IPL 2022 Auction: ಐಪಿಎಲ್ ಮೆಗಾ ಹರಾಜಿನಲ್ಲಿ ಭೂತಾನ್ ಆಟಗಾರ: ಯಾರು ಈ ಮಿಕ್ಯೋ?

Mikyo Dorji: ಭೂತಾನ್ 2019 ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ನ ಸಹಾಯಕ ಸದಸ್ಯರಾದರು. ಇದಾದ ಬಳಿಕ ಎರಡು T20I ಗಳಲ್ಲಿ ಮಿಕ್ಯೋ ದೋರ್ಜಿ ಆಡಿದ್ದಾರೆ.

IPL 2022 Auction: ಐಪಿಎಲ್ ಮೆಗಾ ಹರಾಜಿನಲ್ಲಿ ಭೂತಾನ್ ಆಟಗಾರ: ಯಾರು ಈ ಮಿಕ್ಯೋ?
Mikyo Dorji
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 29, 2022 | 4:12 PM

ಐಪಿಎಲ್ 2022ರ ಮೆಗಾ ಹರಾಜಿಗಾಗಿ (IPL 2022 Auction) ಒಟ್ಟು 1214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 318 ವಿದೇಶಿ ಆಟಗಾರರಿದ್ದಾರೆ. ಈ ವಿದೇಶಿ ಆಟಗಾರರ ಪಟ್ಟಿಯಲ್ಲಿ ಎಲ್ಲರ ಗಮನ ಸೆಳೆದಿದ್ದು ಮಿಕ್ಯೋ ದೋರ್ಜಿ (Mikyo Dorji) ಎಂಬ ಹೆಸರು. ಏಕೆಂದರೆ ಇದೇ ಮೊದಲ ಬಾರಿಗೆ ಭೂತಾನ್ ದೇಶದ ಕ್ರಿಕೆಟಿಗನೊಬ್ಬನ ಹೆಸರು ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಕಳೆದ 14 ಸೀಸನ್​ ಐಪಿಎಲ್​ವರೆಗೂ ಒಬ್ಬನೇ ಒಬ್ಬ ಭೂತಾನ್ ಕ್ರಿಕೆಟಿಗ ಹೆಸರು ನೀಡಿರಲಿಲ್ಲ. ಆದರೆ ಈ ಬಾರಿ ಭೂತಾನ್ ಕ್ರಿಕೆಟ್ ಮಂಡಳಿ ಕಡೆಯಿಂದ ಕೂಡ ಬಿಸಿಸಿಐಗೆ ಒಂದು ಹೆಸರು ಬಂದಿದ್ದು ವಿಶೇಷ. ಹಾಗಿದ್ರೆ ಯಾರು ಈ ಮಿಕ್ಯೋ ದೋರ್ಜಿ?

ಮಿಕ್ಯೋ ದೋರ್ಜಿ 22 ವರ್ಷದ ಯುವ ಆಲ್​ರೌಂಡರ್. 2018 ರಲ್ಲಿ ಮಲೇಷ್ಯಾ ವಿರುದ್ಧ ಪದಾರ್ಪಣೆ ಮಾಡಿದ್ದರು. ಅಷ್ಟೇ ಅಲ್ಲದೆ ಕಳೆದ ವರ್ಷ ನೇಪಾಳದ ಎವರೆಸ್ಟ್ ಪ್ರೀಮಿಯರ್ ಲೀಗ್‌ನಲ್ಲೂ ಭಾಗವಹಿಸಿ ಮಿಂಚಿದ್ದರು. ಈ ಮೂಲಕ ವಿದೇಶಿ ಲೀಗ್‌ನಲ್ಲಿ ಭಾಗವಹಿಸಿದ ಮೊದಲ ಭೂತಾನ್ ಕ್ರಿಕೆಟಿಗ ಎಂಬ ಸಾಧನೆಯನ್ನೂ ಮಿಕ್ಯೋ ದೋರ್ಜಿ ಮಾಡಿದ್ದಾರೆ.

ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡುವ ಕನಸು ಹೊತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಿಕ್ಯೋ ದೋರ್ಜಿ, ಐಪಿಎಲ್‌ನಲ್ಲಿ ಆಡುವುದು ನನ್ನ ಪಾಲಿನ ದೊಡ್ಡ ಕನಸು. ಭೂತಾನ್‌ನಿಂದ ಹರಾಜು ಪಟ್ಟಿಯಲ್ಲಿ ಒಬ್ಬ ಆಟಗಾರನಿರುವುದನ್ನು ಎಲ್ಲರೂ ಗಮನಿಸಿದರು. ನನ್ನ ಸ್ನೇಹಿತರು ನನಗೆ ಕರೆ ಮಾಡಲು ಪ್ರಾರಂಭಿಸಿದರು. ಆದರೆ ಇದು ಕೇವಲ ಆರಂಭಿಕ ಸುತ್ತು ಎಂದು ಅವರಿಗೆ ತಿಳಿದಿಲ್ಲ. ಇದಾದ ಬಳಿಕ ಹೆಸರುಗಳು ಮುಂದೆ ಶಾರ್ಟ್‌ಲಿಸ್ಟ್ ಆಗಲಿವೆ. ನಿಜ ಹೇಳಬೇಕೆಂದರೆ, ಫೈನಲ್​ ಲೀಸ್ಟ್​ ಮಾಡಿದ ಬಳಿಕ ಮುಖ್ಯ ಪಟ್ಟಿಯಲ್ಲಿ ನನ್ನ ಹೆಸರು ಇರುವುದಿಲ್ಲ. ಇದಾಗ್ಯೂ ಭೂತಾನ್​ನಿಂದ ಹೆಸರು ನೋಂದಾಯಿಸಿದ್ದೇವೆ ಎಂಬ ಹೆಮ್ಮೆಯಿದೆ ಎಂದು ದೋರ್ಜಿ ತಿಳಿಸಿದ್ದಾರೆ.

ಅಂದಹಾಗೆ ಮಿಕ್ಯೋ ದೋರ್ಜಿ 2018 ಮತ್ತು 2019 ರಲ್ಲಿ ಚೆನ್ನೈನಲ್ಲಿರುವ MRF ಪೇಸ್ ಫೌಂಡೇಶನ್​ನಲ್ಲಿ ತರಬೇತಿ ಪಡೆದಿದ್ದರು. ಇದೇ ವೇಳೆ ಎಂಎಸ್ ಧೋನಿ ಅವರನ್ನೂ ಕೂಡ ಭೇಟಿಯಾಗಿದ್ದರು. ಅಲ್ಲದೆ ಅವರಿಂದ ವಿಶೇಷ ಸಲಹೆಯನ್ನು ಪಡೆದಿದ್ದರು. ಧೋನಿಯ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ದೋರ್ಜಿ ಇದೀಗ ನೆಟ್ಸ್‌ನಲ್ಲಿ ಕಠಿಣ ಪರಿಶ್ರಮ ನಡೆಸುತ್ತಿದ್ದಾರೆ. ಅದರಂತೆ ಈಗಾಗಲೇ ನೇಪಾಳ ಟಿ20 ಲೀಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್​ಗೂ ಹೆಸರು ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಇನ್ನು ದೋರ್ಜಿ ಓದಿದೆಲ್ಲಾ ಭಾರತದಲ್ಲೇ ಎಂಬುದು ವಿಶೇಷ. ಅವರು ಡಾರ್ಜಿಲಿಂಗ್‌ನ ಸೇಂಟ್ ಜೋಸೆಫ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಇದೇ ವೇಳೆ ಅವರು ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಿದ್ದರು. ಇದೀಗ 22 ರ ವೇಗದ ಬೌಲಿಂಗ್ ಆಲ್​ರೌಂಡರ್​ ಆಗಿ ಮಿಕ್ಯೋ ದೋರ್ಜಿ ಮತ್ತೆ ಭಾರತದಲ್ಲಿ ಸುದ್ದಿಯಾಗಿದ್ದಾರೆ. ಒಂದು ವೇಳೆ ಮೆಗಾ ಹರಾಜಿನಲ್ಲಿ ದೋರ್ಜಿ ಯಾವುದಾದರು ತಂಡಕ್ಕೆ ಬಿಕರಿಯಾದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಭೂತಾನ್ 2019 ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ನ ಸಹಾಯಕ ಸದಸ್ಯರಾದರು. ಇದಾದ ಬಳಿಕ ಎರಡು T20I ಗಳಲ್ಲಿ ಮಿಕ್ಯೋ ದೋರ್ಜಿ ಆಡಿದ್ದಾರೆ. ದೋರ್ಜಿ 2019 ರಲ್ಲಿ ನೇಪಾಳವನ್ನು ಎದುರಿಸಿದ ಭೂತಾನ್ ಪ್ಲೇಯಿಂಗ್ 11ನ ಭಾಗವಾಗಿದ್ದರು. ಇದಾಗ್ಯೂ ವೇಗದ ಆಲ್​ರೌಂಡರ್ ಆಗಿರುವ ಕಾರಣ ಮಿಕ್ಯೋ ಅವರ ಖರೀದಿಗೆ ಐಪಿಎಲ್ ಫ್ರಾಂಚೈಸಿ ಮುಂದಾಗಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(Who is Mikyo Dorji, the first player from Bhutan to register in IPL 2022 Auction?)