AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explained: IPL 2022 ನಿಂದ ಕೆಎಲ್ ರಾಹುಲ್, ರಶೀದ್ ಖಾನ್​ ಬ್ಯಾನ್ ಆಗುವ ಸಾಧ್ಯತೆ..!

KL Rahul, Rashid Khan: ಐಪಿಎಲ್ ಹರಾಜು ನಿಯಮದ ಪ್ರಕಾರ, ಮೆಗಾ ಹರಾಜಿಗೆ ಹೆಸರು ನೀಡುವ ಮೊದಲು ಯಾವುದೇ ಫ್ರಾಂಚೈಸಿ ಆಟಗಾರರನ್ನು ಸಂಪರ್ಕಿಸಬಾರದು ಎಂಬ ನಿಯಮಿದೆ. ಅಷ್ಟೇ ಅಲ್ಲದೆ ಆಟಗಾರರು ಕೂಡ ಯಾವುದೇ ಫ್ರಾಂಚೈಸಿಗಳನ್ನು ಹರಾಜಿನ ವಿಚಾರವಾಗಿ ಸಂಪರ್ಕಿಸಬಾರದು.

Explained: IPL 2022 ನಿಂದ ಕೆಎಲ್ ರಾಹುಲ್, ರಶೀದ್ ಖಾನ್​ ಬ್ಯಾನ್ ಆಗುವ ಸಾಧ್ಯತೆ..!
KL Rahul, Rashid Khan
TV9 Web
| Edited By: |

Updated on: Nov 30, 2021 | 4:06 PM

Share

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15ಗಾಗಿ ( IPL 2022 )ಹಳೆಯ 8 ಫ್ರಾಂಚೈಸಿಗಳು ರಿಟೈನ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ, ಅತ್ತ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್ (KL Rahul) ಹಾಗೂ ರಶೀದ್ ಖಾನ್ (Rashid Khan) ಐಪಿಎಲ್​ನಿಂದ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ. ಈ ಇಬ್ಬರು ಆಟಗಾರರು ತಮ್ಮ ಹಳೆಯ ಫ್ರಾಂಚೈಸಿಗಳ ಪರ ಆಡುವುದಿಲ್ಲ ಎಂದಿರುವುದೇ ಇದೀಗ ಹೊಸ ಸಮಸ್ಯೆಗೆ ಕಾರಣವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ ರಿಟೈನ್ ನಿಯಮದ ಪ್ರಕಾರ ಯಾವುದೇ ಆಟಗಾರ ಫ್ರಾಂಚೈಸಿ ಜೊತೆಗಿನ ಮಾತುಕತೆ ಬಳಿಕ ತಂಡದಿಂದ ಹೊರಹೋಗಬಹುದು. ಅಂದರೆ ಆಟಗಾರರ ಬೇಡಿಕೆಗೆ ಫ್ರಾಂಚೈಸಿ ಒಪ್ಪಿಗೆ ಸೂಚಿಸದಿದ್ದರೆ ತಂಡದಿಂದ ಹೊರಬಂದು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು. ಇಲ್ಲಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಮಾಡಿರುವುದು ಅದನ್ನೇ. ಆದರೆ ಅದಕ್ಕೂ ಮುನ್ನ ಈ ಇಬ್ಬರು ಹೊಸ ಫ್ರಾಂಚೈಸಿ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹಳೆಯ ಫ್ರಾಂಚೈಸಿಗಳು ಆರೋಪಿಸಿದೆ.

ಈ ಬಾರಿ ಪಂಜಾಬ್ ಕಿಂಗ್ಸ್​ ತಂಡವು ಕೆಎಲ್ ರಾಹುಲ್ ಅವರನ್ನು ರಿಟೈನ್ ಮಾಡಿಕೊಳ್ಳಲು ಬಯಸಿತ್ತು. ಆದರೆ ಕೆಎಲ್ ರಾಹುಲ್ ಪಂಜಾಬ್ ತಂಡದಿಂದ ಮುಂದುವರೆಯಲು ಬಯಸಿರಲಿಲ್ಲ. ಒಂದು ವೇಳೆ ಪಂಜಾಬ್ ತಂಡದಲ್ಲಿ ರಾಹುಲ್ ಉಳಿದುಕೊಂಡಿದ್ದರೆ ಅವರಿಗೆ 16 ಕೋಟಿ ರೂ. ನೀಡುವುದಾಗಿ ಆಫರ್ ನೀಡಲಾಗಿತ್ತು. ಇದಾಗ್ಯೂ ರಾಹುಲ್ ಹರಾಜಿನಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದರು.

ಇತ್ತ ಸನ್​ರೈಸರ್ಸ್​ ಹೈದರಾಬಾದ್ ತಂಡವು ಕೇನ್ ವಿಲಿಯಮ್ಸನ್ ಹಾಗೂ ರಶೀದ್ ಖಾನ್ ಅವರನ್ನು ರಿಟೈನ್ ಮಾಡಿಕೊಳ್ಳಲು ಮುಂದಾಗಿತ್ತು. ಇಲ್ಲಿ ಎಸ್​ಆರ್​ಹೆಚ್​ ಮೊದಲ ಆಯ್ಕೆಯಾಗಿ ವಿಲಿಯಮ್ಸನ್ ಅವರನ್ನು ಉಳಿಸಿಕೊಳ್ಳಲು ಬಯಸಿದೆ. ಹಾಗೆಯೇ ರಶೀದ್ ಖಾನ್​ ಅವರನ್ನು 2ನೇ ಆಯ್ಕೆಯನ್ನಾಗಿಸಲು ನಿರ್ಧರಿಸಿದೆ. ಅಂದರೆ ಇಲ್ಲಿ ಮೊದಲ ಆಯ್ಕೆಯಾಗಿ ಉಳಿಸಿಕೊಂಡ ಆಟಗಾರನಿಗೆ 16 ಕೋಟಿ ರೂ. ಹಾಗೂ 2ನೇ ಆಟಗಾರನಾಗಿ ಉಳಿಸಿಕೊಂಡ ಆಟಗಾರನಿಗೆ 12 ಕೋಟಿ ನೀಡಲಾಗುತ್ತದೆ. ಆದರೆ ರಶೀದ್ ಖಾನ್ ಮೊದಲ ಆಯ್ಕೆಯಾಗಿ ಉಳಿಸಿಕೊಳ್ಳಬೇಕೆಂದು ಎಸ್​ಆರ್​ಹೆಚ್​ ಫ್ರಾಂಚೈಸಿಗೆ ಬೇಡಿಕೆಯಿಟ್ಟಿದ್ದಾರೆ. ಅತ್ತ ಕೇನ್ ವಿಲಿಯಮ್ಸನ್ ಕೂಡ ದೊಡ್ಡ ಮೊತ್ತವನ್ನು ಡಿಮ್ಯಾಂಡ್ ಮಾಡಿದ್ದಾರೆ. ಒಂದು ವೇಳೆ 16 ಕೋಟಿ ಸಿಗದಿದ್ದರೆ, ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಾಗಿ ರಶೀದ್ ಖಾನ್ ತಿಳಿಸಿದ್ದಾರಂತೆ.

ಈ ಇಬ್ಬರಿಗೂ ಹಳೆಯ ಫ್ರಾಂಚೈಸಿ ಈ ಹಿಂದಿಗಿಂತ ಹೆಚ್ಚಿನ ಮೊತ್ತವನ್ನು ಆಫರ್ ಮಾಡಿದರೂ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿರುವುದು ಇದೀಗ ಅನುಮಾನಕ್ಕೆ ಕಾರಣವಾಗಿದೆ. ಅದರಲ್ಲೂ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿರುವ ಲಕ್ನೋ ಫ್ರಾಂಚೈಸಿ ಈ ಇಬ್ಬರು ಆಟಗಾರರನ್ನು ಈ ಮೊದಲೇ ಸಂಪರ್ಕಿಸಿದೆ ಎಂದು ವರದಿಯಾಗಿದೆ. ಇಬ್ಬರಿಗೂ ಹೊಸ ಫ್ರಾಂಚೈಸಿ ದೊಡ್ಡ ಮೊತ್ತದ ಆಫರ್ ನೀಡಿದ್ದು, ಹೀಗಾಗಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ ಎಂದು ಪಂಜಾಬ್ ಕಿಂಗ್ಸ್​ ಹಾಗೂ ಎಸ್​ಆರ್​ಹೆಚ್ ಫ್ರಾಂಚೈಸಿ ಬಿಸಿಸಿಐಗೆ ದೂರು ನೀಡಿದೆ.

ಇಲ್ಲಿ ಹೊಸ ಫ್ರಾಂಚೈಸಿಗೆ ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಇದೆ. ಅಂದರೆ ಮೆಗಾ ಹರಾಜಿಗೆ ಹೆಸರು ನೋಂದಣಿ ಮಾಡಿಕೊಂಡ ಆಟಗಾರರ ಪಟ್ಟಿಯಿಂದ ಮೂವರನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಇಬ್ಬರು ಭಾರತೀಯ ಆಟಗಾರರು+ಒಬ್ಬ ವಿದೇಶಿ ಆಟಗಾರನನ್ನು ಆಯ್ಕೆ ಮಾಡಬಹುದು. ಅದರಂತೆ ಲಕ್ನೋ ಫ್ರಾಂಚೈಸಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಅವರಿಗೆ ಮೆಗಾ ಹರಾಜಿನಲ್ಲಿ ಹೆಸರು ನೀಡಲು ತಿಳಿಸಿ, ನೇರವಾಗಿ ಆಯ್ಕೆ ಮಾಡಲು ಪ್ಲ್ಯಾನ್ ರೂಪಿಸಿದೆ ಎಂದು ಆರೋಪಿಸಲಾಗಿದೆ.

