ಐಪಿಎಲ್​ನಲ್ಲಿ ಈ ಕಾರಣಕ್ಕಾಗಿ ಆರ್​ಸಿಬಿ ಪರ ಆಡಬೇಕು ಎಂದ ಬೇಬಿ ಡಿವಿಲಿಯರ್ಸ್!

ಐಪಿಎಲ್​ನಲ್ಲಿ ಈ ಕಾರಣಕ್ಕಾಗಿ ಆರ್​ಸಿಬಿ ಪರ ಆಡಬೇಕು ಎಂದ ಬೇಬಿ ಡಿವಿಲಿಯರ್ಸ್!
ಡೆವಾಲ್ಡ್ ಬ್ರೆವಿಸ್

ನಾನು ಐಪಿಎಲ್‌ನ ದೊಡ್ಡ ಅಭಿಮಾನಿ ಮತ್ತು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲು ಇಷ್ಟಪಡುತ್ತೇನೆ. ನಾನು ಆರ್‌ಸಿಬಿಯನ್ನು ಪ್ರೀತಿಸುತ್ತೇನೆ ಏಕೆಂದರೆ ವಿರಾಟ್ ಕೊಹ್ಲಿ ಮತ್ತು ಡಿವಿಲಿಯರ್ಸ್ ಈ ತಂಡದಲ್ಲಿ ಆಡಿದ್ದಾರೆ.

TV9kannada Web Team

| Edited By: pruthvi Shankar

Jan 28, 2022 | 5:20 PM

ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ತಮ್ಮ ಬ್ಯಾಟ್‌ನಿಂದ ಅಬ್ಬರಿಸಿದ ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಸುದ್ದಿಯಲಿದ್ದಾರೆ. ಬ್ರೆವಿಸ್ ಅವರನ್ನು ಸದ್ಯ ಕ್ರಿಕೆಟ್ ಜಗತ್ತಿನ ಬೇಬಿ ಎಬಿ ಡಿವಿಲಿಯರ್ಸ್ ಎಂದು ಕರೆಯಲಾಗುತ್ತಿದೆ. ಏಕೆಂದರೆ ಅವರ ಆಟದ ಶೈಲಿಯು ದಕ್ಷಿಣ ಆಫ್ರಿಕಾದ ಮಾಜಿ ದಂತಕಥೆಯನ್ನು ಹೋಲುತ್ತದೆ. ಪ್ರತಿಯೊಬ್ಬ ಕ್ರಿಕೆಟಿಗನಂತೆ, ಬ್ರೆವಿಸ್ ತನ್ನ ದೇಶಕ್ಕಾಗಿ ಆಡುವ ಕನಸು ಕಾಣುತ್ತಿದ್ದಾರೆ. ಅಲ್ಲದೆ ಹಿರಿಯ ತಂಡದಲ್ಲಿ ಸ್ಥಾನ ಪಡೆಯುವ ಆತುರದಲ್ಲಿದ್ದಾರೆ. ಇದಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದಲ್ಲಿ ಆಡುವ ಕನಸು ಅವರದ್ದು. ಇದಕ್ಕೆ ಕಾರಣಗಳಿವೆ. ಬ್ರಾವಿಸ್ ಅವರ ನೆಚ್ಚಿನ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ( Virat Kohli) ಈ ತಂಡದಲ್ಲಿ ಆಡುತ್ತಾರೆ ಮತ್ತು ಅವರ ನೆಚ್ಚಿನ ಬ್ಯಾಟ್ಸ್‌ಮನ್ ಡಿವಿಲಿಯರ್ಸ್ ಕೂಡ ಈ ತಂಡದಲ್ಲಿ ಆಡಿದ್ದಾರೆ.

ಕಳೆದ ಋತುವಿನಲ್ಲಿ ವಿರಾಟ್ ಆರ್‌ಸಿಬಿ ನಾಯಕತ್ವವನ್ನು ತೊರೆದಿದ್ದಾರೆ. ಆದರೆ ಮತ್ತೊಮ್ಮೆ ಕೊಹ್ಲಿ ಈ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬಹುದು ಎಂಬ ಊಹಾಪೋಹವಿದೆ. ಅದೇ ಸಮಯದಲ್ಲಿ, ಡಿವಿಲಿಯರ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, ಅವರು ಈ ವರ್ಷ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಐಪಿಎಲ್ ಶ್ಲಾಘನೆ ಈ ಯುವ ಬ್ಯಾಟ್ಸ್‌ಮನ್ ತಾನು ಐಪಿಎಲ್‌ನ ದೊಡ್ಡ ಅಭಿಮಾನಿ ಮತ್ತು ಈ ಪಂದ್ಯಾವಳಿಯಲ್ಲಿ ಆರ್‌ಸಿಬಿ ಪರ ಆಡಲು ಬಯಸುತ್ತೇನೆ ಎಂದು ವೀಡಿಯೊದಲ್ಲಿ ಹೇಳಿದ್ದಾರೆ. ಆರ್‌ಸಿಬಿ ಜರ್ಸಿಯಲ್ಲಿರುವ ಈ ಆಟಗಾರನ ಹಳೆಯ ಫೋಟೋ ಕೂಡ ಸಾಕಷ್ಟು ವೈರಲ್ ಆಗುತ್ತಿದೆ. ದಕ್ಷಿಣ ಆಫ್ರಿಕಾ ಪರ ಆಡುವುದು ನನ್ನ ದೊಡ್ಡ ಕನಸು ಎಂದು ಅವರು ಹೇಳಿದರು. ನಾನು ಐಪಿಎಲ್‌ನ ದೊಡ್ಡ ಅಭಿಮಾನಿ ಮತ್ತು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲು ಇಷ್ಟಪಡುತ್ತೇನೆ. ನಾನು ಆರ್‌ಸಿಬಿಯನ್ನು ಪ್ರೀತಿಸುತ್ತೇನೆ ಏಕೆಂದರೆ ವಿರಾಟ್ ಕೊಹ್ಲಿ ಮತ್ತು ಡಿವಿಲಿಯರ್ಸ್ ಈ ತಂಡದಲ್ಲಿ ಆಡಿದ್ದಾರೆ. ನಾನು ವಿರಾಟ್ ಮತ್ತು ಡಿವಿಲಿಯರ್ಸ್ ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ.

ಬ್ಯಾಟಿಂಗ್​ನಲ್ಲಿ ಅಬ್ಬರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಬ್ರೆವಿಸ್ ಸತತ ನಾಲ್ಕು ಬಾರಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಭಾರತದ ವಿರುದ್ಧ ಆಡಿದ ಪಂದ್ಯದಲ್ಲಿ 65 ರನ್ ಗಳಿಸಿದ್ದರು. ಇದರ ನಂತರ, ಉಗಾಂಡಾ ವಿರುದ್ಧ ಅವರ ಬ್ಯಾಟ್‌ನಿಂದ 104 ರನ್ ಬಂದವು. ಅವರು ಐರ್ಲೆಂಡ್ ವಿರುದ್ಧ 96 ರನ್ ಗಳಿಸಿದರೆ ಇಂಗ್ಲೆಂಡ್ ವಿರುದ್ಧ 97 ರನ್ ಗಳಿಸಿದರು. ಬ್ರೆವಿಸ್ ಲೆಗ್ ಸ್ಪಿನ್ನರ್ ಕೂಡ. ಅಂಡರ್-19 ವಿಶ್ವಕಪ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada