T20 Blast: 63 ರನ್‌, 9 ವಿಕೆಟ್! ಟಿ20 ಬ್ಲಾಸ್ಟ್​ನಲ್ಲಿ ಮಿಂಚಿದ ರಾಜಸ್ಥಾನ್ ರಾಯಲ್ಸ್‌ ಬೌಲರ್

| Updated By: ಪೃಥ್ವಿಶಂಕರ

Updated on: Jun 04, 2022 | 6:47 PM

T20 Blast: ಮೆಕಾಯ್ ಈ ತಂಡಕ್ಕಾಗಿ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ತಮ್ಮ ಹೆಸರಿನಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೆಕಾಯ್ ತಮ್ಮ ಅಮೋಘ ಬೌಲಿಂಗ್‌ನ ಆಧಾರದ ಮೇಲೆ ಸಸೆಕ್ಸ್‌ಗೆ ಎರಡೂ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

T20 Blast: 63 ರನ್‌, 9 ವಿಕೆಟ್! ಟಿ20 ಬ್ಲಾಸ್ಟ್​ನಲ್ಲಿ ಮಿಂಚಿದ ರಾಜಸ್ಥಾನ್ ರಾಯಲ್ಸ್‌ ಬೌಲರ್
ರಾಜಸ್ಥಾನ್ ತಂಡ
Follow us on

ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಫೈನಲ್ ತಲುಪಿತ್ತು. 2008ರ ನಂತರ ರಾಜಸ್ಥಾನ ಐಪಿಎಲ್‌ ಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು. 2008ರಲ್ಲಿ ತಂಡ ಫೈನಲ್ ತಲುಪಿ ಗೆಲುವು ಸಾಧಿಸಿತ್ತು. ಈ ಬಾರಿ ಈ ತಂಡ ಗೆಲ್ಲಲು ಸಾಧ್ಯವಾಗದಿದ್ದರೂ ಬಲಿಷ್ಠ ಆಟ ಪ್ರದರ್ಶಿಸಿತು. ಇದರ ಆಧಾರದ ಮೇಲೆ ರಾಜಸ್ಥಾನ ಫೈನಲ್‌ಗೆ ಪ್ರಯಾಣ ಬೆಳೆಸಿತು. ಇದಕ್ಕೆ ಇಡೀ ತಂಡವೇ ಕೊಡುಗೆ ನೀಡಿತ್ತು. ಅವರಲ್ಲಿ ಒಬ್ಬರು ವೆಸ್ಟ್ ಇಂಡೀಸ್‌ನ ಓಬೆಡ್ ಮೆಕಾಯ್ (Obed McCoy). ಮೆಕಾಯ್ ಐಪಿಎಲ್‌ನಲ್ಲಿ ಮಾರಕ ಬೌಲಿಂಗ್​ನಿಂದ ಮಿಂಚಿದರು ಈಗ ಮೆಕಾಯ್ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಟಿ20 ಬ್ಲಾಸ್ಟ್‌ನಲ್ಲಿ ಭಾಗವಹಿಸುತ್ತಿದ್ದು, ಸಸೆಕ್ಸ್ ಪರ ಆಡುತ್ತಿದ್ದಾರೆ.

ಮೆಕಾಯ್ ಈ ತಂಡಕ್ಕಾಗಿ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ತಮ್ಮ ಹೆಸರಿನಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೆಕಾಯ್ ತಮ್ಮ ಅಮೋಘ ಬೌಲಿಂಗ್‌ನ ಆಧಾರದ ಮೇಲೆ ಸಸೆಕ್ಸ್‌ಗೆ ಎರಡೂ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇದರೊಂದಿಗೆ ಈಗ ಅವರು ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ.

ಮಿಡ್ಲ್‌ಸೆಕ್ಸ್ ಬ್ಯಾಟ್ಸ್‌ಮನ್‌ಗಳ ಕಳಪೆ ಬ್ಯಾಟಿಂಗ್

ಇದನ್ನೂ ಓದಿ
IND vs SA: ಟಿ20 ಸರಣಿಯಲ್ಲಿ ಭಾರತ- ಆಫ್ರಿಕಾ ಆಟಗಾರರು ಸೃಷ್ಟಿಸಿರುವ ಹಲವು ದಾಖಲೆಗಳಿವು..!
Ranji Trophy 2022 Knockouts: ಬೆಂಗಳೂರಿನಲ್ಲಿ ಜೂನ್ 6 ರಿಂದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್! ವೇಳಾಪಟ್ಟಿ ಹೀಗಿದೆ

