IPL 2022: ಬದಲಾದ ನಿಯಮ: ಒಂದೇ ಗ್ರೂಪ್ನ 4 ತಂಡಗಳು ಪ್ಲೇಆಫ್ ಪ್ರವೇಶಿಸಿದರೂ ಅಚ್ಚರಿಯಿಲ್ಲ..!
IPL 2022: 2011 ರಲ್ಲೂ ಇದೇ ಮಾದರಿಯಲ್ಲಿ ಐಪಿಎಲ್ ನಡೆಸಲಾಗಿತ್ತು. ವಿಶೇಷ ಎಂದರೆ ಇಲ್ಲಿ ಪಾಯಿಂಟ್ ಲೆಕ್ಕಚಾರಗಳ ಮೂಲಕ ಅಗ್ರ ನಾಲ್ಕು ತಂಡಗಳನ್ನು ನಿರ್ಧರಿಸುವುದರಿಂದ ಪ್ಲೇಆಫ್ಗೆ ಒಂದೇ ಗ್ರೂಪ್ನ ತಂಡಗಳೇ ಬಂದರೂ ಅಚ್ಚರಿಪಡಬೇಕಿಲ್ಲ
ಐಪಿಎಲ್ ಫಾರ್ಮಾಟ್ (IPL 2022) ಬದಲಾಗಿದೆ. 10 ತಂಡಗಳನ್ನು 2 ಗ್ರೂಪ್ಗಳಾಗಿ ವಿಂಗಡಿಸಲಾಗಿದೆ. ಅದರಂತೆ ಈ ಬಾರಿ ಪ್ರತಿ ತಂಡಗಳು ತನ್ನದೇ ಗ್ರೂಪ್ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಹಾಗೆಯೇ ಮತ್ತೊಂದು ಗ್ರೂಪ್ನಲ್ಲಿರುವ 4 ತಂಡಗಳ ವಿರುದ್ದ ತಲಾ ಒಂದು ಪಂದ್ಯ ಹಾಗೂ ಒಂದು ತಂಡದ ವಿರುದ್ದ 2 ಪಂದ್ಯಗಳನ್ನು ಆಡಲಿದೆ. ಈ ಮೂಲಕ ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನು ಆಡಲಿದೆ. ಇದಾಗ್ಯೂ ಈ ಬಾರಿ ಕೂಡ ಈ ಹಿಂದಿನಂತೆ ಪಾಯಿಂಟ್ ಟೇಬಲ್ ಇರಲಿದೆ. ಅಂದರೆ 10 ತಂಡಗಳ ಪಾಯಿಂಟ್ ಟೇಬಲ್. ಇದರಲ್ಲಿ ಅಗ್ರಸ್ಥಾನ ಪಡೆಯುವ ನಾಲ್ಕು ತಂಡಗಳು ಪ್ಲೇಆಫ್ ಪ್ರವೇಶಿಸಲಿದೆ.
2011 ರಲ್ಲೂ ಇದೇ ಮಾದರಿಯಲ್ಲಿ ಐಪಿಎಲ್ ನಡೆಸಲಾಗಿತ್ತು. ವಿಶೇಷ ಎಂದರೆ ಇಲ್ಲಿ ಪಾಯಿಂಟ್ ಲೆಕ್ಕಚಾರಗಳ ಮೂಲಕ ಅಗ್ರ ನಾಲ್ಕು ತಂಡಗಳನ್ನು ನಿರ್ಧರಿಸುವುದರಿಂದ ಪ್ಲೇಆಫ್ಗೆ ಒಂದೇ ಗ್ರೂಪ್ನ ತಂಡಗಳೇ ಬಂದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ 2011 ರಲ್ಲಿ ಒಟ್ಟು 10 ತಂಡಗಳು ಐಪಿಎಲ್ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿತ್ತು. ಈ ವೇಳೆ…
ಗ್ರೂಪ್- A ನಲ್ಲಿ ಡೆಕ್ಕನ್ ಚಾರ್ಜರ್ಸ್ ಡೆಲ್ಲಿ ಡೇರ್ ಡೆವಿಲ್ಸ್ ಕಿಂಗ್ಸ್ ಇಲೆವೆನ್ ಪಂಜಾಬ್ ಮುಂಬೈ ಇಂಡಿಯನ್ಸ್ ಪುಣೆ ವಾರಿಯರ್ಸ್ ಇಂಡಿಯಾ ತಂಡಗಳಿದ್ದವು.
ಗ್ರೂಪ್- B ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ಕೊಚ್ಚಿ ಟಸ್ಕರ್ಸ್ ಕೇರಳ ಕೋಲ್ಕತ್ತಾ ನೈಟ್ ರೈಡರ್ಸ್ ರಾಜಸ್ಥಾನ್ ರಾಯಲ್ಸ್ ತಂಡಗಳಿದ್ದವು.
ಆದರೆ ಅಂತಿಮವಾಗಿ ಟಾಪ್ 10 ಪಾಯಿಂಟ್ ಟೇಬಲ್ನಲ್ಲಿ ಆರ್ಸಿಬಿ ತಂಡವು 14 ಪಂದ್ಯಗಳಲ್ಲಿ 9 ಜಯ ಸಾಧಿಸಿ ಅಗ್ರಸ್ಥಾನ ಪಡೆದುಕೊಂಡಿತ್ತು. ಹಾಗೆಯೇ ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ತೃತೀಯ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡಗಳಿದ್ದವು. ಇನ್ನು ನಾಲ್ಕನೇ ಸ್ಥಾನವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಲಂಕರಿಸಿತು. ಈ ಮೂಲಕ ಆರ್ಸಿಬಿ, ಸಿಎಸ್ಕೆ, ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ಪ್ಲೇ ಆಫ್ ಪ್ರವೇಶಿಸಿತ್ತು.
