FD: ಐಸಿಐಸಿಐ ಸ್ಪೆಷಲ್ ಎಫ್ಡಿ ಸ್ಕೀಮ್; ಶೇ. 0.6ರಷ್ಟು ಹೆಚ್ಚುವರಿ ಬಡ್ಡಿ ಕೊಡುವ ಯೋಜನೆ
ICICI Bank Golden Years FD Scheme: ಹಿರಿಯ ನಾಗರಿಕರಿಗೆಂದು 2020 ಮೇ 20ರಂದು ಆರಂಭಗೊಂಡ ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ಡಿ ಸ್ಕೀಮ್ನ ಅಂತಿಮ ಅವಧಿ ಅಕ್ಟೋಬರ್ 31ರವರೆಗೂ ವಿಸ್ತರಿಸಲಾಗಿದೆ. ಶೇ. 0.6ರಷ್ಟು ಹೆಚ್ಚುವರಿ ಬಡ್ಡಿ ಕೊಡುವ ಯೋಜನೆ ಇದಾಗಿದೆ.
ನವದೆಹಲಿ: ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಹಿರಿಯ ನಾಗರಿಕರಿಗೆಂದು ರೂಪಿಸಲಾದ ವೀಕೇರ್ ಎಫ್ಡಿ ಸ್ಕೀಮ್ನ (SBI WeCare FD Scheme) ಕೊನೆಯ ದಿನಾಂಕವನ್ನು ಮೂರು ತಿಂಗಳು ವಿಸ್ತರಣೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ಐಸಿಐಸಿಐನ ಹಿರಿಯ ನಾಗರಿಕರ ಎಫ್ಡಿ ಸ್ಕೀಮ್ ಕಾಲಾವಕಾಶ 6 ತಿಂಗಳು ವಿಸ್ತರಣೆಯಾಗಿದೆ. ಇಂದು ಏಪ್ರಿಲ್ 7, ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ಡಿ ಸ್ಕೀಮ್ನ (ICICI Bank Golden Years FD Scheme) ಕೊನೆಯ ದಿನ ಆಗಿತ್ತು. ಇದೀಗ ಇದರ ಅವಧಿಯನ್ನು 2023 ಅಕ್ಟೋಬರ್ 31ಕ್ಕೆ ಹೆಚ್ಚಿಸಲಾಗಿದೆ. ಐಸಿಐಸಿಐ ಬ್ಯಾಂಕ್ನ ವೆಬ್ಸೈಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಐಸಿಐಸಿಐ ಬ್ಯಾಂಕ್ ಗೋಲ್ಡನ್ ಯಿಯರ್ಸ್ ಎಫ್ಡಿ ಸ್ಕೀಮ್ ಎಂಬುದು ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ವಿಶೇಷ ನಿಶ್ಚಿತ ಠೇವಣಿ ಯೋಜನೆ ಆಗಿದೆ.
ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ಡಿ ಯೋಜನೆಯ ವಿವರ
ಭಾರತೀಯ ನಿವಾಸಿಗಳಾಗಿರುವ ಹಿರಿಯ ನಾಗರಿಕರಿಗೆಂದು ಐಸಿಐಸಿಐ ಬ್ಯಾಂಕ್ ರೂಪಿಸಿರುವ ಈ ವಿಶೇಷ ಎಫ್ಡಿ ಸ್ಕೀಮ್ನಲ್ಲಿ ಇಡಲಾಗುವ ಠೇವಣಿಗಳಿಗೆ ಶೇ. 6.9ರವರೆಗೂ ಬಡ್ಡಿ ಕೊಡಲಾಗುತ್ತದೆ. ಅದರ ಮೇಲೆ 50 ಮೂಲಾಂಕಗಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ. ಇನ್ನೂ 10 ಮೂಲಾಂಕಗಳಷ್ಟು ಇನ್ನಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ. ಒಟ್ಟು ಶೇ. 7.6ರಷ್ಟು ಬಡ್ಡಿ ಈ ಠೇವಣಿಗಳಿಗೆ ಸಂದಾಯವಾಗುತ್ತದೆ.
ಇದನ್ನೂ ಓದಿ: SBI WECARE: ಎಸ್ಬಿಐ ವೀ ಕೇರ್ ಸ್ಕೀಮ್; ಕೊನೆಯ ದಿನಾಂಕ ಮತ್ತೆ 3 ತಿಂಗಳು ವಿಸ್ತರಣೆ; ಏನಿದು ಯೋಜನೆ?
