Shikhar Dhawan: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಶಿಖರ್ ಧವನ್

| Updated By: ಝಾಹಿರ್ ಯೂಸುಫ್

Updated on: Apr 14, 2022 | 4:14 PM

IPL 2022: ಸದ್ಯ ಶಿಖರ್ ಧವನ್ ಐಪಿಎಲ್‌ನ 197 ಪಂದ್ಯಗಳಲ್ಲಿ 35ರ ಸರಾಸರಿಯಲ್ಲಿ 5981 ರನ್ ಗಳಿಸಿದ್ದಾರೆ. ಈ ವೇಳೆ 2 ಶತಕ ಮತ್ತು 45 ಅರ್ಧ ಶತಕಗಳು ಮೂಡಿ ಬಂದಿವೆ.

Shikhar Dhawan: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಶಿಖರ್ ಧವನ್
shikhar dhawan
Follow us on

ಪಂಜಾಬ್ ಕಿಂಗ್ಸ್​ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಐಪಿಎಲ್​ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಬುಧವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಧವನ್ 5 ಫೋರ್ ಹಾಗೂ 3 ಸಿಕ್ಸ್​ನೊಂದಿಗೆ 50 ಎಸೆತಗಳಲ್ಲಿ 70 ರನ್ ಬಾರಿಸಿದ್ದರು. ಈ ಮೂಲಕ ಐಪಿಎಲ್​ನ 45ನೇ ಅರ್ಧಶತಕ ಪೂರೈಸಿದ್ದರು. ವಿಶೇಷ ಎಂದರೆ ಈ ಫೋರ್​-ಸಿಕ್ಸ್​ಗಳೊಂದಿಗೆ ಐಪಿಎಲ್​ನಲ್ಲಿ 800 ಬೌಂಡರಿ ಬಾರಿಸಿದ ಏಕೈಕ ಆಟಗಾರನಾಗಿ ಶಿಖರ್ ಧವನ್ ಹೊರಹೊಮ್ಮಿದ್ದಾರೆ. ಅಂದರೆ ಇದುವರೆಗೆ ಯಾವುದೇ ಬ್ಯಾಟ್ಸ್​​ಮನ್ ಐಪಿಎಲ್​ನಲ್ಲಿ 800 ಬೌಂಡರಿ ಬಾರಿಸಿಲ್ಲ. ಇದೀಗ 673 ಫೋರ್ ಹಾಗೂ 129 ಸಿಕ್ಸ್​ಗಳನ್ನು ಬಾರಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಧವನ್ 800 ಬೌಂಡರಿ ಪೂರೈಸಿ ಹೊಸ ದಾಖಲೆ ನಿರ್ಮಿಸಿದ್ದಾರೆ .

ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಇದುವರೆಗೆ 766 ಬೌಂಡರಿಗಳನ್ನು ಬಾರಿಸಿದ್ದಾರೆ. ಹಾಗೆಯೇ ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್ ಇದ್ದು, ಗೇಲ್ ಇದುವರೆಗೆ 761 ಬೌಂಡರಿಗಳನ್ನು ಸಿಡಿಸಿದ್ದಾರೆ. ಮತ್ತೊಂದೆಡೆ ಐಪಿಎಲ್​ನಲ್ಲೂ ಅತೀ ಹೆಚ್ಚು ಫೋರ್ ಬಾರಿಸಿದ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದೆ. ಧವನ್ 673 ಫೋರ್ ಬಾರಿಸುವ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಫೋರ್ ಬಾರಿಸಿದ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಬೇರೆ ಯಾವುದೇ ಬ್ಯಾಟ್ಸ್​ಮನ್ ಐಪಿಎಲ್​ನಲ್ಲಿ 600 ಫೋರ್​ಗಳನ್ನು ಬಾರಿಸಿಲ್ಲ ಎಂಬುದು ಮತ್ತೊಂದು ವಿಶೇಷ.

ಅಷ್ಟೃ ಅಲ್ಲದೆ ಶಿಖರ್ ಧವನ್ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂಬೈ ವಿರುದ್ದ 27 ಇನ್ನಿಂಗ್ಸ್‌ಗಳಲ್ಲಿ 871 ರನ್ ಗಳಿಸಿದ್ದಾರೆ. ಈ ವೇಳೆ 6 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇವರನ್ನು ಬಿಟ್ಟರೆ ಬೇರಾವ ಆಟಗಾರನೂ ಮುಂಬೈ ವಿರುದ್ದ 850 ರನ್‌ಗಳ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಸುರೇಶ್ ರೈನಾ ಮುಂಬೈ ವಿರುದ್ಧ 824 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ವಿಶೇಷ ಎಂದರೆ ಈ ಇಬ್ಬರು ಎಡಗೈ ಬ್ಯಾಟ್ಸ್​ಮನ್​ಗಳನ್ನು ಬಿಟ್ಟರೆ ಬೇರೆ ಯಾರೂ ಕೂಡ ಮುಂಬೈ ಇಂಡಿಯನ್ಸ್​ ವಿರುದ್ದ 800 ರನ್​ಗಳಿಸಿಲ್ಲ.

ಸದ್ಯ ಶಿಖರ್ ಧವನ್ ಐಪಿಎಲ್‌ನ 197 ಪಂದ್ಯಗಳಲ್ಲಿ 35ರ ಸರಾಸರಿಯಲ್ಲಿ 5981 ರನ್ ಗಳಿಸಿದ್ದಾರೆ. ಈ ವೇಳೆ 2 ಶತಕ ಮತ್ತು 45 ಅರ್ಧ ಶತಕಗಳು ಮೂಡಿ ಬಂದಿವೆ. ಇನ್ನು 19 ರನ್​ಗಳಿಸಿದರೆ ಐಪಿಎಲ್​ನಲ್ಲಿ 6 ಸಾವಿರ ರನ್ ಪೂರೈಸಿದ 2ನೇ ಬ್ಯಾಟ್ಸ್​ಮನ್ ಎನಿಸಿಕೊಳ್ಳಲಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ 6390 ರನ್​ ಕಲೆಹಾಕಿರುವ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

 

ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?