David Warner: ಮಗಳ ಜತೆ ‘ಪುಷ್ಪ’ದ ಮಾಸ್ ಡೈಲಾಗ್ ಹೇಳಿದ ವಾರ್ನರ್; ಫಿದಾ ಆದ ಫ್ಯಾನ್ಸ್- ವಿಡಿಯೋ ಇಲ್ಲಿದೆ

David Warner: ಮಗಳ ಜತೆ ‘ಪುಷ್ಪ’ದ ಮಾಸ್ ಡೈಲಾಗ್ ಹೇಳಿದ ವಾರ್ನರ್; ಫಿದಾ ಆದ ಫ್ಯಾನ್ಸ್- ವಿಡಿಯೋ ಇಲ್ಲಿದೆ
ತಮ್ಮ ಪುತ್ರಿಯೊಂದಿಗೆ ‘ತಗ್ಗೆದೆ ಲೆ’ ಎನ್ನುತ್ತಿರುವ ಡೇವಿಡ್ ವಾರ್ನರ್ (Credits: David Warner/ Instagram)

Pushpa The Rise | Allu Arjun: ಆಸ್ಟ್ರೇಲಿಯನ್ ಕ್ರಿಕೆಟ್ ತಾರೆ ಅಲ್ಲು ಅರ್ಜುನ್ ಮತ್ತೆ ‘ಪುಷ್ಪ’ದ ಮಾಸ್ ಡೈಲಾಗ್ ಹೇಳಿದ್ದಾರೆ. ಈ ಬಾರಿ ಅವರಿಗೆ ಪುತ್ರಿ ಸಾಥ್ ನೀಡಿದ್ದಾಳೆ.

TV9kannada Web Team

| Edited By: shivaprasad.hs

Jan 29, 2022 | 4:10 PM

ಆಸ್ಟ್ರೇಲಿಯನ್ ಕ್ರಿಕೆಟ್ ತಾರೆ ಡೇವಿಡ್ ವಾರ್ನರ್ (David Warner) ಅವರನ್ನು ಇನ್ನೂ ‘ಪುಷ್ಪ’ (Pushpa: The Rise) ಗುಂಗು ಬಿಟ್ಟಂತೆ ಕಾಣುತ್ತಿಲ್ಲ. ಖ್ಯಾತ ಭಾರತೀಯ ಚಿತ್ರಗಳ ಡೈಲಾಗ್​ಗಳು, ಹಾಡುಗಳಿಗೆ ತಮ್ಮದೇ ವರ್ಷನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ವಾರ್ನರ್​​ ಅವರ ಪ್ರತಿಭೆಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಹಲವು ಬಾರಿ ವಾರ್ನರ್ ಜತೆ ಅವರ ಕುಟುಂಬದವರೂ ಸೇರಿಕೊಳ್ಳುತ್ತಾರೆ. ಕಳೆದ ಕೆಲವು ದಿನಗಳಿಂದ ವಾರ್ನರ್ ‘ಪುಷ್ಪ’ದ ಹಿಂದೆ ಬಿದ್ದಿದ್ದಾರೆ. ಈಗಾಗಲೇ ಹಲವು ವಿಡಿಯೋಗಳನ್ನು ಹಂಚಿಕೊಂಡಿರುವ ವಾರ್ನರ್ ಇದೀಗ ಹೊಸ ವಿಡಿಯೋ ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಶನ್ ಸೃಷ್ಟಿಸಿರುವ ಈ ವಿಡಿಯೋಕ್ಕೆ ಅಲ್ಲು ಅರ್ಜುನ್ (Allu Arjun) ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಅಲ್ಲು ಅರ್ಜುನ್ ತಮ್ಮ ಹೊಸ ವಿಡಿಯೋದಲ್ಲಿ ಪುತ್ರಿ ‘ಇಂಡಿ’ ಜತೆ ‘ಪುಷ್ಪ ಅಂದ್ರೆ ಫ್ಲವರ್ ಅಲ್ಲ, ಫೈರ್!!’ ಎಂದು ಮಾಸ್ ಡೈಲಾಗ್ ಹೇಳಿದ್ದಾರೆ. ಅಲ್ಲದೇ ಅಲ್ಲು ಅರ್ಜುನ್ ಶೈಲಿಯಲ್ಲಿ ಗಡ್ಡ ಸವರಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ತಮ್ಮ ಪೋಸ್ಟ್​​ಗೆ ವಾರ್ನರ್ ಮಜವಾದ ಕ್ಯಾಪ್ಶನ್ ಕೂಡ ಬರೆದಿದ್ದಾರೆ. ‘ಪುಷ್ಪ ಅಂದ್ರೆ ಫ್ಲವರ್ ಅಂತ ತಿಳ್ಕೊಂಡಿದೀರಾ?’ ಎಂದು ಬರೆದಿರುವ ವಾರ್ನರ್, ಉಳಿದದ್ದನ್ನು ದಯವಿಟ್ಟು ಪೂರ್ತಿ ಮಾಡಿ. ಆ ಡೈಲಾಗ್ ನನ್ನ ಜತೆ ಹೇಳಲು ಇಡೀ ಭಾರತವೇ ಕಾಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

