IPL 2023 Points Table: ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದ ರಾಹುಲ್ ಪಡೆ: ಆರೆಂಜ್ ಕ್ಯಾಪ್ ಯಾರಿಗೆ?

LSG vs SRH, IPL 2023: ಎಲ್​ಎಸ್​ಜಿ-ಎಸ್​ಆರ್​ಹೆಚ್ ಪಂದ್ಯದ ಬಳಿಕ ಐಪಿಎಲ್ 2023 ಪಾಯಿಂಟ್ ಟೇಬಲ್​ನಲ್ಲಿ ಸಂಪೂರ್ಣ ಬದಲಾವಣೆ ಆಗಿದೆ. ಹಾಗಾದರೆ ಪಾಯಿಂಟ್ಸ್ ಟೇಬಲ್ ಹೇಗಿದೆ ?, ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.

IPL 2023 Points Table: ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದ ರಾಹುಲ್ ಪಡೆ: ಆರೆಂಜ್ ಕ್ಯಾಪ್ ಯಾರಿಗೆ?
LSG Team
Follow us
|

Updated on:Apr 08, 2023 | 9:07 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್ (IPL 2023) ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಕೆಲ ತಂಡಗಳಿಂದ ಊಹಿಸಲಾಗದ ಪ್ರದರ್ಶನ ಬರುತ್ತಿದೆ. ಶುಕ್ರವಾರ ಐಪಿಎಲ್​ನಲ್ಲಿ ಲಖನೌ ಸೂಪರ್ ಜೇಂಟ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಕೆಎಲ್ ರಾಹುಲ್ ನೇತೃತ್ವದ ಎಲ್​ಎಸ್​ಜಿ ತಂಡ 5 ವಿಕೆಟ್​ಗಳ ಸುಲಭ ಜಯ ಸಾಧಿಸಿತು. ಇದೀಗ ಎಲ್​ಎಸ್​ಜಿ-ಎಸ್​ಆರ್​ಹೆಚ್ ಪಂದ್ಯದ ಬಳಿಕ ಐಪಿಎಲ್ 2023 ಪಾಯಿಂಟ್ ಟೇಬಲ್​ನಲ್ಲಿ ಸಂಪೂರ್ಣ ಬದಲಾವಣೆ ಆಗಿದೆ. ಹಾಗಾದರೆ ಪಾಯಿಂಟ್ಸ್ ಟೇಬಲ್ ಹೇಗಿದೆ ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.

  • ಹೈದರಾಬಾದ್ ವಿರುದ್ಧ ಜಯ ಸಾಧಿಸುವ ಮೂಲಕ ಲಖನೌ ಸೂಪರ್ ಜೇಂಟ್ಸ್ ಅಗ್ರಸ್ಥಾನಕ್ಕೇರಿದೆ. ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು, ಒಂದು ಸೋಲುಂಡು ಎಲ್​ಎಸ್​ಜಿ ಟೇಬಲ್ ಟಾಪ್​ನಲ್ಲಿದೆ. +1.358 ರನ್​ರೇಟ್​ನೊಂದಿಗೆ 4 ಅಂಕ ಸಂಪಾದಿಸಿದೆ.
  • ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಎರಡನೇ ಸ್ಥಾನಕ್ಕೆ ಕುಸಿದಿದೆ. +0.700 ರನ್​ರೇಟ್​ನೊಂದಿಗೆ 4 ಅಂಕ ಸಂಪಾದಿಸಿದೆ.
  • ಪಂಜಾಬ್ ಕಿಂಗ್ಸ್ ಕೂಡ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಕಂಡು 4 ಅಂಕ ಹೊಂದಿ +0.333ರನ್​ರೇಟ್​ ಆಧಾರದ ಮೇಲೆ ತೃತೀಯ ಸ್ಥಾನದಲ್ಲಿದೆ.
  • ನಾಲ್ಕನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವಿದೆ. ಆಡಿದ ಎರಡು ಪಂದ್ಯಗಳ ಪೈಕಿ ಸೋಲು-ಗೆಲುವನ್ನು ಕಂಡು +2.056 ರನ್​ರೇಟ್​ನೊಂದಿಗೆ 2 ಅಂಕ ಪಡೆದುಕೊಂಡಿದೆ.
  • ರಾಜಸ್ಥಾನ್ ರಾಯಲ್ಸ್ ಆರನೇ ಸ್ಥಾನದಲ್ಲಿದೆ. ಆಡಿದ ಎರಡು ಪಂದ್ಯಗಳಲ್ಲಿ ಒಂದು ಸಾಧಿಸಿ 2 ಅಂಕದೊಂದಿಗೆ +1.675 ರನ್​ರೇಟ್ ಕಾಪಾಡಿಕೊಂಡಿದೆ.
  • ನಂತರದ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವಿದೆ. ಆಡಿದ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಒಂದು ಸೋಲುಂಡು 2 ಅಂಕದೊಂದಿಗೆ +0.036 ರನ್​ರೇಟ್ ಕಾಪಾಡಿಕೊಂಡಿದೆ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಳನೇ ಸ್ಥಾನಕ್ಕೆ ಕುಸಿದಿದೆ. ಆಡಿದ ಎರಡು ಪಂದ್ಯಗಳ ಪೈಕಿ ಒಂದು ಒಂದು ಸೋಲು ಕಂಡು 2 ಅಂಕ ಸಂಪಾದಿಸಿ -1.256 ರನ್​ರೇಟ್ ಹೊಂದಿದೆ.
  • ಡೆಲ್ಲಿ ಕ್ಯಾಪಿಟಲ್ಸ್ ಎಂಟನೇ ಸ್ಥಾನದಲ್ಲಿದೆ. ಆಡಿದ ಎರಡು ಪಂದ್ಯಗಳಲ್ಲಿ ಎರಡರಲ್ಲೂ ಸೋಲು ಕಂಡು ಯಾವುದೇ ಅಂಕ ಸಂಪಾದಿಸದೆ -1.703 ರನ್​ರೇಟ್ ಹೊಂದಿದೆ.
  • ಮುಂಬೈ ಇಂಡಿಯನ್ಸ್ ಒಂಬತ್ತನೆ ಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಅಂಕ ಸಂಪಾದಿಸದೆ -1.981 ರನ್​ರೇಟ್ ಹೊಂದಿದೆ.
  • ಕೊನೆಯ ಸ್ಥಾನದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವಿದೆ. ಆಡಿದ ಎರಡು ಪಂದ್ಯದಲ್ಲಿ ಎರಡರಲ್ಲೂ ಸೋಲು ಕಂಡು ಯಾವುದೇ ಅಂಕ ಸಂಪಾದಿಸದೆ -2.867 ರನ್​ರೇಟ್ ಹೊಂದಿದೆ.