ಈ ಗರಿಷ್ಠ ಬಡ್ಡಿ 5 ವರ್ಷ 1ದಿನದಿಂದ 10 ವರ್ಷದವರೆಗಿನ ಠೇವಣಿಗಳಿಗೆ ಸಿಗುತ್ತದೆ. ಬೇರೆ ಅವಧಿಯ ಠೇವಣಿಗಳಿಗೆ ಬಡ್ಡಿ ದರ ತುಸು ಕಡಿಮೆ ಇರುತ್ತದೆ. ಈ ಸ್ಕೀಮ್ ಅನ್ನು 2020 ಮೇ 20ರಂದು ಆರಂಭಿಸಲಾಗಿತ್ತು. ಪದೇ ಪದೇ ವಿಸ್ತರಣೆ ಆಗುತ್ತಾ ಇದೀಗ 2023 ಅಕ್ಟೋಬರ್ 31ರವರೆಗೂ ಕಾಲಾವಕಾಶ ಕೊಡಲಾಗಿದೆ. ಹೊಸದಾಗಿ ಎಫ್ಡಿ ಮಾಡಿಸುವವರಷ್ಟೇ ಅಲ್ಲದೇ, ಈಗಾಗಲೇ ಈ ಸ್ಕೀಮ್ ಪಡೆದು ಅದನ್ನು ಅಕ್ಟೋಬರ್ 31ರಷ್ಟರಲ್ಲಿ ನವೀಕರಿಸಿದವರಿಗೂ ಶೇ. 0.1ರಷ್ಟು ಹೆಚ್ಚುವರಿ ಬಡ್ಡಿಯ ಸೌಲಭ್ಯ ಸೇರ್ಪಡೆಯಾಗುತ್ತದೆ.
ಐಸಿಐಸಿಐ ಬ್ಯಾಂಕ್ ಗೋಲ್ಡನ್ ಯಿಯರ್ಸ್ ಎಫ್ಡಿ ಹೇಗೆ ತೆರೆಯುವುದು?
ಐಸಿಐಸಿಐ ಬ್ಯಾಂಕ್ನ ವೆಬ್ಸೈಟ್, ಮೊಬೈಲ್ ಬ್ಯಾಂಕಿಂಗ್, ಆ್ಯಪ್ಗಳ ಮೂಲಕ ಆನ್ಲೈನ್ನಲ್ಲೇ ಎಫ್ಡಿ ತೆರೆಯಬಹುದು. ಬ್ಯಾಂಕ್ನ ಶಾಖಾ ಕಚೇರಿಗೆ ಹೋಗಿಯೂ ನಿಶ್ಚಿತ ಠೇವಣಿ ಆರಂಭಿಸಬಹುದು. ಗರಿಷ್ಠ 2 ಕೋಟಿ ರೂವರೆಗೆ ಠೇವಣಿ ಇಡಬಹುದು.
ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ಡಿ ಸ್ಕೀಮ್ನ ಇತರ ಸೌಲಭ್ಯಗಳು
ಐಸಿಐಸಿಐ ಬ್ಯಾಂಕ್ನ ಈ ವಿಶೇಷ ಎಫ್ಡಿ ಸ್ಕೀಮ್ ಪಡೆದರೆ ಸಾಲದ ಸೌಲಭ್ಯವೂ ಸಿಗುತ್ತದೆ. ನೀವು ಎಫ್ಡಿಯಾಗಿ ಇಟ್ಟಿರುವ ಹಣ, ಹಾಗೂ ಆವರೆಗೂ ಜಮೆಯಾಗಿರುವ ಬಡ್ಡಿ ಇವೆಲ್ಲವೂ ಸೇರಿದ ಶೇ. 90ರಷ್ಟು ಮೊತ್ತದ ಹಣವನ್ನು ನೀವು ಸಾಲವಾಗಿ ಪಡೆಯಬಹುದು.
ಇದನ್ನೂ ಓದಿ: ITR: ವೃದ್ಧರಿಗೆ ಐಟಿ ರಿಟರ್ನ್ ಸಲ್ಲಿಸಲು ವಿನಾಯಿತಿ ಇದೆಯೇ? ಆದಾಯ ತೆರಿಗೆ ಇಲಾಖೆಯ ನಿಯಮಗಳೇನಿವೆ?
ಇನ್ನು, ಎಫ್ಡಿ ಮೊತ್ತದ ಆಧಾರವಾಗಿ ಐಸಿಐಸಿಐ ಬ್ಯಾಂಕಿನಲ್ಲಿ ಕ್ರೆಡಿಟ್ ಕಾರ್ಡ್ ಕೂಡ ಪಡೆಯುವ ಅವಕಾಶ ಇರುತ್ತದೆ.
ಈ ವಿಶೇಷ ಎಫ್ಡಿ ಸ್ಕೀಮ್ 60 ವರ್ಷ ಮೇಲ್ಪಟ್ಟಿರುವ ಹಿರಿಯ ನಾಗರಿಕರಿಗೆಂದು ರೂಪಿಸಲಾಗಿದೆ. ಬೇರೆಯವರಿಗೂ ವಿವಿಧ ಎಫ್ಡಿ ಸ್ಕೀಮ್ಗಳು ಐಸಿಐಸಿಐನಲ್ಲಿ ಇವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Fri, 7 April 23