IPL 2023 Opening Ceremony: ಐಪಿಎಲ್​ ವೇದಿಕೆಯಲ್ಲಿ ಮೈ ಬಳುಕಿಸಿ ಮೋಡಿ ಮಾಡಿದ ರಶ್ಮಿಕಾ ಮಂದಣ್ಣ

Rashmika Mandanna Dance In IPL 2023: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು.

IPL 2023 Opening Ceremony: ಐಪಿಎಲ್​ ವೇದಿಕೆಯಲ್ಲಿ ಮೈ ಬಳುಕಿಸಿ ಮೋಡಿ ಮಾಡಿದ ರಶ್ಮಿಕಾ ಮಂದಣ್ಣ
Rashmika Mandanna
Edited By:

Updated on: Mar 31, 2023 | 8:08 PM

IPL 2023 Opening Ceremony: ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2023) 16ನೇ ಆವೃತ್ತಿಗೆ ಅಧಿಕೃತ ಚಾಲನೆ ದೊರೆತಿದೆ. ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್, ನಟಿಯರಾದ ತಮನ್ನಾ ಭಾಟಿಯಾ ಹಾಗೂ ರಶ್ಮಿಕಾ ಮಂದಣ್ಣ ಸಂಗೀತ ರಸಮಂಜರಿಯ ರಸದೌತಣ ಒದಗಿಸಿದರು. ಆರಂಭದಲ್ಲಿ ಅರಿಜಿತ್ ಸಿಂಗ್ ಗಾನ ಬಜಾನ ಮೂಲಕ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಮೋಡಿ ಮಾಡಿದರು. ಇದಾದ ಬಳಿಕ ತಮನ್ನಾ ಭಾಟಿಯಾ ಒಂದಷ್ಟು ಹಾಡುಗಳಿಗೆ ನರ್ತಿದರು. ಆದರೆ ವೇದಿಕೆಗೆ ರಶ್ಮಿಕಾ ಮಂದಣ್ಣ ಆಗಮಿಸುತ್ತಿದ್ದಂತೆ ಪ್ರೇಕ್ಷಕರಲ್ಲೂ ಅಸಲಿ ಜೋಶ್ ಕಂಡು ಬಂತು.

ವೇದಿಕೆ ಏರುತ್ತಿದ್ದಂತೆ  ಗುಜರಾತಿ ಹಾಗೂ ತಮಿಳಿನಲ್ಲಿ ಮಾತನಾಡುವ ಮೂಲಕ ಪ್ರೇಕ್ಷಕರನ್ನು ಹುರಿದುಂಬಿಸಿದ ರಶ್ಮಿಕಾ, ಆ ಬಳಿಕ ಮೈಬಳುಕಿಸುವ ಮೂಲಕ ತಮ್ಮ ವೈಯ್ಯಾರದಿಂದ ಮೋಡಿ ಮಾಡಿದರು. “ಪುಷ್ಪಾ” ಚಿತ್ರದ “ಸಾಮಿ” ಹಾಡಿನ ಮೂಲಕ ಎಂಟ್ರಿ ಕೊಟ್ಟ ಕೊಡಗಿನ ಬೆಡಗಿ, ನಂತರ “ಶ್ರೀವಲ್ಲಿ” ಮತ್ತು ಪ್ರಸಿದ್ಧ “RRR” ನಿಂದ “ನಾಟು ನಾಟು” ಹಾಡುಗಳಿಗೆ ನರ್ತಿಸಿದರು.

ಇತ್ತ ರಶ್ಮಿಕಾ ಬಳಕುವ ಬಳ್ಳಿಯಂತೆ ಮೈ ಬಳುಕಿಸುತ್ತಿದ್ದರೆ, ಅತ್ತ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಹರ್ಷೋದ್ಗಾರ ಕೂಡ ಮುಗಿಲು ಮುಟ್ಟಿತ್ತು. ಅಲ್ಲದೆ ನಿರೀಕ್ಷೆಗೂ ಮೀರಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದರು. ಇದೀಗ ರಶ್ಮಿಕಾ ಮಂದಣ್ಣ ಅವರ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಈ ರಂಗು ರಂಗಿನ ಕಾರ್ಯಕ್ರಮದ ಬಳಿಕ ಟಾಸ್ ಪ್ರಕ್ರಿಯೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು.

ಉಭಯ ತಂಡಗಳು ಹೀಗಿವೆ:

ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಂಬಟಿ ರಾಯುಡು, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಶಿವಂ ದುಬೆ, ದೀಪಕ್ ಚಹಾರ್, ರಾಜವರ್ಧನ್ ಹಂಗರ್ಗೇಕರ್

ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭ್​ಮನ್ ಗಿಲ್, ಕೇನ್ ವಿಲಿಯಮ್ಸನ್, ವೃದ್ಧಿಮಾನ್ ಸಹಾ, ವಿಜಯ್ ಶಂಕರ್, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ರಾಹುಲ್ ತೆವಾಟಿಯಾ, ಯಶ್ ದಯಾಲ್ ಮತ್ತು ಜೋಶ್ ಲಿಟಲ್.