IPL 2022: ಆರ್​ಸಿಬಿ- ಸಿಎಸ್​ಕೆ ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?

| Updated By: shivaprasad.hs

Updated on: Apr 13, 2022 | 9:01 AM

IPL 2022 Points Table | Purple Cap | Orange Cap: ಆರ್​ಸಿಬಿ ವಿರುದ್ಧ ಸಿಎಸ್​ಕೆ ಜಯದ ಮೂಲಕ ಐಪಿಎಲ್ 2022ರ ಪಾಯಿಂಟ್ಸ್ ಪಟ್ಟಿಯಲ್ಲಿ ಏನೆಲ್ಲಾ ಬದಲಾವಣೆಯಾಗಿದೆ? ಚೆನ್ನೈ ಹಾಗೂ ಬೆಂಗಳೂರು ಎಷ್ಟನೇ ಸ್ಥಾನದಲ್ಲಿವೆ? ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ? ಇಲ್ಲಿದೆ ನೋಡಿ.

IPL 2022: ಆರ್​ಸಿಬಿ- ಸಿಎಸ್​ಕೆ ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?
ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ, ರಾಬಿನ್ ಉತ್ತಪ್ಪ ಬ್ಯಾಟಿಂಗ್ ವೈಖರಿ
Follow us on

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 22ನೇ ಪಂದ್ಯದಲ್ಲಿ ಆರ್​ಸಿಬಿ- ಸಿಎಸ್​ಕೆ (RCB vs CSK) ತಂಡಗಳು ಸೆಣಸಿದ್ದವು. ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಸಾಹಸದಿಂದ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 23 ರನ್​ಗಳ ಜಯ ಗಳಿಸಿದೆ. ಈ ಮೂಲಕ ಐಪಿಎಲ್ 2022ರ ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆದಿದೆ. ಈ ಐಪಿಎಲ್​ನ (IPL 2022) ಟ್ರೆಂಡ್​ನಂತೆ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡಿತ್ತು. ಆದರೆ ಇಬ್ಬನಿಯ ಸಮಸ್ಯೆ ಕಾಡದ ಕಾರಣ ಸಿಎಸ್​ಕೆ ಸ್ಪಿನ್ನರ್​ಗಳ ಮೋಡಿಗೆ ಆರ್​ಸಿಬಿ ಬ್ಯಾಟರ್​ಗಳು ತತ್ತರಿಸಿದರು. 20 ಓವರ್​ಗಳಲ್ಲಿ 216 ರನ್​ ಪೇರಿಸಿದ್ದ ಸಿಎಸ್​ಕೆಗೆ ಉತ್ತರವಾಗಿ ಆರ್​ಸಿಬಿ 9 ವಿಕೆಟ್ ನಷ್ಟಕ್ಕೆ 193 ರನ್​ ಗಳಿಸಲಷ್ಟೇ ಶಕ್ತವಾಯಿತು. ಕಪ್ತಾನನಾಗಿ ಮೊದಲ ಜಯ ಕಂಡ ರವೀಂದ್ರ ಜಡೇಜಾ, ಬೌಲಿಂಗ್ ಮೂಲಕ ತಂಡದ ಜಯಕ್ಕೆ ಕೊಡುಗೆ ನೀಡಿದರು. ಪಂದ್ಯದಲ್ಲಿ ಮಹೀಶ್ ತೀಕ್ಷಣ ಕೂಡ 4 ವಿಕೆಟ್ ಮೂಲಕ ಮಿಂಚಿದರು. ಈ ಜಯದ ಮೂಲಕ ಐಪಿಎಲ್ 2022ರ ಪಾಯಿಂಟ್ಸ್ ಪಟ್ಟಿಯಲ್ಲಿ (IPL 2022 Points table) ಏನೆಲ್ಲಾ ಬದಲಾವಣೆಯಾಗಿದೆ? ಚೆನ್ನೈ ಹಾಗೂ ಆರ್​ಸಿಬಿ ಎಷ್ಟನೇ ಸ್ಥಾನದಲ್ಲಿವೆ? ಆರೆಂಜ್ ಕ್ಯಾಪ್ (Orange Cap), ಪರ್ಪಲ್ ಕ್ಯಾಪ್ (Purple Cap) ಯಾರ ಬಳಿ ಇದೆ? ಇಲ್ಲಿದೆ ನೋಡಿ.

