IPL 2022: CSK ತಂಡದಿಂದ ಮಹೇಂದ್ರ ಸಿಂಗ್ ಧೋನಿ ಔಟ್..!
MS Dhoni: ಐಪಿಎಲ್ ರಿಟೈನ್ ನಿಯಮಗಳ ಪ್ರಕಾರ ಒಂದು ಫ್ರಾಂಚೈಸಿಯು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದು. ಹೀಗೆ ಉಳಿಸಿಕೊಂಡ ಆಟಗಾರರಿಗೆ ಕ್ರಮವಾಗಿ ಮೊದಲ ಆಟಗಾರನಿಗೆ 16 ಕೋಟಿ ರೂ., ಎರಡನೇ ಆಟಗಾರನಿಗೆ 12 ಕೋಟಿ ರೂ, ಮೂರನೇ ಆಟಗಾರನಿಗೆ 8 ಕೋಟಿ ರೂ. ಮತ್ತು ನಾಲ್ಕನೇ ಆಟಗಾರನಿಗೆ 6 ಕೋಟಿ ರೂ. ನೀಡಬೇಕಾಗುತ್ತದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 (IPL 2022) ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳಿಗೆ ರಿಟೈನ್ ಪ್ರಕ್ರಿಯೆಯ ರೂಪುರೇಷೆಗಳ ಪಟ್ಟಿಯನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಯಾವ ತಂಡ ಯಾರನ್ನು ಉಳಿಸಿಕೊಳ್ಳಲಿದೆ, ಯಾರನ್ನು ಬಿಡುಗಡೆ ಮಾಡಲಿದೆ ಎಂಬ ಚರ್ಚೆಗಳು ಕೂಡ ಶುರುವಾಗಿದೆ. ಈ ಚರ್ಚೆಯ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಿಂದ ಮಹೇಂದ್ರ ಸಿಂಗ್ ಧೋನಿ (MS Dhoni) ರಿಲೀಸ್ ಆಗಲಿದ್ದಾರೆ ಎಂಬ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
ಹೌದು, ಧೋನಿ ಮುಂದಿನ ಹರಾಜಿಗಾಗಿ ಹೆಸರು ನೋಂದಾಯಿಸಿಕೊಳ್ಳಲು ಬಯಸಿದ್ದಾರೆ ಎಂದು ಸಿಎಸ್‌ಕೆ ತಂಡದ ಮಾಲೀಕರಾದ ಎನ್. ಶ್ರೀನಿವಾಸನ್ ಅವರು ತಿಳಿಸಿದ್ದಾರೆ. ಧೋನಿ ಸಿಎಸ್‌ಕೆ ತಂಡದಲ್ಲಿ ರಿಟೈನ್ ಆಗಲು ಇಚ್ಛಿಸುತ್ತಿಲ್ಲ. ಅವರ ಬದಲಿಗೆ ಇತರೆ ಆಟಗಾರರನ್ನು ಉಳಿಸಿಕೊಳ್ಳಲು ಅವರು ತಿಳಿಸಿದ್ದಾರೆ ಎಂದು ಸಿಎಸ್‌ಕೆ ಮಾಲೀಕರು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ರೀನಿವಾಸನ್ ಅವರು, “ಎಂಎಸ್ ಧೋನಿ ಅವರು ತುಂಬಾ ನ್ಯಾಯಯುತ ವ್ಯಕ್ತಿ. ಅವರು ಈ ಬಾರಿ ಸಿಎಸ್‌ಕೆ ತಂಡದಿಂದ ಹೊರಬರಲು ಬಯಸಿದ್ದಾರೆ. ಏಕೆಂದರೆ ಅವರನ್ನು ಉಳಿಸಿಕೊಂಡರೆ ಸಿಎಸ್‌ಕೆ ತಂಡ ಹೆಚ್ಚಿನ ಮೊತ್ತ ಕಳೆದುಕೊಳ್ಳಲಿದೆ. ಆದರೆ ಹೀಗೆ ಅವರ ಮೇಲೆ ಹೆಚ್ಚಿನ ವ್ಯಯಿಸಲು ಧೋನಿ ಬಯಸುತ್ತಿಲ್ಲ ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.
ಐಪಿಎಲ್ ರಿಟೈನ್ ನಿಯಮಗಳ ಪ್ರಕಾರ ಒಂದು ಫ್ರಾಂಚೈಸಿಯು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದು. ಹೀಗೆ ಉಳಿಸಿಕೊಂಡ ಆಟಗಾರರಿಗೆ ಕ್ರಮವಾಗಿ ಮೊದಲ ಆಟಗಾರನಿಗೆ 16 ಕೋಟಿ ರೂ., ಎರಡನೇ ಆಟಗಾರನಿಗೆ 12 ಕೋಟಿ ರೂ, ಮೂರನೇ ಆಟಗಾರನಿಗೆ 8 ಕೋಟಿ ರೂ. ಮತ್ತು ನಾಲ್ಕನೇ ಆಟಗಾರನಿಗೆ 6 ಕೋಟಿ ರೂ. ನೀಡಬೇಕಾಗುತ್ತದೆ.
ಇಲ್ಲಿ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಸಿಎಸ್‌ಕೆ ನಿರ್ಧರಿಸಿದರೆ, ಧೋನಿಗಾಗಿ 16 ಕೋಟಿ ರೂ.ಗಳನ್ನು ವ್ಯಯಿಸಬೇಕಾಗುತ್ತದೆ. ಹಾಗಾಗಿ ಧೋನಿ ಈ ಮೊತ್ತದಿಂದ ಬೇರೆ ಉತ್ತಮ ಆಟಗಾರರನ್ನು ಉಳಿಸಿಕೊಂಡು ತಂಡವನ್ನು ಬಲಿಷ್ಠ ಮಾಡುವಂತೆ ತಿಳಿಸಿದ್ದಾರೆ. ಅಲ್ಲದೆ ತಾನು ಐಪಿಎಲ್ ಮೆಗಾ ಹರಾಜಿನಲ್ಲಿ ಹೆಸರು ನೊಂದಾಯಿಸಿಕೊಳ್ಳುವುದಾಗಿ ಹೇಳಿದ್ದಾರೆ. ಒಂದು ವೇಳೆ ಧೋನಿ ಸಿಎಸ್‌ಕೆ ತಂಡದಿಂದ ಹೊರಬಂದರೆ ಅವರ ಖರೀದಿಗೆ ಭರ್ಜರಿ ಪೈಪೋಟಿ ಕಂಡು ಬರಲಿದೆ. ಇದಾಗ್ಯೂ ಸಿಎಸ್‌ಕೆ ತಂಡವೇ ಹೆಚ್ಚಿನ ಮೊತ್ತ ನೀಡಿ ಮಹೇಂದ್ರ ಸಿಂಗ್ ಧೋನಿಯನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವುದರಲ್ಲಿ ಅನುಮಾನ ಇಲ್ಲ ಎಂದೇ ಹೇಳಬಹುದು.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
(IPL 2022: MS Dhoni tells CSK boss N Srinivasan he doesn’t want to be RETAINED)