: ಪ್ಲೇ ಆಫ್​ಗೇರಲು ಗೆಲುವು ಅಗತ್ಯ; ಉಭಯ ತಂಡಗಳ ಸಂಭಾವ್ಯ XI
GT vs LSG
Follow us
TV9 Web
| Updated By: ಪೃಥ್ವಿಶಂಕರ

Updated on:May 09, 2022 | 6:51 PM

ಐಪಿಎಲ್ 2022 (IPL 2022)ರ ಲೀಗ್ ಹಂತವು ಈಗ ಅಂತಿಮ ಹಂತದತ್ತ ಸಾಗುತ್ತಿದೆ, ಇದರೊಂದಿಗೆ ಟಾಪ್-4ರ ರೇಸ್ ತುಂಬಾ ಆಸಕ್ತಿದಾಯಕವಾಗುತ್ತಿದೆ. ಎರಡು ತಂಡಗಳು ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಅವುಗಳು ಈ ಋತುವಿನ ಎರಡು ಹೊಸ ತಂಡಗಳಾಗಿವೆ – ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಮಂಗಳವಾರ ಲಕ್ನೋ ಮತ್ತು ಗುಜರಾತ್ (LSG vs GT) ಮುಖಾಮುಖಿಯಾಗಲಿವೆ. ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ ಏಕೆಂದರೆ ಈ ಪಂದ್ಯದಲ್ಲಿ ಗೆಲುವು ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯುತ್ತದೆ. ಲಕ್ನೋ ಮತ್ತು ಗುಜರಾತ್ ಎರಡೂ ತಂಡಗಳು ತಲಾ 16 ಅಂಕಗಳನ್ನು ಹೊಂದಿವೆ, ಆದರೆ ಉತ್ತಮ ನಿವ್ವಳ ರನ್ ರೇಟ್‌ನಿಂದಾಗಿ ಲಕ್ನೋ ತಂಡವು ನಂಬರ್ ಒನ್ ಮತ್ತು ಗುಜರಾತ್ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಬಹಳ ಸಮಯದಿಂದ ನಂಬರ್-1 ಸ್ಥಾನದಲ್ಲಿತ್ತು ಆದರೆ ಗುಜರಾತ್ ಕಳೆದ ಎರಡು ಪಂದ್ಯಗಳಲ್ಲಿ ಸೋತಿದ್ದರಿಂದ ನಂಬರ್ ಒನ್ ಸ್ಥಾನವನ್ನು ಕಳೆದುಕೊಂಡಿತು.

ಲಕ್ನೋ ತನ್ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ಗೆಲುವಿನೊಂದಿಗೆ ಬರುತ್ತಿದೆ. ಇದು ಈ ಎರಡು ತಂಡಗಳ ನಡುವೆ ಈ ಋತುವಿನ ಎರಡನೇ ಪಂದ್ಯವಾಗಿದೆ. ಇದಕ್ಕೂ ಮುನ್ನ ಈ ಎರಡೂ ತಂಡಗಳು ಮಾರ್ಚ್ 28 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು, ಇದರಲ್ಲಿ ಗುಜರಾತ್ ಗೆದ್ದಿತ್ತು. ಈ ಪಂದ್ಯ ಐಪಿಎಲ್‌ನಲ್ಲಿ ಈ ಎರಡು ತಂಡಗಳ ಮೊದಲ ಪಂದ್ಯವೂ ಆಗಿತ್ತು. ಇದೀಗ ಆ ಸೋಲನ್ನು ಸರಿಗಟ್ಟಲು ಲಕ್ನೋ ಪ್ರಯತ್ನಿಸಲಿದೆ.

ಗುಜರಾತ್ ತಂಡ ಬದಲಾಗುತ್ತಾ? ಈ ಪಂದ್ಯದಲ್ಲಿ ಗುಜರಾತ್ ಗೆಲುವಿನ ಹಾದಿಗೆ ಮರಳುವುದು ಅನಿವಾರ್ಯವಾಗಿದೆ. ಅವರು ಕಳೆದ ಎರಡು ಪಂದ್ಯಗಳಲ್ಲಿ ಸೋತಿದ್ದಾರೆ ಆದರೆ ಈ ಸೋಲಿನ ನಂತರವೂ ಅವರು ದುರ್ಬಲರು ಎನ್ನಲು ಅಸಾಧ್ಯ. ಮುಂಬೈ ವಿರುದ್ಧದ ಕೊನೆಯ ಪಂದ್ಯದಲ್ಲಿ, ಶುಬ್‌ಮನ್ ಗಿಲ್ ಅರ್ಧಶತಕ ಗಳಿಸುವ ಮೂಲಕ ಫಾರ್ಮ್‌ಗೆ ಮರಳುವ ಸೂಚನೆ ನೀಡಿದ್ದು, ಅವರ ಜೊತೆಗಾರ ವೃದ್ಧಿಮಾನ್ ಸಹಾ ಕೂಡ ಅರ್ಧಶತಕ ಬಾರಿಸಿದ್ದು ಗುಜರಾತ್‌ಗೆ ಉತ್ತಮವಾಗಿದೆ. ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ 2 ವಿಭಾಗವೂ ಲಕ್ನೋ ವಿರುದ್ಧ ಹಳೆಯ ಫಾರ್ಮ್ ಅನ್ನು ತೋರಿಸಬೇಕಾಗಿದೆ. ಈ ಪಂದ್ಯಕ್ಕಾಗಿ ಗುಜರಾತ್ ತನ್ನ ಪ್ಲೇಯಿಂಗ್-11 ಅನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ಯಾರಾದರೂ ಗಾಯಗೊಂಡರೆ ಈ ತಂಡ ಮಾತ್ರ ಬದಲಾವಣೆಯ ಬಗ್ಗೆ ಯೋಚಿಸುತ್ತದೆ.

