AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL- ಐಪಿಎಲ್​ಗೆ ಡಿಜಿಟಲ್ ಧಮಾಕ, ಟಿವಿ ವೀಕ್ಷಕರ ಸಂಖ್ಯೆ ಇಳಿಮುಖ; ಜಿಯೋ ವಿಶ್ವದಾಖಲೆ

IPL Digital Viewers vs TV Viewers: ಪಾಕಿಸ್ತಾನ್ ಸೂಪರ್ ಲೀಗ್​ನ ಡಿಜಿಟಲ್ ವೀಕ್ಷಕರ ಸಂಖ್ಯೆ ಐಪಿಎಲ್​ಗಿಂತ ಹೆಚ್ಚು ಎಂದು ಇತ್ತೀಚೆಗಷ್ಟೇ ಪಿಸಿಬಿ ಮುಖ್ಯಸ್ಥರು ಹೇಳಿದ್ದರು. ಇದೀಗ ಐಪಿಎಲ್​ನ ಮೊದಲ ಪಂದ್ಯಕ್ಕೆ ಡಿಜಿಟಲ್ ವೀಕ್ಷಕರ ಸಂಖ್ಯೆ ಹೊಸ ದಾಖಲೆಯನ್ನೇ ಬರೆದಿದೆ.

IPL- ಐಪಿಎಲ್​ಗೆ ಡಿಜಿಟಲ್ ಧಮಾಕ, ಟಿವಿ ವೀಕ್ಷಕರ ಸಂಖ್ಯೆ ಇಳಿಮುಖ; ಜಿಯೋ ವಿಶ್ವದಾಖಲೆ
ಐಪಿಎಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 07, 2023 | 6:50 PM

Share

ನವದೆಹಲಿ: ಐಪಿಎಲ್ (IPL 2023) ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಿಗಳಲ್ಲಿ ಒಂದು ಎನ್ನುವುದರಲ್ಲಿ ಹೆಚ್ಚು ಅನುಮಾನ ಇಲ್ಲ. ವಿಶ್ವದ ವಿವಿಧ ದೇಶಗಳ ಆಟಗಾರರು ಐಪಿಎಲ್​ನಲ್ಲಿ ಆಡುವುದರಿಂದ ಅದರ ಜನಪ್ರಿಯತೆ ಅಗಾಧವಾದುದು. ಆದರೆ, ಈ ಬಾರಿಯ ಐಪಿಎಲ್​ನ ಪ್ರಸಾರದಲ್ಲಿ (IPL Broadcasting) ಒಂದು ಇಂಟರೆಸ್ಟಿಂಗ್ ಟ್ರೆಂಡ್ ವ್ಯಕ್ತವಾಗಿದೆ. ಐಪಿಎಲ್​ನ ಟಿವಿ ವೀಕ್ಷಕರ ಸಂಖ್ಯೆ (TVR) ಇಳಿಮುಖವಾಗುವುದು ಮುಂದುವರಿದಿದೆ. ಡಿಜಿಟಲ್ ವೀಕ್ಷಕರ ಸಂಖ್ಯೆ ಸಿಕ್ಕಾಪಟ್ಟೆ ಏರಿದೆ. ಇದೆಲ್ಲಾ ಜಿಯೋ ಮ್ಯಾಜಿಕ್. ಜಿಯೋ ಸಿನಿಮಾ ಆ್ಯಪ್​ನಲ್ಲಿ (Jio Cinema App) ಐಪಿಎಲ್ ಪ್ರಸಾರ ಆಗುತ್ತಿರುವುದು ಟಿವಿ ವೀಕ್ಷಕರ ಸಂಖ್ಯೆ ಇಳಿಮುಖವಾಗಲು ಕಾರಣವಿದ್ದಿರಲೂ ಬಹುದು. ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಐಪಿಎಲ್ 2023 ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಟಿವಿ ವೀಕ್ಷಕರ ಸಂಖ್ಯೆ ಕಡಿಮೆ ಆಗಿದೆ. ಐಪಿಎಲ್​ನ ಅಧಿಕೃತ ಪ್ರಸಾರ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯಕ್ಕೆ ಗಳಿಸಿದ ಟಿವಿಆರ್ ಕೇವಲ 7.29 ಮಾತ್ರ. ಇಲ್ಲಿ ಕುತೂಹಲ ಎಂದರೆ ವರ್ಷದಿಂದ ವರ್ಷಕ್ಕೆ ಉದ್ಘಾಟನಾ ಪಂದ್ಯದ ಟಿವಿ ರೇಟಿಂಗ್ ಕಡಿಮೆ ಆಗುತ್ತಾ ಬಂದಿದೆ. 2020ರಲ್ಲಿ 10.36 ಟಿವಿಆರ್ ಇತ್ತು. 2021ರಲ್ಲಿ 8.25 ಟಿವಿಆರ್ ದಾಖಲಾಗಿತ್ತು. ಈಗ 7.29 ಟಿವಿಆರ್ ಮಾತ್ರ ಇದೆ.

ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಓಪನರ್​ನಲ್ಲಿ ದಾಖಲಾದ ಟಿವಿಆರ್, ಕಳೆದ 6 ಸೀಸನ್​ನಲ್ಲೇ ಎರಡನೇ ಅತಿ ಕಡಿಮೆ ಮಟ್ಟದ್ದೆನ್ನಲಾಗಿದೆ. ಮೊದಲ ಪಂದ್ಯದ ಎಂಗೇಜ್ಮೆಂಟ್ ನಂಬರ್ ಕಡಿಮೆ ಆಗಿದೆ. ಕರ್ಟನ್ ರೈಸರ್ ಕೂಡ ಕಡಿಮೆ ಆಗಿದೆ.

ಇದನ್ನೂ ಓದಿWork From Home: ‘ಸಂಬಳ ಕಟ್ ಮಾಡಿ, ಮನೆಯಿಂದ ಕೆಲಸ ಮಾಡಲು ಬಿಡಿ’- ಗೋಗರೆಯುತ್ತಿರುವ ಅಮೆರಿಕನ್ನರು ಎಷ್ಟು ಸಂಬಳ ಬಿಟ್ಟುಕೊಡಲು ಸಿದ್ಧ ಗೊತ್ತಾ?

ಐಪಿಎಲ್ 2023: ಡಿಜಿಟಲ್ ಮ್ಯಾಜಿಕ್

ಐಪಿಎಲ್ 2023ರ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕು ಜಿಯೋಗೆ ಸಿಕ್ಕಿದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ ಐಪಿಎಲ್ ಪ್ರಸಾರ ಮಾಡುವ ಜಿಯೋ ನಿರ್ಧಾರ ಸಖತ್ ಮ್ಯಾಜಿಕ್ ಸೃಷ್ಟಿಸಿದೆ. ಅದರ ಪರಿಣಾಮವಾಗಿ ಈ ಬಾರಿಯ ಐಪಿಎಲ್​ನ ಡಿಜಿಟಲ್ ವೀಕ್ಷಕರ ಸಂಖ್ಯೆ ಸಿಕ್ಕಾಪಟ್ಟೆ ಏರಿದೆ. ಹಿಂದಿನ ಸೀಸನ್​ಗಳಲ್ಲಿ ಡಿಸ್ನಿ ಹಾಟ್​ಸ್ಟಾರ್ ಡಿಜಿಟಲ್ ಪ್ರಸಾರದ ಹಕ್ಕು ಹೊಂದಿತ್ತು. ಇಡೀ ಸೀಸನ್​ನಲ್ಲಿ ಅದು ಹೊಂದಿದ್ದ ವೀಕ್ಷಕರ ಸಂಖ್ಯೆಯನ್ನು ಜಿಯೋ ಸಿನಿಮಾ ಮೊದಲ ವಾರದಲ್ಲೇ ದಾಟಿದೆ. ಇನ್ನು ಸವೆಸುವ ಹಾದಿಯೆಲ್ಲಾ ಆನೆ ನಡೆದಂತೆಯೇ.

ಡಿಜಿಟಲ್ ವೀಕ್ಷಣೆಯಲ್ಲಿ ಐಪಿಎಲ್ ಮೀರಿಸಿದ್ದೇವೆ ಎಂದಿದ್ದ ಪಾಕಿಸ್ತಾನಿಗರಿಗೆ ಚುರುಕ್ ಮೆಣಸಿನಕಾಯಿ

