ಒಟ್ಟು 6 ತಂಡಗಳು, WIPL ಗೆ ಬಿಸಿಸಿಐ ಭರ್ಜರಿ ಪ್ಲ್ಯಾನ್
ಐಪಿಎಲ್ ಪ್ರಸಾರ ಹಕ್ಕುಗಳ ಹರಾಜಿನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ, ವಾಲ್ಟ್ ಡಿಸ್ನಿ, ಸೋನಿ ಗ್ರೂಪ್ ಕಾರ್ಪೊರೇಷನ್ ಮತ್ತು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ನು ಒಳಗೊಂಡಿರುವ ಬಿಡ್ಡಿಂಗ್ನಲ್ಲಿ 5 ಶತಕೋಟಿ ಡಾಲರ್ಗಿಂತ ಹೆಚ್ಚಿನ ಬಿಡ್‌ಗಳನ್ನು ಸೆಳೆಯುವ ನಿರೀಕ್ಷೆಯಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2022) ಶೀಘ್ರದಲ್ಲೇ ಐಪಿಎಲ್ ಮಹಿಳಾ (WIPL) ಆವೃತ್ತಿ ಕೂಡ ರಂಗೇರಲಿದೆ. ಇದಕ್ಕಾಗಿ ಈಗಾಗಲೇ ಬಿಸಿಸಿಐ ಪ್ಲ್ಯಾನ್ಗಳನ್ನು ರೂಪಿಸಿದ್ದು, ಅದರಂತೆ ಒಟ್ಟು 6 ಮಹಿಳಾ ತಂಡಗಳನ್ನು ಕಣಕ್ಕಿಳಿಸುವ ಇರಾದೆಯಲ್ಲಿದೆ. ಈಗಾಗಲೇ ಅತ್ಯಂತ ಯಶಸ್ವಿಯಾಗಿರುವ ಐಪಿಎಲ್ನ ಮುಂದಿನ ಆವೃತ್ತಿಯ ಪ್ರಸಾರ ಹಕ್ಕುಗಳಿಗಾಗಿ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ. 2023 ರಿಂದ 2028 ರವರೆಗಿನ ಪ್ರಸಾರ ಹಕ್ಕುಗಳನ್ನು ಖರೀದಿಸಲು ದಿ ವಾಲ್ಟ್ ಡಿಸ್ನಿ ಕಂ ಮತ್ತು Amazon.com Inc. ಸೇರಿದಂತೆ ಪ್ರಮುಖ ಕಂಪೆನಿಗಳು ಮುಂದಾಗಿದೆ. ಇದರ ಬೆನ್ನಲ್ಲೇ ಇದೀಗ ಮುಂದಿನ ವರ್ಷದಿಂದ 6 ತಂಡಗಳ ಮಹಿಳಾ ಐಪಿಎಲ್ ಆಯೋಜಿಸಲು ಯೋಜನೆಗಳನ್ನು ರೂಪಿಸಿರುವುದಾಗಿ BCCI ಮುಖ್ಯಸ್ಥ ಜಯ್ ಶಾ ತಿಳಿಸಿದ್ದಾರೆ.
ಪ್ರಸ್ತುತ ಐಪಿಎಲ್ ತಂಡಗಳ ಮಾಲೀಕರು ಮಹಿಳಾ ಲೀಗ್ ತಂಡಗಳಿಗೂ ಬಿಡ್ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಸುಮಾರು 1.4 ಶತಕೋಟಿ ಜನರಿರುವ ಕ್ರಿಕೆಟ್ ಕ್ರೇಜ್ ಹೊಂದಿರುವ ರಾಷ್ಟ್ರದಲ್ಲಿ ಮಹಿಳೆಯರ ಟೂರ್ನಿಗಳನ್ನು ಕೂಡ ಹೆಚ್ಚಿಸಲು ಸಹ ಬಿಸಿಸಿಐ ಬಯಸುತ್ತದೆ. ಹೀಗಾಗಿ ಮುಂದಿನ ಸೀಸನ್ನಿಂದ ಮಹಿಳಾ ಐಪಿಎಲ್ ಆಯೋಜಿಸಲು ಪ್ಲ್ಯಾನ್ ರೂಪಿಸಿರುವುದಾಗಿ ಅಮಿತ್ ಶಾ ಹೇಳಿದ್ದಾರೆ.
ಕಳೆದ 15 ಸೀಸನ್ ಐಪಿಎಲ್ನಿಂದ ಫ್ರಾಂಚೈಸ್ಗಳು ಲಾಭದಾಯಕ ಮಾರ್ಗಗಳನ್ನು ಕಂಡುಕೊಂಡಿದೆ. ಕಳೆದ ವರ್ಷ ಐಪಿಎಲ್ 600 ಮಿಲಿಯನ್ ವೀಕ್ಷಕರನ್ನು ಆಕರ್ಷಿಸಿತು. ಹೀಗಾಗಿ ಜೂನ್‌ನಲ್ಲಿ ನಡೆಯಲಿರುವ ಐಪಿಎಲ್ ಪ್ರಸಾರ ಹಕ್ಕುಗಳ ಹರಾಜಿನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ, ವಾಲ್ಟ್ ಡಿಸ್ನಿ, ಸೋನಿ ಗ್ರೂಪ್ ಕಾರ್ಪೊರೇಷನ್ ಮತ್ತು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ನು ಒಳಗೊಂಡಿರುವ ಬಿಡ್ಡಿಂಗ್ನಲ್ಲಿ 5 ಶತಕೋಟಿ ಡಾಲರ್ಗಿಂತ ಹೆಚ್ಚಿನ ಬಿಡ್‌ಗಳನ್ನು ಸೆಳೆಯುವ ನಿರೀಕ್ಷೆಯಿದೆ. ಇದೀಗ ಐಪಿಎಲ್‌ಗೆ ಬೇಡಿಕೆ ತುಂಬಾ ಹೆಚ್ಚಾಗಿದ್ದು, ಹೀಗಾಗಿ ಬಿಸಿಸಿಐ ಬಿಡ್ಡಿಂಗ್ ಮೂಲ ಬೆಲೆಯನ್ನು $4.2 ಬಿಲಿಯನ್‌ಗೆ ಹೆಚ್ಚಿಸಲಾಗಿದೆ.
“ಆಟದಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ನಿರ್ಣಯಿಸಿದ ನಂತರ ಮಾಧ್ಯಮ ಹಕ್ಕುಗಳಿಗಾಗಿ ಮೀಸಲು ಬೆಲೆಯನ್ನು ದ್ವಿಗುಣಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಮತ್ತು ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಈ ವರ್ಷ ಇ-ಹರಾಜಿಗೆ ಹೋಗಲು ನಿರ್ಧರಿಸಿದ್ದೇವೆ ” ಎಂದು ಜೈ ಶಾ ಹೇಳಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.