ಇದನ್ನೂ ಓದಿ
Image
PAK vs SL: ಕ್ರಿಕೆಟ್​ಗೂ ಬರೆ ಎಳೆದ ಲಂಕಾದ ತುರ್ತು ಪರಿಸ್ಥಿತಿ; ಪಾಕ್-ಲಂಕಾ ಸರಣಿ ಮುಂದೂಡಿಕೆ, ಏಕದಿನ ಸರಣಿ ರದ್ದು!
Image
LSG vs GT IPL 2022 Match Prediction: ಲಕ್ನೋ- ಗುಜರಾತ್ ಮುಖಾಮುಖಿ; ಗೆದ್ದವರಿಗೆ ಪ್ಲೇ ಆಫ್ ಟಿಕೆಟ್ ಖಚಿತ
Image
IPL 2022: ಒಂದೇ ಓವರ್​ನಲ್ಲಿ ಅತ್ಯಧಿಕ ರನ್ ನೀಡಿದ ಐಪಿಎಲ್​ನ ಅತ್ಯಂತ ದುಬಾರಿ ಬೌಲರ್​ಗಳಿವರು..!

ಲಕ್ನೋ ಹಳೆ ತಂಡವನ್ನೇ ಆಡಿಸಲಿದೆ! ಅದೇ ಸಮಯದಲ್ಲಿ ಲಕ್ನೋ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದಿತ್ತು. ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸಿದರು. ಗುಜರಾತ್‌ನಂತಹ ಬಲಿಷ್ಠ ತಂಡದೆದುರು ಲಕ್ನೋ ಪ್ರಸ್ತುತದಲ್ಲಿರುವ ಫಾರ್ಮ್ ಅನ್ನು ಮುಂದುವರಿಸಲು ಪ್ರಯತ್ನಿಸಲಿದೆ. ಕಳೆದ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಅರ್ಧಶತಕ ಬಾರಿಸಿದ್ದು, ದೀಪಕ್ ಹೂಡಾ ಕೂಡ ಉತ್ತಮ ಆಟ ಪ್ರದರ್ಶಿಸಿದ್ದರು. ಆಯುಷ್ ಬಡೋನಿ, ಮಾರ್ಕಸ್ ಸ್ಟೊಯಿನಿಸ್, ಜೇಸನ್ ಹೋಲ್ಡರ್ ಕೂಡ ಈ ಋತುವಿನಲ್ಲಿ ಬ್ಯಾಟ್‌ನೊಂದಿಗೆ ಪ್ರಭಾವ ಬೀರಿದ್ದಾರೆ. ಮೊಹ್ಸಿನ್ ಖಾನ್ ಬೌಲಿಂಗ್‌ನಲ್ಲಿ ಸಾಕಷ್ಟು ಪ್ರಭಾವ ಬೀರಿದ್ದು, ಅವೇಶ್ ಖಾನ್, ಜೇಸನ್ ಹೋಲ್ಡರ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಕೆಲವು ಪಂದ್ಯಗಳಲ್ಲಿ ರವಿ ಬಿಷ್ಣೋಯ್ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಆದರೆ ರಾಹುಲ್ ಅವರ ಮೇಲೆ ನಂಬಿಕೆ ಇಡುತ್ತಾರೆ. ಅದಕ್ಕಾಗಿಯೇ ನಾಯಕ ಕೆಎಲ್ ರಾಹುಲ್ ತಮ್ಮ ಗೆಲುವಿನ ತಂಡವನ್ನು ಬದಲಾಯಿಸುವ ನಿರೀಕ್ಷೆ ನಗಣ್ಯ.

ಎರಡೂ ತಂಡಗಳ ಸಂಭಾವ್ಯ-11 ಲಕ್ನೋ ಸೂಪರ್ ಜೈಂಟ್ಸ್- ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಅವೇಶ್ ಖಾನ್.

ಗುಜರಾತ್ ಟೈಟಾನ್ಸ್- ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಾಂಗ್ವಾನ್, ಲಾಕ್ ಫರ್ಗುಸನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ.

Published On - 6:51 pm, Mon, 9 May 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