T20 World Cup 2021: ಕೆಎಲ್ ರಾಹುಲ್ ಜೊತೆಗೂಡಿ ತನ್ನದೇ ದಾಖಲೆಯನ್ನು ಸರಿಗಟ್ಟಿದ ರೋಹಿತ್ ಶರ್ಮಾ
Rohit Sharma-KL Rahul: ಇನ್ನು ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕದ ಜೊತೆಯಾಟವಾಡಿದ ದಾಖಲೆ ಪಾಕಿಸ್ತಾನ್ ಆರಂಭಿಕ ಜೋಡಿ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಹೆಸರಿನಲ್ಲಿದೆ.
ಟಿ20 ವಿಶ್ವಕಪ್ನ 33ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ದ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಆರಂಭ ಒದಗಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಅಫ್ಘಾನ್ ಬೌಲರುಗಳ ಬೆಂಡೆತ್ತಿದರು. ಅದರಂತೆ 12ನೇ ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 100 ರ ಗಡಿದಾಟಿಸಿದರು. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 8 ಬಾರಿ ಶತಕದ ಜೊತೆಯಾಟವಾಡಿದ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ನಿರ್ಮಿಸಿದರು. ಅಷ್ಟೇ ಅಲ್ಲದೆ ಈ ಹಿಂದೆ ಶಿಖರ್ ಧವನ್ ಜೊತೆಗೂಡಿದ ನಿರ್ಮಿಸಿದ್ದ ದಾಖಲೆಯನ್ನು ಈ ಬಾರಿ ಕೆಎಲ್ ರಾಹುಲ್ ಜೊತೆಗೂಡಿ ಸರಿಗಟ್ಟಿದರು.
ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ ಟಿ20 ಕ್ರಿಕೆಟ್ನಲ್ಲಿ 4 ಬಾರಿ ಶತಕದ ಜೊತೆಯಾಟವಾಡಿದ್ದಾರೆ. ಇದೀಗ ಅಫ್ಘಾನಿಸ್ತಾನ್ ವಿರುದ್ದ ರಾಹುಲ್-ರೋಹಿತ್ ಜೋಡಿ ಶತಕದ ಪಾಲುದಾರಿಕೆ ನೀಡಿದ್ದಾರೆ. ಇದು ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರ 4ನೇ ಟಿ20 ಶತಕದ ಜೊತೆಯಾಟವಾಗಿದೆ. ಈ ಮೂಲಕ ಶಿಖರ್ ಧವನ್ ಜೊತೆಗೂಡಿ ನಿರ್ಮಿಸಿದ್ದ ದಾಖಲೆಯನ್ನು ಹಿಟ್ಮ್ಯಾನ್ ರಾಹುಲ್ ಜೊತೆಯಾಗಿ ಸರಿಗಟ್ಟಿದ್ದಾರೆ.
ಇನ್ನು ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕದ ಜೊತೆಯಾಟವಾಡಿದ ದಾಖಲೆ ಪಾಕಿಸ್ತಾನ್ ಆರಂಭಿಕ ಜೋಡಿ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಹೆಸರಿನಲ್ಲಿದೆ. ಈ ಜೋಡಿ 5 ಬಾರಿ ಶತಕದ ಜೊತೆಯಾಟವಾಡಿದ್ದಾರೆ. ಇನ್ನು ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿಯಿದ್ದು, ಈ ಜೋಡಿ 4 ಬಾರಿ ಶತಕದ ಪಾಲುದಾರಿಕೆ ನೀಡಿದ್ದಾರೆ. ಹಾಗೆಯೇ ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಹಾಗೂ ಮಾರ್ಟಿನ್ ಗಪ್ಟಿಲ್ ಇದ್ದಾರೆ. ಅಲ್ಲದೆ ನಾಲ್ಕನೇ ಸ್ಥಾನವನ್ನು ರೋಹಿತ್ ಶರ್ಮಾ-ಕೆಎಲ್ ರಾಹುಲ್ ಅಲಂಕರಿಸಿದ್ದಾರೆ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
(Most century partnerships in T20 Internationals)