ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ತಂಡ ಲಕ್ನೋ ತನ್ನ ಹೆಸರನ್ನು ಪ್ರಕಟಿಸಿದೆ. ಅದರಂತೆ ಮುಂದಿನ ಸೀಸನ್ ಐಪಿಎಲ್ನಲ್ಲಿ ಲಕ್ನೋ ಫ್ರಾಂಚೈಸಿಯು ಲಕ್ನೋ ಸೂಪರ್ ಜೈಂಟ್ಸ್ ಹೆಸರಿನಿಂದ ಕಣಕ್ಕಿಳಿಯಲಿದೆ. ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಟ್ವಿಟ್ಟರ್ ನಲ್ಲಿ ತಂಡದ ಹೆಸರನ್ನು ಪ್ರಕಟಿಸಿದ್ದು, ಈ ಮೂಲಕ ತಮ್ಮ ಹಳೆಯ ತಂಡದ ಹೆಸರನ್ನೇ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಈ ಹಿಂದೆ 2017 ರಲ್ಲಿ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಪುಣೆ ಸೂಪರ್‌ಜೈಂಟ್ಸ್ ಎಂದು ಹೆಸರಿನ ತಂಡದ ಮಾಲೀಕರಾಗಿದ್ದರು. ಇದೀಗ ಮತ್ತೊಮ್ಮೆ ಸೂಪರ್ ಜೈಂಟ್ಸ್ ಹೆಸರಿನೊಂದಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.
ಉದ್ಯಮಿ ಸಂಜೀವ್ ಗೋಯೆಂಕಾ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 7090 ಕೋಟಿಗಳ ದಾಖಲೆ ಬೆಲೆಗೆ ಖರೀದಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ತಂಡ ಎಂಬ ದಾಖಲೆ ಕೂಡ ಬರೆದಿದೆ. ಅಷ್ಟೇ ಅಲ್ಲದೆ ತಂಡದ ನಾಯಕನಾಗಿ ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ಕೆಎಲ್ ರಾಹುಲ್ ಅವರನ್ನು ಆರಿಸಿಕೊಂಡಿದ್ದಾರೆ. ಹಾಗೆಯೇ ವಿದೇಶಿ ಆಟಗಾರನ ಕೋಟಾದಲ್ಲಿ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯಿನಿಸ್ರನ್ನು ಆಯ್ಕೆ ಮಾಡಿಕೊಂಡಿದೆ. ಜೊತೆಗೆ ಮೂರನೇ ಆಟಗಾರನಾಗಿ ರವಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡಿದ್ದಾರೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಕಾಣಿಸಿಕೊಳ್ಳಲಿದ್ದು, ಹಾಗೆಯೇ ತಂಡದ ಮೆಂಟರ್ ಆಗಿ ಕೆಕೆಆರ್ ತಂಡವನ್ನು ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ಮಾಜಿ ನಾಯಕ ಗೌತಮ್ ಗಂಭೀರ್ ಇರಲಿದ್ದಾರೆ.
And here it is,
Our identity,
Our name…. ??#NaamBanaoNaamKamao #LucknowSuperGiants @BCCI @IPL @GautamGambhir @klrahul11 pic.twitter.com/OVQaw39l3A— Lucknow Super Giants (@TeamLucknowIPL) January 24, 2022
ಈ ಬಾರಿ ಮೆಗಾ ಹರಾಜಿನಲ್ಲಿ ಒಟ್ಟು 1214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 318 ವಿದೇಶಿ ಆಟಗಾರರಿದ್ದಾರೆ. ಹಾಗೆಯೇ 896 ಭಾರತೀಯ ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಇನ್ನು ಈಗಾಗಲೇ 10 ತಂಡಗಳು 33 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಅದರಂತೆ ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ 217 ಆಟಗಾರರಿಗಾಗಿ ಬಿಡ್ಡಿಂಗ್ ನಡೆಯಲಿದೆ.
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(Ipl 2022 Lucknow team name Lucknow Super Giants)
Published On - 7:57 pm, Mon, 24 January 22