Deepak Chahar Wedding: ನಿನ್ನ ಬೆನ್ನು ಹುಷಾರು.. ವಿಶ್ವಕಪ್ ಇದೆ; ಹನಿಮೂನ್‌ಗೆ ಹೊರಟ ದೀಪಕ್ ಕಾಲೆಳೆದ ತಂಗಿ
Deepak Chahar Wedding: ನಿಮ್ಮಿಬ್ಬರ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ. ದೀಪಕ್, ದಯವಿಟ್ಟು ಹನಿಮೂನ್‌ನಲ್ಲಿ ನಿಮ್ಮ ಬೆನ್ನನ್ನು ಜೋಪಾನವಾಗಿ ನೋಡಿಕೊಳ್ಳಿ. ಏಕೆಂದರೆ ಮುಂದೆ ವಿಶ್ವಕಪ್ ಇದೆ ಎಂಬ ಸಲಹೆ ನೀಡಿದ್ದಾಳೆ.
ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)ನ ಸ್ಟಾರ್ ವೇಗಿ ದೀಪಕ್ ಚಹಾರ್ (Deepak Chahar) ತಮ್ಮ ದೀರ್ಘಕಾಲದ ಗೆಳತಿ ಜಯ ಭಾರದ್ವಾಜ್ ಅವರನ್ನು ಜೂನ್ 1 ರಂದು ಆಗ್ರಾದಲ್ಲಿ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಕ್ರಿಕೆಟಿಗರು ದೀಪಕ್-ಜಯಾ ದಂಪತಿಗಳ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ. ಅದೇ ಸಮಯದಲ್ಲಿ, ದೀಪಕ್ ಚಹಾರ್ ಅವರ ಸಹೋದರಿ ಮಾಲ್ತಿ ಚಾಹರ್ (Malta Chahar) ಕೂಡ ತನ್ನ ಅಣ್ಣನ ಮದುವೆಯ ನಂತರ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. ಮದುವೆಯ ನಂತರ ನವದಂಪತಿಗಳು ಹನಿಮೂನ್‌ಗೆ ಹೋಗುವುದು ಸಹಜ. ಹೀಗಾಗಿ ಅಣ್ಣ ದೀಪಕ್ ಚಹಾರ್ ಹನಿಮೂನ್ ಬಗ್ಗೆ ತಂಗಿ ಮಾಲ್ತಿ ತಮಾಷೆಯ ಟ್ವೀಟ್ ಮಾಡಿ ಸಲಹೆಯೊಂದನ್ನು ನೀಡಿದ್ದಾರೆ. ಆದರೆ ಈಗ ಈ ಸಲಹೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹನಿಮೂನ್‌ಗೂ ಮೊದಲು ಅಣ್ಣ ದೀಪಕ್‌ಗೆ ಸಹೋದರಿ ಮಾಲ್ತಿ ನೀಡಿದ ಸಲಹೆ ಏನು?
ಅಣ್ಣನ ವೈವಾಹಿಕ ಜೀವನ ಶುಭವಾಗಿ ಆರಂಭವಾಗಲಿ ಎಂದು ಹಾರೈಸಿದ್ದಲ್ಲದೆ, ಟ್ವೀಟ್ನಲ್ಲಿ ಹನಿಮೂನ್‌ಗೆ ಹೋದಾಗ ಬೆನ್ನಿನ ಬಗ್ಗೆ ಕಾಳಜಿ ವಹಿಸುವಂತೆ ಮಾಲತಿ ಸಲಹೆ ನೀಡಿದ್ದಾರೆ. ಟ್ವಿಟರ್‌ನಲ್ಲಿ, ಮಾಲತಿ ದೀಪಕ್-ಜೈರಾ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದು, ಅವರು ತಮ್ಮ ಶೀರ್ಷಿಕೆಯಲ್ಲಿ, ಈಗ ಈ ಹುಡುಗಿ ನಮ್ಮವಳು. ನಿಮ್ಮಿಬ್ಬರ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ. ದೀಪಕ್, ದಯವಿಟ್ಟು ಹನಿಮೂನ್‌ನಲ್ಲಿ ನಿಮ್ಮ ಬೆನ್ನನ್ನು ಜೋಪಾನವಾಗಿ ನೋಡಿಕೊಳ್ಳಿ. ಏಕೆಂದರೆ ಮುಂದೆ ವಿಶ್ವಕಪ್ ಇದೆ ಎಂಬ ಸಲಹೆ ನೀಡಿದ್ದಾಳೆ.
