ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022 Schedule) ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 10 ತಂಡಗಳ ಈ ಟೂರ್ನಿ ಮಾರ್ಚ್ 26ರಿಂದ ಆರಂಭವಾಗಲಿದ್ದು, ಈ ಬಾರಿ 5-5 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ತಂಡಗಳು IPL (IPL 2022 Groups) ಮೊದಲ ಗುಂಪಿನಲ್ಲಿವೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಎರಡನೇ ಗುಂಪಿನಲ್ಲಿವೆ.ದೊಡ್ಡ ವಿಷಯವೆಂದರೆ ಈ ಬಾರಿಯ ಐಪಿಎಲ್ ಪಂದ್ಯಗಳು (IPL 2022) ಮುಂಬೈ ಮತ್ತು ಪುಣೆಯ 4 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ವಾಂಖೆಡೆ ಮತ್ತು ಡಿವೈ ಪಾಟೀಲ್‌ನಲ್ಲಿ ಗರಿಷ್ಠ 20-20 ಪಂದ್ಯಗಳು ನಡೆಯಲಿವೆ. ಬ್ರಬೋರ್ನ್‌ನಲ್ಲಿ 15 ಪಂದ್ಯಗಳು ನಡೆಯಲಿವೆ. ಪುಣೆ ಸ್ಟೇಡಿಯಂನಲ್ಲಿ 15 ಪಂದ್ಯಗಳು ನಡೆಯಲಿವೆ.
ಐಪಿಎಲ್ 2022 ರಲ್ಲಿ 10 ತಂಡಗಳಿದ್ದು ಆದ್ದರಿಂದ ಪಂದ್ಯಾವಳಿಯ ಸ್ವರೂಪವೂ ಬದಲಾಗಿದೆ. ಸ್ವರೂಪದ ಪ್ರಕಾರ, ಲೀಗ್ ಹಂತದಲ್ಲಿ, ಒಂದು ತಂಡವು ನಾಲ್ಕು ಎದುರಾಳಿಗಳ ವಿರುದ್ಧ ತಲಾ 1 ಲೀಗ್ ಪಂದ್ಯವನ್ನು ಮಾತ್ರ ಆಡುತ್ತದೆ. ಅದೇ ಸಮಯದಲ್ಲಿ, 2 ಲೀಗ್ ಪಂದ್ಯಗಳಲ್ಲಿ ಇತರ 5 ಎದುರಾಳಿಗಳನ್ನು ಎದುರಿಸುತ್ತಾರೆ. ಲೀಗ್ ಹಂತದಲ್ಲಿ ಪ್ರತಿ ತಂಡವು ಒಟ್ಟು 14 ಪಂದ್ಯಗಳನ್ನು ಆಡಲಿದೆ. ಯಾವ ತಂಡವು ಯಾವ ಎದುರಾಳಿಯ ವಿರುದ್ಧ ಎಷ್ಟು ಪಂದ್ಯಗಳನ್ನು ಆಡಲಿದೆ ಎಂಬ ವಿವರ ಇಲ್ಲಿದೆ.
ಮುಂಬೈ ಇಂಡಿಯನ್ಸ್ ಯಾರೊಂದಿಗೆ ಎಷ್ಟು ಲೀಗ್ ಪಂದ್ಯಗಳನ್ನು ಆಡುತ್ತದೆ?
ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಅದೇ ಸಮಯದಲ್ಲಿ, ಇದು ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್‌ನೊಂದಿಗೆ ತಲಾ 1 ಲೀಗ್ ಪಂದ್ಯವನ್ನು ಆಡತ್ತದೆ.
ಕೋಲ್ಕತ್ತಾ ನೈಟ್ ರೈಡರ್ಸ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಒಂದೇ ಒಂದು ಪಂದ್ಯವನ್ನು ಆಡಲಿದೆ.
ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್‌ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ರಾಜಸ್ಥಾನ ತಂಡ ತಲಾ 1 ಪಂದ್ಯದಲ್ಲಿ ಚೆನ್ನೈ, ಹೈದರಾಬಾದ್, ಪಂಜಾಬ್ ಮತ್ತು ಗುಜರಾತ್ ತಂಡಗಳನ್ನು ಎದುರಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಹಂತದ ವೇಳಾಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ, ರಾಜಸ್ಥಾನ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ತಲಾ 2 ಪಂದ್ಯವನ್ನು ಆಡಲಿದೆ. ಆದರೆ ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಗುಜರಾತ್ ವಿರುದ್ಧ ತಲಾ 1 ಪಂದ್ಯಗಳನ್ನು ಆಡಲಿದೆ.
ಲಕ್ನೋ ಸೂಪರ್‌ಜೈಂಟ್ಸ್
ಲಕ್ನೋ ಸೂಪರ್‌ಜೈಂಟ್ಸ್ ತಂಡವು ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ, ದೆಹಲಿ ಮತ್ತು ಗುಜರಾತ್ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಗುಜರಾತ್ ವಿರುದ್ಧ ತಲಾ 1 ಪಂದ್ಯವನ್ನು ಆಡಲಿದೆ.
ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಆದರೆ ಕೋಲ್ಕತ್ತಾ, ರಾಜಸ್ಥಾನ, ದೆಹಲಿ ಮತ್ತು ಲಕ್ನೋ ಜೊತೆ ತಲಾ 1 ಪಂದ್ಯವನ್ನು ಆಡಲಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್
ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಂಬೈ, ರಾಜಸ್ಥಾನ, ದೆಹಲಿ, ಲಕ್ನೋ ಜೊತೆ ತಲಾ 1 ಪಂದ್ಯವನ್ನು ಆಡಲಿದೆ. ಅದೇ ಸಮಯದಲ್ಲಿ, ಇದು ಕೋಲ್ಕತ್ತಾ, ಚೆನ್ನೈ, ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್‌ನೊಂದಿಗೆ ತಲಾ 2 ಲೀಗ್ ಪಂದ್ಯಗಳನ್ನು ಆಡಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಬೆಂಗಳೂರು ತಂಡ ಮುಂಬೈ, ಕೋಲ್ಕತ್ತಾ, ದೆಹಲಿ, ಲಕ್ನೋ ಜೊತೆಗೆ ತಲಾ 1 ಪಂದ್ಯವನ್ನು ಆಡಲಿದೆ. ರಾಜಸ್ಥಾನ, ಚೆನ್ನೈ, ಹೈದರಾಬಾದ್, ಪಂಜಾಬ್ ಮತ್ತು ಗುಜರಾತ್ ಜೊತೆಗೆ 2 ಪಂದ್ಯಗಳನ್ನು ಆಡಲಿದೆ.
ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ತಂಡ ದೆಹಲಿ, ಚೆನ್ನೈ ಸೂಪರ್ ಕಿಂಗ್ಸ್, ಹೈದರಾಬಾದ್, ಆರ್‌ಸಿಬಿ ಮತ್ತು ಗುಜರಾತ್ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಇದು ಮುಂಬೈ, ಕೋಲ್ಕತ್ತಾ, ರಾಜಸ್ಥಾನ ಮತ್ತು ಲಕ್ನೋ ವಿರುದ್ಧ ತಲಾ 1 ಪಂದ್ಯಗಳನ್ನು ಹೊಂದಿರುತ್ತದೆ.
ಗುಜರಾತ್ ಟೈಟಾನ್ಸ್
ಗುಜರಾತ್ ಟೈಟಾನ್ಸ್ ತಂಡವು ಮುಂಬೈ, ಕೆಕೆಆರ್, ರಾಜಸ್ಥಾನ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಲಾ 1 ಪಂದ್ಯವನ್ನು ಆಡಲಿದೆ. ಲಕ್ನೋ, ಚೆನ್ನೈ, ಹೈದರಾಬಾದ್, ಪಂಜಾಬ್ ವಿರುದ್ಧ ತಲಾ 1 ಪಂದ್ಯವನ್ನು ಹೊಂದಿದ್ದಾರೆ.
ಇದನ್ನೂ ಓದಿ:IPL 2022: ಐಪಿಎಲ್ 2022 ರ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಪಂದ್ಯಾವಳಿಯ ಪೂರ್ಣ ವಿವರ ಇಲ್ಲಿದೆ
Published On - 4:31 pm, Fri, 25 February 22