IPL 2023 Points Table: ಅಗ್ರಸ್ಥಾನಕ್ಕೇರಿದ ಸಂಜು ಸ್ಯಾಮ್ಸನ್ ಪಡೆ: ಆರ್​ಸಿಬಿ ಪ್ಲೇಯರ್ಸ್ ಕೈಯಲ್ಲಿದೆ ಆರೆಂಜ್-ಪರ್ಪಲ್ ಕ್ಯಾಪ್

|

Updated on: Apr 28, 2023 | 9:43 AM

Orange-Purple Cap IPL 2023: ಸಿಎಸ್​ಕೆ-ಆರ್​ಆರ್ ಪಂದ್ಯಗ ಬಳಿಕ ಪಾಯಿಂಟ್ ಟೇಬಲ್​ ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.

IPL 2023 Points Table: ಅಗ್ರಸ್ಥಾನಕ್ಕೇರಿದ ಸಂಜು ಸ್ಯಾಮ್ಸನ್ ಪಡೆ: ಆರ್​ಸಿಬಿ ಪ್ಲೇಯರ್ಸ್ ಕೈಯಲ್ಲಿದೆ ಆರೆಂಜ್-ಪರ್ಪಲ್ ಕ್ಯಾಪ್
Sanju Samson, Faf Duplessis and Mohammed Siraj
Follow us on

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್ (IPL 2023) ಟೂರ್ನಿಯಲ್ಲಿ 37 ಪಂದ್ಯಗಳು ಮುಕ್ತಾಯಗೊಂಡಿದೆ. ಕೆಲ ತಂಡಗಳಿಂದ ಊಹಿಸಲಾಗದ ಪ್ರದರ್ಶನ ಬರುತ್ತಿದೆ. ಎದುರಾಳಿಗೆ 200+ ಟಾರ್ಗೆಟ್ ನೀಡಿದರೂ ಚೇಸ್ ಮಾಡಿ ಗೆಲುವು ಸಾಧಿಸುವುದು ಈ ಬಾರಿಯ ಟೂರ್ನಿಯಲ್ಲಿ ಸಾಮಾನ್ಯವಾಗುತ್ತಿದೆ. ಇಂದು ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೇಂಟ್ಸ್ (PBKS vs LSG) ಮುಖಾಮುಖಿ ಆಗಲಿದೆ. ಗುರುವಾರ ನಡೆದ ಸಿಎಸ್​ಕೆ ವಿರುದ್ಧದ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 32 ರನ್​ಗಳ ಗೆಲುವು ಸಾಧಿಸಿತು. ಹಾಗಾದರೆ, ಸಿಎಸ್​ಕೆ-ಆರ್​ಆರ್ ಪಂದ್ಯಗ ಬಳಿಕ ಪಾಯಿಂಟ್ ಟೇಬಲ್​ ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.

  • ಚೆನ್ನೈ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿದ ಎಂಟು ಪಂದ್ಯಗಳಲ್ಲಿ ಐದು ಗೆಲುವು, ಮೂರರಲ್ಲಿ ಸೋಲುಂಡು +0.939 ರನ್​ರೇಟ್​ನೊಂದಿಗೆ 10 ಅಂಕ ಸಂಪಾದಿಸಿದೆ.
  • ಗುಜರಾತ್ ಟೈಟಾನ್ಸ್ ತಂಡ ಎರಡನೇ ಸ್ಥಾನದಲ್ಲಿದ್ದು ಆಡಿದ ಏಳು ಪಂದ್ಯಗಳಲ್ಲಿ ಐದು ಗೆಲುವು, ಎರಡು ಸೋಲುಂಡು +0.580 ರನ್​ರೇಟ್​ನೊಂದಿಗೆ 10 ಅಂಕ ಸಂಪಾದಿಸಿದೆ.
  • ನಂಬರ್ ಒನ್ ಸ್ಥಾನದಲ್ಲಿದ್ದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್​ಆರ್ ವಿರುದ್ಧ ಸೋತು ಮೂರನೇ ಸ್ಥಾನಕ್ಕೆ ಕುಸಿದಿದೆ. ಆಡಿದ ಎಂಟು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಮೂರರಲ್ಲಿ ಸೋಲು ಕಂಡು ಒಟ್ಟು 10 ಅಂಕ ಸಂಪಾದಿಸಿದೆ. +0.376 ರನ್​ರೇಟ್ ಹೊಂದಿದೆ.
  • ಲಖನೌ ಸೂಪರ್ ಜೇಂಟ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಆಡಿದ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವು, ಮೂರು ಸೋಲು ಕಂಡು 8 ಅಂಕ ಸಂಪಾದಿಸಿ +0.547 ರನ್​ರೇಟ್​ ಹೊಂದಿದೆ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದನೇ ಸ್ಥಾನದಲ್ಲಿದೆ. ಆಡಿದ ಎಂಟು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಕಂಡು 8 ಅಂಕ ಸಂಪಾದಿಸಿ -0.139 ರನ್​ರೇಟ್ ಹೊಂದಿದೆ.
  • ಪಂಜಾಬ್ ಕಿಂಗ್ಸ್ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕು ಸೋಲು-ಮೂರು ಜಯ ಕಂಡು 8 ಅಂಕ ಹೊಂದಿ -0.162ರನ್​ರೇಟ್​ನೊಂದಿಗೆ ಆರನೇ ಸ್ಥಾನದಲ್ಲಿದೆ.
  • ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಏಳನೇ ಪ್ಲೇಸ್​ನಲ್ಲಿದೆ. ಆಡಿದ ಎಂಟು ಪಂದ್ಯಗಳಲ್ಲಿ ಮೂರು ಗೆಲುವು, ಐದರಲ್ಲಿ ಸೋಲುಂಡು -0.027 ರನ್​ರೇಟ್​ನೊಂದಿಗೆ 6 ಅಂಕ ಸಂಪಾದಿಸಿದೆ.
  • ಮುಂಬೈ ಇಂಡಿಯನ್ಸ್ ಎಂಟನೇ ಸ್ಥಾನದಲ್ಲಿದೆ. ಆಡಿದ ಏಳು ಪಂದ್ಯದಲ್ಲಿ ಮೂರು ಸೋಲು, ನಾಲ್ಕು ಗೆಲುವು ಕಂಡು 6 ಅಂಕ ಸಂಪಾದಿಸಿ -0.620 ರನ್​ರೇಟ್ ಹೊಂದಿದೆ.
  • ಸನ್​ರೈಸರ್ಸ್ ಹೈದರಾಬಾದ್ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಆಡಿದ ಏಳು ಪಂದ್ಯದಲ್ಲಿ ಐದರಲ್ಲಿ ಸೋಲು ಎರಡರಲ್ಲಿ ಜಯ ಕಂಡು 4 ಅಂಕ ಸಂಪಾದಿಸಿ -0.725 ರನ್​ರೇಟ್ ಹೊಂದಿದೆ.
  • ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಸ್ಥಾನದಲ್ಲಿದೆ. ಆಡಿದ ಏಳು ಪಂದ್ಯಗಳ ಪೈಕಿ ಕೇವಲ ಎರಡರಲ್ಲಷ್ಟೆ ಜಯ ಸಾಧಿಸಿ 4 ಅಂಕ ಸಂಪಾದಿಸಿ -0.961 ರನ್​ರೇಟ್ ಹೊಂದಿದೆ.

