MI vs CSK, IPL 2023: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ರೋಚಕತೆ ಸೃಷ್ಟಿಸಿದ ಮುಂಬೈ-ಚೆನ್ನೈ ನಡುವಣ ಕಾದಾಟ

|

Updated on: Apr 08, 2023 | 10:23 AM

RR vs DC, IPL 2023: ಮೊದಲ ಮ್ಯಾಚ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ. ಸಂಜೆ 7:30ಕ್ಕೆ ಶುರುವಾಗಲಿರುವ ಮತ್ತೊಂದು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ ಆಗಲಿದೆ.

MI vs CSK, IPL 2023: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ರೋಚಕತೆ ಸೃಷ್ಟಿಸಿದ ಮುಂಬೈ-ಚೆನ್ನೈ ನಡುವಣ ಕಾದಾಟ
IPL 2023 Double header
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿಂದು (IPL 2023) ಎರಡು ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ ಗುವಾಹಟಿಯ ಬರ್ಸಾಪುರ ಸ್ಟೇಡಿಯಂನಲ್ಲಿ ಶುರುವಾಗಲಿರುವ ಮೊದಲ ಮ್ಯಾಚ್​ನಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ (RR vs DC) ಅನ್ನು ಎದುರಿಸಲಿದೆ. ಸಂಜೆ 7:30ಕ್ಕೆ ಶುರುವಾಗಲಿರುವ ಮತ್ತೊಂದು ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಎಂಎಸ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ (MI vs CSK) ಮುಖಾಮುಖಿ ಆಗಲಿದೆ. ಇದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ಪಂದ್ಯಗಳು ಸಾಕಷ್ಟು ಕುತೂಹಲ ಕೆರಳಿಸಿದ್ದು, ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ.

ರಾಜಸ್ಥಾನ್ vs ಡೆಲ್ಲಿ:

ಆರ್ ಆರ್ ತಂಡ ತುಂಬಾ ಬಲಶಾಲಿಯಾಗಿದೆ. ಆಡಿದ ಎರಡು ಪಂದ್ಯಗಳ ಪೈಕಿ ಒಂದು ಸೋಲು ಕಂಡಿದ್ದರೂ ಅದು ಹೀನಾಯವಾಗಿ ಇರಲಿಲ್ಲ. ಗೆಲುವಿನ ಅಂಚಿನಲ್ಲಿ ಎಡವಿತ್ತು. ಓಪನರ್​ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಭರ್ಜರಿ ಆರಂಭ ಒದಗಿಸಿದರೆ, ನಾಯಕ ಸಂಜು ಸ್ಯಾಮ್ಸನ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್ ಆಸರೆಯಾಗುತ್ತಿದ್ದಾರೆ. ದೇವದತ್ ಪಡಿಕ್ಕಲ್ ಮತ್ತು ರಿಯಾನ್ ಪರಾಗ್ ಇನ್ನಷ್ಟೆ ಮಿಂಚಬೇಕಿದೆ. ಬೌಲಿಂಗ್​ನಲ್ಲಿ ಆರ್. ಅಶ್ವಿನ್, ಯುಜ್ವೇಂದ್ರ ಚಹಲ್, ಟ್ರೆಂಟ್ ಬೌಲ್ಟ್ ಹಾಗೂ ಕೆಎಮ್ ಆಸೀಫ್ ಇದ್ದಾರೆ.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಆಡಿದ ಎರಡೂ ಪಂದ್ಯಗಳಲ್ಲಿ ಸೋಲುಂಡಿದೆ. ಹೀಗಾಗಿ ಚೊಚ್ಚಲ ಗೆಲುವಿಗೆ ವಾರ್ನರ್ ಪಡೆ ಹುಡುಕುತ್ತಿದೆ. ಡಿಸಿ ತಂಡ ಈವರೆಗೆ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿಲ್ಲ. ನಾಯಕ ಡೇವಿಡ್ ವಾರ್ನರ್ ರನ್ ಕಲೆಹಾಕುತ್ತಿದ್ದಾರಷ್ಟೆ. ಪೃಥ್ವಿ ಶಾ, ರಿಲೀ ರುಸ್ಸೋ, ರೋಮನ್ ಪಾವೆಲ್, ಅಕ್ಷರ್ ಪಟೇಲ್, ಸರ್ಫರಾಜ್ ಖಾನ್, ಅಭಿಷೇಕ್ ಕಡೆಯಿಂದ ಉತ್ತಮ ಆಟ ಬರಬೇಕಿದೆ. ಬೌಲಿಂಗ್​ನಲ್ಲಿ ಕೂಡ ಅಮನ್ ಹಕಿಮ್, ಕುಲ್ದೀಪ್ ಯಾದವ್, ಆ್ಯನ್ರಿಚ್ ನಾರ್ಟ್ಜೆ, ಮುಖೇಶ್ ಕುಮಾರ್ ಇದ್ದರೂ ಮಾರಕವಾಗಿಲ್ಲ.

