MS Dhoni: ವಾಂಖೆಡೆ ಕ್ರೀಡಾಂಗಣದ ಆಸನಕ್ಕೆ ಧೋನಿ ಹೆಸರು: ಸ್ವತಃ ಎಂಎಸ್​ಡಿಯಿಂದಲೇ ಉದ್ಘಾಟನೆ

ಭಾರತವು ಮೊನ್ನೆಯಷ್ಟೆ 2011 ರ ಏಕದಿನ ವಿಶ್ವಕಪ್ ಗೆದ್ದ ತಂಡದ 12 ನೇ ವಾರ್ಷಿಕೋತ್ಸವವನ್ನು ಆಚರಿಸಿತ್ತು. ಈ ಸಂದರ್ಭ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಮಹತ್ವದ ಘೋಷಣೆ ಮಾಡಿ, ವಾಂಖೆಡೆ ಸ್ಟೇಡಿಯಂನಲ್ಲಿ ವಿಕೆಟ್-ಕೀಪರ್ ಬ್ಯಾಟರ್ ಧೋನಿ ಹೆಸರನ್ನು ಇಡಲು ನಿರ್ಧರಿಸಿದ್ದರು.

MS Dhoni: ವಾಂಖೆಡೆ ಕ್ರೀಡಾಂಗಣದ ಆಸನಕ್ಕೆ ಧೋನಿ ಹೆಸರು: ಸ್ವತಃ ಎಂಎಸ್​ಡಿಯಿಂದಲೇ ಉದ್ಘಾಟನೆ
MS Dhoni
Follow us
TV9 Web
| Updated By: Vinay Bhat

Updated on:Apr 08, 2023 | 11:24 AM

ಮಹೇಂದ್ರ ಸಿಂಗ್ ಧೋನಿ (MS Dhoni) ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾಗಿ ಕೆಲ ವರ್ಷಗಳಾಗಿದ್ದರೂ ಅವರ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮಾತ್ರ ಕಾಣಿಸಿಕೊಳ್ಳುವ ಎಂಎಸ್​ಡಿ ಈ ವರ್ಷ ಇದಕ್ಕೂ ನಿವೃತ್ತಿ ಘೋಷಿಸಿ ಕ್ರಿಕೆಟ್​ನಿಂದ ದೂರವಾಗಲಿದ್ದಾರೆ. ಇಂದು ಒಂದು ತಂಡಕ್ಕೆ ಬೆಂಬಲ ಎಂಬ ಬದಲು ಕೇವಲ ಧೋನಿಯನ್ನು ನೋಡಲು, ಅವರ ಆಟವನ್ನು ವೀಕ್ಷಿಸಲು ಅಭಿಮಾನಿಗಳು ಐಪಿಎಲ್​ಗೆ  (IPL)ಆಗಮಿನಿಸುತ್ತಿದ್ದಾರೆ. ಭಾರತಕ್ಕೆ ವಿಶ್ವಕಪ್ ತಂದುಕೊಟ್ಟು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಧೋನಿಗೆ ಇದೀಗ ಮುಂಬೈ ಕ್ರಿಕೆಟ್ (Mumbi Cricket) ಸಂಸ್ಥೆ ವಿಶೇಷ ಗೌರವ ಸಲ್ಲಿಸಿದೆ.

ಭಾರತವು ಮೊನ್ನೆಯಷ್ಟೆ 2011 ರ ಏಕದಿನ ವಿಶ್ವಕಪ್ ಗೆದ್ದ ತಂಡದ 12 ನೇ ವಾರ್ಷಿಕೋತ್ಸವವನ್ನು ಆಚರಿಸಿತ್ತು. ಈ ಸಂದರ್ಭ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಮಹತ್ವದ ಘೋಷಣೆ ಮಾಡಿ, ವಾಂಖೆಡೆ ಸ್ಟೇಡಿಯಂನಲ್ಲಿ ವಿಕೆಟ್-ಕೀಪರ್ ಬ್ಯಾಟರ್ ಧೋನಿ ಹೆಸರನ್ನು ಇಡಲು ನಿರ್ಧರಿಸಿದ್ದರು. ”2011ರ ವಿಶ್ವಕಪ್​ ಫೈನಲ್​ಲ್ಲಿ ಶ್ರೀಲಂಕಾ ವಿರುದ್ಧ ಧೋನಿ ಸಿಕ್ಸ್ ಮೂಲಕ ವಿನ್ನಿಂಗ್ ಶಾಟ್ ಸಿಡಿಸಿದ್ದು ಯಾರೂ ಮರೆಯಲು ಸಾಧ್ಯವಿಲ್ಲ. ಲಂಕಾ ವೇಗಿ ನುವಾನ್ ಕುಲಶೇಖರ ವಿರುದ್ಧ ಧೋನಿ ಹೊಡೆದಿದ್ದ ಸಿಕ್ಸರ್‌ ಲ್ಯಾಂಡ್ ಆಗಿರುವ ಕ್ರೀಡಾಂಗಣದಲ್ಲಿನ ಆಸನಕ್ಕೆ ಧೋನಿ ಅವರ ಹೆಸರನ್ನು ಇಡಲಾಗುವುದು,” ಎಂದು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಹೇಳಿದ್ದರು.