ಐಪಿಎಲ್ ಮಾದರಿಯಲ್ಲಿ ಪಾಕಿಸ್ತಾನದಲ್ಲೂ ಪಿಎಸ್​ಎಲ್ ಟೂರ್ನಿ ನಡೆಯುತ್ತದೆ. ತಮ್ಮದು ವಿಶ್ವದಲ್ಲೇ ಅತ್ಯಂತ ಕಠಿಣ ಕ್ರಿಕೆಟ್ ಲೀಗ್ ಎಂದು ಪಾಕಿಸ್ತಾನಿಗರು ಜಂಭ ಕೊಚ್ಚಿಕೊಳ್ಳುವುದುಂಟು. ಇತ್ತೀಚೆಗೆ ಮುಕ್ತಾಯಗೊಂಡ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯನ್ನು ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ 15 ಕೋಟಿ ಜನರು ನೋಡಿದ್ದಾರೆ ಎಂದು ಪಿಸಿಬಿ ಮುಖಸ್ಥ ನಜಮ್ ಸೇಠಿ ಹೇಳಿಕೊಂಡಿದ್ದರು. ಇದೇ ಹಂತದಲ್ಲಿ ಹಿಂದಿನ ಆವೃತ್ತಿಯ ಐಪಿಎಲ್​ನಲ್ಲಿ 13 ಕೋಟಿ ಜನರು ಡಿಜಿಟಲ್​ನಲ್ಲಿ ವೀಕ್ಷಣೆ ಮಾಡಿದ್ದರು ಎಂದು ಪಿಸಿಬಿ ಮುಖ್ಯಸ್ಥರು ಹೋಲಿಕೆ ಮಾಡಿ ಪಿಎಸ್​ಎಲ್​ಗೆ ಶಹಬ್ಬಾಸ್​ಗಿರಿ ಕೊಟ್ಟಿದ್ದರು.

ಇದನ್ನೂ ಓದಿIPL 2023: ಐಪಿಎಲ್​ನಲ್ಲಿ ಸೋಲುಗಳ ಸರದಾರ ಕಿಂಗ್​ ಕೊಹ್ಲಿ! ಹೆಚ್ಚು ಗೆಲುವು ಯಾರ ಹೆಸರಲ್ಲಿದೆ ಗೊತ್ತಾ?

ಆದರೆ, ಟಾಟಾ ಐಪಿಎಲ್​ನ ಮೊದಲ ಪಂದ್ಯಕ್ಕೆ ಜಿಯೋ ಸಿನಿಮಾದಲ್ಲಿ ಬರೋಬ್ಬರಿ 50 ಕೋಟಿ ವೀಕ್ಷಣೆ ಆಗಿದೆ. ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯಕ್ಕೆ ನೇರ ವೀಕ್ಷಣೆ ಸಂಖ್ಯೆ ಒಂದು ಹಂತದಲ್ಲಿ 1.6 ಕೋಟಿವರೆಗೂ ಹೋಗಿತ್ತು. ಆ ಪಂದ್ಯಕ್ಕೆ ಒಟ್ಟು 6 ಕೋಟಿ ಯೂನಿಕ್ ವೀವರ್ಸ್ ಇದ್ದರು. ಅಂದರೆ 6 ಕೋಟಿ ಮಂದಿ ಡಿಜಿಟಲ್ ಪ್ಲಾಟ್​ಫಾರ್ಮ್​ನಲ್ಲಿ ಐಪಿಎಲ್​ನ ಮೊದಲ ಪಂದ್ಯ ವೀಕ್ಷಿಸಿದ್ದರು. ಇನ್ನು ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ಲೈವ್ ವೀಕ್ಷಕರ ಸಂಖ್ಯೆ 1.4 ಕೋಟಿವರೆಗೂ ಹೋಗಿತ್ತು.

ಒಂದೇ ದಿನದಲ್ಲಿ ಅತಿ ಹೆಚ್ಚು ಡೌನ್​ಲೋಡ್ ಕಂಡ ಜಿಯೋ ಸಿನಿಮಾ ಆ್ಯಪ್

ಇದೇ ವೇಳೆ, ಐಪಿಎಲ್ ಅನ್ನು ಡಿಜಿಟಲ್ ಆಗಿ ಪ್ರಸಾರ ಮಾಡುವ ಹಕ್ಕು ಜಿಯೋಗೆ ಸಿಕ್ಕಿದೆ. ಹೆಚ್ಚು ಮಂದಿಗೆ ಪರಿಚಯ ಇಲ್ಲದ ಜಿಯೋ ಸಿನಿಮಾ ಆ್ಯಪ್​ನಲ್ಲಿ ಐಪಿಎಲ್ ಪಂದ್ಯಗಳ ಉಚಿತ ಪ್ರಸಾರ ಲಭ್ಯ ಇದೆ. ಜಿಯೋದ ಈ ನಡೆ ಸಖತ್ತಾಗಿ ಫಲ ಕೊಟ್ಟಿದೆ. ಐಪಿಎಲ್ ಉದ್ಘಾಟನೆಯ ಮೊದಲ ದಿನವೇ 2.5 ಕೋಟಿ ಜನರು ಜಿಯೋ ಸಿನಿಮಾ ಆ್ಯಪ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ಡೌನ್​ಲೋಡ್ ಆದ ಹೊಸ ದಾಖಲೆಯನ್ನು ಜಿಯೋ ಸಿನಿಮಾ ಬರೆದಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Fri, 7 April 23

ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