IPL 2022: ಆರ್ಸಿಬಿ- ಸಿಎಸ್ಕೆ ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?
IPL 2022 Points Table | Purple Cap | Orange Cap: ಆರ್ಸಿಬಿ ವಿರುದ್ಧ ಸಿಎಸ್ಕೆ ಜಯದ ಮೂಲಕ ಐಪಿಎಲ್ 2022ರ ಪಾಯಿಂಟ್ಸ್ ಪಟ್ಟಿಯಲ್ಲಿ ಏನೆಲ್ಲಾ ಬದಲಾವಣೆಯಾಗಿದೆ? ಚೆನ್ನೈ ಹಾಗೂ ಬೆಂಗಳೂರು ಎಷ್ಟನೇ ಸ್ಥಾನದಲ್ಲಿವೆ? ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ? ಇಲ್ಲಿದೆ ನೋಡಿ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 22ನೇ ಪಂದ್ಯದಲ್ಲಿ ಆರ್ಸಿಬಿ- ಸಿಎಸ್ಕೆ (RCB vs CSK) ತಂಡಗಳು ಸೆಣಸಿದ್ದವು. ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಸಾಹಸದಿಂದ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 23 ರನ್ಗಳ ಜಯ ಗಳಿಸಿದೆ. ಈ ಮೂಲಕ ಐಪಿಎಲ್ 2022ರ ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆದಿದೆ. ಈ ಐಪಿಎಲ್ನ (IPL 2022) ಟ್ರೆಂಡ್ನಂತೆ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡಿತ್ತು. ಆದರೆ ಇಬ್ಬನಿಯ ಸಮಸ್ಯೆ ಕಾಡದ ಕಾರಣ ಸಿಎಸ್ಕೆ ಸ್ಪಿನ್ನರ್ಗಳ ಮೋಡಿಗೆ ಆರ್ಸಿಬಿ ಬ್ಯಾಟರ್ಗಳು ತತ್ತರಿಸಿದರು. 20 ಓವರ್ಗಳಲ್ಲಿ 216 ರನ್ ಪೇರಿಸಿದ್ದ ಸಿಎಸ್ಕೆಗೆ ಉತ್ತರವಾಗಿ ಆರ್ಸಿಬಿ 9 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಶಕ್ತವಾಯಿತು. ಕಪ್ತಾನನಾಗಿ ಮೊದಲ ಜಯ ಕಂಡ ರವೀಂದ್ರ ಜಡೇಜಾ, ಬೌಲಿಂಗ್ ಮೂಲಕ ತಂಡದ ಜಯಕ್ಕೆ ಕೊಡುಗೆ ನೀಡಿದರು. ಪಂದ್ಯದಲ್ಲಿ ಮಹೀಶ್ ತೀಕ್ಷಣ ಕೂಡ 4 ವಿಕೆಟ್ ಮೂಲಕ ಮಿಂಚಿದರು. ಈ ಜಯದ ಮೂಲಕ ಐಪಿಎಲ್ 2022ರ ಪಾಯಿಂಟ್ಸ್ ಪಟ್ಟಿಯಲ್ಲಿ (IPL 2022 Points table) ಏನೆಲ್ಲಾ ಬದಲಾವಣೆಯಾಗಿದೆ? ಚೆನ್ನೈ ಹಾಗೂ ಆರ್ಸಿಬಿ ಎಷ್ಟನೇ ಸ್ಥಾನದಲ್ಲಿವೆ? ಆರೆಂಜ್ ಕ್ಯಾಪ್ (Orange Cap), ಪರ್ಪಲ್ ಕ್ಯಾಪ್ (Purple Cap) ಯಾರ ಬಳಿ ಇದೆ? ಇಲ್ಲಿದೆ ನೋಡಿ.
