IPL 2022: ಮೆಗಾ ಹರಾಜಿಗೂ ಮುನ್ನವೇ CSK ಅಭಿಮಾನಿಗಳಿಗೆ ಗುಡ್ ನ್ಯೂಸ್
IPL 2022 Mega Auction: ಕೆಲ ಕಾರ್ಯಕ್ರಮದಲ್ಲಿ ಧೋನಿ ಕೂಡ ನಾನು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ವಿದಾಯ ಪಂದ್ಯವಾಡುವುದಾಗಿ ತಿಳಿಸಿದ್ದರು. ಅದರಂತೆ ಈ ಬಾರಿ ಧೋನಿ ಹರಾಜು ಮೊತ್ತ ಇಳಿಸಿರುವ ಕಾರಣ ಈ ಬಾರಿ ಧೋನಿಯ ಕೊನೆಯ ಐಪಿಎಲ್ ಎಂಬ ಸುದ್ದಿಗಳು ಹುಟ್ಟಿಕೊಂಡಿವೆ.
ಐಪಿಎಲ್ ಮೆಗಾ ಹರಾಜಿಗಾಗಿ (IPL 2022) ಈಗಾಗಲೇ ಎಲ್ಲಾ ತಂಡಗಳು ಸಿದ್ದತೆಗಳನ್ನು ಆರಂಭಿಸಿದೆ. ಅತ್ತ ಸಿಎಸ್ಕೆ (CSK ) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಈಗಾಗಲೇ ಚೆನ್ನೈಗೆ ಬಂದಿಳಿದು, ಮೆಗಾ ಹರಾಜಿಗಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈ ಬಾರಿ ಸಿಎಸ್ಕೆ ತಂಡದ ನಾಯಕ ಕೂಡ ಬದಲಾಗಲಿದೆ ಎಂಬ ಸುದ್ದಿಯೊಂದು ಹರಿದಾಡಲಾರಂಭಿಸಿದೆ. ಏಕೆಂದರೆ ಈ ಬಾರಿ ಸಿಎಸ್ಕೆ ತಂಡವು ಅತೀ ಹೆಚ್ಚು ಮೊತ್ತ ನೀಡಿದ್ದು ಧೋನಿಯ ಬದಲಾಗಿ ರವೀಂದ್ರ ಜಡೇಜಾಗೆ. ಜಡೇಜಾ 16 ಕೋಟಿ ಪಡೆದರೆ, ಧೋನಿ 12 ಕೋಟಿಗೆ ರಿಟೈನ್ ಆಗಿದ್ದರು. ಇನ್ನು ಮೊಯೀನ್ ಅಲಿ 8 ಕೋಟಿ ಹಾಗೂ ರುತುರಾಜ್ ಗಾಯಕ್ವಾಡ್ರನ್ನು 6 ಕೋಟಿಗೆ ಸಿಎಸ್ಕೆ ಉಳಿಸಿಕೊಂಡಿದೆ. ಇಲ್ಲಿ ಧೋನಿ ಕಡಿಮೆ ಮೊತ್ತ ಪಡೆದಿರುವ ಕಾರಣ ಈ ಬಾರಿ ಧೋನಿ ಅರ್ಧದಲ್ಲೇ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು.
ಇದಕ್ಕೂ ಮುನ್ನ ಕೆಲ ಕಾರ್ಯಕ್ರಮದಲ್ಲಿ ಧೋನಿ ಕೂಡ ನಾನು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ವಿದಾಯ ಪಂದ್ಯವಾಡುವುದಾಗಿ ತಿಳಿಸಿದ್ದರು. ಅದರಂತೆ ಈ ಬಾರಿ ಧೋನಿ ಹರಾಜು ಮೊತ್ತ ಇಳಿಸಿರುವ ಕಾರಣ ಈ ಬಾರಿ ಧೋನಿಯ ಕೊನೆಯ ಐಪಿಎಲ್ ಎಂಬ ಸುದ್ದಿಗಳು ಹುಟ್ಟಿಕೊಂಡಿವೆ.
ಅದರಂತೆ ಧೋನಿ ಅರ್ಧದಲ್ಲೇ ಐಪಿಎಲ್ ನಿವೃತ್ತಿ ಘೋಷಿಸಲಿದ್ದಾರೆ. ಅವರ ಬದಲಿಗೆ ಸಿಎಸ್ಕೆ ತಂಡವನ್ನು ರವೀಂದ್ರ ಜಡೇಜಾ ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಕೂಡ ಕೆಲ ದಿನಗಳಿಂದ ಹರಿದಾಡುತ್ತಿದೆ. ಆದರೆ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಸ್ಕೆ ಫ್ರಾಂಚೈಸಿ ಮೂಲಗಳು, ಈಗಲೂ ಧೋನಿ ನಮ್ಮ ತಂಡದ ನಾಯಕ. ಹರಾಜಿನ ತಯಾರಿಗೆ ಮೊದಲು ಆಗಮಿಸಿದ್ದೇ ಅವರು. ಅವರ ನಿವೃತ್ತಿ ವಿಚಾರ ಅವರೇ ನಿರ್ಧರಿಸಲಿದ್ದಾರೆ. ಅವರೀಗ ಫಿಟ್ ಅ್ಯಂಡ್ ಫೈನ್ ಆಗಿದ್ದು, ಹೀಗಾಗಿ ಸಿಎಸ್ಕೆ ತಂಡವನ್ನು ಅವರೇ ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ನಾಯಕನ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿರುವ ಸಿಎಸ್ಕೆ ಫ್ರಾಂಚೈಸಿ ಮೂಲಗಳು, ಎಂಎಸ್ ಧೋನಿ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಲಿದ್ದಾರೆ ಎಂಬ ಊಹಾಪೋಹಗಳು ಅಷ್ಟೇ. ಈಗಲೂ ಸಿಎಸ್ಕೆ ತಂಡದ ಮುಖ್ಯ ಅಂಗವಾಗಿರುವ ಧೋನಿ ಅವರು ಐಪಿಎಲ್ ನಡುವೆಯೇ ಏಕೆ ನಿವೃತ್ತರಾಗುತ್ತಾರೆ?. ಇದೆಲ್ಲಾ ಊಹಾಪೋಹಗಳಷ್ಟೇ, ಸದ್ಯ ಧೋನಿ ಅವರ ಗಮನವು ಮೆಗಾ ಹರಾಜಿನ ಮೇಲಿದೆ. ಅವರೇ ಐಪಿಎಲ್ 2022 ರಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಿಎಸ್ಕೆ ತಂಡದ ನಾಯಕ ಬದಲಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಸಿಎಸ್ಕೆ ಫ್ರಾಂಚೈಸಿ ಅಧಿಕಾರಿಯೇ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
(IPL 2022: MS Dhoni to stay as CSK CAPTAIN)