IPL 2023: ಶತಕ ಬಾರಿಸು ಎಂದ ಧೋನಿ ಫ್ಯಾನ್​ಗೆ ಕೊಹ್ಲಿ ಪಾಠ ಕಲಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ

ಆರೆಂಜ್ ಕ್ಯಾಪ್:

ಇದನ್ನೂ ಓದಿ
Image
LSG vs SRH, IPL 2023: ನಾಯಕನೇ ಶೂನ್ಯಕ್ಕೆ ಔಟ್: ಸತತ ಎರಡನೇ ಪಂದ್ಯ ಸೋತ ಹೈದರಾಬಾದ್
Image
LSG vs SRH: 13, 3.. 30 ನಿಮಿಷ; ಹೈದರಾಬಾದ್​ಗೆ ದುಬಾರಿಯಾದ 13.25 ಕೋಟಿ ರೂ. ಪ್ಲೇಯರ್!
Image
LSG vs SRH Highlights IPL 2023: ಹೈದರಾಬಾದ್​ಗೆ ಸತತ 2ನೇ ಸೋಲು; ತವರಿನಲ್ಲಿ ಗೆದ್ದ ಲಕ್ನೋ
Image
IPL- ಐಪಿಎಲ್​ಗೆ ಡಿಜಿಟಲ್ ಧಮಾಕ, ಟಿವಿ ವೀಕ್ಷಕರ ಸಂಖ್ಯೆ ಇಳಿಮುಖ; ಜಿಯೋ ವಿಶ್ವದಾಖಲೆ

ಸಿಎಸ್​ಕೆ ತಂಡದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಇವರು ಜಿಟಿ ವಿರುದ್ಧ 92 ರನ್ ಹಾಗೂ ಲಖನೌ ವಿರುದ್ಧ 57 ರನ್ ಸಿಡಿಸಿದ್ದರು. ಈ ಮೂಲಕ ಆಡಿದ ಎರಡು ಪಂದ್ಯಗಳಲ್ಲಿ ಒಟ್ಟು 149 ರನ್ ಕಲೆಹಾಕಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಎಲ್​ಎಸ್​ಜಿಯ ಖೈಲ್ ಮೇಯರ್ಸ್ ಅವರಿದ್ದು 139 ರನ್ ಕಲೆಹಾಕಿದ್ದಾರೆ.

ಪರ್ಪಲ್ ಕ್ಯಾಪ್:

ಲಖನೌ ಸೂಪರ್ ಜೇಂಟ್ಸ್ ತಂಡದ ಮಾರ್ಕ್ ವುಡ್ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಇವರು ಡೆಲ್ಲಿ ವಿರುದ್ಧ 5 ವಿಕೆಟ್ ಕಬಳಿಸಿದ್ದರು. ಹಾಗೆಯೆ ಚೆನ್ನೈ ವಿರುದ್ಧ 3 ವಿಕೆಟ್ ಕಿತ್ತಿದ್ದಾರೆ. ಒಟ್ಟು 8 ವಿಕೆಟ್ ಪಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ಇದೇ ಲಖನೌ ತಂಡದ ರವಿ ಬಿಷ್ಟೋಯಿ ದ್ವಿತೀಯ ಸ್ಥಾನಕ್ಕೆ ಜಿಗಿದಿದ್ದು ಆಡಿದ ಮೂರು ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:07 am, Sat, 8 April 23