ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಹೆಸರಿನ ಹೊಸ ತಂಡಗಳು ಟೂರ್ನಿಗೆ ಎಂಟ್ರಿ ಕೊಡಲಿದೆ. ಈಗಾಗಲೇ ನಾಯಕರುಗಳನ್ನು ಆಯ್ಕೆ ಮಾಡಿಕೊಂಡಿರುವ ಹೊಸ ತಂಡಗಳು, ಇನ್ನೂ ಕೂಡ ಜೆರ್ಸಿಯನ್ನು ಅನಾವರಣಗೊಳಿಸಿಲ್ಲ ಎಂಬುದು ವಿಶೇಷ. ಇದೀಗ ಕೆಎಲ್ ರಾಹುಲ್ ಮುನ್ನಡೆಸಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಜೆರ್ಸಿ ಫೋಟೋಗಳು ಸೋರಿಕೆಯಾಗಿದೆ. ತಂಡದ ಪ್ರೊಮೊ ಗೀತೆ ಚಿತ್ರೀಕರಣದ ವೇಳೆ ಖ್ಯಾತ ಗಾಯಕ ಬಾದ್ಶಾ ಲಕ್ನೋ ತಂಡದ ಲೋಗೋ ಇರುವ ಜೆರ್ಸಿಯನ್ನು ಧರಿಸಿದ್ದು, ಇದೇ ಮಾದರಿಯಲ್ಲಿ ಹೊಸ ತಂಡದ ಜೆರ್ಸಿ ಇರಲಿರುವುದು ಬಹುತೇಕ ಖಚಿತವಾಗಿದೆ.
ಇದೀಗ ಬಾದ್ಶಾ ಧರಿಸಿರುವ ಜೆರ್ಸಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಅದೇ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಜೆರ್ಸಿಯ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ವೈಡೂರ್ಯದ ನೀಲಿ ಜೆರ್ಸಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
Leaked #Jersey shade of #lucknowiplteam during #Badshah promotional video
Color shade = Blue of Turquoise shade#Ipl #KLRahul #LSG #IPLAuction pic.twitter.com/ooidvoRTnU— Sports Theory (@theory_sports) March 10, 2022
ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಮೊದಲ ಪಂದ್ಯವನ್ನು ಮಾರ್ಚ್ 28 ರಂದು ಆಡಲಿದ್ದು, ಮೊದಲ ಪಂದ್ಯದಲ್ಲಿ ಹೊಸ ತಂಡಗಳಾದ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಮುಖಾಮುಖಿಯಾಗುತ್ತಿರುವುದು ವಿಶೇಷ. ಅದರಂತೆ ಹೊಸ ತಂಡಗಳ ಮೊದಲ ಕದನದಲ್ಲಿ ಕೆಎಲ್ ರಾಹುಲ್ ಗೆಲ್ಲಲಿದ್ದಾರಾ ಅಥವಾ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಜಯ ಸಾಧಿಸಲಿದ್ದಾರಾ ಕಾದು ನೋಡಬೇಕಿದೆ.
Badshah might be working on Lucknow Super Giants theme song for IPL 2022!#KLRahul | #LucknowSuperGiants | #IPL2022 pic.twitter.com/cYU95UtaIA
— Kunal Yadav (@kunaalyaadav) March 9, 2022
ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀಗಿದೆ: ಕೆಎಲ್ ರಾಹುಲ್, ಮಾರ್ಕಸ್ ಸ್ಟೋಯಿನಿಸ್, ರವಿ ಬಿಷ್ಣೋಯ್, ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಮಾರ್ಕ್ ವುಡ್, ಅವೇಶ್ ಖಾನ್, ಅಂಕಿತ್ ರಜಪೂತ್, ಕೆ ಗೌತಮ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಖಾನ್ ಬದೋನಿ, ಕರಣ್ ಶರ್ಮಾ, ಎವಿನ್ ಲೂಯಿಸ್, ಮಯಾಂಕ್ ಯಾದವ್, ಕೈಲ್ ಮೇಯರ್ಸ್.
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್
(IPL 2022: Lucknow Super Giants jersey leaked)