KKR IPL 2022 Retention: ಗಿಲ್, ಮಾರ್ಗನ್, ಕಾರ್ತಿಕ್ ಔಟ್? ಶಾರುಖ್ ತಂಡ ಉಳಿಸಿಕೊಳ್ಳುವ ಆಟಗಾರರು ಇವರೇ

KKR IPL 2022 Retention: ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ ಐಪಿಎಲ್ 2021 ಹರಾಜಿನಲ್ಲಿ ರೂ 20 ಲಕ್ಷದ ಮೂಲ ಬೆಲೆಗೆ ಖರೀದಿಸಿತ್ತು. ಇದೀಗ ಅವರನ್ನು ಉಳಿಸಿಕೊಳ್ಳಲು ಕೆಕೆಆರ್ ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಿದೆ.

KKR IPL 2022 Retention: ಗಿಲ್, ಮಾರ್ಗನ್, ಕಾರ್ತಿಕ್ ಔಟ್? ಶಾರುಖ್ ತಂಡ ಉಳಿಸಿಕೊಳ್ಳುವ ಆಟಗಾರರು ಇವರೇ
ಕೆಕೆಆರ್ ತಂಡ
Edited By:

Updated on: Nov 30, 2021 | 3:21 PM

ಎಲ್ಲಾ ಕಣ್ಣುಗಳು IPL 2022 ರ ಹರಾಜಿನ ಮೇಲೆ ಇವೆ. ಇವುಗಳಲ್ಲಿ ಅಭಿಮಾನಿಗಳು, ಆಟಗಾರರು ಮತ್ತು ತಂಡದ ಮಾಲೀಕರು ಹಾಗೂ ತಜ್ಞರು ಸೇರಿದ್ದಾರೆ. ನವೆಂಬರ್ 30 ರ ಹೊತ್ತಿಗೆ ಅಂದರೆ ಇಂದು ರಾತ್ರಿಯ ವೇಳೆಗೆ, ಯಾವ ಆಟಗಾರನು ತಂಡದೊಂದಿಗೆ ಇರುತ್ತಾನೆ ಮತ್ತು ಹರಾಜು ಮಾರುಕಟ್ಟೆಯ ಭಾಗವಾಗಿರುತ್ತಾನೆ ಎಂಬುದು ಸ್ಪಷ್ಟವಾಗುತ್ತದೆ. ಏತನ್ಮಧ್ಯೆ, ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಯಾರನ್ನು ಉಳಿಸಿಕೊಳ್ಳಲ್ಲಿದೆ ಎಂಬುದು ಕುತೂಹಲ ಹುಟ್ಟಿಸಿದೆ. ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವ ಯೋಜನೆಯಲ್ಲಿ ಈ ತಂಡವು ಕಾರ್ಯನಿರ್ವಹಿಸುತ್ತಿದೆ. ಇದರ ಅಡಿಯಲ್ಲಿ ಇಬ್ಬರು ವಿದೇಶಿ ಮತ್ತು ಇಬ್ಬರು ಭಾರತೀಯ ಆಟಗಾರರನ್ನು ಇರಿಸಿಕೊಳ್ಳುವ ಸುದ್ದಿ ಇದೆ. ಇವರಲ್ಲಿ ಇಬ್ಬರು ಸ್ಪಿನ್ನರ್‌ಗಳು ಮತ್ತು ಇಬ್ಬರು ಆಲ್‌ರೌಂಡರ್‌ಗಳು. ಟೈಮ್ಸ್ ಆಫ್ ಇಂಡಿಯಾದ ಸುದ್ದಿ ಪ್ರಕಾರ, ಕೆಕೆಆರ್ ಸುನಿಲ್ ನರೈನ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್ ಮತ್ತು ವರುಣ್ ಚಕ್ರವರ್ತಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ.

ವೆಂಕಟೇಶ್ ಅಯ್ಯರ್ ಅವರ ಹೆಸರು ಅಚ್ಚರಿ ಮೂಡಿಸುತ್ತದೆ. ಏಕೆಂದರೆ ಈ ಆಲ್‌ರೌಂಡರ್‌ನ್ನು ಒಂದು ಋತುವಿನ ಅರ್ಧದಷ್ಟು ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ವೆಂಕಟೇಶ್ ಅಯ್ಯರ್ ಎಡಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಮಧ್ಯಮ ವೇಗಿ. ಅವರು ಐಪಿಎಲ್ 2021 ರ ದ್ವಿತೀಯಾರ್ಧದಲ್ಲಿ ಕೆಕೆಆರ್‌ಗೆ ಓಪನರ್ ಪಾತ್ರವನ್ನು ನಿರ್ವಹಿಸಿದರು ಮತ್ತು ಅನೇಕ ಪ್ರಮುಖ ಇನ್ನಿಂಗ್ಸ್‌ಗಳನ್ನು ಆಡಿದರು. ಇದರೊಂದಿಗೆ ಬೌಲಿಂಗ್ ಮೂಲಕವೂ ಗಮನ ಸೆಳೆದಿದ್ದರು.

