Ranji Trophy 2022 Knockouts: ಬೆಂಗಳೂರಿನಲ್ಲಿ ಜೂನ್ 6 ರಿಂದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್! ವೇಳಾಪಟ್ಟಿ ಹೀಗಿದೆ
Ranji Trophy 2022 Knockouts: ಬಾರಿ ರಣಜಿ ಟ್ರೋಫಿ ಸೀಸನ್ ಕೊರೊನಾದಿಂದಾಗಿ ತಡವಾಗಿ ಪ್ರಾರಂಭವಾಗಿದೆ. ಬಂಗಾಳ, ಜಾರ್ಖಂಡ್, ಮುಂಬೈ, ಉತ್ತರಾಖಂಡ, ಕರ್ನಾಟಕ, ಉತ್ತರ ಪ್ರದೇಶ, ಪಂಜಾಬ್ ಮತ್ತು ಮಧ್ಯಪ್ರದೇಶ ಈ ಪ್ರತಿಷ್ಠಿತ ಪ್ರಥಮ ದರ್ಜೆ ಟೂರ್ನಿಯ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿವೆ.
ರಣಜಿ ಟ್ರೋಫಿ 2022 (Ranji Trophy 2022)ರ ನಾಕೌಟ್ ಪಂದ್ಯಗಳನ್ನು ಸೋಮವಾರ, ಜೂನ್ 6 ರಿಂದ ಬೆಂಗಳೂರಿನಲ್ಲಿ ಆಡಲಾಗುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ನ 15 ನೇ ಸೀಸನ್ಗಾಗಿ ಈ ದೇಶೀ ಪಂದ್ಯಾವಳಿಯ ನಾಕೌಟ್ ಪಂದ್ಯಗಳನ್ನು ಮಾರ್ಚ್ ಅಂತ್ಯದಿಂದ 2 ತಿಂಗಳವರೆಗೆ ಸ್ಥಗಿತಗೊಳಿಸಲಾಗಿತ್ತು. ಜೂನ್‌ನಲ್ಲಿ ಭಾರತದಲ್ಲಿ ರಣಜಿ ಟ್ರೋಫಿ ನಡೆಯುತ್ತಿರುವುದು ಇದೇ ಮೊದಲು. 2022 ರ ರಣಜಿ ಟ್ರೋಫಿಯ ಲೀಗ್ ಹಂತವನ್ನು IPL 2022 ಕ್ಕಿಂತ ಮೊದಲು ಆಡಲಾಗಿತ್ತು. ಆದರೆ, ಈ ಬಾರಿ ರಣಜಿ ಟ್ರೋಫಿ ಸೀಸನ್ ಕೊರೊನಾದಿಂದಾಗಿ ತಡವಾಗಿ ಪ್ರಾರಂಭವಾಗಿದೆ. ಬಂಗಾಳ, ಜಾರ್ಖಂಡ್, ಮುಂಬೈ, ಉತ್ತರಾಖಂಡ, ಕರ್ನಾಟಕ, ಉತ್ತರ ಪ್ರದೇಶ, ಪಂಜಾಬ್ ಮತ್ತು ಮಧ್ಯಪ್ರದೇಶ ಈ ಪ್ರತಿಷ್ಠಿತ ಪ್ರಥಮ ದರ್ಜೆ ಟೂರ್ನಿಯ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿವೆ.
ಕ್ವಾರ್ಟರ್ ಫೈನಲ್ ಪಂದ್ಯದ ವೇಳಾಪಟ್ಟಿ (ಜೂನ್ 6-10)
– ಕ್ವಾರ್ಟರ್ ಫೈನಲ್ 1: ಬಂಗಾಳ ವಿರುದ್ಧ ಜಾರ್ಖಂಡ್ – ಕ್ವಾರ್ಟರ್ ಫೈನಲ್ 2: ಮುಂಬೈ ವಿರುದ್ಧ ಉತ್ತರಾಖಂಡ – ಕ್ವಾರ್ಟರ್ ಫೈನಲ್ 3: ಕರ್ನಾಟಕ ವಿರುದ್ಧ ಉತ್ತರ ಪ್ರದೇಶ – ಕ್ವಾರ್ಟರ್ ಫೈನಲ್ 4: ಪಂಜಾಬ್ ವಿರುದ್ಧ ಮಧ್ಯಪ್ರದೇಶ
ಇದನ್ನೂ ಓದಿ:Ranji Trophy 2021-22: ರಣಜಿ ಕ್ವಾರ್ಟರ್ ಫೈನಲ್‌ಗೆ 8 ತಂಡ: ನಾಕ್‌ಔಟ್ ಪಂದ್ಯಕ್ಕೆ ಡೇಟ್ ಫಿಕ್ಸ್
ಜೂನ್ 22 ರಂದು ಫೈನಲ್ ಪಂದ್ಯ