ಮೊದಲ ಜಯದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ 9 ನೇ ಸ್ಥಾನಕ್ಕೇರಿದೆ. 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಇನ್ನಷ್ಟೇ ಖಾತೆ ತೆರಯಬೇಕಿದ್ದು, 10 ನೇ ಸ್ಥಾನದಲ್ಲಿದೆ. ಚೆನ್ನೈ ವಿರುದ್ಧದ ಪಂದ್ಯದ ನಂತರ ಆರ್​ಸಿಬಿ 6 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಆರ್​ಸಿಬಿ ನೆಟ್​ ರನ್​ರೇಟ್ 0.006 ಇದೆ. ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ತಲಾ 4 ಅಂಕಗಳ ಮೂಲಕ ಕ್ರಮವಾಗಿ 6, 7, 8ನೇ ಸ್ಥಾನದಲ್ಲಿವೆ.

ಮೊದಲ ನಾಲ್ಕು ಸ್ಥಾನದಲ್ಲಿ ಯಾವೆಲ್ಲಾ ತಂಡಗಳಿವೆ?

ಮೊದಲ 5 ಸ್ಥಾನದಲ್ಲಿರುವ ತಂಡಗಳೆಲ್ಲವೂ ತಲಾ 6 ಅಂಕಗಳನ್ನು ಹೊಂದಿವೆ. ಅದರಲ್ಲಿ ಉತ್ತಮ ನೆಟ್ ರನ್​ರೇಟ್ ಹೊಂದಿರುವ ರಾಜಸ್ಥಾನ್ ರಾಯಲ್ಸ್ ಮೊದಲ ಸ್ಥಾನ ಕಾಯ್ದುಕೊಂಡಿದೆ. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ 0.951 ನೆಟ್​ ರನ್​ರೇಟ್​ ಹೊಂದಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ 0.446 ನೆಟ್​ ರನ್​ರೇಟ್​ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಕೆ.ಎಲ್.ರಾಹುಲ್ ಕಪ್ತಾನನಾಗಿರುವ ಲಕ್ನೋ ಸೂಪರ್ ಜೈಂಟ್ಸ್ 0.174 ನೆಟ್ ರನ್​ರೇಟ್ ಹೊಂದಿದ್ದು 3ನೇ ಸ್ಥಾನದಲ್ಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ 0.097 ನೆಟ್​ ರನ್ ರೇಟ್​ನೊಂದಿಗೆ 4ನೇ ಸ್ಥಾನದಲ್ಲಿದೆ.

ಆರ್​ಸಿಬಿ- ಸಿಎಸ್​ಕೆ ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್

ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

ಜೋಸ್ ಬಟ್ಲರ್ 218 ರನ್​ಗಳೊಂದಿಗೆ ಆರೆಂಜ್ ಕ್ಯಾಪ್ ಒಡೆಯರಾಗಿದ್ದಾರೆ. ಶಿವಂ ದುಬೆ 207 ರನ್​, 194 ರನ್​ಗಳೊಂದಿಗೆ ರಾಬಿನ್ ಉತ್ತಪ್ಪ ನಂತರದ ಸ್ಥಾನದಲ್ಲಿದ್ದಾರೆ. ಯಜುವೇಂದ್ರ ಚಾಹಲ್ 11 ವಿಕೆಟ್​ಗಳೊಂದಿಗೆ ಪರ್ಪಲ್ ಕ್ಯಾಪ್ ಹೊಂದಿದ್ದಾರೆ. ಉಮೇಶ್ ಯಾದವ್, ಕುಲದೀಪ್ ಯಾದವ್ ಹಾಗೂ ವನಿಂದು ಹಸರಂಗ 10 ವಿಕಟ್​ಗಳನ್ನು ಪಡೆದು ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: CSK Vs RCB: ಸಿಎಸ್​ಕೆ ವಿರುದ್ಧ ರಾಯಲ್​ ಚಾಲೆಂಜರ್ಸ್​ಗೆ 23 ರನ್​ಗಳ ಸೋಲು; ಸ್ಟಾರ್​ಗಳೇ ತುಂಬಿರುವ ಆರ್​ಸಿಬಿ ಎಡವಿದ್ದೆಲ್ಲಿ?

IPL 2022: ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಅರ್ಜುನ ರಣತುಂಗಾ ಐಪಿಎಲ್​ ಬಿಡಿ ಎಂದಿದ್ದೇಕೆ?