2014 ರಿಂದ 9 ಬಾರಿ ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿಕೊಂಡರೂ ಯಾರು ನನ್ನ ಖರೀದಿಸಿಲ್ಲ; ಟೀಂ ಇಂಡಿಯಾ ಆಟಗಾರ

Abhimanyu Easwaran: 2014 ರಿಂದ ನಾನು ನನ್ನ ಹೆಸರನ್ನು ಐಪಿಎಲ್ ಹರಾಜಿಗೆ ಕಳುಹಿಸುತ್ತಿದ್ದೇನೆ ಆದರೆ ಯಾರೂ ಬಿಡ್ ಮಾಡಿಲ್ಲ. ಈ ವರ್ಷ ಇದು ನನ್ನ ಒಂಬತ್ತನೇ ಪ್ರಯತ್ನ.

2014 ರಿಂದ 9 ಬಾರಿ ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿಕೊಂಡರೂ ಯಾರು ನನ್ನ ಖರೀದಿಸಿಲ್ಲ; ಟೀಂ ಇಂಡಿಯಾ ಆಟಗಾರ
ಅಭಿಮನ್ಯು ಈಶ್ವರನ್
Follow us
TV9 Web
| Updated By: ಪೃಥ್ವಿಶಂಕರ

Updated on: Jan 29, 2022 | 6:02 PM

ಅಭಿಮನ್ಯು ಈಶ್ವರನ್ ಇತ್ತೀಚೆಗೆ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ, ಆಡುವ XIನಲ್ಲಿ ಸ್ಥಾನ ಪಡೆದಿರಲಿಲ್ಲ. ಬಂಗಾಳದ ದೇಶೀಯ ಕ್ರಿಕೆಟ್‌ನಲ್ಲಿ ಆಡಿರುವ ಅಭಿಮನ್ಯು ಈಶ್ವರನ್, 2021 ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ನಂತರ ಅವರು ವರ್ಷಾಂತ್ಯದಲ್ಲಿ ನ್ಯೂಜಿಲೆಂಡ್ ಸರಣಿಗಾಗಿ ಟೀಮ್ ಇಂಡಿಯಾದ ಭಾಗವಾಗಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಆಟಗಾರ, ಇದೀಗ ಐಪಿಎಲ್ (IPL 2022 ) ನಲ್ಲಿ ಆಡುವ ಸಾಧ್ಯತೆ ಮತ್ತು ಹರಾಜಿನ ಸಮಯದಲ್ಲಿ ಯಾವುದೇ ತಂಡ ಆಸಕ್ತಿ ತೋರಿಸದಿರುವ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಜೊತೆಗಿನ ಸಂವಾದದಲ್ಲಿ ಅಭಿಮನ್ಯು ಈಶ್ವರನ್ ಐಪಿಎಲ್‌ನಲ್ಲಿ ಆಡುವ ಕುರಿತು, ‘2014 ರಿಂದ ನಾನು ನನ್ನ ಹೆಸರನ್ನು ಐಪಿಎಲ್ ಹರಾಜಿಗೆ ಕಳುಹಿಸುತ್ತಿದ್ದೇನೆ ಆದರೆ ಯಾರೂ ಬಿಡ್ ಮಾಡಿಲ್ಲ. ಈ ವರ್ಷ ಇದು ನನ್ನ ಒಂಬತ್ತನೇ ಪ್ರಯತ್ನ. ನಾನು ಪದೇ ಪದೇ ನನ್ನ ಹೆಸರನ್ನು ಹರಾಜಿಗೆ ಏಕೆ ಕಳುಹಿಸುತ್ತೇನೆ? ಏಕೆಂದರೆ ನಾನು T20 ಆಟಗಾರನಾಗಿ ಸಾಕಷ್ಟು ಉತ್ತಮವಾಗಿದ್ದೇನೆ ಮತ್ತು ನನ್ನ ಅಂಕಿಅಂಶಗಳು ಅದನ್ನು ಬೆಂಬಲಿಸುತ್ತವೆ ಎಂದು ನನಗೆ ವಿಶ್ವಾಸವಿದೆ. ನಾನು ಮತ್ತೆ ಮಾರಾಟವಾಗದೆ ಉಳಿದರೆ, ನನ್ನ ಮೇಲೆ ನಂಬಿಕೆ ಇಡುವುದು ನನಗೆ ಬಿಟ್ಟದ್ದು ಆದರೆ ಅದಕ್ಕೆ ದೇಶೀಯ ಕ್ರಿಕೆಟ್ ಅಗತ್ಯವಿರುತ್ತದೆ ಎಂದಿದ್ದಾರೆ.

ದೇಶೀಯ ಕ್ರಿಕೆಟ್ ಬಗ್ಗೆ ಈಶ್ವರನ್ ಹೇಳಿದ್ದೇನು? ಕಳೆದ ಎರಡು ವರ್ಷಗಳಲ್ಲಿ, ಕೊರೊನಾ ಭಾರತದ ದೇಶೀಯ ಕ್ರಿಕೆಟ್ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಕಳೆದ ವರ್ಷ ರಣಜಿ ಟ್ರೋಫಿ ನಡೆಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಫೆಬ್ರವರಿಯಿಂದ ಆರಂಭವಾಗುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಎಲ್ಲವೂ ಬದಲಾಗಿದೆ ಎಂದು ಈಶ್ವರನ್ ಹೇಳಿದರು.

ಟೀಮ್ ಇಂಡಿಯಾ ಸೇರಿದ ಅನುಭವ ಕಳೆದ ಎರಡು ರಣಜಿ ಸೀಸನ್‌ಗಳಲ್ಲಿ ಅಭಿಮನ್ಯು ಈಶ್ವರನ್ ಅವರ ಪ್ರದರ್ಶನ ಉತ್ತಮವಾಗಿತ್ತು. ಈ 16 ಪಂದ್ಯಗಳಲ್ಲಿ ಅವರು 46.62 ಸರಾಸರಿಯಲ್ಲಿ 1119 ರನ್ ಗಳಿಸಿದ್ದಾರೆ. ಈ ಪ್ರದರ್ಶನದ ಆಧಾರದ ಮೇಲೆ ಅವರನ್ನು ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಯಿತು. ಟೀಮ್ ಇಂಡಿಯಾದಲ್ಲಿ ಆಯ್ಕೆಯ ಬಗ್ಗೆ ಅವರು, ‘ಕಳೆದ ವರ್ಷ ಮೇ 30 ರಂದು ನಾನು ಭಾರತೀಯ ಟೆಸ್ಟ್ ತಂಡದ ಜೆರ್ಸಿಯನ್ನು ಪಡೆದುಕೊಂಡೆ, ಆದರೆ ಅದನ್ನು ತೊಟ್ಟು ಮೈದಾನಕ್ಕೆ ಇಳಿಯಲಾಗಲಿಲ್ಲ. ಆ ಜರ್ಸಿಯನ್ನು ನಾನು ಊಟದ ಸಮಯದಲ್ಲಿ ಧರಿಸಿದ್ದೆ ಮತ್ತು ರಾತ್ರಿಯ ಊಟದ ಸಮಯದಲ್ಲಿ ಅದನ್ನು ತೆಗೆದಿದ್ದೇ ಬಂತು ಹೊರತು ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಗಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ:IPL 2022: ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೀಶಾಂತ್: ಮೂಲ ಬೆಲೆ ಎಷ್ಟು ಗೊತ್ತಾ?

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