ಆದರೆ ಐಪಿಎಲ್ ಹರಾಜು ನಿಯಮದ ಪ್ರಕಾರ, ಮೆಗಾ ಹರಾಜಿಗೆ ಹೆಸರು ನೀಡುವ ಮೊದಲು ಯಾವುದೇ ಫ್ರಾಂಚೈಸಿ ಆಟಗಾರರನ್ನು ಸಂಪರ್ಕಿಸಬಾರದು ಎಂಬ ನಿಯಮಿದೆ. ಅಷ್ಟೇ ಅಲ್ಲದೆ ಆಟಗಾರರು ಕೂಡ ಯಾವುದೇ ಫ್ರಾಂಚೈಸಿಗಳನ್ನು ಹರಾಜಿನ ವಿಚಾರವಾಗಿ ಸಂಪರ್ಕಿಸಬಾರದು. ಹಾಗೆಯೇ ಆಟಗಾರರು ಯಾವುದೇ ಫ್ರಾಂಚೈಸಿಗಳಿಗೆ ಬೇಡಿಕೆ ಇಡುವುದು ಹಾಗೂ ಫ್ರಾಂಚೈಸಿಗಳು ಆಟಗಾರರಿಗೆ ಆಮೀಷ ಒಡ್ಡುವುದು ಕೂಡ ಅಪರಾಧ. ಇದೀಗ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ನಡೆ ಇಂತಹ ಆಮೀಷಕ್ಕೊಳಗಾಗಿರುವ ಅನುಮಾನವನ್ನು ಹುಟ್ಟುಹಾಕಿದೆ. ಹೀಗಾಗಿ ತಮ್ಮ ಆಟಗಾರರನ್ನು ಮೊದಲೇ ಲಕ್ನೋ ಫ್ರಾಂಚೈಸಿ ಸೆಳೆದಿದೆ ಎಂದು ಪಂಜಾಬ್ ಕಿಂಗ್ಸ್ ಹಾಗೂ ಎಸ್​ಆರ್​ಹೆಚ್​ ಫ್ರಾಂಚೈಸಿ ಬಿಸಿಸಿಐಗೆ ದೂರು ನೀಡಿದೆ.

ಎರಡು ಫ್ರಾಂಚೈಸಿಗಳ ದೂರನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ವೇಳೆ ಲಕ್ನೋ ಫ್ರಾಂಚೈಸಿ ಜೊತೆ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಮೊದಲೇ ಮಾತುಕತೆ ನಡೆಸಿದ್ದರೆ, ಅವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಅಂದರೆ ಈ ಇಬ್ಬರು ಆಟಗಾರರು ಐಪಿಎಲ್​ನಿಂದ ಒಂದು ವರ್ಷದವರೆಗೆ ನಿಷೇಧಕ್ಕೊಳಗಾಬಹುದು. ಏಕೆಂದರೆ ಈ ಹಿಂದೆ ಇಂತಹದೊಂದು ತಪ್ಪನ್ನು ರವೀಂದ್ರ ಜಡೇಜಾ ಮಾಡಿದ್ದರು. 2010 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಜಡೇಜಾ ಹರಾಜಿಗೂ ಮುನ್ನ ಬೇರೊಂದು ಫ್ರಾಂಚೈಸಿಯನ್ನು ಸಂಪರ್ಕಿಸಿದ್ದರು. ಅಷ್ಟೇ ಅಲ್ಲದೆ ಹೆಚ್ಚಿನ ಮೊತ್ತ ನೀಡಿದರೆ ನಿಮ್ಮ ತಂಡದ ಪರ ಆಡುವುದಾಗಿ ತಿಳಿಸಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರವೀಂದ್ರ ಜಡೇಜಾ ಅವರನ್ನು 2010 ರ ಐಪಿಎಲ್​ನಿಂದ ಬ್ಯಾನ್ ಮಾಡಲಾಗಿತ್ತು.

ಇದೀಗ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಅಂತಹದ್ದೇ ತಪ್ಪು ಮಾಡಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಂದು ವೇಳೆ ಇಬ್ಬರು ಲಕ್ನೋ ಫ್ರಾಂಚೈಸಿ ಜೊತೆ ಮೊದಲೇ ಡೀಲ್ ಮಾಡಿಕೊಳ್ಳಲು ಮುಂದಾಗಿರುವುದು ಕಂಡು ಬಂದರೆ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಐಪಿಎಲ್ 2022 ರಲ್ಲಿ ನಿಷೇಧಕ್ಕೊಳಗಾಗಲಿದ್ದಾರೆ. ಸದ್ಯ ಈ ಪ್ರಕರಣ ಬಿಸಿಸಿಐ ಮೆಟ್ಟಿಲಲ್ಲಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ ಈ 10 ಸ್ಟಾರ್ ಆಟಗಾರರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ..!

ಇದನ್ನೂ ಓದಿ: IPL 2022 Retained Players: ಐಪಿಎಲ್ ರಿಟೈನ್ ಪಟ್ಟಿಯಲ್ಲಿರುವ 18 ಆಟಗಾರರ ಹೆಸರು ಬಹಿರಂಗ..!

ಇದನ್ನೂ ಓದಿ: IPL 2022: ಐಪಿಎಲ್​ನ 5 ತಂಡಗಳಿಗೆ ಹೊಸ ನಾಯಕ..?

(KL Rahul, Rashid Khan Could Get Banned from IPL 2022)

ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್