Ab ladki hui humari….Wish you guys a very happy married life? @deepak_chahar9 please take care of your back during your honeymoon..we have World Cup ahead ?#family #brother #marriage #siblings pic.twitter.com/Hm2unculO7
— Malti Chahar?? (@ChaharMalti) June 3, 2022
ಸ್ಟೇಡಿಯಂನಲ್ಲಿ ಪ್ರೀತಿ ನಿವೇದನೆ
ದೀಪಕ್ ಅವರ ಭಾವಿ ಪತ್ನಿ ಜಯಾ ದೆಹಲಿ ನಿವಾಸಿಯಾಗಿದ್ದು, ವರದಿಗಳ ಪ್ರಕಾರ ಜಯಾ ಅವರು ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸಹೋದರ ಸಿದ್ಧಾರ್ಥ್ ಟಿವಿ ಶೋ ಬಿಗ್ ಬಾಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಜಯಾಗೆ, ಟೀಂ ಇಂಡಿಯಾದ ಪಂದ್ಯ ಮುಗಿದ ನಂತರ ದೀಪಕ್ ಕ್ರೀಡಾಂಗಣದಲ್ಲೇ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ, ದೀಪಕ್ ಸ್ಟ್ಯಾಂಡ್‌ನಲ್ಲಿ ಕುಳಿತ ಜಯ ಅವರ ಬಳಿಗೆ ಹೋಗಿ ಮೊಣಕಾಲು ಮೇಲೆ ಕುಳಿತು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಈ ಪ್ರಸ್ತಾಪಕ್ಕೆ ಜಯಾ ಕೂಡ ಹೌದು ಎಂದು ಉತ್ತರಿಸಿದರು. ಇಡೀ ಜಗತ್ತು ದೀಪಕ್ ಅವರ ಈ ನಿವೇದನೆಯನ್ನು ನೋಡಿ ಅಚ್ಚರಿಗೊಂಡಿತ್ತು.
ಇಂಜುರಿಯಿಂದ ಬಳಲಿದ ದೀಪಕ್
ಈ ವರ್ಷ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆ ದೀಪಕ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ನಂತರ ಅವರು ಸುಮಾರು ಒಂದೂವರೆ ತಿಂಗಳ ಕಾಲ NCA ಯಲ್ಲಿ ಪುನರ್ವಸತಿಯಲ್ಲಿದ್ದು, ಚೇತರಿಸಿಕೊಂಡರು. ನೆಟ್ನಲ್ಲೂ ಬೌಲಿಂಗ್ ಆರಂಭಿಸಿದರು. ಆದರೆ ನಂತರ ಅವರು ಬೆನ್ನುನೋವಿಗೆ ಒಳಗಾದರು. ಇದರಿಂದಾಗಿ ಈ ಬಾರಿಯ ಐಪಿಎಲ್ನಲ್ಲಿ ದೀಪಕ್ ಆಡಲಿಲ್ಲ. ಐಪಿಎಲ್-2022 ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂ.ಗೆ ದೀಪಕ್ ಅವರನ್ನು ಖರೀದಿಸಿತ್ತು. ಆದರೆ ಗಾಯದ ಕಾರಣ ದೀಪಕ್ ಒಂದು ಪಂದ್ಯವನ್ನು ಆಡಲಾಗಲಿಲ್ಲ. ಈ ವರ್ಷದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಇದರಿಂದಾಗಿ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಆರೋಗ್ಯವಂತ ದೀಪಕ್‌ನನ್ನು ನೋಡಲು ಬಯಸುತ್ತದೆ.