IPL 2023: ಶತಕ ಬಾರಿಸು ಎಂದ ಧೋನಿ ಫ್ಯಾನ್​ಗೆ ಕೊಹ್ಲಿ ಪಾಠ ಕಲಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ

ಇದನ್ನೂ ಓದಿ
Image
MI vs CSK, IPL 2023: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ರೋಚಕತೆ ಸೃಷ್ಟಿಸಿದ ಮುಂಬೈ-ಚೆನ್ನೈ ನಡುವಣ ಕಾದಾಟ
Image
IPL 2023 Points Table: ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದ ರಾಹುಲ್ ಪಡೆ: ಆರೆಂಜ್ ಕ್ಯಾಪ್ ಯಾರಿಗೆ?
Image
LSG vs SRH, IPL 2023: ನಾಯಕನೇ ಶೂನ್ಯಕ್ಕೆ ಔಟ್: ಸತತ ಎರಡನೇ ಪಂದ್ಯ ಸೋತ ಹೈದರಾಬಾದ್
Image
LSG vs SRH: 13, 3.. 30 ನಿಮಿಷ; ಹೈದರಾಬಾದ್​ಗೆ ದುಬಾರಿಯಾದ 13.25 ಕೋಟಿ ರೂ. ಪ್ಲೇಯರ್!

ಅದರಂತೆ ಇದೀಗ ಸ್ವತಃ ಧೋನಿ ಅವರೇ ತಮ್ಮ ಹೆಸರಿನ ಎಂಸಿಎ ಕ್ರೀಡಾಂಗಣದ ಒಳಗಿನ ಆಸನವನ್ನು ಉದ್ಘಾಟನೆ ಮಾಡಿದ್ದಾರೆ. 2011 ರ ವಿಶ್ವಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಧೋನಿ ಅವರ ಮ್ಯಾಚ್ ವಿನ್ನಿಂಗ್ ಸಿಕ್ಸರ್ ಬಿದ್ದ ಸ್ಥಳಕ್ಕೆ ಧೋನಿ ಹೆಸರನ್ನು ಇಡಲಾಗಿದೆ. ವಾಂಖೆಡೆ ಸ್ಟೇಡಿಯಂ ಈಗಾಗಲೇ ಕೆಲ ಕ್ರಿಕೆಟ್ ದಿಗ್ಗಜರ ಹೆಸರು ಇದೆ. ಸಚಿನ್ ತೆಂಡುಲ್ಕರ್, ಸುನೀಲ್ ಗವಾಸ್ಕರ್ ಹಾಗೂ ವಿಜಯ್ ಮರ್ಚೆಂಟ್ ಅವರಂತಹ ಶ್ರೇಷ್ಠರ ಹೆಸರನ್ನು ಹೊಂದಿದೆ. ಪಾಲ್ಲಿ ಉಮ್ರಿಗರ್ ಹಾಗೂ ವಿನೂ ಮಂಕಡ್ ಅವರ ಹೆಸರಿನ ದ್ವಾರಗಳೂ ಇವೆ. ಇವರ ಜೊತೆಗೆ ಈಗ ಧೋನಿ ಹೆಸರು ಕೂಡ ಸೇರ್ಪಡೆ ಆಗಿದೆ.

ಏಪ್ರಿಲ್ 2 ರ ದಿನ ಭಾರತೀಯ ಕ್ರಿಕೆಟ್‌ಗೆ ಬಹಳ ಮುಖ್ಯ. 28 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಟೀಮ್ ಇಂಡಿಯಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಾಯ್ನಾಡಿನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ವಿಶ್ವಕಪ್ ಅನ್ನು ವಶಪಡಿಸಿಕೊಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Sat, 8 April 23

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು