IPL 2022: ಬದಲಾದ ತಂಡ, ಹೊಸ ಹೇರ್ ಸ್ಟೈಲ್ನೊಂದಿಗೆ ಆಗಮಿಸಿದ ಶಿಮ್ರೋನ್ ಹೆಟ್ಮೆಯರ್
Rajastan Royals Full Squad: ರಾಜಸ್ಥಾನ್ ರಾಯಲ್ಸ್ ತಂಡ ಹೀಗಿದೆ: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಟ್ರೆಂಟ್ ಬೌಲ್ಟ್, ರವಿಚಂದ್ರನ್ ಅಶ್ವಿನ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2022) ಕೆಲ ಆಟಗಾರರು ಟ್ರೆಂಡ್ ಸೆಟ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ಮುಂಚೂಣಿಯಲ್ಲಿದ್ದಾರೆ. ಏಕೆಂದರೆ ಪ್ರತಿ ಸೀಸನ್ಗೂ ಧೋನಿ ಅವರ ಕೇಶ ವಿನ್ಯಾಸ ಬದಲಾಗುತ್ತದೆ. ಅದನ್ನೇ ಅಭಿಮಾನಿಗಳು ಕೂಡ ಫಾಲೋ ಮಾಡುತ್ತಾರೆ. ಇನ್ನು ಧೋನಿ ಹೊರತುಪಡಿಸಿ ವಿಭಿನ್ನ ಹೇರ್ ಸ್ಟೈಲ್ ಮೂಲಕ ಐಪಿಎಲ್ನಲ್ಲಿ ಮಿಂಚುವುದು ವೆಸ್ಟ್ ಇಂಡೀಸ್ ಕ್ರಿಕೆಟಿಗರು. ಅದು ಆಂಡ್ರೆ ರಸೆಲ್ ಆಗಿರಬಹುದು, ಇಲ್ಲ ಸುನಿಲ್ ನರೈನ್, ಶಿಮ್ರೋನ್ ಹೆಟ್ಮೆಯರ್ ಇರಬಹುದು, ಅಥವಾ ಈ ಹಿಂದಿನ ಕ್ರಿಸ್ ಗೇಲ್ ಆಗಿರಬಹುದು..ಪ್ರತಿ ಸೀಸನ್ಗೂ ಬರುವಾಗ ವಿಭಿನ್ನ ಹೇರ್ ಸ್ಟೈಲ್ ಮೂಲಕ ಗಮನ ಸೆಳೆಯುತ್ತಾರೆ. ಇದೀಗ ಶಿಮ್ರೋನ್ ಹೆಟ್ಮೆಯರ್ (Shimron Hetmyer) ಐಪಿಎಲ್ ಸೀಸನ್ 15 ಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ವಿಶೇಷ ಎಂದರೆ ಈ ಬಾರಿ ತಮ್ಮ ಕೇಶ ವಿನ್ಯಾಸವನ್ನು ಬದಲಿಸಿಲ್ಲ. ಬದಲಾಗಿ ಹೇರ್ ಕಲರ್ ಬದಲಿಸಿ ಮಿಂಚುತ್ತಿದ್ದಾರೆ.
ಹೌದು, ಶಿಮ್ರೋನ್ ಹೆಟ್ಮೆಯರ್ ಐಪಿಎಲ್ನಲ್ಲಿ ಪ್ರತಿನಿಧಿಸುವ ತಂಡದ ಜೆರ್ಸಿಯ ಬಣ್ಣವನ್ನೇ ತನ್ನ ಹೇರ್ ಕಲರ್ ಆಗಿಸಿ ಈ ಹಿಂದೆ ಎಲ್ಲರ ಗಮನ ಸೆಳೆದಿದ್ದರು. ಕಳೆದ ಎರಡು ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ನೀಲಿ ಬಣ್ಣದ ಹೇರ್ ಕಲರ್ನಲ್ಲಿ ಕಾಣಿಸಿಕೊಂಡಿದ್ದ ಹೆಟ್ಮೆಯರ್ ಈ ಬಾರಿ ಹೊಸ ತಂಡದ ಪರ ಆಡಲಿದ್ದಾರೆ. ನಿರೀಕ್ಷೆಯಂತೆ ಶಿಮ್ರೋನ್ ಅವರ ಕೇಶದ ಬಣ್ಣ ಕೂಡ ಬದಲಾಗಿದೆ.
ಅದರಂತೆ ಈ ಬಾರಿ ರಾಜಸ್ಥಾನ್ ರಾಯಲ್ಸ್ ಪರ ಆಡಲಿರುವ ಹೆಟ್ಮೆಯರ್ ತಂಡದ ಜೆರ್ಸಿಯ ಬಣ್ಣದ ಹೇರ್ ಕಲರ್ನಲ್ಲೇ ಆಗಮಿಸಿದ್ದಾರೆ. ಅದರಂತೆ ಈ ಸಲ ಹೆಟ್ಮೆಯರ್ ಪಿಂಕ್ ಬಣ್ಣದ ಹೇರ್ ಕಲರ್ನೊಂದಿಗೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಹೆಟ್ಮೆಯರ್ ಅವರ ಹೊಸ ಕಲರ್ನ ಹೇರ್ ಸ್ಟೈಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಂಡದೊಂದಿಗೆ ಹೇರ್ ಕಲರ್ ಬದಲಿಸಿ ಆಗಮಿಸಿದ ವೆಸ್ಟ್ ಇಂಡೀಸ್ ದಾಂಡಿಗನಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಅಭಿಮಾನಿಗಳು ಬಹುಪರಾಕ್ ಅನ್ನುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ ಹೀಗಿದೆ: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಟ್ರೆಂಟ್ ಬೌಲ್ಟ್, ರವಿಚಂದ್ರನ್ ಅಶ್ವಿನ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ರಿಯಾನ್ ಪರಾಗ್, ಕೆಸಿ ಕಾರ್ಯಪ್ಪ, ನವದೀಪ್ ಸೈನಿ, ಓಬೆಡ್ ಮೆಕಾಯ್, ಅರುಣಯ್ ಸಿಂಗ್, ಕುಲದೀಪ್ ಸೇನ್, ಕರುಣ್ ನಾಯರ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಶುಭಂ ಗರ್ವಾಲ್, ಡೇರಿಲ್ ಮಿಚೆಲ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ನಾಥನ್ ಕೌಲ್ಟರ್-ನೈಲ್, ಜೇಮ್ಸ್ ನೀಶಮ್
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್
(IPL 2022: Shimron Hetmyer opts for ‘VERY JAZZY’ hairstyle)