IPL 2022: KKR ಗೆ ಎಂಟ್ರಿ ಕೊಡುತ್ತಿದ್ದಂತೆ ದಾಖಲೆ ಬರೆದ ಮಾಜಿ RCB ವೇಗಿ

| Updated By: ಝಾಹಿರ್ ಯೂಸುಫ್

Updated on: Mar 28, 2022 | 6:57 PM

IPL 2022: ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಶೇನ್ ವ್ಯಾಟ್ಸನ್ (16), ಆಂಡ್ರೆ ರಸೆಲ್ (11) ಮತ್ತು ಜಾಕ್ವೆಸ್ ಕಾಲಿಸ್ (10) ಸ್ಥಾನ ಪಡೆದಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಉಮೇಶ್ ಯಾದವ್ ಮಿಂಚುವ ಸೂಚನೆ ನೀಡಿದ್ದಾರೆ.

IPL 2022: KKR ಗೆ ಎಂಟ್ರಿ ಕೊಡುತ್ತಿದ್ದಂತೆ ದಾಖಲೆ ಬರೆದ ಮಾಜಿ RCB ವೇಗಿ
Umesh Yadav
Follow us on

ಐಪಿಎಲ್ 2022 (IPL 2022) ಅಬ್ಬರ ಶುರುವಾಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಶುಭಾರಂಭ ಮಾಡಿದೆ. ಕೆಕೆಆರ್​ ತಂಡದ ಈ ಗೆಲುವಿನ ರೂವಾರಿ ಉಮೇಶ್ ಯಾದವ್. ಆರ್​ಸಿಬಿ ತಂಡದಿಂದ ಹೊರಬಿದ್ದ ಬಳಿಕ ಐಪಿಎಲ್​ ಕೆರಿಯರ್ ಮುಗಿಯಿತು ಎನ್ನಲಾಗಿದ್ದ ಉಮೇಶ್ ಯಾದವ್, ಮೊದಲ ಪಂದ್ಯದಲ್ಲೇ ಮಿಂಚುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ. ಸಿಎಸ್​ಕೆ ವಿರುದ್ದದ ಪಂದ್ಯದ ಮೊದಲ ಓವರ್‌ನಲ್ಲಿಯೇ ರುತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿ ಮಿಂಚಿದರು. ಅಷ್ಟೇ ಅಲ್ಲದೆ 4 ಓವರ್​ ಬೌಲಿಂಗ್ ಮಾಡಿ ನೀಡಿದ್ದು ಕೇವಲ 20 ರನ್​ ಮಾತ್ರ. ಅಲ್ಲದೆ 2 ವಿಕೆಟ್ ಉರುಳಿಸುವ ಮೂಲಕ ಸಿಎಸ್​ಕೆ ತಂಡವನ್ನು ಆರಂಭದಲ್ಲೇ ನಿಯಂತ್ರಿಸಿದ್ದರು.

ಈ ಭರ್ಜರಿ ಬೌಲಿಂಗ್ ಪ್ರದರ್ಶನದಿಂದಾಗಿ ಸಿಎಸ್​ಕೆ ತಂಡವು CSK ತಂಡವು ಕೇವಲ 131 ರನ್​ಗಳಿಸಲಷ್ಟೇ ಶಕ್ತರಾದರು. ಅಷ್ಟೇ ಅಲ್ಲದೆ ಈ ಸುಲಭ ಗುರಿ ಬೆನ್ನತ್ತಿದ ಕೆಕೆಆರ್ 6 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿತು. ವಿಶೇಷ ಎಂದರೆ ಕೇವಲ 2 ವಿಕೆಟ್ ಪಡೆದಿದ್ದರೂ, ಅತ್ಯುತ್ತಮ ದಾಳಿ ಸಂಘಟಿಸಿದ ಉಮೇಶ್ ಯಾದವ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದರು. ಇದರೊಂದಿಗೆ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವೇಗದ ಬೌಲರ್ ಎಂಬ ದಾಖಲೆಯನ್ನು ಉಮೇಶ್ ಯಾದವ್ ಬರೆದಿದ್ದಾರೆ.

ಉಮೇಶ್ ಯಾದವ್ ಐಪಿಎಲ್​ನಲ್ಲಿ ಇದುವರೆಗೆ 9 ಬಾರಿ ಪಂದ್ಯಶ್ರೇಷ್ಠ ಪಡೆದಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಗೆಲುವಿನ ರೂವಾರಿ ಎನಿಸಿಕೊಂಡು ಅತ್ಯಧಿಕ ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ವೇಗದ ಬೌಲರ್ ಎಂಬ ದಾಖಲೆಯನ್ನು ಉಮೇಶ್ ಯಾದವ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಐಪಿಎಲ್​ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ದಾಖಲೆ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದೆ.

ಎಬಿಡಿ 25 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ನಂತರದ ಸ್ಥಾನದಲ್ಲಿ ಕ್ರಿಸ್ ಗೇಲ್ (22) ಇದ್ದು, ರೋಹಿತ್ ಶರ್ಮಾ (18) ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಶೇನ್ ವ್ಯಾಟ್ಸನ್ (16), ಆಂಡ್ರೆ ರಸೆಲ್ (11) ಮತ್ತು ಜಾಕ್ವೆಸ್ ಕಾಲಿಸ್ (10) ಸ್ಥಾನ ಪಡೆದಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಉಮೇಶ್ ಯಾದವ್ ಮಿಂಚುವ ಸೂಚನೆ ನೀಡಿದ್ದಾರೆ. ಈ ಮೂಲಕ ಕಾಲಿಸ್ ಹಾಗೂ ರಸೆಲ್ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು