ನಾಯಕತ್ವದ ಜವಾಬ್ದಾರಿ ಭಾರತೀಯ ಬ್ಯಾಟರ್​ಗಳ ಅಬ್ಬರದ ಬ್ಯಾಟಿಂಗ್​ಗೆ ಹೊಡೆತ ನೀಡಿತೇ? ಹೌದು ಎನ್ನುತ್ತಿವೆ ಅಂಕಿಅಂಶಗಳು!

IPL 2022: ನಾಯಕತ್ವದ ಹೊಣೆಗಾರಿಕೆ ಭಾರತೀಯ ಬ್ಯಾಟರ್​ಗಳ ಹೊಡೆಬಡಿ ಆಟಕ್ಕೆ ದೊಡ್ಡ ಹೊಡೆತ ನೀಡಿದೆಯೇ? ಹೌದು ಎನ್ನುತ್ತಿವೆ ಅಂಕಿಅಂಶಗಳು. ಪ್ರಸ್ತುತ ನಾಯಕ ಸ್ಥಾನದಲ್ಲಿರುವ ಕೆಎಲ್ ರಾಹುಲ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ ಹೊಡೆಬಡಿ ಆಟಕ್ಕೆ ಹೆಸರಾದವರು. ಆದರೆ ಈ ಐಪಿಎಲ್​ನಲ್ಲಿ ಯಾರ ಬ್ಯಾಟ್​ನಿಂದಲೂ ಅಂತಹ ಇನ್ನಿಂಗ್ಸ್ ಬರುತ್ತಿಲ್ಲ. ರನ್ ಗಳಿಸಿದರೂ ಸ್ಟ್ರೈಕ್ ರೇಟ್ ಮೊದಲಿಗಿಂತ ಕಡಿಮೆಯಾಗಿದೆ.

TV9 Web
| Updated By: shivaprasad.hs

Updated on:Apr 13, 2022 | 9:49 AM

ಐಪಿಎಲ್ 2022 ರಲ್ಲಿ ಒಂದು ವಿಭಿನ್ನ ಟ್ರೆಂಡ್ ಕಂಡುಬರುತ್ತಿದೆ. ರನ್​ಗಳ ಸುರಿಮಳೆಗೈದು ಭರ್ಜರಿ ರನ್​ಗಳಿಸುತ್ತಿದ್ದ ಆಟಗಾರರು ನಾಯಕರಾದ ತಕ್ಷಣ ಮಂಕಾಗಿದ್ದಾರೆ. ಜತೆಗೆ ಅವರ ಸ್ಟ್ರೈಕ್ ರೇಟ್ ಕೂಡ ಕಡಿಮೆಯಾಗುತ್ತಿದೆ. IPL 2022 ರಲ್ಲಿ ನಾಯಕರಾಗಿರುವ ಭಾರತದ ಬಹುತೇಕ ಆಟಗಾರರಲ್ಲಿ ಈ ಪ್ರವೃತ್ತಿ ಕಂಡುಬಂದಿದೆ. ಕೆಎಲ್ ರಾಹುಲ್ ಅಥವಾ ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ರಿಷಬ್ ಪಂತ್.. ಹೀಗೆ ಈ ಬ್ಯಾಟರ್​ಗಳು ಮಾಮೂಲಿಯಾಗಿ ಭರ್ಜರಿ ರನ್​ ಮೂಲಕ ಗುರುತಿಸಿಕೊಂಡವರು. ಆದರೆ ನಾಯಕತ್ವದ ಜವಾಬ್ದಾರಿ ಸಿಕ್ಕ ಬಳಿಕ ಬಹುತೇಕರು ಡಲ್ ಬ್ಯಾಟರ್​ಗಳಾಗಿದ್ದಾರೆ.

1 / 7
ಕೆಎಲ್ ರಾಹುಲ್ ಈ ಸರದಿಯಲ್ಲಿ ಮೊದಲನೆಯವರು ಎನ್ನಬಹುದು. 2020 ರಿಂದ ನಾಯಕತ್ವ ವಹಿಸಿಕೊಂಡಿರುವ  (ಮೊದಲು- ಪಂಜಾಬ್ ಕಿಂಗ್ಸ್, ಪ್ರಸ್ತುತ- ಲಕ್ನೋ ಸೂಪರ್ ಜೈಂಟ್ಸ್) ರಾಹುಲ್, ನಾಯಕರಾದ ನಂತರ ಸ್ಟ್ರೈಕ್ ರೇಟ್ ಕಡಿಮೆಯಾಗಿದೆ. ನಾಯಕನಾಗಿ ಕೆಎಲ್ ರಾಹುಲ್ 129.34 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಅಂದರೆ 100 ಎಸೆತಗಳನ್ನು ಆಡಿದರೆ 129 ರನ್ ಗಳಿಸಿದ್ದಾರೆ. ಆದರೆ ನಾಯಕನಾಗುವ ಮೊದಲು, ಅವರು ಮೊದಲ ಎರಡು ಐಪಿಎಲ್ ಸೀಸನ್‌ಗಳಲ್ಲಿ 146.60 ಸ್ಟ್ರೈಕ್ ರೇಟ್ ಹೊಂದಿದ್ದರು.