ಕ್ವಾರ್ಟರ್ ಫೈನಲ್ 1 (ಬಂಗಾಳ / ಜಾರ್ಖಂಡ್) ವಿಜೇತರು ಮೊದಲ ಸೆಮಿಫೈನಲ್‌ನಲ್ಲಿ ಕ್ವಾರ್ಟರ್ ಫೈನಲ್ 4ರ (ಪಂಜಾಬ್ / ಮಧ್ಯಪ್ರದೇಶ) ವಿಜೇತರನ್ನು ಎದುರಿಸುತ್ತಾರೆ. ಅಂತೆಯೇ, ಎರಡನೇ ಸೆಮಿಫೈನಲ್‌ನಲ್ಲಿ, ಕ್ವಾರ್ಟರ್ ಫೈನಲ್ 2 (ಮುಂಬೈ / ಉತ್ತರಾಖಂಡ) ವಿಜೇತರು ಕ್ವಾರ್ಟರ್ ಫೈನಲ್ 3 (ಕರ್ನಾಟಕ / ಉತ್ತರಾಖಂಡ) ವಿಜೇತರನ್ನು ಎದುರಿಸುತ್ತಾರೆ. ಕ್ವಾರ್ಟರ್ ಫೈನಲ್ ನಂತರ ಸೆಮಿಫೈನಲ್ ಪಂದ್ಯಗಳು ಜೂನ್ 14 ರಿಂದ 18 ರ ನಡುವೆ ನಡೆಯಲಿದ್ದು, ಇದೇ 22 ರಿಂದ 26 ರವರೆಗೆ ಪ್ರಶಸ್ತಿ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬಂಗಾಳ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಮನೋಜ್ ತಿವಾರಿ, ಮೊಹಮ್ಮದ್ ಶಮಿ, ಅನುಸ್ತುಪ್ ಮಜುಂದಾರ್, ಸುದೀಪ್ ಚಟರ್ಜಿ, ಶಹಬಾಜ್ ಅಹ್ಮದ್, ಅಭಿಷೇಕ್ ಕುಮಾರ್ ರಾಮನ್, ಹೃತಿಕ್ ಚಟರ್ಜಿ, ಸಯನ್ ಶೇಖರ್ ಮಂಡಲ್, ಮುಖೇಶ್ ಕುಮಾರ್, ಆಕಾಶ್ ದೀಪ್, ಇಶಾನ್ ಘೋರಾಶ್, ಇಶಾನ್ ಪೊರೆಲ್, ಇಶಾನ್ ಪೊರೆಲ್, ಪ್ರಮಾನ್, ಕರಣ್ ಲಾಲ್, ನೀಲಕಂಠ ದಾಸ್, ಸುದೀಪ್ ಕೆ. ಘರ್ಮಿ, ಅಭಿಷೇಕ್ ಪೊರೆಲ್, ಮೊ. ಕೈಫ್, ಅಂಕಿತ್ ಮಿಶ್ರಾ.
ಮುಂಬೈ: ಪೃಥ್ವಿ ಶಾ (ನಾಯಕ), ಯಶಸ್ವಿ ಜೈಸ್ವಾಲ್, ಭೂಪೇನ್ ಲಾಲ್ವಾನಿ, ಅರ್ಮಾನ್ ಜಾಫರ್, ಸರ್ಫರಾಜ್ ಖಾನ್, ಸುವೇದ್ ಪರ್ಕರ್, ಡ್ರೂ ಗೋಮೆಲ್, ಆದಿತ್ಯ ತಾರೆ, ಹಾರ್ದಿಕ್ ತಮೋರ್, ಅಮನ್ ಖಾನ್, ಸಾಯಿರಾಜ್ ಪಾಟೀಲ್, ಶಮ್ಸ್ ಮುಲಾನಿ, ಧ್ರುಮಿಲ್ ಮಟ್ಕರ್, ತನುಷ್ ಕೋಟ್ಯಾನ್, ಶಶಾ, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ರಾಯಸ್ತಾನ್ ಡಯಾಸ್, ಸಿದ್ಧಾರ್ಥ್ ರಾವುತ್ ಮತ್ತು ಮುಶೀರ್ ಖಾನ್.
ಕರ್ನಾಟಕ: ಮನೀಶ್ ಪಾಂಡೆ (ನಾಯಕ), ಸಮರ್ಥ್ ಆರ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕಲ್, ಕರುಣ್ ನಾಯರ್, ಸಿದ್ಧಾರ್ಥ್ ಕೆವಿ, ನಿಶ್ಚಲ್ ಡಿ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಶರತ್ ಬಿಆರ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಗೌತಮ್ ಕೆ, ಶುಭಾಂಗ್ ಹೆಗ್ಡೆ, ಸುಚಿತ್ ಜೆ, ಕರಿಯಪ್ಪ ಕೇಸಿ, ರೋನಿತ್ ಮೋರೆ, ಕೌಶಿಕ್ ವಿ, ವೈಶಾಕ್ ವಿಜಯಕುಮಾರ್, ವೆಂಕಟೇಶ್ ಎಂ, ವಿದ್ವತ್ ಕಾವೇರಪ್ಪ, ಕಿಶನ್ ಎಸ್ ಬೇಡರೆ.
ಪಂಜಾಬ್, ಜಾರ್ಖಂಡ್, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ತಂಡಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ.
ನೇರ ಪ್ರಸಾರದ ವಿವರ
2022 ರ ರಣಜಿ ಟ್ರೋಫಿಯ ನಾಕೌಟ್ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ನೀವು ಈ ಪಂದ್ಯಗಳನ್ನು ಹಾಟ್‌ಸ್ಟಾರ್‌ನಲ್ಲಿಯೂ ವೀಕ್ಷಿಸಬಹುದು.