ಮೊದಲ ಜಯದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ 9 ನೇ ಸ್ಥಾನಕ್ಕೇರಿದೆ. 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಇನ್ನಷ್ಟೇ ಖಾತೆ ತೆರಯಬೇಕಿದ್ದು, 10 ನೇ ಸ್ಥಾನದಲ್ಲಿದೆ. ಚೆನ್ನೈ ವಿರುದ್ಧದ ಪಂದ್ಯದ ನಂತರ ಆರ್ಸಿಬಿ 6 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಆರ್ಸಿಬಿ ನೆಟ್ ರನ್ರೇಟ್ 0.006 ಇದೆ. ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ತಲಾ 4 ಅಂಕಗಳ ಮೂಲಕ ಕ್ರಮವಾಗಿ 6, 7, 8ನೇ ಸ್ಥಾನದಲ್ಲಿವೆ.
ಮೊದಲ ನಾಲ್ಕು ಸ್ಥಾನದಲ್ಲಿ ಯಾವೆಲ್ಲಾ ತಂಡಗಳಿವೆ?
ಮೊದಲ 5 ಸ್ಥಾನದಲ್ಲಿರುವ ತಂಡಗಳೆಲ್ಲವೂ ತಲಾ 6 ಅಂಕಗಳನ್ನು ಹೊಂದಿವೆ. ಅದರಲ್ಲಿ ಉತ್ತಮ ನೆಟ್ ರನ್ರೇಟ್ ಹೊಂದಿರುವ ರಾಜಸ್ಥಾನ್ ರಾಯಲ್ಸ್ ಮೊದಲ ಸ್ಥಾನ ಕಾಯ್ದುಕೊಂಡಿದೆ. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ 0.951 ನೆಟ್ ರನ್ರೇಟ್ ಹೊಂದಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ 0.446 ನೆಟ್ ರನ್ರೇಟ್ನೊಂದಿಗೆ ಎರಡನೇ ಸ್ಥಾನದಲ್ಲಿದೆ.
ಕೆ.ಎಲ್.ರಾಹುಲ್ ಕಪ್ತಾನನಾಗಿರುವ ಲಕ್ನೋ ಸೂಪರ್ ಜೈಂಟ್ಸ್ 0.174 ನೆಟ್ ರನ್ರೇಟ್ ಹೊಂದಿದ್ದು 3ನೇ ಸ್ಥಾನದಲ್ಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ 0.097 ನೆಟ್ ರನ್ ರೇಟ್ನೊಂದಿಗೆ 4ನೇ ಸ್ಥಾನದಲ್ಲಿದೆ.
ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?
ಜೋಸ್ ಬಟ್ಲರ್ 218 ರನ್ಗಳೊಂದಿಗೆ ಆರೆಂಜ್ ಕ್ಯಾಪ್ ಒಡೆಯರಾಗಿದ್ದಾರೆ. ಶಿವಂ ದುಬೆ 207 ರನ್, 194 ರನ್ಗಳೊಂದಿಗೆ ರಾಬಿನ್ ಉತ್ತಪ್ಪ ನಂತರದ ಸ್ಥಾನದಲ್ಲಿದ್ದಾರೆ. ಯಜುವೇಂದ್ರ ಚಾಹಲ್ 11 ವಿಕೆಟ್ಗಳೊಂದಿಗೆ ಪರ್ಪಲ್ ಕ್ಯಾಪ್ ಹೊಂದಿದ್ದಾರೆ. ಉಮೇಶ್ ಯಾದವ್, ಕುಲದೀಪ್ ಯಾದವ್ ಹಾಗೂ ವನಿಂದು ಹಸರಂಗ 10 ವಿಕಟ್ಗಳನ್ನು ಪಡೆದು ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: CSK Vs RCB: ಸಿಎಸ್ಕೆ ವಿರುದ್ಧ ರಾಯಲ್ ಚಾಲೆಂಜರ್ಸ್ಗೆ 23 ರನ್ಗಳ ಸೋಲು; ಸ್ಟಾರ್ಗಳೇ ತುಂಬಿರುವ ಆರ್ಸಿಬಿ ಎಡವಿದ್ದೆಲ್ಲಿ?
IPL 2022: ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಅರ್ಜುನ ರಣತುಂಗಾ ಐಪಿಎಲ್ ಬಿಡಿ ಎಂದಿದ್ದೇಕೆ?