IPL 2022: ಮೆಗಾ ಹರಾಜಿಗೂ ಮುನ್ನವೇ CSK ಅಭಿಮಾನಿಗಳಿಗೆ ಗುಡ್​ ನ್ಯೂಸ್

| Updated By: ಝಾಹಿರ್ ಯೂಸುಫ್

Updated on: Jan 29, 2022 | 5:09 PM

IPL 2022 Mega Auction: ಕೆಲ ಕಾರ್ಯಕ್ರಮದಲ್ಲಿ ಧೋನಿ ಕೂಡ ನಾನು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ವಿದಾಯ ಪಂದ್ಯವಾಡುವುದಾಗಿ ತಿಳಿಸಿದ್ದರು. ಅದರಂತೆ ಈ ಬಾರಿ ಧೋನಿ ಹರಾಜು ಮೊತ್ತ ಇಳಿಸಿರುವ ಕಾರಣ ಈ ಬಾರಿ ಧೋನಿಯ ಕೊನೆಯ ಐಪಿಎಲ್ ಎಂಬ ಸುದ್ದಿಗಳು ಹುಟ್ಟಿಕೊಂಡಿವೆ.

IPL 2022: ಮೆಗಾ ಹರಾಜಿಗೂ ಮುನ್ನವೇ CSK ಅಭಿಮಾನಿಗಳಿಗೆ ಗುಡ್​ ನ್ಯೂಸ್
MS Dhoni
Follow us on

ಐಪಿಎಲ್ ಮೆಗಾ ಹರಾಜಿಗಾಗಿ (IPL 2022) ಈಗಾಗಲೇ ಎಲ್ಲಾ ತಂಡಗಳು ಸಿದ್ದತೆಗಳನ್ನು ಆರಂಭಿಸಿದೆ. ಅತ್ತ ಸಿಎಸ್​ಕೆ (CSK ) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಈಗಾಗಲೇ ಚೆನ್ನೈಗೆ ಬಂದಿಳಿದು, ಮೆಗಾ ಹರಾಜಿಗಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈ ಬಾರಿ ಸಿಎಸ್​ಕೆ ತಂಡದ ನಾಯಕ ಕೂಡ ಬದಲಾಗಲಿದೆ ಎಂಬ ಸುದ್ದಿಯೊಂದು ಹರಿದಾಡಲಾರಂಭಿಸಿದೆ. ಏಕೆಂದರೆ ಈ ಬಾರಿ ಸಿಎಸ್​ಕೆ ತಂಡವು ಅತೀ ಹೆಚ್ಚು ಮೊತ್ತ ನೀಡಿದ್ದು ಧೋನಿಯ ಬದಲಾಗಿ ರವೀಂದ್ರ ಜಡೇಜಾಗೆ. ಜಡೇಜಾ 16 ಕೋಟಿ ಪಡೆದರೆ, ಧೋನಿ 12 ಕೋಟಿಗೆ ರಿಟೈನ್ ಆಗಿದ್ದರು. ಇನ್ನು ಮೊಯೀನ್ ಅಲಿ 8 ಕೋಟಿ ಹಾಗೂ ರುತುರಾಜ್ ಗಾಯಕ್ವಾಡ್​ರನ್ನು 6 ಕೋಟಿಗೆ ಸಿಎಸ್​ಕೆ ಉಳಿಸಿಕೊಂಡಿದೆ. ಇಲ್ಲಿ ಧೋನಿ ಕಡಿಮೆ ಮೊತ್ತ ಪಡೆದಿರುವ ಕಾರಣ ಈ ಬಾರಿ ಧೋನಿ ಅರ್ಧದಲ್ಲೇ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು.

ಇದಕ್ಕೂ ಮುನ್ನ ಕೆಲ ಕಾರ್ಯಕ್ರಮದಲ್ಲಿ ಧೋನಿ ಕೂಡ ನಾನು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ವಿದಾಯ ಪಂದ್ಯವಾಡುವುದಾಗಿ ತಿಳಿಸಿದ್ದರು. ಅದರಂತೆ ಈ ಬಾರಿ ಧೋನಿ ಹರಾಜು ಮೊತ್ತ ಇಳಿಸಿರುವ ಕಾರಣ ಈ ಬಾರಿ ಧೋನಿಯ ಕೊನೆಯ ಐಪಿಎಲ್ ಎಂಬ ಸುದ್ದಿಗಳು ಹುಟ್ಟಿಕೊಂಡಿವೆ.

ಅದರಂತೆ ಧೋನಿ ಅರ್ಧದಲ್ಲೇ ಐಪಿಎಲ್​ ನಿವೃತ್ತಿ ಘೋಷಿಸಲಿದ್ದಾರೆ. ಅವರ ಬದಲಿಗೆ ಸಿಎಸ್​ಕೆ ತಂಡವನ್ನು ರವೀಂದ್ರ ಜಡೇಜಾ ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಕೂಡ ಕೆಲ ದಿನಗಳಿಂದ ಹರಿದಾಡುತ್ತಿದೆ. ಆದರೆ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಸ್​ಕೆ ಫ್ರಾಂಚೈಸಿ ಮೂಲಗಳು, ಈಗಲೂ ಧೋನಿ ನಮ್ಮ ತಂಡದ ನಾಯಕ. ಹರಾಜಿನ ತಯಾರಿಗೆ ಮೊದಲು ಆಗಮಿಸಿದ್ದೇ ಅವರು. ಅವರ ನಿವೃತ್ತಿ ವಿಚಾರ ಅವರೇ ನಿರ್ಧರಿಸಲಿದ್ದಾರೆ. ಅವರೀಗ ಫಿಟ್​ ಅ್ಯಂಡ್ ಫೈನ್ ಆಗಿದ್ದು, ಹೀಗಾಗಿ ಸಿಎಸ್​ಕೆ ತಂಡವನ್ನು ಅವರೇ ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ನಾಯಕನ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿರುವ ಸಿಎಸ್​ಕೆ ಫ್ರಾಂಚೈಸಿ ಮೂಲಗಳು, ಎಂಎಸ್ ಧೋನಿ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಲಿದ್ದಾರೆ ಎಂಬ ಊಹಾಪೋಹಗಳು ಅಷ್ಟೇ. ಈಗಲೂ ಸಿಎಸ್​ಕೆ ತಂಡದ ಮುಖ್ಯ ಅಂಗವಾಗಿರುವ ಧೋನಿ ಅವರು ಐಪಿಎಲ್​ ನಡುವೆಯೇ ಏಕೆ ನಿವೃತ್ತರಾಗುತ್ತಾರೆ?. ಇದೆಲ್ಲಾ ಊಹಾಪೋಹಗಳಷ್ಟೇ, ಸದ್ಯ ಧೋನಿ ಅವರ ಗಮನವು ಮೆಗಾ ಹರಾಜಿನ ಮೇಲಿದೆ. ಅವರೇ ಐಪಿಎಲ್​ 2022 ರಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಿಎಸ್​ಕೆ ತಂಡದ ನಾಯಕ ಬದಲಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಸಿಎಸ್​ಕೆ ಫ್ರಾಂಚೈಸಿ ಅಧಿಕಾರಿಯೇ ತೆರೆ ಎಳೆದಿದ್ದಾರೆ.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(IPL 2022: MS Dhoni to stay as CSK CAPTAIN)