ಭಾರತ ವಿರುದ್ಧದ ಗೆಲುವೇ ತುಂಬಾ ವಿಶೇಷ; ವರ್ಷದ ಕ್ರಿಕೆಟಿಗ ಪ್ರಶಸ್ತಿ ವಿಜೇತ ಶಾಹೀನ್ ಅಫ್ರಿದಿ ಹೇಳಿದ್ದಿದು

ಭಾರತದ ಆರಂಭಿಕ ಆಟಗಾರ ಲೋಕೇಶ್ ರಾಹುಲ್ ಅವರ ವಿಕೆಟ್ ಟಿ20 ವಿಶ್ವಕಪ್‌ನಲ್ಲಿ ಅವರ ಅತ್ಯಮೂಲ್ಯ ವಿಕೆಟ್ ಎಂದು ಆಫ್ರಿದಿ ಬಣ್ಣಿಸಿದ್ದಾರೆ. ಚೆಂಡು ಸ್ವಲ್ಪ ಟರ್ನ್​ ಆಗುತ್ತಿತ್ತು ಮತ್ತು ರೋಹಿತ್ ಅವರನ್ನು ಬೇಗನೇ ಔಟ್ ಮಾಡಬಹುದೆಂದು ನಮಗೆ ತಿಳಿದಿತ್ತು.

ಭಾರತ ವಿರುದ್ಧದ ಗೆಲುವೇ ತುಂಬಾ ವಿಶೇಷ; ವರ್ಷದ ಕ್ರಿಕೆಟಿಗ ಪ್ರಶಸ್ತಿ ವಿಜೇತ ಶಾಹೀನ್ ಅಫ್ರಿದಿ ಹೇಳಿದ್ದಿದು
ಶಾಹೀನ್ ಅಫ್ರಿದಿ
Follow us
TV9 Web
| Updated By: ಪೃಥ್ವಿಶಂಕರ

Updated on:Jan 24, 2022 | 10:09 PM

ಐಸಿಸಿ ವರ್ಷದ ಕ್ರಿಕೆಟಿಗ ಎನಿಸಿಕೊಂಡಿರುವ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ, ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಮೂರು ವಿಕೆಟ್‌ಗಳನ್ನು ಕಬಳಿಸಿದ್ದು ಅವರ ಅತ್ಯಂತ ಸ್ಮರಣೀಯ ಪ್ರದರ್ಶನವಾಗಿದೆ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದ ಅಫ್ರಿದಿ ವಿರಾಟ್ ಕೊಹ್ಲಿ ವಿಕೆಟ್ ಕೂಡ ಪಡೆದರು. ಈ ಪಂದ್ಯವನ್ನು ಪಾಕ್ ತಂಡ 10 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಪಾಕಿಸ್ತಾನದ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶಾಹೀನ್, ‘ನಾನು ಟೆಸ್ಟ್‌ನಲ್ಲಿ ಹಲವಾರು ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿದ್ದೇನೆ. ಆದರೆ ನನಗೆ ಅತ್ಯಂತ ಸ್ಮರಣೀಯ ಪಂದ್ಯವೆಂದರೆ ನಾವು ಭಾರತದ ವಿರುದ್ಧ ಗೆದ್ದ ಪಂದ್ಯ ಎಂದಿದ್ದಾರೆ.