IPL 2023: ಸ್ಟಾರ್ ಆಲ್​ರೌಂಡರ್​ ತಂಡದಲ್ಲಿದ್ದರೂ ಕಣಕ್ಕಿಳಿಸದ RCB

ಆರೆಂಜ್ ಕ್ಯಾಪ್:

ಇದನ್ನೂ ಓದಿ
MS Dhoni Angry: ಪಂದ್ಯದ ಮಧ್ಯೆ ತಾಳ್ಮೆ ಕಳೆದುಕೊಂಡ ಧೋನಿ: ಎಂಎಸ್​ಡಿ ಕೋಪಕಂಡು ತಬ್ಬಿಬ್ಬಾದ ಸಿಎಸ್​ಕೆ ಬೌಲರ್
PBKS vs LSG, IPL 2023: ಐಪಿಎಲ್​ನಲ್ಲಿಂದು ಪಂಜಾಬ್-ಲಖನೌ ಮುಖಾಮುಖಿ: ಅಗ್ರಸ್ಥಾನದ ಮೇಲೆ ರಾಹುಲ್ ಕಣ್ಣು
Virat Kohli: 300 ಪ್ಲಸ್ ರನ್: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ
IPL 2023: RCB ಕಪ್​ ಗೆಲ್ಲೋ ತನಕ ಸ್ಕೂಲ್​ಗೆ ಸೇರಲ್ಲ: ಆಗಿದ್ರೆ ಈ ಜನ್ಮದಲ್ಲಿ ಶಾಲೆಗೆ ಹೋಗಲ್ಲ ಎಂದು ಕಿಚಾಯಿಸಿದ ನೆಟ್ಟಿಗರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿದ ಎಂಟು ಪಂದ್ಯಗಳಲ್ಲಿ ಐದು ಅರ್ಧಶತಕ ಸಿಡಿಸಿ ಒಟ್ಟು 422 ರನ್ ಕಲೆಹಾಕಿದ್ದಾರೆ. ದ್ವಿತೀಯ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು ಆಡಿದ 8 ಪಂದ್ಯಗಳಲ್ಲಿ 333 ರನ್ ಗಳಿಸಿದ್ದಾರೆ. ಇವರ ಖಾತೆಯಿಂದ 5 ಅರ್ಧಶತಕ ಬಂದಿದೆ. ಸಿಎಸ್​ಕೆ ತಂಡದ ಡೆವೊನ್ ಕಾನ್ವೇ ಮೂರನೇ ಸ್ಥಾನದಲ್ಲಿದ್ದು ಎಂಟು ಪಂದ್ಯಗಳಿಂದ 322 ರನ್ ಗಳಿಸಿದ್ದಾರೆ.

ಪರ್ಪಲ್ ಕ್ಯಾಪ್:

ಆರ್​ಸಿಬಿ ತಂಡದ ಮೊಹಮ್ಮದ್ ಸಿರಾಜ್ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿದ ಎಂಟು ಪಂದ್ಯಗಳಿಂದ 14 ವಿಕೆಟ್ ಕಬಳಿಸಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ರಶೀದ್ ಖಾನ್ ದ್ವಿತೀಯ ಸ್ಥಾನದಲ್ಲಿದ್ದು ಆಡಿರುವ ಏಳು ಪಂದ್ಯಗಳಲ್ಲಿ 14 ವಿಕೆಟ್ ಪಡೆದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ತುಷಾರ್ ದೇಶ್​ಪಾಂಡೆ ಎಂಟು ಪಂದ್ಯಗಳಿಂದ ಒಟ್ಟು 14 ವಿಕೆಟ್ ಕಿತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