ವಾರ್ನರ್ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

ಕೆಲವು ದಿನಗಳ ಹಿಂದೆ ವಾರ್ನರ್- ಅಲ್ಲು ಅರ್ಜುನ್ ಅವರ ಪಾತ್ರಕ್ಕೆ ತಂತ್ರಜ್ಞಾನದ ಮೂಲಕ ತಮ್ಮ ಮುಖವನ್ನು ಅಂಟಿಸಿ, ವಿಡಿಯೋ ಹಂಚಿಕೊಂಡಿದ್ದರು. ಇದು ವೈರಲ್ ಆಗಿದ್ದಲ್ಲದೇ, ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸಿತ್ತು. ವೈರಲ್ ಆಗಿದ್ದ ವಿಡಿಯೋ ಇಲ್ಲಿದೆ.

ಕ್ರಿಕೆಟ್​​ನಲ್ಲೂ ಫೈರಿಂಗ್ ಫಾರ್ಮ್​ನಲ್ಲಿರುವ ವಾರ್ನರ್: ಕಳೆದ ಐಪಿಎಲ್ ಸಂದರ್ಭದಲ್ಲಿ ಫಾರ್ಮ್​​ನಲ್ಲಿ ಡೇವಿಡ್ ವಾರ್ನರ್ ಫಾರ್ಮ್​ನಲ್ಲಿರಲಿಲ್ಲ. ಆದರೆ ವಿಶ್ವಕಪ್ ಸಂದರ್ಭದಲ್ಲಿ ಲಯಕ್ಕೆ ಮರಳಿದ್ದರು. ಇತ್ತೀಚೆಗೆ ಕೊನೆಗೊಂಡ ಆಶಸ್ ಸರಣಿಯಲ್ಲೂ ವಾರ್ನರ್ ಆಸ್ಟ್ರೇಲಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಮೂಲಕ ವಿಡಿಯೋದಲ್ಲಿ ಮಾತ್ರವಲ್ಲ, ಕ್ರಿಕೆಟ್​​ನಲ್ಲೂ ವಾರ್ನರ್ ಸದ್ಯ ಫೈರಿಂಗ್ ಫಾರ್ಮ್​ನಲ್ಲಿದ್ದಾರೆ ಎನ್ನಬಹುದು. ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್​ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಸನ್​ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿ, ನಾಯಕನಾಗಿ ಕಪ್ ಕೂಡ ಗೆದ್ದುಕೊಟ್ಟಿದ್ದ ವಾರ್ನರ್ ಅವರನ್ನು ಈ ಬಾರಿ ತಂಡ ಉಳಿಸಿಕೊಂಡಿಲ್ಲ. ಇದರಿಂದ ಹಲವು ತಂಡಗಳು ಅವರನ್ನು ಖರೀದಿಸಲು ಕಣ್ಣಿಟ್ಟಿವೆ.

ಫೆಬ್ರವರಿ 12 ಮತ್ತು 13ರಂದು ಹರಾಜು ನಡೆಯಲಿದೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ವಿದೇಶಿ ಆಟಗಾರರಾಗಿರುವ ವಾರ್ನರ್ ದೊಡ್ಡ ಮೊತ್ತಕ್ಕೆ ಹರಾಜಾಗಲಿದ್ದಾರೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಇತ್ತೀಚೆಗೆ ವಾರ್ನರ್ ‘ಪುಷ್ಪ’ದ ‘ಶ್ರೀವಲ್ಲಿ’ ಕನ್ನಡ ಅವತರಣಿಕೆಗೆ ಸ್ಟೆಪ್ ಹಾಕಿದ್ದ ಸಂದರ್ಭದಲ್ಲಿ ಆರ್​ಸಿಬಿ ಅಭಿಮಾನಿಗಳು ವಾರ್ನರ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಿ ಎಂದು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಮುಂದೆ ವಾರ್ನರ್ ಯಾವ ತಂಡದ ಪರ ಆಡಲಿದ್ದಾರೆ ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ:

Hardik Pandya: ಅಜ್ಜಿ ಜತೆ ಶ್ರೀವಲ್ಲಿ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯ; ಫ್ಯಾನ್ಸ್ ಮನಗೆದ್ದ ವಿಡಿಯೋ ಇಲ್ಲಿದೆ

ಬಾಲಿವುಡ್ ತಾರೆಯರಿಗೆ ‘ಪುಷ್ಪ’ ಕಪಾಳಮೋಕ್ಷ ಮಾಡಿದೆ ಎಂದ ವಿವಾದಿತ ನಟ

Follow us on

Related Stories

Most Read Stories

Click on your DTH Provider to Add TV9 Kannada