‘ಕಳೆದ ವರ್ಷ ನನಗೆ ಉತ್ತಮವಾಗಿತ್ತು ಮತ್ತು 2022ರಲ್ಲೂ ನೀವು ನನ್ನಿಂದ ಉತ್ತಮ ಪ್ರದರ್ಶನವನ್ನು ಕಾಣುತ್ತೀರಿ ಎಂದು ಆಫ್ರಿದಿ ಹೇಳಿದ್ದಾರೆ. ಭಾರತದ ಆರಂಭಿಕ ಆಟಗಾರ ಲೋಕೇಶ್ ರಾಹುಲ್ ಅವರ ವಿಕೆಟ್ ಟಿ20 ವಿಶ್ವಕಪ್‌ನಲ್ಲಿ ಅವರ ಅತ್ಯಮೂಲ್ಯ ವಿಕೆಟ್ ಎಂದು ಆಫ್ರಿದಿ ಬಣ್ಣಿಸಿದ್ದಾರೆ. ಚೆಂಡು ಸ್ವಲ್ಪ ಟರ್ನ್​ ಆಗುತ್ತಿತ್ತು ಮತ್ತು ರೋಹಿತ್ ಅವರನ್ನು ಬೇಗನೇ ಔಟ್ ಮಾಡಬಹುದೆಂದು ನಮಗೆ ತಿಳಿದಿತ್ತು. ಆದರೆ ರಾಹುಲ್ ಔಟಾದ ಚೆಂಡು ನನಗೂ ಆಶ್ಚರ್ಯವನ್ನುಂಟು ಮಾಡಿತು ಎಂದು ಅವರು ಹೇಳಿದರು. ತಂಡದ ಅನುಭವಿ ಆಟಗಾರ ಶೋಯೆಬ್ ಮಲಿಕ್ ರಾಹುಲ್ ವಿರುದ್ಧ ಅಂತಹ ಚೆಂಡನ್ನು ಬೌಲ್ ಮಾಡಲು ಸಲಹೆ ನೀಡಿದ್ದರು ಎಂದು 21 ವರ್ಷದ ಈ ಬೌಲರ್ ಹೇಳಿದ್ದಾರೆ.

ಶೋಯೆಬ್ ಮಲಿಕ್ ಸಲಹೆ ಮೇರೆಗೆ ರಾಹುಲ್ ವಿಕೆಟ್ ಪಡೆದೆ ಶಾಹೀನ್ ಶಾ ಆಫ್ರಿದಿ, ನಿಜ ಹೇಳಬೇಕೆಂದರೆ, ಚೆಂಡು ಹೆಚ್ಚು ಸ್ವಿಂಗ್ ಆಗಲಿಲ್ಲ ಆದರೆ ನಾನು ಉತ್ತಮ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದೆ. ಮಲಿಕ್ ಚೆಂಡನ್ನು ಮತ್ತಷ್ಟು ಟ್ಯಾಪ್ ಮಾಡಲು ಮತ್ತು ಸ್ವತಃ ಸ್ವಲ್ಪ ಸ್ವಿಂಗ್ ಮಾಡಲು ನನಗೆ ಹೇಳಿದರು. ಚೆಂಡು ಇಷ್ಟೊಂದು ಸ್ವಿಂಗ್ ಆಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಇದು ನನಗೆ ದೊಡ್ಡ ವಿಕೆಟ್ ಆಗಿತ್ತು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ಅವರಂತಹ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆಯಲು ಇಂತಹ ಮಾಂತ್ರಿಕ ಬೌಲಿಂಗ್ ಅಗತ್ಯವಿದೆ ಎಂದು ಅವರು ಹೇಳಿದರು.

ಇತಿಹಾಸ ನಿರ್ಮಿಸಿದ ಶಾಹೀನ್ ಅಫ್ರಿದಿ ಕೇವಲ 21 ನೇ ವಯಸ್ಸಿನಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಶಾಹೀನ್ ಅಫ್ರಿದಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರು ಈ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. 2021 ಅಫ್ರಿದಿಗೆ ಅದ್ಭುತವಾಗಿದೆ. ಅವರು 36 ಪಂದ್ಯಗಳಲ್ಲಿ ಕೇವಲ 22.20 ಸರಾಸರಿಯಲ್ಲಿ 78 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರನ್ನು ಹೊರತುಪಡಿಸಿ, ಬಾಬರ್ ಅಜಮ್ ವರ್ಷದ ಅತ್ಯುತ್ತಮ ODI ಆಟಗಾರ ಮತ್ತು ಮೊಹಮ್ಮದ್ ರಿಜ್ವಾನ್ ವರ್ಷದ T20 ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ.

Published On - 10:05 pm, Mon, 24 January 22