Matthew Hayden: ಬರೆದಿಟ್ಟುಕೊಳ್ಳಿ, ಈ ನಾಲ್ಕು ತಂಡಗಳೇ ಪ್ಲೇ ಆಫ್ ಆಡುವುದು..!

| Updated By: ಝಾಹಿರ್ ಯೂಸುಫ್

Updated on: Mar 28, 2022 | 6:18 PM

IPL 2022: ಆಸ್ಟ್ರೇಲಿಯಾ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಐಪಿಎಲ್​ನಲ್ಲಿ ಸಿಎಸ್​ಕೆ ಪರ 32 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 8 ಅರ್ಧಶತಕದೊಂದಿಗೆ ಒಟ್ಟು 1107 ರನ್​ ಕಲೆಹಾಕಿ ಮಿಂಚಿದ್ದಾರೆ.

Matthew Hayden: ಬರೆದಿಟ್ಟುಕೊಳ್ಳಿ, ಈ ನಾಲ್ಕು ತಂಡಗಳೇ ಪ್ಲೇ ಆಫ್ ಆಡುವುದು..!
IPL 2022
Follow us on

ರಂಗೀನ್ ಕ್ರಿಕೆಟ್ ಟೂರ್ನಿ ಐಪಿಎಲ್ ಸೀಸನ್ (IPL 2022) 15 ಶುರುವಾಗಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್​ ಸಿಎಸ್​ಕೆ (CSK) ತಂಡವು ಸೋಲಿನ ರುಚಿ ನೋಡಿದೆ. ಹಾಗೆಯೇ 2ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ (MI vs DC) ಮಣಿಸಿದೆ. ಹಾಗೆಯೇ 3ನೇ ಪಂದ್ಯದಲ್ಲಿ ಆರ್​ಸಿಬಿ (RCB) ನೀಡಿದ 205 ರನ್​ಗಳನ್ನು ಚೇಸ್ ಮಾಡುವ ಪಂಜಾಬ್ ಕಿಂಗ್ಸ್ (PBKS) ಹೊಸ ಇತಿಹಾಸ ನಿರ್ಮಿಸಿದೆ. ಒಟ್ಟಿನಲ್ಲಿ ಐಪಿಎಲ್​ನ ಆರಂಭದಲ್ಲೇ ಅನಿರೀಕ್ಷಿತ ಫಲಿತಾಂಶಗಳು ಮೂಡಿಬಂದಿವೆ. ಇನ್ನು ಈ ಬಾರಿ ತಂಡಗಳಿರುವಾಗ ಪಾಯಿಂಟ್ ಟೇಬಲ್​ನಲ್ಲೂ ಏರುಪೇರಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಈ ಬಾರಿ 10 ತಂಡಗಳು 2 ಗುಂಪುಗಳಾಗಿ ಆಡುತ್ತಿದೆ. ಇದಾಗ್ಯೂ ಪಾಯಿಂಟ್ ಟೇಬಲ್ ಮಾತ್ರ ಈ ಹಿಂದಿನಂತೆ ಇರಲಿದೆ. ಹೀಗಾಗಿ ಅಂತಿಮವಾಗಿ 10 ರಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡ ಯಾವುದೆಂಬ ಲೆಕ್ಕಚಾರಗಳು ಆರಂಭದಲ್ಲೇ ಶುರುವಾಗಿದೆ. ಅದರಲ್ಲೂ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಈಗಾಗಲೇ ಈ ಬಾರಿ ಪ್ಲೇ ಆಫ್ ಆಡುವ ನಾಲ್ಕು ತಂಡ ಯಾವುದೆಂದು ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮ್ಯಾಥ್ಯೂ ಹೇಡನ್, ನಾನು ಈ ಸಲ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅಗ್ರಸ್ಥಾನದಲ್ಲಿ ನೋಡಲು ಬಯಸುತ್ತೇನೆ. ಹೀಗಾಗಿ ಸಿಎಸ್​ಕೆ ತಂಡವು ಪ್ಲೇಆಫ್​ ಪ್ರವೇಶಿಸುವ ಮೊದಲ ತಂಡವಾಗಿರಲಿದೆ ಎಂದಿದ್ದಾರೆ. ಇನ್ನು ನನ್ನ ಎರಡನೇ ಆಯ್ಕೆ ಡೆಲ್ಲಿ ಕ್ಯಾಪಿಟಲ್ಸ್. ಉತ್ತಮ ಸಮತೋಲನದಿಂದ ಕೂಡಿರುವ ಡೆಲ್ಲಿ ಕೂಡ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಇನ್ನು 3ನೇ ತಂಡವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇಆಫ್​ ಪ್ರವೇಶಿಸಲಿದೆ. ಹಾಗೆಯೇ ನಾಲ್ಕನೇ ತಂಡವಾಗಿ ಆರ್​ಸಿಬಿ ಕೂಡ ಈ ಸಲ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಏಕೆಂದರೆ ಈ ಬಾರಿ ಆರ್​ಸಿಬಿ ತಂಡವು ಉತ್ತಮ ಸಮತೋಲನವನ್ನು ಹೊಂದಿದೆ. ಹೀಗಾಗಿ ಈ ನಾಲ್ಕು ತಂಡಗಳು ಪ್ಲೇಆಫ್ ಆಡುವ ವಿಶ್ವಾಸವಿದೆ ಎಂದು ಹೇಡನ್ ತಿಳಿಸಿದ್ದಾರೆ.