ವಿಶೇಷ ಎಂದರೆ ಪ್ಲೇ ಆಫ್ ಆಡಿದ ನಾಲ್ಕು ತಂಡಗಳ ಪೈಕಿ ಮೂರು ತಂಡಗಳು ಗ್ರೂಪ್-ಬಿ ನಿಂದ ಆಯ್ಕೆಯಾಗಿದ್ದವು. ಅಂದರೆ ಆರ್ಸಿಬಿ, ಸಿಎಸ್ಕೆ, ಕೆಕೆಆರ್ ಒಂದೇ ಗ್ರೂಪ್ನಲ್ಲಿದ್ದರೂ ಪ್ಲೇಆಫ್ಗೆ ಎಂಟ್ರಿ ಕೊಟ್ಟಿತ್ತು. ಇನ್ನು ಗ್ರೂಪ್-ಎ ನಿಂದ ಪ್ಲೇಆಫ್ ಪ್ರವೇಶಿಸಿದ ಏಕೈಕ ತಂಡವೆಂದರೆ ಮುಂಬೈ ಇಂಡಿಯನ್ಸ್ ಮಾತ್ರ.
ಇಲ್ಲಿ ಟೂರ್ನಿ ರೌಂಡ್ ರಾಬಿನ್ ಫಾರ್ಮಾಟ್ ಮೂಲಕ ನಡೆಯುವುದರಿಂದ ಪ್ರತಿ ತಂಡಗಳು 5 ತಂಡಗಳ ವಿರುದ್ದ 2 ಪಂದ್ಯಗಳನ್ನು ಆಡಲಿದೆ. ಹಾಗೆಯೇ 4 ತಂಡಗಳ ವಿರುದ್ದ ಒಂದೊಂದು ಪಂದ್ಯಗಳನ್ನು ಆಡಲಾಗುತ್ತದೆ. ಅಂದರೆ 9 ತಂಡಗಳ ವಿರುದ್ದ ಒಂದೊಂದು ಪಂದ್ಯ ಹಾಗೂ ಅದರಲ್ಲಿ 5 ತಂಡಗಳ ವಿರುದ್ದ 2ನೇ ಬಾರಿ ಸೆಣಸಲಿದೆ. ಇದರಿಂದ ಪಾಯಿಂಟ್ ಟೇಬಲ್ನಲ್ಲಿ ಆಗಾಗ್ಗೆ ಬದಲಾವಣೆ ಕಂಡು ಬರಲಿದೆ. ಹೀಗಾಗಿ ಲೀಗ್ ಹಂತದ ಮುಕ್ತಾಯದ ವೇಳೆಗೆ ಒಂದೇ ಗ್ರೂಪ್ನ ನಾಲ್ಕು ತಂಡಗಳಿಗೂ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಇದಕ್ಕೆ ಉತ್ತಮ ಉದಾಹರಣೆ 2011 ರಲ್ಲಿ ಗ್ರೂಪ್-ಬಿನಲ್ಲಿದ್ದ ಆರ್ಸಿಬಿ, ಸಿಎಸ್ಕೆ, ಕೆಕೆಆರ್ ಪ್ಲೇಆಫ್ಗೆ ಎಂಟ್ರಿ ಕೊಟ್ಟಿರುವುದು. ಒಟ್ಟಿನಲ್ಲಿ ಹೊಸ ಮಾದರಿಯಲ್ಲಿ ಈ ಬಾರಿ ಟೂರ್ನಿ ನಡೆಯುತ್ತಿದ್ದು, ಹೀಗಾಗಿ ಈ ಹಿಂದಿನ ತಂಡಗಳ ಬಲಿಷ್ಠತೆಯ ಲೆಕ್ಕಚಾರಗಳು ಕೂಡ ತಲೆಕೆಳಗಾದರೂ ಅಚ್ಚರಿಪಡಬೇಕಿಲ್ಲ.
IPL 2022 ಗ್ರೂಪ್ಗಳು:
ಗ್ರೂಪ್- A ತಂಡಗಳು:
ಮುಂಬೈ ಇಂಡಿಯನ್ಸ್
ಕೊಲ್ಕತ್ತಾ ನೈಟ್ ರೈಡರ್ಸ್
ರಾಜಸ್ಥಾನ್ ರಾಯಲ್ಸ್
ಡೆಲ್ಲಿ ಕ್ಯಾಪಿಟಲ್ಸ್
ಲಕ್ನೋ ಸೂಪರ್ ಜೈಂಟ್ಸ್
ಗ್ರೂಪ್- B ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಪಂಜಾಬ್ ಕಿಂಗ್ಸ್
ಸನ್ರೈಸರ್ಸ್ ಹೈದರಾಬಾದ್
ಗುಜರಾತ್ ಟೈಟನ್ಸ್
ಇದನ್ನೂ ಓದಿ: IPL 2022 format explained: 2 ಗುಂಪು, 70 ಪಂದ್ಯಗಳು: ಹೇಗಿರಲಿದೆ IPL 2022 ಟೂರ್ನಿ
ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ
ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!