ರಾಹುಲ್, ರೋಹಿತ್, ವಿರಾಟ್…ಯಾರ ವಿಕೆಟ್ ಹೆಚ್ಚು ಖುಷಿ ಕೊಡ್ತು? ಅಫ್ರಿದಿ ಉತ್ತರ ಹೀಗಿದೆ

ರಾಹುಲ್, ರೋಹಿತ್, ವಿರಾಟ್...ಯಾರ ವಿಕೆಟ್ ಹೆಚ್ಚು ಖುಷಿ ಕೊಡ್ತು? ಅಫ್ರಿದಿ ಉತ್ತರ ಹೀಗಿದೆ
Shaheen Afridi

Shaheen Afridi: 3ನೇ ಓವರ್ ಮತ್ತೆ ಶಾಹೀನ್ ಅಫ್ರಿದಿ, ಮೊದಲ ಎಸೆತದಲ್ಲೇ ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್. 6 ರನ್​ಗೆ ಟೀಮ್ ಇಂಡಿಯಾದ 2 ಪ್ರಮುಖ ವಿಕೆಟ್ ಉರುಳಿತ್ತು. ಈ ಮೂಲಕ ಶಾಹೀನ್ ಅಫ್ರಿದಿ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು.

TV9kannada Web Team

| Edited By: Zahir PY

Jan 29, 2022 | 4:41 PM

ಅದು 2021, ಅಕ್ಟೋಬರ್ 24…ಇಡೀ ವಿಶ್ವವೇ ಕಾತುರದಿಂದ ಕಾದಿದ್ದ ಪಂದ್ಯಕ್ಕಾಗಿ ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂ ಸಜ್ಜಾಗಿತ್ತು. ಟಾಸ್ ಗೆದ್ದ ಪಾಕ್ ತಂಡದ ನಾಯಕ ಬಾಬರ್ ಆಜಂ ಬೌಲಿಂಗ್ ಆಯ್ದುಕೊಂಡರು. ಟೀಮ್ ಇಂಡಿಯಾ (Team India) ಪರ ರೋಹಿತ್ ಶರ್ಮಾ (Rohit Sharma) ಹಾಗೂ ಕೆಎಲ್ ರಾಹುಲ್ (KL Rahul) ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ಓವರ್ ಎಡಗೈ ವೇಗಿ ಶಾಹೀನ್ ಅಫ್ರಿದಿ (Shaheen Afridi). ಮೊದಲ ಓವರ್​ನ ನಾಲ್ಕನೇ ಎಸೆತದಲ್ಲೇ ಹಿಟ್​ಮ್ಯಾನ್ ರೋಹಿತ್ ಶರ್ಮಾ ಎಲ್​ಬಿಡಬ್ಲ್ಯೂ. 1 ರನ್​ಗೆ ಭಾರತ ತಂಡದ ಮೊದಲ ವಿಕೆಟ್ ಪತನವಾಗಿತ್ತು. 3ನೇ ಓವರ್ ಮತ್ತೆ ಶಾಹೀನ್ ಅಫ್ರಿದಿ, ಮೊದಲ ಎಸೆತದಲ್ಲೇ ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್. 6 ರನ್​ಗೆ ಟೀಮ್ ಇಂಡಿಯಾದ 2 ಪ್ರಮುಖ ವಿಕೆಟ್ ಉರುಳಿತ್ತು. ಈ ಮೂಲಕ ಶಾಹೀನ್ ಅಫ್ರಿದಿ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು.

ಇದಾಗ್ಯೂ ಕ್ರೀಸ್ ಕಚ್ಚಿ ನಿಂತ ವಿರಾಟ್ ಕೊಹ್ಲಿ 57 ರನ್​ ಬಾರಿಸಿದ್ದರು. ಆದರೆ 19ನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ಶಾಹೀನ್ ಅಫ್ರಿದಿ ವಿರಾಟ್ ಕೊಹ್ಲಿಯ ವಿಕೆಟ್ ಕೂಡ ಪಡೆದರು. ಈ ಮೂಲಕ ಭಾರತ ತಂಡದ ಪ್ರಮುಖ 3 ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡರು. ಇದೀಗ ಶಾಹೀನ್ ಅಫ್ರಿದಿ 2021 ರ ಐಸಿಸಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ವೇಳೆ ನೀಡಿದ ಸಂದರ್ಶನವೊಂದರಲ್ಲಿ ಟೀಮ್ ಇಂಡಿಯಾದ ವಿರುದ್ದ ಪಡೆದಿರುವ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಡ್ರೀಮ್ ಹ್ಯಾಟ್ರಿಕ್ ವಿಕೆಟ್​ಗಳಲ್ಲಿ ಯಾರನ್ನು ಔಟ್ ಮಾಡಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಫ್ರಿದಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಹ್ಯಾಟ್ರಿಕ್ ಪಡೆಯಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ನಿಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಪಡೆದ ಪ್ರಮುಖ ವಿಕೆಟ್ ಯಾವುದು ಎಂದು ಕೇಳಲಾಯಿತು? ಇದಕ್ಕೆ ನೇರವಾಗಿ ಉತ್ತರಿಸಿದ ಶಾಹೀನ್ ಅಫ್ರಿದಿ ನನಗೆ ಅತ್ಯಂತ ಖುಷಿ ನೀಡಿದ ವಿಕೆಟ್ ಎಂದರೆ ವಿರಾಟ್ ಕೊಹ್ಲಿ ಅವರದ್ದು. ಹೀಗಾಗಿ ವಿರಾಟ್ ಕೊಹ್ಲಿಯ ವಿಕೆಟ್​ ಇದುವರೆಗಿನ ನನ್ನ ವೃತ್ತಿ ಜೀವನದ ಅತ್ಯಮೂಲ್ಯ ವಿಕೆಟ್ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಶಾಹೀನ್ ಅಫ್ರಿದಿ 36 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 22.2 ಸರಾಸರಿಯಲ್ಲಿ ಒಟ್ಟು 78 ವಿಕೆಟ್ ಪಡೆದಿದ್ದರು. ಈ ಮೂಲಕ ಪ್ರಮುಖ ಪಂದ್ಯಗಳಲ್ಲಿ ಪಾಕ್​ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದರು. ಅದರಲ್ಲೂ ಟಿ20 ವಿಶ್ವಕಪ್​ನಲ್ಲಿ ಮಾರಕ ಬೌಲಿಂಗ್​ ಮೂಲಕ ಶಾಹೀನ್ ಅಫ್ರಿದಿ ವಿಶ್ವಕಪ್​ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(Shaheen Afridi Chooses Star Indian Batters For Dream Hat-trick)

Follow us on

Related Stories

Most Read Stories

Click on your DTH Provider to Add TV9 Kannada