2 / 7
ವರದಿಯ ಪ್ರಕಾರ, ರವೀಂದ್ರ ಜಡೇಜಾ ಐಪಿಎಲ್ 2022 ಅನ್ನು ಮಾತ್ರ ತೊರೆದಿಲ್ಲ. ಬದಲಿಗೆ, ಅವರು ಮುಂದಿನ ಸೀಸನ್​ನಲ್ಲಿ ಈ ತಂಡಕ್ಕಾಗಿ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 16 ಕೋಟಿ ರೂ.ಗೆ ಉಳಿಸಿಕೊಂಡಿತ್ತು.

3 / 7
ರಿಷಬ್ ಪಂತ್ ಆಟ ಎಲ್ಲರಿಗೂ ಗೊತ್ತಿರುವಂಥದ್ದು. ಅವರು ಯಾವಾಗಲೂ ದೊಡ್ಡ ಹೊಡೆತಗಳಿಗೆ ಯತ್ನಿಸುವವರು. ಇದೇ ಅವರ ಬ್ಯಾಟಿಂಗ್ ವಿಶೇಷವೂ ಹೌದು. ಆದರೆ ನಾಯಕತ್ವದ ಜವಾಬ್ದಾರಿ ಸಿಕ್ಕ ಬಳಿಕ ಈಗ ಬೌಂಡರಿ, ಸಿಕ್ಸರ್ ಬಾರಿಸುವುದು ಕಡಿಮೆ ಎನ್ನುತ್ತಿವೆ ಅಂಕಿಅಂಶಗಳು. ನಾಯಕನಾಗಿ ರಿಷಬ್ ಪಂತ್ ಅವರ ಸ್ಟ್ರೈಕ್ ರೇಟ್ 128.52 ಇದೆ. ಹಿಂದಿನ ಎರಡು ಋತುಗಳಲ್ಲಿ ಅವರು 138.27 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದರು. 2021 ರಲ್ಲಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಂಡರು.

4 / 7
ಐಪಿಎಲ್ 2022ರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ನಾಯಕರಾಗಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಜವಾಬ್ದಾರಿ ಅವರ ಮೇಲಿದೆ. ಹಾರ್ದಿಕ್ ಈ ಮೊದಲು ಮುಂಬೈನಲ್ಲಿ ಫಿನಿಶರ್ ರೋಲ್​ ವಹಿಸಿಕೊಳ್ಳುತ್ತಿದ್ದರು. ಆದರೆ ಗುಜರಾತ್‌ನಲ್ಲಿ ಅವರು ಮೇಲಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಆದರೆ ಅವರ ಬ್ಯಾಟಿಂಗ್ ಮೊದಲಿಗಿಂತ ತುಂಬಾ ನಿಧಾನಗತಿಯಲ್ಲಿದೆ. ನಾಯಕನಾಗುವ ಮೊದಲು, ಅವರ ಸ್ಟ್ರೈಕ್ ರೇಟ್ 151.67 ಆಗಿತ್ತು. ಈಗ ಅವರು ನಾಯಕತ್ವ ವಹಿಸಿಕೊಳ್ಳುತ್ತಿರುವ ಈ ಋತುವಿನಲ್ಲಿ, ಹಾರ್ದಿಕ್ 122.60 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.

5 / 7
ಇದು ಸಂಜು ಸ್ಯಾಮ್ಸನ್ ಅವರಿಗೆ ಐಪಿಎಲ್ ನಾಯಕನ ಜವಾಬ್ದಾರಿಯಾಗಿ ಎರಡನೇ ಸೀಸನ್. ಅವರು ಐಪಿಎಲ್ 2021ರಿಂದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದಾರೆ. ಈ ಆಕ್ರಮಣಕಾರಿ ಬ್ಯಾಟರ್ ಕಥೆಯೂ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಅವರ ಕಥೆಯಂತೆಯೇ ಇದೆ. ಸಂಜು ಸ್ಯಾಮ್ಸನ್ ನಾಯಕನಾಗುವ ಮುನ್ನ 153.86 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಿದ್ದರು. ಆದರೆ ಈಗ ಅದು 136.72 ಕ್ಕೆ ಇಳಿದಿದೆ.

6 / 7
ಮಯಾಂಕ್ ಅಗರ್ವಾಲ್ ಕೂಡ ನಾಯಕತ್ವದ ಜವಾಬ್ದಾರಿಯಿಂದ ಹೊಡೆಬಡಿ ಆಟ ಬರಲು ಸಾಧ್ಯವಾಗುತ್ತಿಲ್ಲವೇ ಎನ್ನುವ ಅನುಮಾನ ಮೂಡಿದೆ. ಕಾರಣ, ಕರ್ನಾಟಕ ಮೂಲದ ಮಯಾಂಕ್ ಪ್ರಸ್ತುತ ಪಂಜಾಬ್ ಕಿಂಗ್ಸ್ ನಾಯಕರಾಗಿದ್ದಾರೆ. ಐಪಿಎಲ್ 2022 ರಲ್ಲಿ ಅವರ ಬ್ಯಾಟ್​ನಿಂದ ದೊಡ್ಡ ಇನ್ನಿಂಗ್ಸ್​ಗಳು ಬಂದಿಲ್ಲ. ಅವರ ಸ್ಟ್ರೈಕ್ ರೇಟ್ ಕೂಡ 105ಕ್ಕೆ ಇಳಿದಿದೆ. ಆದರೆ ಹಿಂದಿನ ಎರಡು ಸೀಸನ್‌ಗಳಲ್ಲಿ ಅಬ್ಬರಿಸಿದ್ದ ಅವರು 147.86 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದರು.

7 / 7

Published On - 9:44 am, Wed, 13 April 22

Follow us
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!