ಇದಾಗ್ಯೂ ಈ ಬಾರಿ ಮುಂಬೈ ಇಂಡಿಯನ್ಸ್ ಟಾಪ್- 4 ನಲ್ಲಿ ಅನುಮಾನ ಎಂದಿರುವ ಹೇಡನ್, ನನ್ನ ಪ್ರಕಾರ ಮುಂಬೈ ತಂಡವು ಪ್ಲೇಆಫ್​ ಪ್ರವೇಶಿಸುವ ಡೌಟ್. ಏಕೆಂದರೆ ಈ ಬಾರಿ ಮುಂಬೈ ತಂಡವು ಅಂತಹ ಬಲಿಷ್ಠ ಆಟಗಾರರನ್ನು ಹೊಂದಿಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್ ಪ್ಲೇಆಫ್ ಕಾಣಿಸಿಕೊಳ್ಳಲಿದೆ ಎಂದು ಭಾವಿಸುತ್ತಿಲ್ಲ ಎಂದು ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.

ಈ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ ಎಂದು ಮ್ಯಾಥ್ಯೂ ಹೇಡನ್ ಭವಿಷ್ಯ ನುಡಿದಿದ್ದಾರೆ.

ಆಸ್ಟ್ರೇಲಿಯಾ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಐಪಿಎಲ್​ನಲ್ಲಿ ಸಿಎಸ್​ಕೆ ಪರ 32 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 8 ಅರ್ಧಶತಕದೊಂದಿಗೆ ಒಟ್ಟು 1107 ರನ್​ ಕಲೆಹಾಕಿ ಮಿಂಚಿದ್ದಾರೆ. 2008 ರಿಂದ 2010 ರವರೆಗೆ ಸಿಎಸ್​ಕೆ ಪರ ಆಡಿದ್ದ ಹೇಡನ್, ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು.

2010ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಸಿಎಸ್​ಕೆ ತಂಡ ಹೀಗಿತ್ತು:

ಮಹೇಂದ್ರ ಸಿಂಗ್ ಧೋನಿ (ನಾಯಕ) ಅನಿರುಧ್ ಶ್ರೀಕಾಂತ್, ಮ್ಯಾಥ್ಯೂ ಹೇಡನ್ , ಶಾದಾಬ್ ಜಕಾತಿ , ರವಿಚಂದ್ರನ್ ಅಶ್ವಿನ್ , ಅಲ್ಬಿ ಮೊರ್ಕೆಲ್ , ಎಸ್ ಬದ್ರಿನಾಥ್ , ಸುರೇಶ್ ರೈನಾ , ಮುರಳಿ ವಿಜಯ್, ಡೌಗ್ ಬೋಲಿಂಜರ್ , ಮುತ್ತಯ್ಯ ಮುರಳೀಧರನ್

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು

(IPL 2022: Matthew Hayden Predict Top 4 Teams To Qualify For Playoffs)