ಶುಕ್ರವಾರ ರಾತ್ರಿ ಮಿಡ್ಲ್‌ಸೆಕ್ಸ್‌ ಪರ ಆಡಿದ ಪಂದ್ಯದಲ್ಲಿ ಮೆಕಾಯ್ ಮಾರಕ ಬೌಲಿಂಗ್ ಮಾಡಿದರು. ಈ ಪಂದ್ಯದಲ್ಲಿ ಸಸೆಕ್ಸ್ ಐದು ವಿಕೆಟ್‌ಗಳ ಜಯ ಸಾಧಿಸಿತು. ಮಿಡ್ಲ್‌ಸೆಕ್ಸ್ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿದಿತ್ತು. ಈ ತಂಡ ಕೇವಲ 163 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಮೆಕಾಯ್ ನಾಲ್ಕು ವಿಕೆಟ್ ಪಡೆದರು. ಮೆಕಾಯ್ ತಮ್ಮ ಕೋಟಾದ ನಾಲ್ಕು ಓವರ್‌ಗಳಲ್ಲಿ 30 ರನ್ ನೀಡಿದರು. ಈ ಪಂದ್ಯದಲ್ಲಿ ಅವರು ಜಾಕ್ ಡೇವಿಸ್ (14), ಮಾರ್ಟಿನ್ ಆಂಡರ್ಸನ್ (1), ಲ್ಯೂಕ್ ಹಾಲ್ಮನ್ (5), ಟೋಬಿ ರೋಲ್ಯಾಂಡ್ ಜೋನ್ಸ್ (1) ವಿಕೆಟ್ ಪಡೆದರು. ಮಿಡ್ಲ್‌ಸೆಕ್ಸ್ ತಂಡದ ಪರವಾಗಿ ಜೋ ಕ್ರಾಕ್ನೆಲ್ 68 ರನ್ ಗಳಿಸಿದರು. ಸಸೆಕ್ಸ್ ಐದು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು ಮತ್ತು ಡಕ್ವರ್ತ್-ಲೂಯಿಸ್ ನಿಯಮದ ಪ್ರಕಾರ, ಅವರಿಗೆ ವಿಜಯ ದೊರೆಯಿತು.

ಇದನ್ನೂ ಓದಿ:T20 Blast 2022: 5 ಸಿಕ್ಸರ್, 5 ಬೌಂಡರಿ, 5 ವಿಕೆಟ್! ಟಿ20 ಬ್ಲಾಸ್ಟ್​ನಲ್ಲಿ ಅಬ್ಬರಿಸಿದ ಮಾಜಿ ಸಿಎಸ್​ಕೆ ಆಲ್​ರೌಂಡರ್

ಸೋಮರ್ಸೆಟ್ ವಿರುದ್ಧ ಅಬ್ಬರ

ಮೆಕಾಯ್ ಮಿಡ್ಲ್‌ಸೆಕ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೊದಲು ಸೋಮರ್‌ಸೆಟ್ ವಿರುದ್ಧ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ತನ್ನ ತಂಡವನ್ನು ವಿಜಯದತ್ತ ಮುನ್ನಡೆಸಿದರು. ಮೊದಲು ಬ್ಯಾಟ್ ಮಾಡಿದ ಸಸೆಕ್ಸ್ ಏಳು ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತ್ತು. ಅದಕ್ಕೆ ಜೋಶ್ ಫಿಲಿಪ್ 70 ರನ್ ಕೊಡುಗೆ ನೀಡಿದರು. ನಾಯಕ ರವಿ ಬೋಪಾರ 48 ರನ್ ಕೊಡುಗೆ ನೀಡಿದರು. ಹ್ಯಾರಿಸನ್ ವಾರ್ಡ್ ಕೇವಲ ಐದು ಎಸೆತಗಳನ್ನು ಆಡಿ ಔಟಾಗದೆ 23 ರನ್ ಗಳಿಸಿದರು. ಅದರಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಬಲಿಷ್ಠ ಗುರಿಯ ಮುಂದೆ ಸೋಮರ್‌ಸೆಟ್ ತಂಡ 169 ರನ್‌ಗಳಿಗೆ ಆಲೌಟ್ ಆಯಿತು. ಮೆಕಾಯ್ ನಾಲ್ಕು ಓವರ್​ಗಳಲ್ಲಿ 33 ರನ್ ನೀಡಿ ಐದು ವಿಕೆಟ್ ಪಡೆದರು.

Published On - 6:47 pm, Sat, 4 June 22