ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2023) 16ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಇಂದು ಎಂಎಸ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ (CSK vs LSG) ತಂಡ ಮುಖಾಮುಖಿ ಆಗುತ್ತಿದೆ. ಚೆನ್ನೈನ ಎಮ್ಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದ್ದು ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತು ಹಿನ್ನಡೆ ಅನುಭವಿಸಿರುವ ಸಿಎಸ್ಕೆ ಖಾತೆ ತೆರೆಯುವ ಪ್ಲಾನ್ನಲ್ಲಿದೆ. ಇತ್ತ ಎಲ್ಎಸ್ಜಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿದ್ದು ಇಂದಿನ ಮ್ಯಾಚ್ನಲ್ಲಿ ಕೂಡ ಗೆಲುವು ಸಾಧಿಸಿ ಟೇಬಲ್ ಟಾಪರ್ ಆಗುವ ಯೋಜನೆ ಹಾಕಿಕೊಂಡಿದೆ.
ಚೆನ್ನೈ ತಂಡದಲ್ಲಿ ಅನುಭವಿ ಸ್ಟಾರ್ ಆಟಗಾರರ ದಂಡೇ ಇದ್ದರು ವೈಫಲ್ಯ ಅನುಭವಿಸುತ್ತಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ರುತುರಾಜ್ ಗಾಯಕ್ವಾಡ್ ಬಿಟ್ಟರೆ ಉಳಿದ ಯಾವ ಬ್ಯಾಟರ್ಗಳು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ದುಬಾರಿ ಹಣ ಕೊಟ್ಟು ಖರೀದಿ ಮಾಡಿದ ಬೆನ್ ಸ್ಟೋಕ್ಸ್ ಮೊದಲ ಮ್ಯಾಚ್ನಲ್ಲಿ 7 ರನ್ಗೆ ಸುತ್ತಾಗಿದ್ದರು. ಮೊಯೀನ್ ಅಲಿ, ಡೆವೋನ್ ಕಾನ್ವೆ, ಅಂಬಟಿ ರಾಯುಡು, ರವೀಂದ್ರ ಜಡೇಜಾ ವೈಫಲ್ಯ ಅನುಭವಿಸಿದರು. ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ ಶಿವಂ ದುಬೆಗೆ ಇಂದಿನ ಪಂದ್ಯದಲ್ಲಿ ಸ್ಥಾನ ಅನುಮಾನ. ಬೌಲಿಂಗ್ನಲ್ಲಿ ರಾಜವರ್ಧನ್ ನಿರೀಕ್ಷೆ ಮೂಡಿಸಿದ್ದಾರೆ. ಇವರಿಗೆ ದೀಪಕ್ ಚಹರ್, ಮಿಚೆಲ್ ಸ್ಯಾಂಟನರ್ ಸಾಥ್ ನೀಡಬೇಕಿದೆ.
IPL 2023: ಕ್ಯಾಚ್ ಹಿಡಿದು ವಿಶ್ವ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್
ಇತ್ತ ಲಖನೌ ತಂಡದ ಪರ ನಾಯಕ ಕೆಎಲ್ ರಾಹುಲ್ ಕಳಪೆ ಫಾರ್ಮ್ನಲ್ಲಿದ್ದರೂ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ನಿಕೋಲಸ್ ಪೂರನ್, ಮಾರ್ಕಸ್ ಸ್ಟೋಯಿನಿಸ್, ಆಯುಷ್ ಬದೋನಿ, ಕ್ರುನಾಲ್ ಪಾಂಡ್ಯ, ದೀಪಕ್ ಹೂಡ, ಖೈಲ್ ಮೇಯರ್ಸ್ ತಂಡದಲ್ಲಿದ್ದಾರೆ. ಬೌಲಿಂಗ್ನಲ್ಲಿ ಮಾರ್ಕ್ ವುಡ್ ಅಪಾಯಕಾರಿ ಆಗಿದ್ದಾರೆ. ಜಯದೇವ್ ಉನಾದ್ಕಟ್, ರವಿ ಬಿಷ್ಟೋಯಿ ಹಾಗೂ ಆವೇಶ್ ಖಾನ್ ಪ್ರಮುಖ ಬೌಲರ್ಗಳಾಗಿದ್ದಾರೆ. ಇಂದಿನ ಪಂದ್ಯಕ್ಕೆ ಲಖನೌ ತಂಡದಲ್ಲಿ ಬದಲಾವಣೆ ಅನುಮಾನ. ಕಳೆದ ಗೆದ್ದ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯಬಹುದು.
ಪಂದ್ಯ ಎಷ್ಟು ಗಂಟೆಗೆ?:
ಚೆನ್ನೈ ಹಾಗೂ ಲಖನೌ ನಡುವಣ ಪಂದ್ಯ ಸಂಜೆ 7;30ಕ್ಕೆ ಶುರುವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪಪ್ರಸಾರ ಕಾಣಲಿದೆ. ಆನ್ಲೈನ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಇರಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಡೆವೋನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ಶಿವಂ ದುಬೆ, ಮಿಚೆಲ್ ಸ್ಯಾಂಟನರ್, ದೀಪಕ್ ಚಹರ್, ಆರ್‌ಎಸ್ ಹಂಗರ್ಗೇಕರ್, ತುಷಾರ್ ದೇಶಪಾಂಡೆ, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಅಜಿಂಕ್ಯ ರಹಾನೆ, ನಿಶಾಂತ್ ಸಿಂಧು, ಡ್ವೈನ್ ಪ್ರಿಟೋರಿಯಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆಕಾಶ್ ಸಿಂಗ್, ಭಗತ್ ವರ್ಮಾ.
ಲಖನೌ ಸೂಪರ್ ಜೈಂಟ್ಸ್ ತಂಡ: ಕೆಎಲ್ ರಾಹುಲ್ (ನಾಯಕ), ಖೈಲ್ ಮೇಯರ್ಸ್, ದೀಪಕ್ ಹೂಡಾ, ಕ್ರುನಾಲ್ ಪಾಂಡ್ಯ, ಮಾರ್ಕಸ್ ಸ್ಟೋಯಿನಿಸ್, ನಿಕೋಲಸ್ ಪೂರನ್,, ಆಯುಷ್ ಬದೋನಿ, ಮಾರ್ಕ್ ವುಡ್, ಜಯದೇವ್ ಉನಾದ್ಕಟ್, ರವಿ ಬಿಷ್ಣೋಯ್, ಅವೇಶ್ ಖಾನ್, ಕೃಷ್ಣಪ್ಪ ಗೌತಮ್, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ನವೀನ್-ಉಲ್-ಹಕ್, ಯಶ್ ಠಾಕೂರ್, ಡೇನಿಯಲ್ ಸಾಮ್ಸ್, ರೊಮಾರಿಯೋ ಶೆಫರ್ಡ್, ಯುದ್ವೀರ್ ಸಿಂಗ್ ಚರಕ್, ಮಯಾಂಕ್ ಯಾದವ್, ಅಮಿತ್ ಮಿಶ್ರಾ, ಮನನ್ ವೋಹ್ರಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