IPL 2022: CSK ತಂಡಕ್ಕೆ ಜೂನಿಯರ್ ಮಾಲಿಂಗ ಎಂಟ್ರಿ

| Updated By: ಝಾಹಿರ್ ಯೂಸುಫ್

Updated on: Apr 21, 2022 | 3:39 PM

IPL 2022 Matheesha Pathirana: ಪತಿರಾನ ಇನ್ನೂ ಸೀನಿಯರ್ ಮಟ್ಟದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ.ಒಂದು ಲಿಸ್ಟ್ ಎ ಮತ್ತು ಎರಡು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ.

IPL 2022: CSK ತಂಡಕ್ಕೆ ಜೂನಿಯರ್ ಮಾಲಿಂಗ ಎಂಟ್ರಿ
Matheesha Pathirana
Follow us on

IPL 2022: ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತೊಂದು ಹಿನ್ನಡೆ ಅನುಭವಿಸಿದೆ . ತಂಡದ ವೇಗದ ಬೌಲರ್ ಆ್ಯಡಂ ಮಿಲ್ನ್ (Adam Milne) ಟೂರ್ನಿಯಿಂದ ಹೊರಗುಳಿದಿದ್ದಾರೆ. ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಮಿಲ್ನ್ ಬದಲಿಗೆ ಸಿಎಸ್‌ಕೆ ತಂಡವು ಶ್ರೀಲಂಕಾದ ಯುವ ಬೌಲರ್ ಮಥೀಶ ಪತಿರಾನ (Matheesha Pathirana) ಅವರನ್ನು ಆಯ್ಕೆ ಮಾಡಿಕೊಂಡಿದೆ . 19 ವರ್ಷದ ಬಲಗೈ ಮಧ್ಯಮ ವೇಗಿ ಪತಿರಾನ ಅವರ ಬೌಲಿಂಗ್ ಶೈಲಿಯು ಲಸಿತ್ ಮಾಲಿಂಗ ಅವರನ್ನು ಹೋಲುತ್ತದೆ. ಹೀಗಾಗಿ ಮಥೀಶ ಜೂನಿಯರ್ ಮಾಲಿಂಗ ಎಂದೇ ಖ್ಯಾತಿ ಪಡೆದಿದ್ದಾರೆ.

19 ವರ್ಷದೊಳಗಿನವರ 2020ರ ವಿಶ್ವಕಪ್​ ಮತ್ತು 2022 ವಿಶ್ವಕಪ್​ನಲ್ಲಿ ಮಥೀಶಾ ಪತಿರಾನಾ ಶ್ರೀಲಂಕಾ ತಂಡದ ಭಾಗವಾಗಿದ್ದರು. 2022 ರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ, ಅವರು ನಾಲ್ಕು ಪಂದ್ಯಗಳಲ್ಲಿ 27.28 ಸರಾಸರಿಯಲ್ಲಿ ಏಳು ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಅಲ್ಲದೆ ಅವರ ಎಕನಾಮಿ ರೇಟ್ ಕೇವಲ 6.16 ಆಗಿತ್ತು. ಯಾರ್ಕರ್ ಎಸೆಯುವ ಸಾಮರ್ಥ್ಯ ಹೊಂದಿರುವ ಪತಿರಾನ ಅವರು ಇದೀಗ 20 ಲಕ್ಷ ರೂ.ಗೆ ಸಿಎಸ್​ಕೆ ತಂಡದ ಭಾಗವಾಗಿದ್ದಾರೆ.

ಸಿಎಸ್‌ಕೆ ರಾಡಾರ್‌ನಲ್ಲಿದ್ದ ಪತಿರಾನ:
ಪತಿರಾನ ಇನ್ನೂ ಸೀನಿಯರ್ ಮಟ್ಟದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ.ಒಂದು ಲಿಸ್ಟ್ ಎ ಮತ್ತು ಎರಡು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಇದಾಗ್ಯೂ ಅವರು ಸಿಎಸ್‌ಕೆ ತಂಡದ ರಾಡಾರ್‌ನಲ್ಲಿದ್ದರು. ಈ ಬಾರಿ ಸಿಎಸ್​ಕೆ ತಂಡವು ಮಹೇಶ್ ತೀಕ್ಷಣ ಜೊತೆಗೆ ಪತಿರಾನ ಅವರನ್ನು ಮೀಸಲು ಆಟಗಾರನಾಗಿ ತಮ್ಮೊಂದಿಗೆ ಇಟ್ಟುಕೊಂಡಿತ್ತು. ಇದೀಗ ಆ್ಯಡಂ ಮಿಲ್ನ್ ಹೊರಬೀಳುತ್ತಿದ್ದಂರೆ ಅವಕಾಶ ಸಿಕ್ಕಿದೆ.

ಆ್ಯಡಂ ಮಿಲ್ನ್ ಔಟ್:
ಆ್ಯಡಂ ಮಿಲ್ನ್ ನ್ಯೂಜಿಲೆಂಡ್ ತಂಡ ವೇಗದ ಬೌಲರ್. ಈ ಬಾರಿಯ ಐಪಿಎಲ್​ನಲ್ಲಿ KKR ವಿರುದ್ಧದ ಪಂದ್ಯದಲ್ಲಿ, CSK ಪ್ಲೇಯಿಂಗ್ 11 ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಗಾಯಗೊಂಡಿದ್ದ ಮಿಲ್ನ್ ಕೇವಲ 2.3 ಓವರ್ ಬೌಲ್ ಮಾತ್ರ ಮಾಡಿದ್ದರು. ಇದೀಗ ಗಾಯದಿಂದ ಚೇತರಿಸಿಕೊಳ್ಳದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಸಿಎಸ್​ಕೆ ತಂಡದಿಂದ ಇಬ್ಬರು ಆಟಗಾರರು ಹೊರಬಿದ್ದಂತಾಗಿದೆ. ಇದಕ್ಕೂ ಮುನ್ನ ದೀಪಕ್ ಚಹರ್ ಗಾಯಗೊಂಡು ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದಾಗ್ಯೂ ಚಹರ್ ಅವರ ಬದಲಿ ಆಟಗಾರನನ್ನು ಸಿಎಸ್​ಕೆ ಇನ್ನೂ ಕೂಡ ಆಯ್ಕೆ ಮಾಡಿಕೊಂಡಿಲ್ಲ.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