ಇದನ್ನೂ ಓದಿ
IPL 2023 Points Table: ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದ ರಾಹುಲ್ ಪಡೆ: ಆರೆಂಜ್ ಕ್ಯಾಪ್ ಯಾರಿಗೆ?
LSG vs SRH, IPL 2023: ನಾಯಕನೇ ಶೂನ್ಯಕ್ಕೆ ಔಟ್: ಸತತ ಎರಡನೇ ಪಂದ್ಯ ಸೋತ ಹೈದರಾಬಾದ್
LSG vs SRH: 13, 3.. 30 ನಿಮಿಷ; ಹೈದರಾಬಾದ್​ಗೆ ದುಬಾರಿಯಾದ 13.25 ಕೋಟಿ ರೂ. ಪ್ಲೇಯರ್!
LSG vs SRH Highlights IPL 2023: ಹೈದರಾಬಾದ್​ಗೆ ಸತತ 2ನೇ ಸೋಲು; ತವರಿನಲ್ಲಿ ಗೆದ್ದ ಲಕ್ನೋ

IPL- ಐಪಿಎಲ್​ಗೆ ಡಿಜಿಟಲ್ ಧಮಾಕ, ಟಿವಿ ವೀಕ್ಷಕರ ಸಂಖ್ಯೆ ಇಳಿಮುಖ; ಜಿಯೋ ವಿಶ್ವದಾಖಲೆ

ಮುಂಬೈ vs ಚೆನ್ನೈ:

ಮುಂಬೈ ಈ ಬಾರಿ ತಾನಾಡಿದ ಮೊದಲ ಪಂದ್ಯದಲ್ಲೇ ಸೋಲು ಕಂಡಿತ್ತು. ಆರ್​ಸಿಬಿ ವಿರುದ್ಧ ಕಳಪೆ ಬೌಲಿಂಗ್ ಪ್ರದರ್ಶಿಸಿತ್ತು. ರೋಹಿತ್ ಪಡೆ ಇದೀಗ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ತಂಡದಲ್ಲಿ ಅನುಭವಿ ಸ್ಟಾರ್ ಆಟಗಾರರ ದಂಡೇ ಇದ್ದರೂ ಮಿಂಚುತ್ತಿಲ್ಲ. ರೋಹಿತ್ ಕಡೆಯಿಂದ ನಾಯಕನ ಆಟ ಬರಬೇಕಿದೆ. ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಬೇಕಿದೆ. ಸೂರ್ಯಕುಮಾರ್ ಫಾರ್ಮ್ ಕಂಡುಕೊಳ್ಳಬೇಕು. ಕ್ಯಾಮ್ರೋನ್ ಗ್ರೀನ್, ಟಿಮ್ ಡೇವಿಡ್ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ತಿಲಕ್ ವರ್ಮಾ ಹಾಗೂ ನೆಹಲ್ ವಧೀರ ಮೇಲೆ ನಿರೀಕ್ಷೆ ಹೆಚ್ಚಿದೆ. ಜೋಫ್ರಾ ಆರ್ಚರ್, ಪಿಯೂಶ್ ಚಾವ್ಲಾ ಹಾಗೂ ಅರ್ಶದ್ ಖಾನ್ ಮಾರಕವಾಗಬೇಕಿದೆ.

ಸಿಎಸ್​ಕೆ ತಂಡ ಗೆಲುವಿನ ಲಯಕ್ಕೆ ಮರಳಿದೆ ನಿಜ. ಆದರೆ, ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಬೇಕಿದೆ. ಕಳೆದ ಪಂದ್ಯದಲ್ಲಿ 200+ ಟಾರ್ಗೆಟ್ ನೀಡಿದ್ದರೂ ಎದುರಾಳಿ ಗೆಲುವಿನ ಅಂಚಿಗೆ ಬಂದಿತ್ತು. ಧೋನಿ ಕೂಡ ಬೌಲರ್​ಗಳಿಗೆ ಎಚ್ಚರಿಕೆ ನೀಡಿದ್ದರು. ರುತುರಾಜ್ ಗಾಯಕ್ವಾಡ್ ಬೊಂಬಾಟ್ ಬ್ಯಾಟಿಂಗ್ ತಂಡದ ಪ್ರಮುಖ ಅಸ್ತ್ರವಾಗಿದೆ. ಡ್ವೇನ್ ಕಾನ್ವೇ ಇವರಿಗೆ ಸಾಥ್ ನೀಡುತ್ತಿದ್ದಾರೆ. ಮೊಯಿನ್ ಅಲಿ ಆಲ್ರೌಂಡ್ ಆಟ ನಡೆಯುತ್ತಿದೆ. ಬೆನ್ ಸ್ಟೋಕ್ಸ್ ಹಾಗೂ ರವೀಂದ್ರ ಜಡೇಜಾ ಇನ್ನಷ್ಟೆ ತಮ್ಮ ನೈಜ್ಯ ಆಟ ಆಡಬೇಕಿದೆ. ಮಿಚೆಲ್ ಸ್ಯಾಂಟನರ್, ದೀಪಕ್ ಚಹರ್, ಹಂಗರ್ಗಕರ್ ಬೌಲರ್​ಗಳಾಗಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:23 am, Sat, 8 April 23