ನಂತರ ಈ ಆಟದ ಆಧಾರದ ಮೇಲೆ, ನ್ಯೂಜಿಲೆಂಡ್ ವಿರುದ್ಧದ T20 ಸರಣಿಗೆ ಟೀಮ್ ಇಂಡಿಯಾದಲ್ಲಿ ವೆಂಕಟೇಶ್ ಅಯ್ಯರ್ ಕೂಡ ಆಯ್ಕೆಯಾದರು. ಇದರಲ್ಲಿ ಅವರ ಆಟವೂ ಚೆನ್ನಾಗಿತ್ತು. ವೆಂಕಟೇಶ್ ಅಯ್ಯರ್ ಐಪಿಎಲ್ 2021 ರಲ್ಲಿ 10 ಪಂದ್ಯಗಳಲ್ಲಿ 41.11 ರ ಸರಾಸರಿಯಲ್ಲಿ 370 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ ನಾಲ್ಕು ಅರ್ಧಶತಕಗಳು ಹೊರಬಂದವು. ಅಲ್ಲದೆ ಮೂರು ವಿಕೆಟ್ ಪಡೆದರು.

ಅಯ್ಯರ್ ಮೂಲ ಬೆಲೆ 20 ಲಕ್ಷ
ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ ಐಪಿಎಲ್ 2021 ಹರಾಜಿನಲ್ಲಿ ರೂ 20 ಲಕ್ಷದ ಮೂಲ ಬೆಲೆಗೆ ಖರೀದಿಸಿತ್ತು. ಇದೀಗ ಅವರನ್ನು ಉಳಿಸಿಕೊಳ್ಳಲು ಕೆಕೆಆರ್ ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಿದೆ. ಅಯ್ಯರ್ ಅವರನ್ನು ಉಳಿಸಿಕೊಳ್ಳುವುದು ಎಂದರೆ ಶುಭಮನ್ ಗಿಲ್ ಹರಾಜಿಗೆ ಹೋಗುವುದು ಎಂದರ್ಥ. ಈ ಯುವ ಬ್ಯಾಟ್ಸ್‌ಮನ್‌ನನ್ನು ಕೆಕೆಆರ್‌ನ ಮುಂದಿನ ನಾಯಕ ಎಂದು ಕರೆಯಲಾಗುತ್ತಿತ್ತು. ಆದರೆ ಈಗ ತಂಡವು ಶುಬ್ಮನ್ ಗಿಲ್ ಅವರನ್ನು ಉಳಿಸಿಕೊಳ್ಳುತ್ತಿಲ್ಲ ಎಂದು ತೋರುತ್ತದೆ. ಈ ಆಟಗಾರ ಕಳೆದ ಮೂರು-ನಾಲ್ಕು ವರ್ಷಗಳಿಂದ ಕೆಕೆಆರ್‌ನ ಭಾಗವಾಗಿದ್ದಾರೆ ಮತ್ತು ಆರಂಭಿಕರಾಗಿ ಆಡುತ್ತಿದ್ದಾರೆ. ಅವರ ಆಟವೂ ಚೆನ್ನಾಗಿದೆ. ಒಂದು ವೇಳೆ ಕೆಕೆಆರ್ ಗಿಲ್ ಅವರನ್ನು ಕೈಬಿಟ್ಟರೆ, ಅವರು ಹರಾಜಿನಲ್ಲಿ ಉಳಿದ ಒಂಬತ್ತು ತಂಡಗಳನ್ನು ಎದುರಿಸಬೇಕಾಗುತ್ತದೆ.

ನರೇನ್-ರಸ್ಸೆಲ್‌ ಮೇಲಿನ ವಿಶ್ವಾಸವು ಹಾಗೇ ಉಳಿದಿದೆ
ಉಳಿದಂತೆ ಸುನಿಲ್ ನರೈನ್, ಆಂಡ್ರೆ ರಸೆಲ್ ಅವರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇಬ್ಬರೂ ಆಟಗಾರರು ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ತಂಡಕ್ಕೆ ಕೊಡುಗೆ ನೀಡಿದ್ದಾರೆ. ನರೇನ್ ಅವರ ಮಿಸ್ಟರಿ ಸ್ಪಿನ್ ಕೂಡ ಕೆಕೆಆರ್ ಅನ್ನು ಬಲಿಷ್ಠಗೊಳಿಸುತ್ತದೆ. ರಸೆಲ್ ಇತ್ತೀಚಿನ ದಿನಗಳಲ್ಲಿ ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದಾರೆ ಆದರೆ ಕೆಕೆಆರ್ ಅವರ ಮೇಲೆ ನಂಬಿಕೆ ಇರಿಸುತ್ತಿದೆ. ಅದೇ ಸಮಯದಲ್ಲಿ, ತಂಡವು ಭಾರತೀಯ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನು ಬಿಡುಗಡೆ ಮಾಡುತ್ತಿಲ್ಲ. ಚಕ್ರವರ್ತಿ ಕಳೆದ ಎರಡು ಸೀಸನ್‌ಗಳಲ್ಲಿ ಕೆಕೆಆರ್‌ ಪರ ಉತ್ತಮವಾಗಿ ಆಡಿದ್ದಾರೆ.