IPL 2022 Lucknow Team: ಲಕ್ನೋ ತಂಡದ ಹೆಸರೇನು? ನಿಮಗೂ ಇದೆ ಅವಕಾಶ..!

| Updated By: ಝಾಹಿರ್ ಯೂಸುಫ್

Updated on: Jan 12, 2022 | 5:23 PM

IPL 2022 Mega Auction: ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂಬುದನ್ನು ಐಪಿಎಲ್ ಆಡಳಿತ ಮಂಡಳಿಯು ದೃಢಪಡಿಸಿದೆ. ಅದರಂತೆ ಮುಂದಿನ ತಿಂಗಳ 2ನೇ ವಾರದ ಶನಿವಾರ ಮತ್ತು ಭಾನುವಾರ ಐಪಿಎಲ್​ ಮೆಗಾ ಹರಾಜು ನಡೆಯಲಿದೆ.

IPL 2022 Lucknow Team: ಲಕ್ನೋ ತಂಡದ ಹೆಸರೇನು? ನಿಮಗೂ ಇದೆ ಅವಕಾಶ..!
IPL 2022 Lucknow Team
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಸೀಸನ್ 15 ನಲ್ಲಿ ಒಟ್ಟು 10 ತಂಡಗಳು ಕಾಣಿಸಿಕೊಳ್ಳಲಿದೆ. ಹಳೆಯ 8 ತಂಡಗಳ ಜೊತೆಗೆ ಎರಡು ಹೊಸ ತಂಡಗಳಾಗಿ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಐಪಿಎಲ್​ಗೆ ಎಂಟ್ರಿ ಕೊಟ್ಟಿದೆ. ಇದಾಗ್ಯೂ ಈ ತಂಡಗಳ ಹೆಸರು ಮಾತ್ರ ಇನ್ನೂ ಕೂಡ ಬಹಿರಂಗವಾಗಿಲ್ಲ. ಅದರಲ್ಲೂ ಆರ್​​.ಪಿ ಸಂಜೀವ್ ಗೋಯೆಂಕಾ ಒಡೆತನದ ಲಕ್ನೋ ಫ್ರಾಂಚೈಸಿ ಈಗಾಗಲೇ ಕೋಚ್ ಹಾಗೂ ಇತರೆ ಸಿಬ್ಬಂದಿಗಳನ್ನು ಆಯ್ಕೆ ಮಾಡಿದೆ. ಅದರಂತೆ ಮುಂದಿನ ಸೀಸನ್​ನಲ್ಲಿ ತಂಡದ ಕೋಚ್ ಆಗಿ ಜಿಂಬಾಬ್ವೆ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ತಂಡದ ಮೆಂಟರ್​ ಆಗಿ ಮಾಜಿ ಟೀಮ್ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಇರಲಿದ್ದಾರೆ. ಇನ್ನು ಲಕ್ನೋ ತಂಡವು ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ತಂಡದ ನಾಯಕನಾಗಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಹೀಗೆ ಎಲ್ಲಾ ರೀತಿಯಲ್ಲೂ ಮೆಗಾ ಹರಾಜಿಗಾಗಿ ಸಿದ್ಧತೆ ಮಾಡಿಕೊಂಡಿರುವ ಲಕ್ನೋ ಫ್ರಾಂಚೈಸಿ ಇದೀಗ ಅಭಿಮಾನಿಗಳಿಗೆ ತಂಡಕ್ಕೆ ಹೆಸರನ್ನು ಸೂಚಿಸುವಂತೆ ಮನವಿ ಮಾಡಿದೆ. ನಾಮ್ ಬನಾವೊ…ನಾಮ್ ಕಮಾವೊ (ಹೆಸರು ನೀಡಿ ಹೆಸರು ಗಳಿಸಿ) ಟ್ಯಾಗ್​ ಲೈನ್​ನಲ್ಲಿ ಹೆಸರುಗಳನ್ನು ಸೂಚಿಸುವಂತೆ ಕೇಳಿಕೊಂಡಿದೆ. ಈ ಮೂಲಕ ಅಭಿಮಾನಿಗಳು ನೀಡುವ ಅತ್ಯುತ್ತಮ ಹೆಸರನ್ನೇ ತಂಡಕ್ಕಿಡಲು ಲಕ್ನೋ ಫ್ರಾಂಚೈಸಿ ಮುಂದಾಗಿದೆ.

ಈಗಾಗಲೇ ಅನೇಕರು ಲಕ್ನೋ ಸ್ಟ್ರೈಕರ್ಸ್​, ಲಕ್ನೋ ಲಯನ್ಸ್, ಲಕ್ನೋ ಗಾರ್ಡಿಯನ್ಸ್​ನಂತಹ ಹೆಸರುಗಳನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ತಾವು ಸೂಚಿಸಿರುವ ಹೆಸರುಗಳನ್ನು ಬರೆದುಕೊಳ್ಳಲು ಲಕ್ನೋ ಫ್ರಾಂಚೈಸಿ ತಮ್ಮ ವೆಬ್​​ಸೈಟ್​ನಲ್ಲಿ ಅವಕಾಶ ನೀಡಿದೆ. ಹೀಗಾಗಿ ಹೀಗೆ ಸೂಚಿಸಲಾದ ಹೆಸರುಗಳಿಂದ ಅತ್ಯುತ್ತಮವಾದ ಹೆಸರನ್ನು ಅಂತಿಮವಾಗಿ ಆಯ್ಕೆ ಮಾಡಬಹುದು.

ಅಷ್ಟೇ ಅಲ್ಲದೆ ಇದೀಗ ಲಕ್ನೋ ಫ್ರಾಂಚೈಸಿ ಟ್ವಿಟರ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ಶೀಘ್ರದಲ್ಲೇ ಹೆಸರು ಅನಾವರಣವಾಗಲಿದೆ ಎಂದು ತಿಳಿಸಿದ್ದಾರೆ. ಇದಾಗ್ಯೂ ತಂಡದ ಹೆಸರು ಫೈನಲ್ ಆಗಿದೆ ಎಂದು ತಿಳಿಸಿಲ್ಲ. ಹೀಗಾಗಿ ಲಕ್ನೋ ಫ್ರಾಂಚೈಸಿಗೆ ನೀವು ಕೂಡ ಹೆಸರುಗಳನ್ನು ನೀಡಬಹುದು. ಒಂದು ವೇಳೆ ನೀಡಿದ ಹೆಸರು ಆಯ್ಕೆಯಾದರೆ, ಲಕ್ನೋ ಫ್ರಾಂಚೈಸಿ ತಿಳಿಸಿದಂತೆ ನಾಮ್ ಬನಾವೊ…ನಾಮ್ ಕಮಾವೊ (ಹೆಸರು ನೀಡಿ ಹೆಸರು ಗಳಿಸಿ) ಮೂಲಕ ತಂಡಕ್ಕೆ ನಿಮ್ಮ ಹೆಸರು…ನಿಮಗೂ ಹೆಸರುಗಳಿಸಬಹುದು.

ಲಕ್ನೋ ತಂಡಕ್ಕೆ ಹೆಸರು ಸೂಚಿಸಲು ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Lucknow IPL franchise asks fans to suggest name for team)