MI Vs PBKS: ಜಯದ ಖಾತೆ ತೆರೆಯಲಿದೆಯೇ ಮುಂಬೈ? ರೋಹಿತ್, ಮಯಾಂಕ್ ಬಳಗದಲ್ಲಿ ಇಂದು ಯಾರೆಲ್ಲಾ ಕಣಕ್ಕಿಳಿಯಬಹುದು?
IPL 2022 | Rohit Sharma | Mayank Agarwal: ಐಪಿಎಲ್ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ‘ಐಪಿಎಲ್ 2022’ರಲ್ಲಿ ಇನ್ನಷ್ಟೇ ಗೆಲುವಿನ ಖಾತೆ ತೆರಯಬೇಕಿದೆ. ಪುಣೆಯಲ್ಲಿ ಇಂದು (ಬುಧವಾರ) ನಡೆಯಲಿರುವ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನೇತೃತ್ವದ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಮುಂಬೈ ಎದುರಿಸಲಿದೆ.
ಐಪಿಎಲ್ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ‘ಐಪಿಎಲ್ 2022’ರಲ್ಲಿ (IPL 2022) ಇನ್ನಷ್ಟೇ ಗೆಲುವಿನ ಖಾತೆ ತೆರಯಬೇಕಿದೆ. ಪುಣೆಯಲ್ಲಿ ಇಂದು (ಬುಧವಾರ) ನಡೆಯಲಿರುವ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನೇತೃತ್ವದ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಮುಂಬೈ ಎದುರಿಸಲಿದೆ. ಈ ಹಿಂದೆ 2015ರಲ್ಲಿ ಮುಂಬೈ ಇಂಥದ್ದೇ ಸೋಲಿನ ಸುಳಿಯಲ್ಲಿದ್ದಾಗ ಎದ್ದು ಬಂದಿತ್ತು. ನಂತರ ನಡೆದ 10 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, ನಂತರ ಐಪಿಎಲ್ ಟ್ರೋಫಿಯನ್ನೂ ಮುಡಿಗೇರಿಸಿಕೊಂಡಿತ್ತು. ಈ ವರ್ಷವೂ ಇಂಥದ್ದೇ ಮ್ಯಾಜಿಕ್ ನಿರೀಕ್ಷೆಯಲ್ಲಿ ಮುಂಬೈ ಅಭಿಮಾನಿಗಳಿದ್ದಾರೆ. ಮುಂಬೈ ತನ್ನ ಕೊನೆಯ ಪಂದ್ಯವನ್ನು ಆರ್ಸಿಬಿ ವಿರುದ್ಧ ಆಡಿತ್ತು. ಅದರಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿತ್ತು. ಆದರೆ ಈ ಪ್ರಯತ್ನ ಕೈಕೊಟ್ಟಿತ್ತು. ಹೀಗಾಗಿ ಇಂದು ಕೀರಾನ್ ಪೊಲಾರ್ಡ್ ಜತೆಗೆ ರಿಲೆ ಮೆರೆಡಿತ್ ಮತ್ತು ಫ್ಯಾಬಿಯನ್ ಅಲೆನ್ ಇಬ್ಬರೂ ಆಡುವ ಸಂಭವವಿದೆ. ಜತೆಗೆ ಡೆವಾಲ್ಡ್ ಬ್ರೇವಿಸ್ ಬದಲು ಟಿಮ್ ಡೇವಿಡ್ ಮತ್ತೆ ಸ್ಥಾನ ಪಡೆದರೂ ಅಚ್ಚರಿಯಿಲ್ಲ.
ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಇಶಾನ್ ಕಿಶನ್, ಡೆವಾಲ್ಡ್ ಬ್ರೇವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೈರನ್ ಪೋಲಾರ್ಡ್, ಫೇಬಿಯನ್ ಅಲೆನ್, ಮುರುಗನ್ ಅಶ್ವಿನ್, ಜಯದೇವ್ ಉನದ್ಕತ್, ರಿಲೆ ಮೆರೆಡಿತ್
ಪಂಜಾಬ್ ತಂಡ ಹೇಗಿರಲಿದೆ?
ಇತ್ತ ಪಂಜಾಬ್ ಪ್ರಬಲ ತಂಡವಾಗಿ ಗುರುತಿಸಿಕೊಳ್ಳುತ್ತಿದ್ದ, ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಹೊಂದಿದೆ. ಆದರೆ ನಾಯಕ ಮಯಾಂಕ್ ಬ್ಯಾಟಿಂಗ್ ಮೂಲಕ ಸದ್ದು ಮಾಡಬೇಕಿದೆ. ಹಾಗೆಯೇ ಬೌಲಿಂಗ್ ವಿಭಾಗ ಇನ್ನಷ್ಟು ಗಮನಾರ್ಹ ಪ್ರದರ್ಶನ ನೀಡಬೇಕಿದೆ.
ಸಂಭಾವ್ಯ ಪಂಜಾಬ್ ತಂಡ ಇಂತಿದೆ: ಮಯಾಂಕ್ ಅಗರ್ವಾಲ್ (ಸಿ), ಶಿಖರ್ ಧವನ್, ಜಾನಿ ಬೇರ್‌ಸ್ಟೋ/ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಓಡಿಯನ್ ಸ್ಮಿತ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ವೈಭವ್ ಅರೋರಾ
ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಪಂಜಾಬ್ ಕಿಂಗ್ಸ್ ಎರಡು ಜಯದೊಂದಿಗೆ 4 ಅಂಕಗಳ ಮೂಲಕ 7ನೇ ಸ್ಥಾನದಲ್ಲಿದೆ. ಆಡಿದ ನಾಲ್ಕೂ ಪಂದ್ಯಗಳನ್ನು ಸೋತಿರುವ ಮುಂಬೈ ಕೊನೆಯ ಅಂದರೆ 10ನೇ ಸ್ಥಾನದಲ್ಲಿದೆ.
ಇದನ್ನೂ ಓದಿ:
ನಾಯಕತ್ವದ ಜವಾಬ್ದಾರಿ ಭಾರತೀಯ ಬ್ಯಾಟರ್ಗಳ ಅಬ್ಬರದ ಬ್ಯಾಟಿಂಗ್ಗೆ ಹೊಡೆತ ನೀಡಿತೇ? ಹೌದು ಎನ್ನುತ್ತಿವೆ ಅಂಕಿಅಂಶಗಳು!
IPL 2022: ಆರ್ಸಿಬಿ- ಸಿಎಸ್ಕೆ ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?
Published On - 10:11 am, Wed, 13 April 22