AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಸುಳ್ಳು ಸುದ್ದಿ ನೋಡಿ ದಂಗಾದ ಮುಂಬೈ ಬೌಲರ್..!

IPL 2022: ಈ ಬಾರಿ ಮುಂಬೈ ಈ ಇಂಗ್ಲೆಂಡ್ ವೇಗಿ 1.5 ಕೋಟಿ ರೂಪಾಯಿಗೆ ಖರೀದಿಸಿದೆ. ಮಿಲ್ಸ್‌ಗೆ ಆರಂಭವು ಉತ್ತಮವಾಗಿತ್ತು, ಆದರೆ ನಂತರ ಅವರು ಉತ್ತಮ ಬೌಲಿಂಗ್ ಲಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ.

IPL 2022: ಸುಳ್ಳು ಸುದ್ದಿ ನೋಡಿ ದಂಗಾದ ಮುಂಬೈ ಬೌಲರ್..!
Tymal Mills
TV9 Web
| Updated By: ಝಾಹಿರ್ ಯೂಸುಫ್|

Updated on: Apr 20, 2022 | 7:48 PM

Share

IPL 2022 ರಲ್ಲಿ ಮುಂಬೈ ಇಂಡಿಯನ್ಸ್‌ ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಸೋಲುಗಳಿಗೆ ತಂಡದ ದುರ್ಬಲ ಬೌಲಿಂಗ್ ಪ್ರಮುಖ ಕಾರಣ. ಕಳೆದ ಕೆಲವು ಸೀಸನ್‌ಗಳವರೆಗೆ ಅತ್ಯುತ್ತಮ ಬೌಲಿಂಗ್ ಲೈನಪ್ ಹೊಂದಿದ್ದ ಈ ತಂಡವು ಈ ಬಾರಿ ಪರಿಣಾಮಕಾರಿಯಾಗಿಲ್ಲ. ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ , ಯಾವುದೇ ಬೌಲರ್ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಅದರಲ್ಲೂ ತಂಡದ ವಿದೇಶಿ ಬೌಲರ್‌ಗಳು ಸಂಪೂರ್ಣ ವಿಫಲರಾಗಿದ್ದಾರೆ. ಇದರ ಬೆನ್ನಲ್ಲೇ ತಂಡದಲ್ಲಿರುವ ವೇಗದ ಬೌಲರ್ ಟೈಮಲ್ ಮಿಲ್ಸ್ ಗಾಯದ ಸುದ್ದಿಯೊಂದು ಮುಂಬೈ ಇಂಡಿಯನ್ಸ್​ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಆದರೆ ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ಖುದ್ದು ಇಂಗ್ಲೆಂಡ್ ವೇಗಿ ಮಿಲ್ಸ್ ಇದೆಲ್ಲಾ ಸುಳ್ಳು ಸುದ್ದಿ, ವದಂತಿಯನ್ನು ಹರಡಬೇಡಿ ಎಂದಿರುವುದು ವಿಶೇಷ.

ಮುಂಬೈ ಇಂಡಿಯನ್ಸ್ ಉಳಿದ ಬೌಲರ್‌ಗಳಂತೆ, ಎಡಗೈ ವೇಗಿ ಟೈಮಲ್ ಮಿಲ್ಸ್ ಈ ಸೀಸನ್​ನಲ್ಲಿ ಉತ್ತಮ ಆರಂಭವನ್ನು ಪಡೆದಿಲ್ಲ ಮತ್ತು ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಇದರ ಹೊರತಾಗಿಯೂ ಮುಂಬೈಗೆ ಉಳಿದವರಿಗಿಂತ ಮಿಲ್ಸ್ ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಇದರ ನಡುವೆ ಮಿಲ್ಸ್ ಗಾಯಗೊಂಡಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಆತಂಕಕ್ಕೆ ಕಾರಣವಾಗಿತ್ತು.

ಇತ್ತೀಚೆಗೆ ಟ್ವಿಟರ್ ಬಳಕೆದಾರರು ಮಿಲ್ಸ್ ಅವರ ಫಿಟ್ನೆಸ್ ಬಗ್ಗೆ ಪೋಸ್ಟ್ ಮಾಡಿದ್ದರು. ವರದಿಗಳ ಪ್ರಕಾರ ಟೈಮಲ್ ಮಿಲ್ಸ್ ಗಾಯಗೊಂಡಿದ್ದಾರೆ ಮತ್ತು ಐಪಿಎಲ್ 2022 ರ ಉಳಿದ ಪಂದ್ಯಗಳಿಂದ ಹೊರಗುಳಿಯಬಹುದು ಎಂದು ಬರೆದಿದ್ದರು. ಬುಧವಾರ, ಏಪ್ರಿಲ್ 20 ರಂದು, ಮಿಲ್ಸ್ ಈ ವದಂತಿಗೆ ಪ್ರತಿಕ್ರಿಯಿಸಿದ್ದಾರೆ, ” ನೀವು ಯಾರು ಅಥವಾ ನೀವು ಈ ಮಾಹಿತಿಯನ್ನು ಎಲ್ಲಿ ಪಡೆದುಕೊಂಡಿದ್ದೀರಿ ಎಂದು ನನಗೆ ಸಂಪೂರ್ಣವಾಗಿ ತಿಳಿದಿಲ್ಲ, ಆದರೆ ನೀವು ಸುಳ್ಳು ಹೇಳುತ್ತಿದ್ದೀರಿ. ನಾನು ತುಂಬಾ ಚೆನ್ನಾಗಿದ್ದೇನೆ. ದಯವಿಟ್ಟು ಈ ಪೋಸ್ಟ್ ಅನ್ನು ತೆಗೆದುಹಾಕಿ ಎಂದಿದ್ದಾರೆ. ಈ ಮೂಲಕ ಅವರ ಫಿಟ್ನೆಸ್ ಬಗ್ಗೆ ಎದ್ದಿರುವ ಆತಂಕವನ್ನು ದೂರ ಮಾಡಿದ್ದಾರೆ.

ಈ ಬಾರಿ ಮುಂಬೈ ಈ ಇಂಗ್ಲೆಂಡ್ ವೇಗಿ 1.5 ಕೋಟಿ ರೂಪಾಯಿಗೆ ಖರೀದಿಸಿದೆ. ಮಿಲ್ಸ್‌ಗೆ ಆರಂಭವು ಉತ್ತಮವಾಗಿತ್ತು, ಆದರೆ ನಂತರ ಅವರು ಉತ್ತಮ ಬೌಲಿಂಗ್ ಲಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. 29ರ ಹರೆಯದ ಬೌಲರ್ ಸೀಸನ್​ನಲ್ಲಿ ಮೊದಲ 3 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದರು. ಆದರೆ ನಂತರದ ಎರಡು ಪಂದ್ಯಗಳಲ್ಲಿ ಅವರು ದುಬಾರಿಯಾಗಿದ್ದರು. ಈ ಬಾರಿ ಆಡಿರುವ 5 ಪಂದ್ಯಗಳಲ್ಲಿ ಕೇವಲ 6 ವಿಕೆಟ್‌ಗಳನ್ನು ಪಡೆದಿದ್ದರೂ 11.17 ರ ಎಕಾನಮಿ ರೇಟ್​ನಲ್ಲಿ ರನ್ ನೀಡಿದ್ದಾರೆ.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